Wednesday, March 18

Tag: Prayagraj- mahakumbha mela- Netra mahakumbha

ಸಂಘ ಕಾರ್ಯ ಮಹಾಕಾರ್ಯ; ಪ್ರಯಾಗರಾಜ್’ನಲ್ಲಿ ಭಕ್ತರಿಗೆ ದೃಷ್ಟಿ ನೀಡುತ್ತಿರುವ ‘ನೇತ್ರ ಮಹಾಕುಂಭ’

ಸಂಘ ಕಾರ್ಯ ಮಹಾಕಾರ್ಯ; ಪ್ರಯಾಗರಾಜ್’ನಲ್ಲಿ ಭಕ್ತರಿಗೆ ದೃಷ್ಟಿ ನೀಡುತ್ತಿರುವ ‘ನೇತ್ರ ಮಹಾಕುಂಭ’

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಪ್ರಯಾಗರಾಜ್‌: ಜಗದ್ವಿಖ್ಯಾತ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್‌ ಹಲವು ವಿಶೇಷತೆಗಳಿಂದ ಗಮನಸೆಳೆಯುತ್ತಿದೆ. ಮಹಾ ಕುಂಭಕ್ಕೆ ಆಗಮಿಸುವ ಭಕ್ತರಿಗಾಗಿ ‘ನೇತ್ರ ಮಹಾಕುಂಭ’ ಹೆಸರಿನ ವಿಶೇಷ ಶಿಬಿರವನ್ನು ಸ್ಥಾಪಿಸಲಾಗಿದೆ. ಈ ಶಿಬಿರದಲ್ಲಿ ಉಚಿತ ಕಣ್ಣಿನ ಪರೀಕ್ಷೆ, ಚಶ್ಮೆ ಹಾಗೂ ಔಷಧಿಗಳನ್ನು ವಿತರಿಸಲಾಗುತ್ತಿದೆ.ಜನವರಿ 13 ರಿಂದ ಕಾರ್ಯನಿರ್ವಹಿಸುತ್ತಿರುವ ಈ ಶಿಬಿರವು ಅಗತ್ಯವಿರುವವರಿಗೆ ಉಚಿತ ಕಣ್ಣು ಶಸ್ತ್ರಚಿಕಿತ್ಸೆಯನ್ನೂ ಒದಗಿಸುತ್ತಿದ್ದು, ಕಣ್ಣು ದಾನ ಕುರಿತು ಜನಜಾಗೃತಿ ಮೂಡಿಸುತ್ತಿದೆ.ರಾಷ್ಟ್ರೀಯ ಸ್ವಯಂಸೇವಕ ಸಂಘ (RSS), ಸಕ್ಷಮ್ ಫೌಂಡೇಶನ್ ಹಾಗೂ ಇತರ ಸಾಮಾಜಿಕ ಸಂಘಟನೆಯ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ದಿನನಿತ್ಯ ಸಾವಿರಾರು ಯಾತ್ರಿಕರಿಗೆ ಆರೋಗ್ಯ ಸೇವೆಯನ್ನು ನೀಡುತ್ತಿದೆ.ಈ ಬಾರಿ ‘ನೇತ್ರ ಮಹಾಕುಂಭ’ದ ಉದ್ದೇಶ ಐದು ಲಕ್ಷ ಜನರಿಗೆ ಉಚಿತ ಕಣ್ಣಿನ ಆರೈಕೆ ನೀಡುವ ಪ್ರಯತ್ನ ಸಾಗಿದೆ. ಇದರಲ್ಲಿ ಮೂರು ಲಕ್ಷ ಜನರಿಗೆ ಉಚಿತ ಕಣ್ಣು ಪರೀಕ್ಷೆ, ಚಶ್ಮೆ ಹಾಗೂ ಔಷಧಿ ವಿತರಣೆ ಸೇರಿದಂತೆ ಉಚಿತ ಶಸ್ತ್ರಚಿಕಿತ್ಸೆಯ ಸೌಲಭ್ಯವೂ ಒದಗಿಸಲಾಗುತ್ತಿದೆ. ಈ ಶಿಬಿರವನ್ನು...