Saturday, December 6

Tag: Lorry strike

2 ದಿನಗಳಲ್ಲೇ ಅಂತ್ಯಗೊಂಡ ಲಾರಿ ಮುಷ್ಕರ; ಚಾಣಕ್ಯನೆನಿಸಿದ ರಾಮಲಿಂಗಾರೆಡ್ಡಿ

2 ದಿನಗಳಲ್ಲೇ ಅಂತ್ಯಗೊಂಡ ಲಾರಿ ಮುಷ್ಕರ; ಚಾಣಕ್ಯನೆನಿಸಿದ ರಾಮಲಿಂಗಾರೆಡ್ಡಿ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜ್ಯದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರವನ್ನು ರಾಜ್ಯ ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘ ಗುರುವಾರ ವಾಪಸ್‌ ಪಡೆದಿದೆ. ಮೊದಲನೇ ದಿನ ಸುಮಾರು ಸ್ವಲ್ಪಮಟ್ಟಿಗೆ ಯಶಸ್ಸು ಕಂಡಿದ್ದ ಮುಷ್ಕರಕ್ಕೆ ಚೆನ್ನಾರೆಡ್ಡಿ ನೇತೃತ್ವದ ಲಾರಿ ಮಾಲೀಕರ ಮತ್ತೊಂದು ಬಣ ಮುಷ್ಕರಕ್ಕೆ ಬೆಂಬಲ ನೀಡಲಿಲ್ಲ. ಹಾಗಾಗಿ ಎರಡನೇ ದಿನಕ್ಕೆ ಮುಷ್ಕರವು ತನ್ನ ವೇಗವನ್ನು ಕಳೆದುಕೊಂಡಿತು. ಈ ನಡುವೆ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್ ಷಣ್ಮುಖಪ್ಪರವರು ಸಾರಿಗೆ ಸಚಿವರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿದರು. ಹೇಗಿದ್ದರೂ ಮಾರನೆ ದಿನ ಮತ್ತಷ್ಟು ಸಹಜ ಸ್ಥಿತಿಗೆ ಬರುತ್ತಿದ್ದ ಮುಷ್ಕರವು ತಮ್ಮ ಕೈತಪ್ಪಲಿದೆ ಎಂಬುದನ್ನು ಅರಿತ ಬಹುತೇಕ ಸಂಘಟಕರು ಮಾತುಕತೆಗೆ ಮುಂದಾದರು. ಸಂಘದ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅದಾಗಲೇ ಎರಡು ಬಾರಿ ಮುಖಂಡರೊಂದಿಗೆ ಚರ್ಚಿಸಿದ್ದರು. ಮುಖ್ಯಮಂತ್ರಿಗಳು ಸಹ ಒಂದು ಬಾರಿ ಸಂಧಾನ ಸಭೆ ನಡೆಸಿದ್ದರು. ಮೊದಲೆರಡು ಸಂಧಾನದಲ್ಲಿಯೇ ಅವರ ಪ್ರಮುಖ ಬೇಡಿಕೆಗಳಾದ ಡೀಸೆಲ್ ಬೆಲೆ ಇಳಿಸುವ, ಟೋಲ್ ರದ್ದು ಮಾಡುವ ಬೇಡ...