Thursday, January 29

Tag: Momkey fox

ಮಂಕಿ ಫಾಕ್ಸ್ ಆತಂಕ : ವಿಮಾನ ನಿಲ್ದಾಣ, ಬಂದರಿನಲ್ಲಿ ಕಡೆ ಬಿಗಿಕ್ರಮ

ಮಂಕಿ ಫಾಕ್ಸ್ ಆತಂಕ : ವಿಮಾನ ನಿಲ್ದಾಣ, ಬಂದರಿನಲ್ಲಿ ಕಡೆ ಬಿಗಿಕ್ರಮ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು:  ಆಫ್ರಿಕಾ ಖಂಡದಲ್ಲಿ ಆತಂಕ ಮೂಡಿಸಿರುವ ಮಂಕಿಫಾಕ್ಸ್ ಬಗ್ಗೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯಸಂಸ್ಥೆ ಘೋಷಿಸಿದ್ದರೂ ಈ ಸೋಂಕು ಭಾರತದಲ್ಲಿ ಹರಡುವ ಅಪಾಯ ಕಡಿಮೆ. ಹೀಗಾಗಿ ಯಾರೊಬ್ಬರು ಆತಂಕಕ್ಕೆ ಒಳಗಾಗಬಾರದೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್‌ ಪಾಟಿಲ್‌ ರಾಜ್ಯದ ಜನತೆಗೆ ಅಭಯ ನೀಡಿದ್ದಾರೆ. ಶುಕ್ರವಾರ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಂಕಿಫಾಕ್ಸ್ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು, ಕಳೆದ ಆ.14ರಂದು ವಿಶ್ವ ಆರೋಗ್ಯ ಸಂಸ್ಥೆ ಮಂಕಿಫಾಕ್ಸ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ ಘೋಷಿಸಿದೆ. ಆಫ್ರಿಕಾದಲ್ಲಿ ಹರಡಿರುವ ಸೋಂಕು ಕಾಣಿಸಿಕೊಂಡಿರುವ ಸೋಂಕನ್ನು ಎದುರಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು. ಈ ಸೋಂಕು ಇಲ್ಲಿಯವರೆಗೆ ಭಾರತದಲ್ಲಿ ಕಂಡು ಬಂದಿಲ್ಲ. ಈ ಹಿನ್ನೆಲೆ ಯಾವುದೇ ಆತಂಕ ಬೇಡ. ಎನ್‌ಸಿಡಿಸಿ ಜಂಟಿ ನಿರ್ವಹಣೆ ಸಂಸ್ಥೆ ಇದರ ಹರಡುವಿಕೆ ಅಪಾಯದ ಮೌಲ್ಯಮಾಪನ ನಡ...