Tag: Mangaluru

  • ಮಂಗಳೂರಿನಲ್ಲಿ ವಾಹನ ಚಾಲಕರು ಗಮನಿಸಲೇಬೇಕು.. ಕರಾವಳಿಯ ಈ ಮಾರ್ಗಗಳಲ್ಲಿ ಗರಿಷ್ಟ ವೇಗದ ಮಿತಿ ನಿಗದಿ

    ಮಂಗಳೂರಿನಲ್ಲಿ ವಾಹನ ಚಾಲಕರು ಗಮನಿಸಲೇಬೇಕು.. ಕರಾವಳಿಯ ಈ ಮಾರ್ಗಗಳಲ್ಲಿ ಗರಿಷ್ಟ ವೇಗದ ಮಿತಿ ನಿಗದಿ

    ಮಂಗಳೂರು, ಭಾರೀ‌ ಮಳೆ ಹಾಗೂ ಸರಣಿ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳಲ್ಲಿ ವಾಹನಗಳ ವೇಗದ ಮಿತಿಯನ್ನು‌ ನಿಗದಿಪಡಿಸಲಾಗಿದೆ.

    ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭುಕುಸಿತದಿಂದಾಗಿ ಹಾನಿಯ ಹಿನ್ನೆಲೆಯಲ್ಲಿ ಹಾಗೂ ಅಪಘಾತಗಳನ್ನು ನಿಯಂತ್ರಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿಯಮವನ್ನು ತಾತ್ಕಾಲಿಕವಾಗಿ ಜಾರಿಗೊಳಿಸಿದೆ.

    ರಾಷ್ಟ್ರೀಯ ಹೆದ್ದಾರಿ-66ರ ಮಂಗಳೂರು ಹೊರವಲಯದ ಸುರತ್ಕಲ್ ಮತ್ತು ತೊಕ್ಕೊಟ್ಟು ನಡುವೆ ಹಾಗೂ ರಾಷ್ಟ್ರೀಯ ಹೆದ್ದಾರಿ-73ರ ಬಿ.ಸಿ. ರೋಡ್ ಮತ್ತು ನಂತೂರು ನಡುವೆ ವಾಹನಗಳ ವೇಗದ ಮಿತಿ ಗಂಟೆಗೆ 40 ಕಿಮೀ ನಿಗದಿಪಡಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.