
ಮುಸ್ಲಿಮರ ಬಗ್ಗೆ ‘ಲೆಹರ್ ಸಿಂಗ್’ ಅನುಕಂಪದ ಲಹರಿ? ಕೆಪಿಸಿಸಿ ರಮೇಶ್ ಬಾಬು ವ್ಯಂಗ್ಯ
ಬೆಂಗಳೂರು: ಅಲ್ಪಸಂಖ್ಯಾತ ಮಾರ್ವಾಡಿ ಸಮುದಾಯದವರೆಂದು ಹೇಳಿಕೊಂಡಿರುವ ಲೆಹರ್ ಸಿಂಗ್ ಅವರು ಮುಸಲ್ಮಾನ್ ಸಮುದಾಯದ ಬಗ್ಗೆ ವಿಶೇಷ ಕಾಳಜಿಯನ್ನು ವ್ಯಕ್ತಪಡಿಸುತ್ತಿರುವುದು ಅಚ್ಚರಿಯ ಸಂಗತಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ. ಜಸ್ಟಿಸ್ ಆನಂದ್ ಅವರ ವರದಿಯನ್ನು ಇಟ್ಟುಕೊಂಡು ಲೆಹರ್ ಸಿಂಗ್ ದೊಡ್ಡಮಟ್ಟದ ನಾಟಕ ಆಡಲು ಪ್ರಯತ್ನ ಪಡುತ್ತಿದ್ದಾರೆ ಎಂದೂ ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ.
ಲೆಹರ್ ಸಿಂಗ್ ಅವರು ರಾಜ್ಯ ಬಜೆಟ್ ಬಗ್ಗೆ ಟೀಕಿರುವ ವೈಖರಿ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್ ಬಾಬು, ರಾಜ್ಯಸಭಾ ಸದಸ್ಯರಾದ ರಾಜಸ್ಥಾನಿ ಲೆಹರ್ ಸಿಂಗ್ ರವರು ಕಾಂಗ್ರೆಸ್ ಸರ್ಕಾರದ ಮೇಲೆ ಅನೇಕ ಆರೋಪಗಳನ್ನು ಮಾಡಿರುತ್ತಾರೆ. ತಾವೇ ಸ್ವತಃ ಅಲ್ಪಸಂಖ್ಯಾತ ಮಾರ್ವಾಡಿ ಸಮುದಾಯದವರೆಂದು ಹೇಳಿಕೊಂಡಿರುವ ಲೆಹರ್ ರವರು ಮುಸಲ್ಮಾನ್ ಸಮುದಾಯದ ಬಗ್ಗೆ ವಿಶೇಷವಾದ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಸ್ಟಿಸ್ ಆನಂದ್ ಆಯೋಗದ ವಖ್ಫ್ ಆಸ್ತಿಗೆ ಸಂಬಂಧಪಟ್ಟಂತಹ ವರದಿಯನ್ನು ನಿಷ್ಕ್ರಿಯ ಗೊಳಿಸಿದೆ ಎಂದ...