Saturday, December 6

Tag: Rahul gandhi

ಬ್ರಿಟಿಷ್ ಸಂಸತ್ ಬಳಿ ಬಸವೇಶ್ವರರ 891ನೇ ಜಯಂತ್ಯುತ್ಸವ: ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಎಂಗೆ ಆಹ್ವಾನ

ಬ್ರಿಟಿಷ್ ಸಂಸತ್ ಬಳಿ ಬಸವೇಶ್ವರರ 891ನೇ ಜಯಂತ್ಯುತ್ಸವ: ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಎಂಗೆ ಆಹ್ವಾನ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಲಂಡನ್: ಲಂಡನ್ ಥೇಮ್ಸ್ ನದಿ ತೀರದಲ್ಲಿರುವ ಲ್ಯಾಂಬೆತ್ ಬಸವೇಶ್ವರ ಪ್ರತಿಮೆ ಬಳಿ ಈ ಬಾರಿ ಬಸವೇಶ್ವರರ 891 ನೇ ಜಯಂತಿಯನ್ನು ವಿಶೇಷ ಕೈಂಕರ್ಯವಾಗಿ ಆಚರಿಸಲು ತಯಾರಿ ನಡೆದಿದೆ. ಏಪ್ರಿಲ್ 30ರಂದು ಬೆಳಿಗ್ಗೆ 11:30 ಕ್ಕೆ ಬ್ರಿಟಿಷ್ ಸಂಸತ್ ಬಳಿ ಭವ್ಯ ಸಮಾರಂಭ ನಡೆಯಲಿದ್ದು, ಈ ಸಮಾರಂಭಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ ಎಂದು ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷರೂ ಆದ ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ತಿಳಿಸಿದ್ದಾರೆ. ಏಪ್ರಿಲ್ 30ರಂದು ನಡೆಯುವ ಸಮಾರಂಭದಲ್ಲಿ ಯುಕೆಯ ಪ್ರಧಾನಿ ಸರ್ ಕಿಯರ್ ಸ್ಟಾರ್ಮರ್ ಸಂಪುಟದ ಸಚಿವರು ಹಾಗೂ ಲಂಡನಿನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಲಂಡನ್ನಿನ ಕಾರ್ಮಿಕ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರೂ ಆದ ಡಾ.ನೀರಜ್ ಪಾಟೀಲ್ ತಿಳಿಸಿದ್ದಾರೆ. ಈ ಸಮಾರಂಭದಲ್ಲಿ ಭಾಗವಹಿಸಲು ಕನ್ನಡಿಗರಾದ ಸಿಎಂ ಸಿದ್ದರಾಮಯ್ಯ ಅವರನ್ನೂ ಆಹ್ವಾನಿಸಲಾಗಿದ್ದು, ತಮ್ಮ ಪ್ರತಿಷ್ಠಾನದ ಪರವಾಗಿ ಆಹ್ವಾನ ಪತ್ರ ನೀಡಲಾಗಿದೆ ಎಂ...
BJP, RSS ವಿರುದ್ದ ಹೇಳಿಕೆ: ರಾಹುಲ್ ಗಾಂಧಿ ವಿರುದ್ದ FIR

BJP, RSS ವಿರುದ್ದ ಹೇಳಿಕೆ: ರಾಹುಲ್ ಗಾಂಧಿ ವಿರುದ್ದ FIR

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ​ ಕಾಂಗ್ರೆಸ್​ ಪಕ್ಷದ ಕಚೇರಿಯೊಂದರ ಉದ್ಘಾಟನೆ ವೇಳೆ ರಾಹುಲ್ ಗಾಂಧಿ ಅವರು, ಬಿಜೆಪಿ ಮತ್ತು ಆರ್​​ಎಸ್​ಎಸ್​ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡಿವೆ. ನಾವು ಈಗ ಅವುಗಳ ವಿರುದ್ಧ ಹೋರಾಡುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಬಗ್ಗೆ ಲೋಕಸಭೆ ವಿಪಕ್ಷ ನಾಯಕರೂ ಆದ ರಾಹುಲ್ ಗಾಂಧಿ ವಿರುದ್ದ ವಕೀಲ ಮೊಂಜಿತ್ ಚೇಟಿಯಾ ಎಂಬವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗುವಾಹಟಿಯ ಪಾನ್ ಬಜಾರ್ ಠಾಣೆಯಲ್ಲಿ ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕೃತ್ಯಗಳ ಆರೋಪದ ಮೇಲೆ ಪ್ರಕರಣ​ ದಾಖಲಾಗಿದೆ....