ಕೇಂದ್ರದ ಭಾಷಾ ನೀತಿಗೆ ಆಕ್ಷೇಪ: ಬಿಜೆಪಿಗೆ ನಟಿ ರಂಜನಾ ಗುಡ್ ಬೈ..!
ಚೆನ್ನೈ: ತಮಿಳುನಾಡು ಬಿಜೆಪಿಯಲ್ಲಿ ಬೆಳವಣಿಗೆಯಾಗಿದೆ. ಬಿಜೆಪಿ ಪಕ್ಷವನ್ನು ತೊರೆಯಲು ತಮಿಳು ನಟಿ ರಂಜನಾ ನಾಚಿಯಾರ್ ನಿರ್ಧರಿಸಿದ್ದಾರೆ. ಪಕ್ಷದ ಭಾಷಾ ನೀತಿ ಮತ್ತು ರಾಜ್ಯವನ್ನು ನಿರ್ಲಕ್ಷಿಸಿರುವುದನ್ನು ಖಂಡಿಸಿ ಅವರು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಮಂಗಳವಾರ ಘೋಷಿಸಿದ್ದಾರೆ.
ಇಂಗ್ಲಿಷ್ ಭಾಷೆಯಲ್ಲೂ ಓದಿ..
Actress Ranjana Nachiyaar quits BJP, likely to join Vijay's TVK
ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರ ಸರ್ಕಾರ ವಿವಾದಾತ್ಮಕ ತ್ರಿಭಾಷಾ ನೀತಿಯನ್ನು ಹೇರಿದ್ದು ಮತ್ತು ತಮಿಳುನಾಡನ್ನು ನಿರ್ಲಕ್ಷಿಸಿದೆ ಎಂದು ಭಾವಿಸಲಾಗಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ.
ಪ್ರಾದೇಶಿಕ ಸಮಸ್ಯೆಗಳಿಗೆ, ವಿಶೇಷವಾಗಿ ಭಾಷಾ ನೀತಿಗೆ ಬಿಜೆಪಿಯ ವಿಧಾನದ ಬಗ್ಗೆ ತಮ್ಮ ಆಳವಾದ ಭ್ರಮನಿರಸನವನ್ನು ವ್ಯಕ್ತಪಡಿಸಿದ ಅವರು, "ಒಬ್ಬ ತಮಿಳು ಮಹಿಳೆಯಾಗಿ, ತ್ರಿಭಾಷಾ ನೀತಿಯನ್ನು ಹೇರುವುದು, ದ್ರಾವಿಡರ ಕಡೆಗೆ ಹೆಚ್ಚುತ್ತಿರುವ ದ್ವೇಷ ಮತ್ತು ತಮಿಳುನಾಡಿನ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ನಿರಂತರವಾಗಿ ನಿರ್ಲಕ್ಷಿಸುವುದನ್ನು ಒಪ್ಪಲು ಸಾಧ್ಯವಿಲ್ಲ" ಎಂದು ಹೇಳಿದರು.
ಎಂಟು ವರ್ಷ...
