Saturday, March 14

Tag: singer Deviprasad M. Devandabettu

ಶ್ರೀ ಕಟೀಲು ಕ್ಷೇತ್ರ ವೈಭವವನ್ನು ವರ್ಣಿಸುವ ‘ಅಪ್ಪೆ ಭ್ರಾಮರಿಯೇ..!’; ಕರಾವಳಿ ಯುವಜನರ ಪ್ರಯತ್ನಕ್ಕೆ ಆಸ್ತಿಕರಿಂದ ಸಕತ್ ಲೈಕ್ಸ್..

ಶ್ರೀ ಕಟೀಲು ಕ್ಷೇತ್ರ ವೈಭವವನ್ನು ವರ್ಣಿಸುವ ‘ಅಪ್ಪೆ ಭ್ರಾಮರಿಯೇ..!’; ಕರಾವಳಿ ಯುವಜನರ ಪ್ರಯತ್ನಕ್ಕೆ ಆಸ್ತಿಕರಿಂದ ಸಕತ್ ಲೈಕ್ಸ್..

Focus, ಆಧ್ಯಾತ್ಮ, ದೇಗುಲ ದರ್ಶನ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಮಂಗಳೂರು: ಪುರಾಣ ಪ್ರಸಿದ್ಧ ಶ್ರೀ ಕಟೀಲು ಕ್ಷೇತ್ರದಲ್ಲಿ ಇದೀಗ ವೈಭವದ ಜಾತ್ರಾ ಮಹೋತ್ಸವದ ಸಡಗರ ಆವರಿಸಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರವು ಕರಾವಳಿಯ ಪ್ರಸಿದ್ಧ ದೇಗುಲವಾಗಿದ್ದು, ದೇಶ-ವಿದೇಶಗಳಿಂದಲೂ ಭಕ್ತರು ಈ ಜಾತ್ರೆಗೆ ಸಾಕ್ಷಿಯಾಗುತ್ತಾರೆ. ಕಟೀಲು ಕ್ಷೇತ್ರದ ಜಾತ್ರೆಯ ಸಂದರ್ಭದಲ್ಲೇ ಕರಾವಳಿಯ ಯುವಜನ ಸಮೂಹ ಶ್ರೀ ದುರ್ಗಾಪರಮೇಶ್ವರಿಯ ಮಹಿಮೆಯ ಬಗ್ಗೆ ಬೆಳಕು ಚೆಲ್ಲುವ ಹಾಡೊಂದನ್ನು ಲೋಕಾರ್ಪಣೆ ಮಾಡಿ ಗಮನಸೆಳೆದಿದ್ದಾರೆ. ಈ ಭಕ್ತಿ ಗಾನಕ್ಕೆ ಆಸ್ತಿಕರ ಪಾಳಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.https://www.youtube.com/watch?v=etv5WCNznXQಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರೆ ಪ್ರಯುಕ್ತ ದೇವಲೋಕ ಕ್ರಿಯೇಷನ್ಸ್ ವತಿಯಿಂದ 'ಅಪ್ಪೆ ಭ್ರಾಮರಿಯೇ' ಎಂಬ ಹೊಸ ಭಕ್ತಿಗೀತೆಯನ್ನು ಶನಿವಾರ ಬೆಳಿಗ್ಗೆ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಗಿದೆ. ಜ್ಯೋತಿಗುಡ್ಡೆ ಕ್ಷೇತ್ರದ ಅರ್ಚಕಿ ಗುಲಾಬಿ ಅಮ್ಮನವರು ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಿದರು.ಸಾಫಲ್ಯ ಸೇವಾ ಸಂಘ (ರಿ) ...