Friday, April 17

Author: info@rajasdigital.com

ಪುನೀತ್ ಹುಟ್ಟುಹಬ್ಬದಂದು ‘ಅಪ್ಪು’ ಚಿತ್ರ ರೀ- ರೀಲಿಸ್

ಪುನೀತ್ ಹುಟ್ಟುಹಬ್ಬದಂದು ‘ಅಪ್ಪು’ ಚಿತ್ರ ರೀ- ರೀಲಿಸ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬವಾದ ಮಾರ್ಚ್ 14ರಂದು ಅಪ್ಪು ಅವರ ಮೊದಲ ಚಿತ್ರ 'ಅಪ್ಪು' ರೀ- ರೀಲಿಸ್ ಆಗಲಿದೆ.ಪುನೀತ್ ರಾಜ್ ಕುಮಾರ್ ಅವರ 50 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 'ಅಪ್ಪು' ಚಿತ್ರವನ್ನು PRK Productions ಮರು ಬಿಡುಗಡೆ ಮಾಡುವ ಕುರಿತು ಪಿಆರ್ ಕೆ ಪ್ರೊಢಕ್ಷನ್ ನ ಮಾಲೀಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಮಾಜಿಕ ಜಾಲತಾಣ 'X' ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. Misunderstanding ಬೇಡ! 💞Get ready to relieve the magic. #Appu returns to theaters in honor of Dr. Puneeth Rajkumar's 50th birthday. ▶️ In Cinemas on 14th March 2025A @PRK_Productions release#DrPuneethRajkumar @RakshithaPrem #PuriJagannadh #GuruKiran #Avinash… pic.twitter.com/at6OyDMf2q— Ashwini Puneeth Rajkumar (@Ashwini_PRK) February 26, 2025...
ಕ್ರಿಪ್ಟೊ ಕರೆನ್ಸಿ ಹಗರಣ: ಬೆಂಗಳೂರು ಸೇರಿ ದೇಶದ 60 ಕಡೆ ಸಿಬಿಐ ದಾಳಿ

ಕ್ರಿಪ್ಟೊ ಕರೆನ್ಸಿ ಹಗರಣ: ಬೆಂಗಳೂರು ಸೇರಿ ದೇಶದ 60 ಕಡೆ ಸಿಬಿಐ ದಾಳಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ನವದೆಹಲಿ: ಕ್ರಿಪ್ಟೊ ಕರೆನ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬೆಂಗಳೂರು ಸೇರಿ ದೇಶದ 60 ಕಡೆಗಳಲ್ಲಿ ಸಿಬಿಐ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಮಂಗಳವಾರ ಸಂಜೆಯವರೆಗೂ ಹಲವೆಡೆ ಶೋಧ ನಡೆದಿದೆ.ಬೆಂಗಳೂರು, ಪುಣೆ, ಚಂಡೀಗಡ, ದೆಹಲಿ ಎನ್‌ಸಿಆರ್, ನಾಂದೇಡ್, ಕೊಲ್ಲಾಪುರ ಸೇರಿದಂತೆ ಹಲವೆಡೆ ಸಿಬಿಐ ದಾಳಿ ನಡೆಸಿ ಶೋಧಕಾರ್ಯ ಕೈಗೊಂಡಿದೆ. ಬಹುಕೋಟಿ ರೂಪಾಯಿ ಗೇನ್ ಬಿಟ್ ಕಾಯಿನ್ ಕ್ರಿಪ್ಟೊ ಕರೆನ್ಸಿ ಹಗರಣಕ್ಕೆ ಸಂಬಂಧಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ....
ಫೆಬ್ರವರಿ 26 ರಿಂದ 28 ರವರೆಗೆ ಕರ್ನಾಟಕ ಇಂಟರನ್ಯಾಶನಲ್ ಟೂರಿಸಂ ಎಕ್ಸಪೋ: ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್

ಫೆಬ್ರವರಿ 26 ರಿಂದ 28 ರವರೆಗೆ ಕರ್ನಾಟಕ ಇಂಟರನ್ಯಾಶನಲ್ ಟೂರಿಸಂ ಎಕ್ಸಪೋ: ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಹುಬ್ಬಳ್ಳಿ: ವಿಶ್ವಕ್ಕೆ ರಾಜ್ಯದ ಅದ್ಭುತ ಪ್ರವಾಸಿ ತಾಣಗಳ ಪರಿಚಯ ಮಾಡಿಸುವ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಮ್ ಸೊಸೈಟಿಯ ಸಹಯೋಗದೊಂದಿಗೆ ಫೆಬ್ರವರಿ 26 ರಿಂದ 28 ರವರೆಗೆ ಕರ್ನಾಟಕ ಇಂಟರನ್ಯಾಶನಲ್ ಟೂರಿಸಮ್ ಎಕ್ಸಪೋವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಕ್ಸಪೋವನ್ನು ಉದ್ಘಾಟಿಸುವರು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್ ಹೇಳಿದ್ದಾರೆ.ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿ ಮಾಜಿ ಸಂಸದರಾದ ಎಂ.ಎಂ.ಹಿಂಡಸಗೇರಿ, ಮುಖಂಡರಾದ ಮಹೇಂದ್ರ ಸಿಂಘಿ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ಕೆ.ಪಾಟೀಲ್, ಎಕ್ಸ್‌ಪೋ ಬಗ್ಗೆ ಮಾಹಿತಿ ಹಂಚಿಕೊಂಡರು, ಫೆಬ್ರವರಿ 27 ಮತ್ತು 28 ರಂದು 2 ದಿನಗಳ ಕಾಲ ವ್ಯವಹಾರಿಕ ಸಭೆಗಳು ನಡೆಯಲಿವೆ. ನಮ್ಮ ರಾಜ್ಯದಲ್ಲಿ ಅಸಂಖ್ಯಾತ ಪ್ರವಾಸಿ ತಾಣಗಳು, ಸ್ಮಾರಕಗಳು ಇವೆ. 25 ಸಾವಿರಕ್ಕೂ ಹೆಚ್ಚು ಅರಕ್ಷಿತ ಸ್ಮಾರಕಗಳಿದ್ದು, ಅವುಗಳಲ್ಲಿ 800 ಕ್ಕೂ ಹೆಚ್ಚು ಸ್ಮಾರಕಗಳನ್ನು ರಕ್ಷಿತ ಸ್ಮಾರಕಗಳಾಗಿ ಘೋಷಿಸಲಾಗಿದೆ....
RTO ಕಚೇರಿಗಳು ಇನ್ನು ಮುಂದೆ ಪಕ್ಕಾ ಜನಸ್ನೇಹಿ.. ಅಧಿಕಾರಿಗಳಿಗೆ ಸಾರಿಗೆ ಮಂತ್ರಿ ಖಡಕ್ ಸೂಚನೆ

RTO ಕಚೇರಿಗಳು ಇನ್ನು ಮುಂದೆ ಪಕ್ಕಾ ಜನಸ್ನೇಹಿ.. ಅಧಿಕಾರಿಗಳಿಗೆ ಸಾರಿಗೆ ಮಂತ್ರಿ ಖಡಕ್ ಸೂಚನೆ

Focus, ಪ್ರಮುಖ ಸುದ್ದಿ, ರಾಜ್ಯ
ಬೆಳಗಾವಿ: ಪ್ರಾದೇಶಿಕ ಸಾರಿಗೆ ಕಛೇರಿ ಬೆಳಗಾವಿ ಮತ್ತು ಬಾಗಲಕೋಟೆಗೆ ಭೇಟಿ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಅವರು ಅಧಿಕಾರಿಗಳ ಪಾಳಯದಲ್ಲಿ ಸಂಚಲನ ಸೃಷ್ಟಿಸಿದರು. RTO ಕಚೇರಿಗಳು ಸಾರ್ವಜನಿಕ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು ಸಾರಿಗೆ ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.ಬೆಳಗಾವಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯು ಬೆಳಗಾವಿ ಮತ್ತು ಖಾನಾಪೂರ ತಾಲ್ಲೂಕುಗಳನ್ನು ಒಳಗೊಂಡಿದೆ. RTO ಹೊಸ ಕಛೇರಿಯ ಕಟ್ಟಡ ಕಾಮಗಾರಿಗೆ ಒಟ್ಟು ರೂ 974.05 ಲಕ್ಷಗಳಿಗೆ ಮಂಜೂರಾಗಿದ್ದು, ಪ್ರಾದೇಶಿಕ ಸಾರಿಗೆ ಕಚೇರಿ ಮತ್ತು ಜಂಟಿ ಸಾರಿಗೆ ಆಯುಕ್ತರು, ಬೆಳಗಾವಿ ವಿಭಾಗದ ಕಚೇರಿ ಒಳಗೊಂಡಿರುತ್ತದೆ. ಪರಿವೀಕ್ಷಣೆ ನಡೆಸಿದ ಸಾರಿಗೆ ಸಚಿವರು ಏಪ್ರಿಲ್ 2025ಕ್ಕೆ ಹೊಸ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುವಂತೆ ಆಗಬೇಕು, ಅದರೊಳಗೆ ಎಲ್ಲಾ ರೀತಿಯಲ್ಲೂ ಕಾಮಗಾರಿ ಮುಕ್ತಾಯವಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಬೆಳಗಾವಿ RTO 2024-25ನೇ ಸಾಲಿನ ರಾಜಸ್ವ ಗುರಿ ರೂ.23,260 ಲಕ್ಷ, ಅದರಲ್ಲಿ ರೂ.17625 ಲಕ್ಷ ವಸೂಲಾತಿ ಮಾಡಿ 90.93% ಪ್ರಗತಿ ಸಾಧಿಸಿದೆ. 5076 ವಾಹನಗಳ ಮೇಲೆ ಪ್ರಕರ...
ಕೇಂದ್ರದ ಭಾಷಾ ನೀತಿಗೆ ಆಕ್ಷೇಪ: ಬಿಜೆಪಿಗೆ ನಟಿ ರಂಜನಾ ಗುಡ್ ಬೈ..!

ಕೇಂದ್ರದ ಭಾಷಾ ನೀತಿಗೆ ಆಕ್ಷೇಪ: ಬಿಜೆಪಿಗೆ ನಟಿ ರಂಜನಾ ಗುಡ್ ಬೈ..!

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಚೆನ್ನೈ: ತಮಿಳುನಾಡು ಬಿಜೆಪಿಯಲ್ಲಿ ಬೆಳವಣಿಗೆಯಾಗಿದೆ. ಬಿಜೆಪಿ ಪಕ್ಷವನ್ನು ತೊರೆಯಲು ತಮಿಳು ನಟಿ ರಂಜನಾ ನಾಚಿಯಾರ್ ನಿರ್ಧರಿಸಿದ್ದಾರೆ. ಪಕ್ಷದ ಭಾಷಾ ನೀತಿ ಮತ್ತು ರಾಜ್ಯವನ್ನು ನಿರ್ಲಕ್ಷಿಸಿರುವುದನ್ನು ಖಂಡಿಸಿ ಅವರು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಮಂಗಳವಾರ ಘೋಷಿಸಿದ್ದಾರೆ.ಇಂಗ್ಲಿಷ್ ಭಾಷೆಯಲ್ಲೂ ಓದಿ..Actress Ranjana Nachiyaar quits BJP, likely to join Vijay's TVKಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರ ಸರ್ಕಾರ ವಿವಾದಾತ್ಮಕ ತ್ರಿಭಾಷಾ ನೀತಿಯನ್ನು ಹೇರಿದ್ದು ಮತ್ತು ತಮಿಳುನಾಡನ್ನು ನಿರ್ಲಕ್ಷಿಸಿದೆ ಎಂದು ಭಾವಿಸಲಾಗಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ.ಪ್ರಾದೇಶಿಕ ಸಮಸ್ಯೆಗಳಿಗೆ, ವಿಶೇಷವಾಗಿ ಭಾಷಾ ನೀತಿಗೆ ಬಿಜೆಪಿಯ ವಿಧಾನದ ಬಗ್ಗೆ ತಮ್ಮ ಆಳವಾದ ಭ್ರಮನಿರಸನವನ್ನು ವ್ಯಕ್ತಪಡಿಸಿದ ಅವರು, "ಒಬ್ಬ ತಮಿಳು ಮಹಿಳೆಯಾಗಿ, ತ್ರಿಭಾಷಾ ನೀತಿಯನ್ನು ಹೇರುವುದು, ದ್ರಾವಿಡರ ಕಡೆಗೆ ಹೆಚ್ಚುತ್ತಿರುವ ದ್ವೇಷ ಮತ್ತು ತಮಿಳುನಾಡಿನ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ನಿರಂತರವಾಗಿ ನಿರ್ಲಕ್ಷಿಸುವುದನ್ನು ಒಪ್ಪಲು ಸಾಧ್ಯವಿಲ್ಲ" ಎಂದು ಹೇಳಿದರು.ಎಂಟು ವರ್ಷ...
ಮುಡಾ ಹಗರಣ: ಲೋಕಾಯುಕ್ತದ ಆತುರದ ನಡೆ ಯಾಕೆ?

ಮುಡಾ ಹಗರಣ: ಲೋಕಾಯುಕ್ತದ ಆತುರದ ನಡೆ ಯಾಕೆ?

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಮತ್ತು ಇತರರು ಭಾಗಿಯಾಗಿದ್ದಾರೆನ್ನಲಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣದ ಲೋಕಾಯುಕ್ತ ತನಿಖೆಯು ತನಿಖೆಯ ಸಮಗ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಲೋಕಾಯುಕ್ತವು "B ರಿಪೋರ್ಟ್" ಸಲ್ಲಿಸುವ ಮೂಲಕ ತನಿಖೆಯನ್ನು ಹಠಾತ್ತನೆ ಮುಕ್ತಾಯಗೊಳಿಸುವ ಮೊದಲು ಸಿದ್ದರಾಮಯ್ಯ ಅವರಿಗೆ ಕೇವಲ 30 ಪ್ರಶ್ನೆಗಳನ್ನು ಕೇಳಲಾಗಿತ್ತು ಎನ್ನಲಾಗುತ್ತಿದೆ. ಈ ತ್ವರಿತ ತೀರ್ಮಾನವು ಅನೇಕ ಅನುಮಾನಗಳನ್ನು ಹುಟ್ಟುಹಾಕಿವೆ ಎಂದು ತಜ್ಞರು ಹೇಳುತ್ತಿದ್ದಾರೆ.ಕಳವಳಕಾರಿ ಸಂಗತಿಯೆಂದರೆ ಲೋಕಾಯುಕ್ತವು ಜಾರಿ ನಿರ್ದೇಶನಾಲಯದ (ED) ನಿರ್ಣಾಯಕ ನಡೆಯನ್ನು 'ಕಡೆಗಣಿಸಿದೆ'. ಈ ಹಗರಣ ಆರೋಪದಲ್ಲಿ ED ಅನೇಕರ ವಿಚಾರಣೆಗೆ ಸಿದ್ಧತೆ ನಡೆಸಿರುವ ವಿಚಾರ ಅದಾಗಲೇ ಬಹಿರಂಗವಾಗಿದ್ದರೂ ಈ ಗಂಭೀರತೆ ಬಗ್ಗೆ ಲೋಕಾಯುಕ್ತ ಪೊಲೀಸರು ಗಮನಹರಿಸದೇ ತನಿಖೆ ಪೂರ್ಣಗೊಳಿಸಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡುವ ಆತುರದಲ್ಲಿ ಬಿ ರಿಪೋರ್ಟ್ ಸಲ್ಲಿಸಿದ್ದಾರೆಯೇ ಎಂಬ ಅನುಮಾನ ಪ್ರತಿಪಕ್ಷಗಳದ್ದು....
ಕೇರಳದಲ್ಲಿ ಭೀಕರ ಕೃತ್ಯ: ನಾಲ್ವರನ್ನು ಹತ್ಯೆ ಮಾಡಿ ಹಂತಕ ಪೊಲೀಸರಿಗೆ ಶರಣು

ಕೇರಳದಲ್ಲಿ ಭೀಕರ ಕೃತ್ಯ: ನಾಲ್ವರನ್ನು ಹತ್ಯೆ ಮಾಡಿ ಹಂತಕ ಪೊಲೀಸರಿಗೆ ಶರಣು

Focus, ದೇಶ-ವಿದೇಶ, ಪ್ರಮುಖ ಸುದ್ದಿ
ತಿರುವನಂತಪುರಂ: ಆಘಾತಕಾರಿ ಘಟನೆಯೊಂದರಲ್ಲಿ, ರಾಜಧಾನಿ ಉಪನಗರದಲ್ಲಿ ಅಫ್ಸಾನ್ ಎಂಬ ಯುವಕ ಸೋಮವಾರ ಸಂಜೆ ಐವರನ್ನು ಕೊಲೆಮಾಡಿದ್ದಾನೆ. ಈ ಭೀಕರ ಕೃತ್ಯದ ನಂತರ, ಆರೋಪಿ ಆಟೋ ರಿಕ್ಷಾ ತೆಗೆದುಕೊಂಡು ಪೊಲೀಸರ ಮುಂದೆ ಶರಣಾಗಿ, ವಿಷ ಸೇವಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.ಪೊಲೀಸರು ತಕ್ಷಣ ಆತನನ್ನುವಶಕ್ಕೆ ಪಡೆದಿದ್ದಾರೆ.ಕೊಲೆಯಾದವರಲ್ಲಿ ಅಫ್ಸಾನ್‌ನ 13 ವರ್ಷದ ಸಹೋದರ, ಆತನ 19 ವರ್ಷದ ಗೆಳತಿ, ಅಜ್ಜಿ, ಸೋದರತ್ತೆ, ಮತ್ತು ಆಕೆಯ ಪತಿ ಲತೀಫ್ ಅವರನ್ನು ಕೊಲೆ ಮಾಡಲಾಗಿದೆ....
ವಿಜಯೇಂದ್ರ-ಕಾಂಗ್ರೆಸ್ ನಾಯಕರ ಒಳ ಒಪ್ಪಂದ? ಆರೋಪ ತಳ್ಳಿಹಾಕಿದ ಪ್ರಿಯಾಂಕ್

ವಿಜಯೇಂದ್ರ-ಕಾಂಗ್ರೆಸ್ ನಾಯಕರ ಒಳ ಒಪ್ಪಂದ? ಆರೋಪ ತಳ್ಳಿಹಾಕಿದ ಪ್ರಿಯಾಂಕ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಕಲಬುರಗಿ: ಬಿಜೆಪಿ ರಾಜ್ಯಅಧ್ಯಕ್ಷ ಬಿ.ವೈ.ರಾಜ್ಯಾಧ್ಯಕ್ಷ ಕಾಂಗ್ರೆಸ್ ನಾಯಕರ ಒಳ ಒಪ್ಪಂದವಿದೆ ಎಂಬ ಆರೋಪವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಳ್ಳಿ ಹಾಕಿದ್ದಾರೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ವಿಜಯೇಂದ್ರ ಅವರ ವಿರೋಧಿಯಾಗಿದ್ದೇವೆ. ವೈಹಾಗಾಗಿ ಅವರು ಯಾವಾಗಲೂ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಟೀಕಿಸುತ್ತಾರೆ ಎಂದರು.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ವಿಜಯೇಂದ್ರರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ದಿವಾಳಿಯಾಗಿಲ್ಲ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರೇ ದಿವಾಳಿಯಾಗಿದ್ದಾರೆಂದು ಎದಿರೇಟು ನೀಡಿದರು.ವಿಜಯೇಂದ್ರ ಅವರು ಮೊದಲು ತಮ್ಮ ಪಕ್ಷದ ದಿವಾಳಿತನ ಬಗ್ಗೆ ಮಾತನಾಡಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು....
ಪ್ರಯಾಗರಾಜ್‌ ಮಹಾ ಕುಂಭದಲ್ಲಿ ಕತ್ರಿನಾ ಕೈಫ್, ರವೀನಾ ಟಂಡನ್

ಪ್ರಯಾಗರಾಜ್‌ ಮಹಾ ಕುಂಭದಲ್ಲಿ ಕತ್ರಿನಾ ಕೈಫ್, ರವೀನಾ ಟಂಡನ್

Focus, ಆಧ್ಯಾತ್ಮ, ದೇಗುಲ ದರ್ಶನ, ದೇಶ-ವಿದೇಶ, ಪ್ರಮುಖ ಸುದ್ದಿ
ಮುಂಬೈ,: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭದಲ್ಲಿ ಭಾಗವಹಿಸುತ್ತಿರುವ ಸೆಲೆಬ್ರಿಟಿಗಳ ಸಾಲಿಗೆ ಕತ್ರಿನಾ ಕೈಫ್ ಮತ್ತು ರವೀನಾ ಟಂಡನ್ ಸೇರಿಕೊಂಡರು. ಧಾರ್ಮಿಕ ಭೇಟಿಯ ಸಮಯದಲ್ಲಿ ಈ ಇಬ್ಬರು 'ಗಂಗಾ ಆರತಿ'ಯಲ್ಲಿ ಭಾಗವಹಿಸಿ ಗಮನಸೆಳೆದಿದ್ದಾರೆ.ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ್ ಸರಸ್ವತಿ ಮತ್ತು ಸಾಧ್ವಿ ಭಗವತಿ ಸರಸ್ವತಿ, ನಟ ಅಭಿಷೇಕ್ ಬ್ಯಾನರ್ಜಿ ಮತ್ತು ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿ 'ಗಂಗಾ ಆರತಿ'ಯಲ್ಲಿ ಸೋಮವಾರ ಭಾಗಿಯಾದರು.ಕತ್ರಿನಾ ಕೈಫ್ ತನ್ನ ಅತ್ತೆ ವೀಣಾ ಕೌಶಲ್ ಅವರೊಂದಿಗೆ ಮಹಾ ಕುಂಭಕ್ಕೆ ಭೇಟಿ ನೀಡಿದರು. ದಿವಾ ಪೌಡರ್ ಪಿಂಕ್ ಜನಾಂಗೀಯ ಉಡುಪನ್ನು ಧರಿಸಿದ್ದರು. ಸ್ವಾಮಿ ಚಿದಾನಂದ್ ಸರಸ್ವತಿ ಮತ್ತು ಸಾಧ್ವಿ ಭಗವತಿ ಸರಸ್ವತಿ ಅವರ ಮಾರ್ಗದರ್ಶನ ಪಡೆದಿದ್ದಾರೆ....
BBMP ಚುನಾವಣಾ: ಸುಪ್ರೀಂ ಮೊರೆಹೋದ ಬಿಜೆಪಿ

BBMP ಚುನಾವಣಾ: ಸುಪ್ರೀಂ ಮೊರೆಹೋದ ಬಿಜೆಪಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆಯನ್ನು ಮತ್ತಷ್ಟು ವಿಳಂಬ ಮಾಡದೆ ತಕ್ಷಣವೇ ನಡೆಸಲು ನಿರ್ದೇಶನಗಳನ್ನು ಕೋರಿ ಕರ್ನಾಟಕ ಬಿಜೆಪಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.ಮಾಜಿ ಮೇಯರ್‌ಗಳಾದ ಗೌತಮ್ ಮತ್ತು ನಾರಾಯಣಸ್ವಾಮಿ, ಮಾಜಿ ಉಪಮೇಯರ್‌ಗಳು ಮತ್ತು ಜಿಲ್ಲಾಧ್ಯಕ್ಷ ಹರೀಶ್ ಅವರು ಅರ್ಜಿಗೆ ಸಹಿ ಹಾಕಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ್ ಸೋಮವಾರ ತಿಳಿಸಿದ್ದಾರೆ.ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಈ ವಿಷಯದ ಬಗ್ಗೆ ಸಮಿತಿಯನ್ನು ರಚಿಸಿದ್ದರು. ಹಿರಿಯ ವಕೀಲ ಸಂದೀಪ್ ಪಾಟೀಲ್ ಮೂಲಕ ಸಮಿತಿಯು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಬೆಂಗಳೂರಿನಲ್ಲಿ ಆದಷ್ಟು ಬೇಗ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದೆ ಎಂದು ಅವರು ಹೇಳಿದರು.ಬಿಬಿಎಂಪಿಗೆ ಚುನಾವಣೆ ನಡೆಸುವ ವಿಷಯವನ್ನು ಫೆಬ್ರವರಿ 25 ರ ಮಂಗಳವಾರ ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಅಂಗೀಕಾರದ ನಂತರ ಬೆಂಗಳೂರಿನಲ್ಲಿ ಹೊಸದಾಗಿ ರಚನೆಯಾದ ಪುರಸಭೆಗಳಿಗೆ ಚುನಾವಣೆಗಳು ಆಗಸ್ಟ್ 15, 2025 ರ ನಂತ...