Wednesday, April 15

Author: info@rajasdigital.com

ಏ.30ರಂದು ಆಂಗ್ಲರ‌ ನಾಡಿನಲ್ಲಿ ಬಸವೇಶ್ವರ ಉತ್ಸವ.. ಬ್ರಿಟೀಷ್ ಕನ್ನಡಿಗರಿಂದ ಭರ್ಜರಿ ತಯಾರಿ..

ಏ.30ರಂದು ಆಂಗ್ಲರ‌ ನಾಡಿನಲ್ಲಿ ಬಸವೇಶ್ವರ ಉತ್ಸವ.. ಬ್ರಿಟೀಷ್ ಕನ್ನಡಿಗರಿಂದ ಭರ್ಜರಿ ತಯಾರಿ..

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ಲಂಡನ್: ಆಂಗ್ಲರ ನಾಡು ಲಂಡನ್ ಇದೀಗ ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಸಡಗರದಲ್ಲಿದೆ. ಏಪ್ರಿಲ್ 30ರಂದು ಲಂಡನ್‌ನಲ್ಲಿರುವ ಬಸವೇಶ್ವರ ಪ್ರತಿಮೆಯ ಸ್ಥಳದಲ್ಲೇ ಬಸವೇಶ್ವರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಬ್ರಿಟೀಷ್ ಕನ್ನಡಿಗರ ನಡುವಿನ ಭಾರತ ವೈಭವಕ್ಕೆ ಸಾಕ್ಷಿಯಾಗಲಿದೆ ಎಂದು ಲಂಡನ್ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಹೇಳಿದ್ದಾರೆ.'30ನೇ ಏಪ್ರಿಲ್ 2025 ರಂದು ಮಧ್ಯಾಹ್ನ 12:00 ಗಂಟೆಗೆ, ನಾವು ಲಂಡನ್‌ನಲ್ಲಿ ಭಗವಾನ್ ಬಸವೇಶ್ವರರ 891 ನೇ ಜನ್ಮದಿನವನ್ನು ಆಚರಿಸುತ್ತೇವೆ. ಈ ಸಮಾರಂಭದಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಭಾರತೀಯ ಹೈಕಮಿಷನರ್ ಭಾಗಿಯಾಗಲಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.‌UK ಯಲ್ಲಿ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಶ್ರಮಿಸುತ್ತಿರುವ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಬ್ರಿಟಿಷ್ ಕನ್ನಡ ಸಮೂಹದ ಪ್ರಮುಖರ ಸಮಾಗಮವಾಗಲಿದೆ. ಇದು ಅನನ್ಯ ಹಾಗೂ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಲಿದೆ ಎಂದವರು ಹೇಳಿದ್ದಾರೆ.ಬಸವೇಶ್ವರ ಸ್ಮಾರಕಕ್ಕೆ ಭೇಟಿ ನೀಡಲು ಮತ್ತು ಬಸವೇಶ್ವರ ದೇವರಿಗೆ ನಮನ ಸಲ್ಲಿಸಲು ಅವಕಾ...
ಶ್ರೀಶೈಲಂ ಸುರಂಗ ಕಾಮಗಾರಿ ವೇಳೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಹರಸಾಹಸ

ಶ್ರೀಶೈಲಂ ಸುರಂಗ ಕಾಮಗಾರಿ ವೇಳೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಹರಸಾಹಸ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಹೈದರಾಬಾದ್: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ಶ್ರೀಶೈಲಂ ಎಡದಂಡೆ ಕಾಲುವೆ (SLBC) ಸುರಂಗ ಕಾಮಗಾರಿ ವೇಳೆ ಅಪಾಯದಲ್ಲಿ ಸಿಲುಕಿರುವ ಎಂಟು ಜನರ ರಕ್ಷಣಾ ಕಾರ್ಯಾಚರಣೆ ಆರನೇ ದಿನವೂ ಮುಂದುವರಿದಿದೆ.ಗುರುವಾರ ಬೆಳಿಗ್ಗೆ ಸೇನೆ, ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ಇಲಿ ರಂಧ್ರದ ಗಣಿಗಾರರು ಸುರಂಗದಿಂದ ಹೂಳು ಮತ್ತು ಅವಶೇಷಗಳನ್ನು ತೆರವು ಮಾಡುವ ಕಾರ್ಯಾಚರಣೆ ಕೈಗೊಂಡಿದ್ದಾರೆ.ಸುರಂಗ ಕೊರೆಯುವ ಯಂತ್ರದ (TBM) ಹಾನಿಗೊಳಗಾದ ಭಾಗಗಳನ್ನು ಬೇರ್ಪಡಿಸಲು ರಕ್ಷಣಾ ಕಾರ್ಯಕರ್ತರು ಗ್ಯಾಸ್ ಕಟ್ಟರ್‌ಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ತೆಲಂಗಾಣದ ನೀರಾವರಿ ಸಚಿವ N. ಉತ್ತಮ್ ಕುಮಾರ್ ರೆಡ್ಡಿ, ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಕೆಲಸ 'ಬಹಳ ಬೇಗ' ಸಫಲವಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ. ತೀವ್ರಗೊಂಡ ರಕ್ಷಣಾ ಪ್ರಯತ್ನಗಳು, ಗಣ್ಯ ಪಡೆಗಳ ನಿಯೋಜನೆ ಮತ್ತು ಹೈಟೆಕ್ ವಿಧಾನದಿಂದ ಕಾರ್ಮಿಕರನ್ನು ತಲುಪುವಲ್ಲಿ ಶೀಘ್ರದಲ್ಲ...
45 ದಿನಗಳಲ್ಲಿ 66 ಕೋಟಿಗೂ ಹೆಚ್ಚು ಆಸ್ತಿಕರಿಂದ ಪುಣ್ಯಸ್ನಾನ: ‘ವಸುಧೈವ ಕುಟುಂಬಕಂ’ ಘೋಷಣೆಗೆ ಸಾಕ್ಷಿಯಾದ ಮಹಾಕುಂಭಮೇಳ

45 ದಿನಗಳಲ್ಲಿ 66 ಕೋಟಿಗೂ ಹೆಚ್ಚು ಆಸ್ತಿಕರಿಂದ ಪುಣ್ಯಸ್ನಾನ: ‘ವಸುಧೈವ ಕುಟುಂಬಕಂ’ ಘೋಷಣೆಗೆ ಸಾಕ್ಷಿಯಾದ ಮಹಾಕುಂಭಮೇಳ

Focus, ಆಧ್ಯಾತ್ಮ, ದೇಗುಲ ದರ್ಶನ, ದೇಶ-ವಿದೇಶ, ಪ್ರಮುಖ ಸುದ್ದಿ
ಲಕ್ನೋ: ಇಡೀ ಜಗತ್ತಿನ ಗಮನಸೆಳೆದಿದ್ದ ಪ್ರಯಾಗರಾಜ್ ಮಹಾ ಕುಂಭ 2025 ಪರಿಪೂರ್ಣವಾಗಿದೆ. ಈ ಕೈಂಕರ್ಯದ ಯಶಸ್ವಿಗೆ ಕಾರಣರಾದವರನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸ್ಮರಿಸಿದ್ದಾರೆ. ಮಹಾಕುಂಭ ಯಶಸ್ವಿ ಪೂರ್ಣಗೊಳಿಸುವಿಕೆಗೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವೇ ಕಾರಣ ಎಂದಿರುವ ಅವರು ಈ ಭವ್ಯ ಧಾರ್ಮಿಕ ಸಭೆಯನ್ನು "ಏಕತೆ, ಸಮಾನತೆ ಮತ್ತು ಸಾಮರಸ್ಯದ ಮಹಾಯಜ್ಞ" ಎಂದು ಕರೆದಿದ್ದಾರೆ.ಪ್ರಧಾನಿ ಮೋದಿಯವರ ಮಾರ್ಗದರ್ಶನಕ್ಕೆ ಕೃತಜ್ಞತೆ ಸಲ್ಲಿಸಿರುವ ಸಿಎಂ ಯೋಗಿ, ಗೌರವಾನ್ವಿತ ಪ್ರಧಾನ ಮಂತ್ರಿಗಳೇ, ನಿಮ್ಮ ಯಶಸ್ವಿ ಮಾರ್ಗದರ್ಶನದ ಪರಿಣಾಮವಾಗಿ 'ಏಕತೆ, ಸಮಾನತೆ, ಸಾಮರಸ್ಯದ ಮಹಾಯಜ್ಞ' - ಮಹಾ ಕುಂಭ 2025, ಪ್ರಯಾಗರಾಜ್ ಮುಕ್ತಾಯಗೊಂಡಿದೆ, ಭವ್ಯತೆ ಮತ್ತು ದೈವತ್ವದ ಜೊತೆಗೆ ಭದ್ರತೆ, ಸ್ವಚ್ಛತೆ ಮತ್ತು ನಿರ್ವಹಣೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.ಕಳೆದ 45 ಪವಿತ್ರ ದಿನಗಳಲ್ಲಿ, ಪೂಜ್ಯ ಸಂತರು ಮತ್ತು ಋಷಿಗಳು ಸೇರಿದಂತೆ 66 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ತ್ರಿವೇಣಿಯಲ್ಲಿ ನಂಬಿಕೆಯ ಸ್ನಾನ ಮಾಡುವ ಮೂಲಕ ಆಶೀರ್...
ನಂಜನಗೂಡು: ಗೋದಾಮಿನಲ್ಲಿ ಅಗ್ನಿ ಅವಘಡ

ನಂಜನಗೂಡು: ಗೋದಾಮಿನಲ್ಲಿ ಅಗ್ನಿ ಅವಘಡ

Focus, ಪ್ರಮುಖ ಸುದ್ದಿ, ರಾಜ್ಯ
ಮೈಸೂರು: ನಂಜನಗೂಡು ತಾಲೂಕಿನ ಕತ್ವಾಡಿಪುರ ಗ್ರಾಮದಲ್ಲಿ ಗೋದಾಮೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಬುಧವಾರ ಕೆಮಿಕಲ್ ಪದಾರ್ಥಗಳ ಗೋದಾಮಿನಲ್ಲಿ ಈ ಅವಘಡ ಸಂಭವಿಸಿದೆ.ಕೈಗಾರಿಕಾ ಪ್ರದೇಶದಲ್ಲಿರುವ ಕತ್ವಾಡಿಪುರದಲ್ಲಿ ಅನಿಲ ಸಂಗ್ರಹಣಾ ಘಟಕದ ಸಮೀಪ ಗೋದಾಮು ಬಳಿ ಮೈಸೂರು ಮೂಲದ ವ್ಯಕ್ತಿ ಕೆಮಿಕಲ್ ಮಿಶ್ರಿತ ಹಳೆ ಟ್ಯಾಂಕರ್ ಮತ್ತು ಇತರೆ ಪದಾರ್ಥಗಳನ್ನು ಸಂಗ್ರಹಿಸಿಟ್ಟಿದ್ದರೆನ್ನಲಾಗಿದೆ. ಈ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅನಾಹುತ ಸಂದರ್ಭದಲ್ಲಿ ಸ್ಪೋಟದ ರೀತಿ ಶಬ್ಧ ಕೇಳಿಬಂದಿದೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಈಶರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ....
ಭಕ್ತಿ ವೈಭವ, ಸಾಂಸ್ಕೃತಿಕ ಸಂಭ್ರಮಕ್ಕೂ ಸಾಕ್ಷಿಯಾದ ಇಶಾ ‘ಶಿವರಾತ್ರಿ’

ಭಕ್ತಿ ವೈಭವ, ಸಾಂಸ್ಕೃತಿಕ ಸಂಭ್ರಮಕ್ಕೂ ಸಾಕ್ಷಿಯಾದ ಇಶಾ ‘ಶಿವರಾತ್ರಿ’

Focus, ಆಧ್ಯಾತ್ಮ, ದೇಗುಲ ದರ್ಶನ, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ಕೊಯಮತ್ತೂರು: ಇಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ನೇತೃತ್ವದಲ್ಲಿ ಕೊಯಮತ್ತೂರಿನ ಇಶಾ ಕೇಂದ್ರದಲ್ಲಿ ಬುಧವಾರ ರಾತ್ರಿ ಶಿವರಾತ್ರಿ ಮಹಾ ವೈಭವ ನಾಡಿನ ಗಮನಸೆಳೆಯಿತು.https://www.youtube.com/watch?v=jwcuwMBBKIw&ab_channel=SoundsofIshaಶಿವಸ್ಮರಣೆಯ ಮಹಾ ಹಬ್ಬದಲ್ಲಿ ದೇಶದ ವಿವಿಧೆಡೆಯ ಆಸ್ತಿಕರು ಆಗಮಿಸಿದ್ದರು. ಸಾವಿರಾರು ಶಿವಭಕ್ತರ ಸಮ್ಮುಖದಲ್ಲಿ ನಡೆದ ಭಕ್ತಿ ವೈಭವ ಸಾಂಸ್ಕೃತಿಕ ಸಂಭ್ರಮಕ್ಕೂ ಸಾಕ್ಷಿಯಾಯಿತು.https://www.youtube.com/watch?v=N8CcJj5y6kA&ab_channel=SoundsofIshaಈ ಮಹಾಶಿವರಾತ್ರಿ ಆಚರಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹಿತ ಅನೇಕ ಗಣ್ಯರು ಭಾಗವಹಿಸಿದ್ದರು.https://www.youtube.com/watch?v=zA7Fozc0VCw&ab_channel=SoundsofIsha ...
ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿತಿ ಗಂಭೀರ

ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿತಿ ಗಂಭೀರ

Others
ತಿರುವನಂತಪುರಂ: ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಆದರೆ ಸ್ಥಿರವಾಗಿದೆ ಎಂದು ಕಾರ್ಡಿನಲ್ ತಿಳಿಸಿದ್ದಾರೆ.ಹೆಸರು ಬಹಿರಂಗಪಡಿಸಲು ಇಚ್ಛಿಸದ ಭಾರತೀಯ ಕಾರ್ಡಿನಲ್ ಒಬ್ಬರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದು, ಪೋಪ್ ಅವರು ಹಾಗೆಯೇ ಇದ್ದಾರೆ ಮತ್ತು ವಿಷಯಗಳು ಹಾಗೆಯೇ ಉಳಿದಿವೆ, ಮುಂದಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಷ್ಠಿತ ಸುದ್ದಿ ಮಾಧ್ಯಮ 'ASIA POST' ವರದಿ ಪ್ರಕಟಿಸಿದೆ."No word on future, as Pope critical but stable" “ಪೋಪ್ ರಾಜೀನಾಮೆ ನೀಡಲು ನಿರ್ಧರಿಸಿದರೆ, ಅವರ ಪೂರ್ವವರ್ತಿ ಪೋಪ್ ಬೆನೆಡಿಕ್ಟ್ XVI 2013 ರಲ್ಲಿ ಮಾಡಿದಂತೆ, ಎಲ್ಲಾ ಕಾರ್ಡಿನಲ್‌ಗಳ ಸಭೆಯನ್ನು ಕರೆಯಲಾಗುತ್ತದೆ ಮತ್ತು ನಿವೃತ್ತಿ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಇದು ಸಾಮಾನ್ಯ ರೂಢಿ ಎಂದು ನಾನು ಹೇಳಿದಾಗಲೂ, ಸಭೆಯಿಲ್ಲದೆಯೂ ಸಹ ಇದು ಸಂಭವಿಸಬಹುದು” ಎಂದು ಕಾರ್ಡಿನಲ್ ಅವ್ರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.“ಇಲ್ಲಿಯವರೆಗೆ ಅಂತಹ ಯಾವುದೇ ಸಭೆಯನ್ನು ಕರೆಯಲಾಗಿಲ್ಲ” ಎಂದು ಅ...
ಶಿವರಾತ್ರಿ ದಿನದಂದು ಸರಣಿ ದುರ್ಘಟನೆ: ಗೋದಾವರಿಯಲ್ಲಿ ಐವರು ಜಲಸಮಾಧಿ

ಶಿವರಾತ್ರಿ ದಿನದಂದು ಸರಣಿ ದುರ್ಘಟನೆ: ಗೋದಾವರಿಯಲ್ಲಿ ಐವರು ಜಲಸಮಾಧಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಅಮರಾವತಿ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಬುಧವಾರ ಐದು ಯುವಕರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೂವರು ಯುವಕರ ಶವಗಳು ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ.ಶಿವರಾತ್ರಿಯ ರಾಜಾ ದಿನದ ಹಿನ್ನೆಲೆಯಲ್ಲಿ 20 ವರ್ಷದೊಳಗಿನ 11 ವಿದ್ಯಾರ್ಥಿಗಳ ಗುಂಪು ಮುಂಜಾನೆ ನದಿಗೆ ಸ್ನಾನಕ್ಕೆ ಹೋಗಿದ್ದಾಗ ಜಿಲ್ಲೆಯ ತಲ್ಲಪುಡಿ ಮಂಡಲದ ತಡಿಪುಡಿಯಲ್ಲಿ ಈ ಘಟನೆ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅವರು ಪರಸ್ಪರ ಉಳಿಸಲು ಪ್ರಯತ್ನಿಸಿದರು ಮತ್ತು ಈ ಪ್ರಕ್ರಿಯೆಯಲ್ಲಿ ಐದು ಮಂದಿ ಮುಳುಗಿ ಸಾವನ್ನಪ್ಪಿದರು. ಆರು ಮಂದಿ ಈಜಿ ದಡಸೇರಿದ್ದಾರೆ.ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿರುವ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡರು....
ಕರೂರ್ ಬಳಿ ಭೀಕರ ಅಪಘಾತ: ದೇವಸ್ಥಾನಕ್ಕೆ ತೆರಳುತ್ತಿದ್ದ ಐವರ ಸಾವು

ಕರೂರ್ ಬಳಿ ಭೀಕರ ಅಪಘಾತ: ದೇವಸ್ಥಾನಕ್ಕೆ ತೆರಳುತ್ತಿದ್ದ ಐವರ ಸಾವು

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಚೆನ್ನೈ: ತಮಿಳುನಾಡಿನ ಕರೂರ್ ಜಿಲ್ಲೆಯ ಕುಳಿತಲೈ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.ಕಾರು ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆ (TNSTC) ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಕರೂರ್-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ತಂಜಾವೂರು ಜಿಲ್ಲೆಯ ಒರಥನಾಡು ಬಳಿಯ ಒಕ್ಕನಾಡು ಕೀಲಾಯೂರ್‌ನಲ್ಲಿರುವ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಕಾರು ಪುದುಕ್ಕೊಟ್ಟೈ ಜಿಲ್ಲೆಯ ಅರಂತಂಗಿಯಿಂದ ತಿರುಚ್ಚಿ ಮೂಲಕ ತಿರುಪ್ಪೂರಿಗೆ ಹೋಗುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ.ಮೃತರನ್ನು ಕೊಯಮತ್ತೂರಿನ ಸುಗುಣಪುರಂ ಪೂರ್ವದ ಗಾಂಧಿ ನಗರದ ನಿವಾಸಿ ಎಸ್. ಸೆಲ್ವರಾಜ್ (50), ಅವರ ಪತ್ನಿ ಎಸ್. ಕಲಯರಸಿ (45), ಅವರ ಮಗಳು ಎಸ್. ಅಕಲ್ಯ (25), ಮಗ ಎಸ್. ಅರುಣ್ (22) ಮತ್ತು ಈರೋಡ್ ಜಿಲ್ಲೆಯ ವಿಲ್ಲರಸನ್‌ಪಟ್ಟಿ ನಿವಾಸಿ ಕಾರು ಚಾಲಕ ವಿಷ್ಣು (24) ಎಂದು ಗುರುತಿಸಲಾಗಿದೆ....
‘ಶಕ್ತಿ’ ಯಶೋಗಾಥೆ: 400 ಕೋಟಿ ಬಾರಿ ಮಹಿಳೆಯರ ಉಚಿತ ಪ್ರಯಾಣ

‘ಶಕ್ತಿ’ ಯಶೋಗಾಥೆ: 400 ಕೋಟಿ ಬಾರಿ ಮಹಿಳೆಯರ ಉಚಿತ ಪ್ರಯಾಣ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಶಕ್ತಿ ಯೋಜನೆಯು ಕರುನಾಡಿನಲ್ಲಿ ಶಕ್ತಿ ಸಂಚಾರವನ್ನೇ ಸೃಷ್ಟಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಶಕ್ತಿ ಯೋಜನೆ ಜಾರಿಗೊಂಡ ನಂತರದಿಂದ 400 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದು ಸ್ವಾವಲಂಬಿ ಬದುಕಿನೆಡೆಗೆ ಮುಂದಡಿಯಿಟ್ಟಿದ್ದಾರೆ ಎಂದವರು ಮಾಹಿತಿ ಹಂಚಿಕೊಂಡಿದ್ದಾರೆ.'ಶಕ್ತಿ' ಗ್ಯಾರೆಂಟಿ ಯೋಜನೆಯ ಯಶಸ್ಸಿನ ಕುರಿತಂತೆ ಸಾಮಾಜಿಕ ಜಾಲತಾಣ 'X'ನಲ್ಲಿ ಸಿದ್ದರಾಮಯ್ಯ ಅವರು ಪೋಸ್ಟ್ ಹಾಕಿದ್ದಾರೆ. ನಾಡಿನ ಸ್ವಾಭಿಮಾನಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದೊಂದಿಗೆ ಜಾರಿಗೆ ತಂದ ಶಕ್ತಿ ತನ್ನ ಗುರಿಯನ್ನು ಯಶಸ್ವಿಯಾಗಿ ಈಡೇರಿಸುತ್ತಾ ಮುನ್ನಡೆಯುತ್ತಿರುವುದು ಯೋಜನೆಯ ಯಶಸ್ಸಿಗೆ ಹಿಡಿದಿರುವ ಕೈಗನ್ನಡಿ ಎಂದವರು ಬರೆದುಕೊಂಡಿದ್ದಾರೆ.ಶಕ್ತಿ ಯೋಜನೆ ಜಾರಿಗೊಂಡ ನಂತರದಿಂದ 400 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದು ಸ್ವಾವಲಂಬಿ ಬದುಕಿನೆಡೆಗೆ ಮುಂದಡಿಯಿಟ್ಟಿದ್ದಾರೆ. ಈವರೆಗಿನ ಒಟ್ಟು ಟಿಕೆಟ್‌ ಮೌಲ್ಯ ರೂ.9,803 ಕೋಟಿ ಆಗಿದ್ದು, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಶಕ್ತಿ ನವ ಇತಿಹಾಸ ಸೃಷ್ಟಿಸಿದೆ ಎಂದವರು ಹೇಳಿದ್ದಾರೆ.ಶ...
ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ; ರಾಜ್ಯಕ್ಕೆ ಕೇಂದ್ರದ ಭರವಸೆ

ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ; ರಾಜ್ಯಕ್ಕೆ ಕೇಂದ್ರದ ಭರವಸೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಭಾರಿ ಹಾಗೂ ಮಧ್ಯಮ ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಭಾರಿ ಹಾಗೂ ಮಧ್ಯಮ ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಮ್ಮ ನೀರಾವರಿ ಯೋಜನೆಗಳ ಕುರಿತ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಜಲಶಕ್ತಿ ಸಚಿವರು ಹಾಗೂ ರಾಜ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಒಟ್ಟಾಗಿ ಕೆಲಸ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. - @DKShivakumar pic.twitter.com/yPgqOHXRu0— Karnataka Congress (@INCKarnataka) February 26, 2025ಜಲಾಶಕ್ತಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿರುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಡಿಕೆಶಿ, ನಮ್ಮ ನೀರಾವರಿ ಯೋಜನೆಗಳ ಕುರಿತ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಜಲಶಕ್ತಿ ಸಚಿವರು ಹಾಗೂ ರಾಜ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಒಟ್ಟಾಗಿ ಕೆಲಸ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.ರಾಜ್ಯದ ನೀರಾವರಿ ಯೋಜನ...