Sunday, March 15

Tag: Retired Superintendent of Police G.A. Bawa

ಏಪ್ರಿಲ್  18ರಿಂದ ಕರಾವಳಿಯಲ್ಲಿ ‘ಸೌಹಾರ್ದ ಬ್ಯಾರಿ ಉತ್ಸವ’; ಉದ್ಯೋಗ ಮೇಳ, ಶೈಕ್ಷಣಿಕ ಕ್ರಾಂತಿಗೂ ಮುನ್ನುಡಿ..!

ಏಪ್ರಿಲ್ 18ರಿಂದ ಕರಾವಳಿಯಲ್ಲಿ ‘ಸೌಹಾರ್ದ ಬ್ಯಾರಿ ಉತ್ಸವ’; ಉದ್ಯೋಗ ಮೇಳ, ಶೈಕ್ಷಣಿಕ ಕ್ರಾಂತಿಗೂ ಮುನ್ನುಡಿ..!

Focus, ಪ್ರಮುಖ ಸುದ್ದಿ, ರಾಜ್ಯ
ಮಂಗಳೂರು: ಕಡಲ ತಡಿ ಮಂಗಳೂರು ಅಧ್ಧೂರಿ 'ಸೌಹಾರ್ದ ಬ್ಯಾರಿ ಉತ್ಸವ'ಕ್ಕೆ ಸಾಕ್ಷಿಯಾಗಲಿದೆ. ಎಪ್ರಿಲ್ 18ರಿಂದ ಮೂರು ದಿನಗಳ ಕಾಲ ಈ ಉತ್ಸವ ನಡೆಯಲಿದ್ದು, ಸಮುದಾಯದ ಯುವಜನರ ಅನುಕೂಲಕ್ಕಾಗಿ 'ಉದ್ಯೋಗ ಮೇಳ'ವನ್ನೂ ಆಯೋಜಿಸಲಾಗಿದೆ.ಈ ಕುರಿತಂತೆ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವಾ ಅವರು ಮಂಗಳೂರಿನಲ್ಲಿ ಸಮುದಾಯದ ಪ್ರಮುಖರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ಕರ್ನಾಟಕ ಬ್ಯಾರೀಸ್ ಸೋಶಿಯಲ್ ಎಂಡ್ ಕಲ್ಬರಲ್ ಫಾರಂ ಆಯೋಜಿಸುವ ಸೌಹಾರ್ದ ಬ್ಯಾರಿ ಉತ್ಸವ 2025 ಸಂಘಟನಾ ಸಮಿತಿಯ ವತಿಯಿಂದ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ 2025 ರ ಏಪ್ರಿಲ್ 18, 19, 20ರಂದು 'ಬ್ಯಾರಿ ಸೌಹಾರ್ದ ಉತ್ಸವ' ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಬ್ಯಾರಿ ಜನಾಂಗದ ವೈಶಿಷ್ಟ್ಯತೆ, ಸಂಸ್ಕೃತಿ, ಸೌಹಾರ್ದತೆ, ಕೊಡುಗೆಗಳು, ಸಾಧನೆಗಳು, ಪರಂಪರೆಗಳನ್ನು ಪ್ರತಿಬಿಂಬಿಸುವ ಜೊತೆಗೆ ಯುವ ಜನಾಂಗಕ್ಕೆ ದಿಕ್ಕೂಚಿಯಾಗುವ ಹಾಗೂ ಬಹು ಭಾಷಾ ಸಂಸ್ಕೃತಿಗಳನ್ನು ಪ್ರಸ್ತುತ ಪಡಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಜಿ.ಎ.ಬಾವಾ ತಿಳಿಸಿದರು.ಏಪ್ರಿಲ್ 18, ಶುಕ್ರವ...