Saturday, December 6

Tag: Pakistan’s Defence Minister Khawaja Muhammad Asif

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತನ್ನ ಪಾತ್ರ ಇಲ್ಲ ಎಂದ ಪಾಕಿಸ್ತಾನ

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತನ್ನ ಪಾತ್ರ ಇಲ್ಲ ಎಂದ ಪಾಕಿಸ್ತಾನ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತನ್ನ ಪಾತ್ರ ಇಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ. ಪಹಲ್ಗಾಮ್ ನರಮೇಧದಲ್ಲಿ ಪಾಕಿಸ್ತಾನ ಕೈವಾಡ ಬಗ್ಗೆ ಭಾರತ ಆರೋಪ ಮಾಡಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್, ಪಹಲ್ಗಮ್ ದಾಳಿಯಲ್ಲಿ ತನ್ನ ದೇಶದ ಪಾತ್ರವನ್ನು ನಿರಾಕರಿಸಿದ್ದಾರೆ. ಪಹಲ್ಗಾಮ್​ ದಾಳಿ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ಅಗತ್ಯ ಇದೆ ಎಂದು ಪ್ರತಿಪಾದಿಸಿರುವ ಪಾಕಿಸ್ತಾನದ ರಕ್ಷಣಾ ಸಚಿವರು, ಅಂತರಾಷ್ಟ್ರೀಯ ತನಿಖೆಗೆ ತಮ್ಮ ದೇಶ ಸಜಕರಿಷ್ಯಾಲಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಭಾರತಕ್ಕೆ ನಾವು ಹೆದರುತ್ತಿಲ್ಲ, ಒಂದು ವೇಳೆ ಅವರು ದಾಳಿ ನಡೆಸಿದರೆ, ದಿಟ್ಟ ಉತ್ತರ ನೀಡುತ್ತೇವೆ ಪಾಕಿಸ್ತಾನದ ರಕ್ಷಣಾ ಸಚಿವರು ತಿಳಿಸಿದ್ದಾರೆ....