Sunday, December 7

Tag: ‘Sangh Shatabdhi Celebrations Throughout the Year; RSS abps in March

ವರ್ಷಪೂರ್ತಿ ‘ಸಂಘ ಶತಾಬ್ದಿ’ ವರ್ಷ; ಮಾರ್ಚ್ 21, 22, 23ರಂದು RSS ಅಖಿಲ ಭಾರತೀಯ ಪ್ರತಿನಿಧಿ ಸಭಾ ಭೈಠಕ್’ನಲ್ಲಿ ಕಾರ್ಯತಂತ್ರ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು:  ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ-ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭಾ  ಇದೇ 2025ರ ಮಾರ್ಚ್ 21, 22, 23 ರಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರ ಆವರಣದಲ್ಲಿ ನಡೆಯಲಿದೆ. ಬೈಠಕ್ ನಲ್ಲಿ ಹಿಂದಿನ ವರ್ಷ 2024-25ರ ಕಾರ್ಯಚಟುವಟಿಕೆಗಳ ಕುರಿತು ವಿಮರ್ಶಾತ್ಮಕ ಚರ್ಚೆಯ ಜೊತೆಗೆ ವಿಶೇಷ ಕಾರ್ಯಗಳ ಪ್ರಸ್ತುತಿಯೂ ಆಗಲಿದೆ. ಮುಂದಿನ ವಿಜಯದಶಮಿ (ದಸರಾ) 2025ಕ್ಕೆ ಸಂಘಕಾರ್ಯಕ್ಕೆ ನೂರು ವರ್ಷ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ 2025ರ ವಿಜಯದಶಮಿಯಿಂದ 2026ರ ವಿಜಯದಶಮಿಯವರೆಗೆ ಸಂಘ ಶತಾಬ್ದಿಯ ವರ್ಷ ಎಂದು ಕರೆಯಲಾಗುತ್ತದೆ. ಸಭೆಯಲ್ಲಿ ಶತಾಬ್ದಿ ವರ್ಷದ ಕಾರ್ಯವಿಸ್ತಾರದ ಯೋಜನೆಯ ಜೊತೆ ಜೊತೆಗೆ ಮುಂಬರುವ ಶತಾಬ್ದಿ ವರ್ಷದ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳ ಆಯೋಜನೆ ಹಾಗೂ ಅಭಿಯಾನಗಳ ರೂಪುರೇಷೆಯ ತಯಾರಿ ನಡೆಯಲಿದೆ. ಬೈಠಕ್ ನಲ್ಲಿ ರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ ಎರಡು ಪ್ರಸ್ತಾವನೆಯ ಕುರಿತು ವಿಚಾರ ವಿನಿಮಯಗೊಳ್ಳಲಿದೆ. ಜೊತೆಯಲ್ಲಿ ಸಂಘದ ಶಾಖೆಯ ಮೂಲಕ ಅಪೇಕ್ಷಿತ ಸಾಮಾಜಿಕ ಪರಿವರ್ತನೆಯ ಕ...