ಕೌಶಲ್ಯ ಅಭಿವೃದ್ಧಿಗಾಗಿ ಮೆಲ್ಬೋರ್ನ್ ಮೂಲದ ಆರ್‌ಎಂಐಟಿ ವಿಶ್ವವಿದ್ಯಾಲಯ ಜೊತೆ ಸಹಯೋಗಕ್ಕೆ ಸರ್ಕಾರದ ಚಿಂತನೆ
ಬೆಂಗಳೂರು: ಕರ್ನಾಟಕ ಕೌಶಲ್ಯ ಅಭಿವೃದ್ಧಿ ಇಲಾಖೆ ಮತ್ತು ಮೆಲ್ಬೋರ್ನ್ ಮೂಲದ ಆರ್‌ಎಂಐಟಿ ವಿಶ್ವವಿದ್ಯಾಲಯವು ರಾಜ್ಯದ ಕೌಶಲ್ಯಾಭಿವೃದ್ಧಿ ವಲಯದಲ್ಲಿ ವಿದ್ಯಾರ್ಥಿಗಳಿಗೆ ಮರು-ಕೌಶಲ್ಯ ಮತ್ತು ಉನ್ನತೀಕರಣಕ್ಕೆ ಹೆಚ್ಚು ಆದ್ಯತೆ ನೀಡಲು ಮುಂದಾಗಿವೆ.
ಈ ನಿಟ್ಟಿನಲ್ಲಿ ಕೆಲವು ಉಪಕ್ರಮಗಳನ್ನು ಜಾರಿಗೆ ತರುವ ಕುರಿತು ಸಮಾಲೋಚನೆ ನಡೆಸಲಾಗಿದೆ. ಕುಲಪತಿ ಮಿಶ್ ಈಸ್ಟ್‌ಮನ್ ನೇತೃತ್ವದ ಆರ್‌ಎಂಐಟಿ ವಿಶ್ವವಿದ್ಯಾಲಯದ ನಿಯೋಗವು ವೃತ್ತಿಪರ ಶಿಕ್ಷಣ ಕಾಲೇಜಿನ ನಿರ್ದೇಶಕ ಪ್ರಶೀಲ್ ಸಿಂಗ್; ವಿಕ್ಟೋರಿಯಾ ಸರ್ಕಾರದ (ಆಸ್ಟ್ರೇಲಿಯಾ) ವ್ಯವಸ್ಥಾಪಕ ಜಸ್ಟಿನ್ ಸ್ಮಿತ್ ಮತ್ತು ಪ್ರಾದೇಶಿಕ ನಿರ್ದೇಶಕಿ (ಶಿಕ್ಷಣ) ಆನಿ ಸಂತಾನ ಅವರೊಂದಿಗೆ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಚರ್ಚಿಸಿದರು. ಕೌಶಲ್ಯ ಅಭಿವೃದ್ಧಿಯಲ್ಲಿ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರದ ನಡುವಿನ ಸಹಯೋಗವನ್ನು ಬಲಪಡಿಸುವ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಗಿದೆ ಎಂದವರು ತಿಳಿಸಿದರು.
ಕೌಶಲ್ಯ ಶಿಕ್ಷಣದಲ್ಲಿ ಕರ್...
