Friday, April 17

Author: info@rajasdigital.com

ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ 6 ಮಂದಿ ಅಪಘಾತದಲ್ಲಿ ಸಾವು

ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ 6 ಮಂದಿ ಅಪಘಾತದಲ್ಲಿ ಸಾವು

Focus, ಪ್ರಮುಖ ಸುದ್ದಿ, ರಾಜ್ಯ
ಬೆಳಗಾವಿ: ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ಬೆಳಗಾವಿ ಜಿಲ್ಲೆಯ ಆರು ಮಂದಿ ಮಧ್ಯಪ್ರದೇಶದ ಜಬಲಪೂರ ಪೆಹರಾ‌ ಬಳಿ ಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಎರಡು ದಿನಗಳ ಹಿಂದೆ ಗೋಕಾಕ್​ನಿಂದ ಹಲವರು ಪ್ರಯಾಗ್‌ರಾಜ್​ನ ಕುಂಭಮೇಳಕ್ಕೆ ಕ್ರೂಸರ್ ವಾಹನದಲ್ಲಿತೆರಳುತ್ತಿದ್ದರು ಸೋಮವಾರ ಬೆಳಗಿನ ಜಾವ ಕ್ರೂಸರ್​ ವಾಹನವು ಚಾಲಕನ ನಿಯಂತ್ರಣ ತಪ್ಪಿ ಬಸ್​ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇಬ್ಬರು ಗಾಯಗೊಂಡಿದ್ದು ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ....
ಬೆಂಗಳೂರು: ರೌಡಿ ಶೀಟರ್ ಹೈದರ್ ಅಲಿ ಭೀಕರ ಹತ್ಯೆ

ಬೆಂಗಳೂರು: ರೌಡಿ ಶೀಟರ್ ಹೈದರ್ ಅಲಿ ಭೀಕರ ಹತ್ಯೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಧ್ಯರಾತ್ರಿ ಭೀಕರ ಕೊಲೆ ನಡೆದಿದೆ. ರೌಡಿಶೀಟರ್ ಹೈದರ್ ಅಲಿ ಎಂಬಾತನನ್ನು ಗರುಡ ಮಾಲ್ ಬಳಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ.ಹೈದರ್ ಅಲಿ ಮಧ್ಯರಾತ್ರಿ ಕಾರ್ಯಕ್ರಮ ಮುಗಿಸಿ ಸ್ನೇಹಿತನ ಜೊತೆ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಅಶೋಕನಗರ ಠಾಣಾ ವ್ಯಾಪ್ತಿಯ ಗರುಡಾ ಮಾಲ್ ಬಳಿ ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಹೈದರ್ ಮಾತ್ರವಲ್ಲ ಸ್ನೇಹಿತನ ಮೇಲೂ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹೈದರ್ ನನ್ನು ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು.ಈ ನಡುವೆ, ಕೊಲೆಯಾದ ಹೈದರ್ ಆಲಿ ಶಾಸಕ ಎನ್.ಎ.ಹ್ಯಾರಿಸ್ ಅವರ ನಿಕಟವರ್ತಿಯಾಗಿದ್ದ ಎಂದು ಆತನ ಸಹಚರರು ಹೇಳಿಕೊಂಡಿದ್ದಾರೆ. ಮೃತದೇಹ ಬೌರಿಂಗ್ ಆಸ್ಪತ್ರೆಯಲ್ಲಿದ್ದ ಸುದ್ದಿ ತಿಳಿದು ಬೆಂಬಲಿಗರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಹೈದರ್ ಆಲಿ ಕೊಲೆ ಘಟನೆ ಬಗ್ಗೆ ಕೆಲವರು ಆಕ್ರೋಶ ಹೊರಹಾಕ...
‘ಒಡೆಲಾ 2’: ಮಹಾ ಕುಂಭಮೇಳದಲ್ಲಿ ಟೀಸರ್ ಬಿಡುಗಡೆ, ಸಾಧ್ವಿಯಂತೆ ಮಿಂಚಿದ ಮಿಲ್ಕಿ ಬ್ಯೂಟಿ

‘ಒಡೆಲಾ 2’: ಮಹಾ ಕುಂಭಮೇಳದಲ್ಲಿ ಟೀಸರ್ ಬಿಡುಗಡೆ, ಸಾಧ್ವಿಯಂತೆ ಮಿಂಚಿದ ಮಿಲ್ಕಿ ಬ್ಯೂಟಿ

Focus, Update Videos, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ, ಸಿನಿಮಾ
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರ ಅಭಿನಯದ 'ಒಡೆಲಾ 2' ಸಿನಿಮಾ ಟೀಸರ್' ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದೆಬ್ಬಿಸಿದೆ. ಒಡೆಲಾ ಸಿನಿಮಾದ ಮುಂದುವರೆದ ಭಾಗವಾಗಿರುವ 'ಒಡೆಲಾ 2' ಹಲವಾರು ಕ್ರಿಯಾತ್ಮಕ ಪ್ರಯೋಗಗಳಿಂದ ಗಮನಸೆಳೆದಿದೆ. ಬೋಲ್ಡ್ ಪಾತ್ರಗಳಿಂದ ಗಮನಸೆಳೆಯುತ್ತಿರುವ ನಟಿ ತಮನ್ನಾ ಭಾಟಿಯಾ 'ಒಡೆಲಾ 2'ನಲ್ಲಿ ಸಾದ್ವಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.https://www.youtube.com/watch?v=Cb1XauMhTtcಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ 'ಒಡೆಲಾ 2' ಟೀಸರ್ ಬಿಡುಗಡೆಯಾಗಿದೆ. ತಮನ್ನಾ ಅವರು ಸಾದ್ವಿ ಲುಕ್'ನಲ್ಲಿ ಕಾಣಿಸಿಕೊಳ್ಳುವುದಕ್ಕೂ ಇದರ ಟೀಸರ್ ಮಹಾ ಕುಂಭಮೇಳದಲ್ಲಿ ಬಿಡುಗಡೆಯಾಗುವುದಕ್ಕೂ ಏನೂ ಸಂಬಂಧವಿಲ್ಲ. ಆದರೂ ತಮನ್ನಾ ಸಾಧ್ವಿಯಾದರೇ ಎಂಬ ನೆಟ್ಟಿಗರ ಪ್ರತಿಕ್ರಿಯೆಗಳೂ ಗಮನಸೆಳೆದಿವೆ....
ಅಂದು ‘ಬ್ರ್ಯಾಂಡ್ ಬೆಂಗಳೂರು’, ಇದೀಗ ‘ಗ್ರೇಟರ್ ಬೆಂಗಳೂರು’?; ಬೆಂಗಳೂರು ವಿಭಜನೆಗೆ ಬಿಜೆಪಿ ವಿರೋಧ

ಅಂದು ‘ಬ್ರ್ಯಾಂಡ್ ಬೆಂಗಳೂರು’, ಇದೀಗ ‘ಗ್ರೇಟರ್ ಬೆಂಗಳೂರು’?; ಬೆಂಗಳೂರು ವಿಭಜನೆಗೆ ಬಿಜೆಪಿ ವಿರೋಧ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಗ್ರೇಟರ್ ಬೆಂಗಳೂರು ನೆಪದಲ್ಲಿ ಕೆಂಪೇಗೌಡರು ಕಟ್ಟಿದ ನಾಡನ್ನು ವಿಭಜಿಸುವುದಕ್ಕೆ ನಮ್ಮ ಆಕ್ಷೇಪ ಇದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಯಯನ ಸ್ವಾಮಿ, ಅಂದು 'ಬ್ರ್ಯಾಂಡ್ ಬೆಂಗಳೂರು' ಹೇಳುತ್ತಿದ್ದವರು ಇದೀಗ 'ಗ್ರೇಟರ್ ಬೆಂಗಳೂರು' ಎನ್ನುತ್ತಾ ಕೆಂಪೇಗೌಡರು ನಿರ್ಮಿಸಿದ ಬೆಂಗಳೂರನ್ನು ಕೆಡವಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆಯನ್ನು ನಿರಂತರವಾಗಿ ಮುಂದೂಡುವುದನ್ನು ಆಕ್ಷೇಪಿಸಿದ ನಾರಾಯಣಸ್ವಾಮಿ, ಇದು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಎಂದರು. "ಅವರು ಒಮ್ಮೆ 'ಬ್ರ್ಯಾಂಡ್ ಬೆಂಗಳೂರು' ಬಗ್ಗೆ ಮಾತನಾಡಿದ್ದರು. ಈಗ ಅವರು 'ಗ್ರೇಟರ್ ಬೆಂಗಳೂರು' ಬಗ್ಗೆ ಮಾತನಾಡುತ್ತಿದ್ದಾರೆ. ಅವರು 'ಬ್ರ್ಯಾಂಡ್ ಬೆಂಗಳೂರು' ಅನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದಿದ್ದರೆ, ಅವರು 'ಗ್ರೇಟರ್ ಬೆಂಗಳೂರು' ಅನ್ನು ಹೇಗೆ ರಚಿಸುತ್ತಾರೆ?" ಎಂದು ಪ್ರಶ್ನಿಸಿದರು.ಬೆಂಗಳೂರನ್ನು ಏಳು ...
ಯಶ್ ‘ರಾಮಾಯಣ’ ಪಯಣ.. ರಾವಣ ಪಾತ್ರಕ್ಕಾಗಿ ಶೂಟಿಂಗ್

ಯಶ್ ‘ರಾಮಾಯಣ’ ಪಯಣ.. ರಾವಣ ಪಾತ್ರಕ್ಕಾಗಿ ಶೂಟಿಂಗ್

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ಸಿನಿಮಾ
ಮುಂಬೈ: ನಟ ಯಶ್ 'ರಾಮಾಯಣ' ಚಿತ್ರೀಕರಣ ಆರಂಭಿಸಿದ್ದಾರೆ. ನಿತೇಶ್ ತಿವಾರಿ ಅವರ ಈ ಸಿನಿಮಾದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮಾಯಣದಲ್ಲಿ ಲಾರಾ ದತ್ತ, ಸನ್ನಿ ಡಿಯೋಲ್ ಮತ್ತು ಇಂದಿರಾ ಕೃಷ್ಣ ಮೊದಾಲದವರೂ ನಟಿಸುತ್ತಿದ್ದಾರೆ.ತಿವಾರಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಭಾರತದಲ್ಲಿ ನಡೆಯುತ್ತಿದೆ. ನಟ ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಲಿದ್ದಾರೆ ಮತ್ತು ನಟಿ ಸಾಯಿ ಪಲ್ಲವಿ ಸೀತಾದೇವಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಣಬೀರ್ ಮತ್ತು ಪಲ್ಲವಿ ಚಿತ್ರದ ಕೆಲವು ಭಾಗಗಳನ್ನು ಮುಂಬೈನಲ್ಲಿ ಚಿತ್ರೀಕರಿಸಿದ್ದಾರೆ. ಮತ್ತು ಈಗ, ಚಿತ್ರದ ನಿರ್ಮಾಪಕರೂ ಆಗಿರುವ ಯಶ್ ಮುಂಬೈನಲ್ಲಿ ತಮ್ಮ ಪಾತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.ಫೆಬ್ರವರಿ 21 ರಂದು ಯಶ್ ರಾಮಾಯಣಕ್ಕಾಗಿ ತಮ್ಮ ಭಾಗಗಳ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಶೂಟಿಂಗ್ ಭಾಗವು ಯುದ್ಧದ ಸನ್ನಿವೇಶಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ತಂಡವು ಮುಂಬೈನ ಅಕ್ಸಾ ಬೀಚ್‌ನಲ್ಲಿ ಕೆಲವು ನಿರ್ಣಾಯಕ ಯುದ್ಧ ದೃಶ್ಯಗಳನ್ನು ಚಿತ್ರೀಕರಿಸಲಿದೆ ಎಂದು ಮೂಲಗಳು."ರಾಮಾಯಣ" ಎರಡು ಭಾಗಗಳಲ್ಲಿ ಬಿಡುಗಡೆ...
ಮಹಾ ಕುಂಭಮೇಳ: ಈವರೆಗೂ 60 ಕೋಟಿ ಮಂದಿ ಪುಣ್ಯಸ್ನಾನ

ಮಹಾ ಕುಂಭಮೇಳ: ಈವರೆಗೂ 60 ಕೋಟಿ ಮಂದಿ ಪುಣ್ಯಸ್ನಾನ

Focus, ಆಧ್ಯಾತ್ಮ, ದೇಗುಲ ದರ್ಶನ, ದೇಶ-ವಿದೇಶ, ಪ್ರಮುಖ ಸುದ್ದಿ
ಲಖನೌ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಈವರೆಗೆ ಸುಮಾರು 60 ಕೋಟಿ ಮಂದಿ ಪುಣ್ಯಸ್ನಾನ ಮಾಡಿದ್ದಾರೆ.ಈ ಕುರಿತಂತೆ ಶನಿವಾರ ಮಾಹಿತಿ ಹಂಚಿಕೊಂಡಿರುವ ಉತ್ತರ ಪ್ರದೇಶ ಸರ್ಕಾರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದುತಿಳಿಸಿದೆ.ಜನವರಿ 13 ರಂದು ಪ್ರಾರಂಭವಾದ ಕುಂಭಮೇಳಕ್ಕೆ ಫೆಬ್ರವರಿ 26 ರಂದು ಮಹಾ ಶಿವರಾತ್ರಿ ವರೆಗೂ ನಡೆಯಲಿದೆ. 144 ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳೆ ಕಣ್ತುಂಬಿಕೊಳ್ಳಲು ಪ್ರಯಾಗರಾಜ್​ ಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಇದೇ ರೀತಿಯ ಸ್ಥಿತಿ ಇದ್ದರೆ ಅಂತಿಮ 'ಅಮೃತ ಸ್ನಾನ'ದ ವೇಳೆಗೆ ಈ ಸಂಖ್ಯೆ 65 ಕೋಟಿಯನ್ನು ಮೀರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ....
ಕಂಡಕ್ಟರ್ ವಿರುದ್ಧ ಸುಳ್ಳು ಪೋಕ್ಸೋ ಕೇಸ್: ಸಚಿವ ರಾಮಲಿಂಗ ರೆಡ್ಡಿ ಗರಂ; KSRTC ಸಿಬ್ಬಂದಿ ರಕ್ಷಣೆಗೆ ನಾನಿದ್ದೇನೆ ಎಂದ ಸಾರಿಗೆ ಮಂತ್ರಿ..

ಕಂಡಕ್ಟರ್ ವಿರುದ್ಧ ಸುಳ್ಳು ಪೋಕ್ಸೋ ಕೇಸ್: ಸಚಿವ ರಾಮಲಿಂಗ ರೆಡ್ಡಿ ಗರಂ; KSRTC ಸಿಬ್ಬಂದಿ ರಕ್ಷಣೆಗೆ ನಾನಿದ್ದೇನೆ ಎಂದ ಸಾರಿಗೆ ಮಂತ್ರಿ..

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಕಂಡಕ್ಟರ್ ವಿರುದ್ಧ ವಿರುದ್ಧ ದಾಖಲಾಗಿರುವ ಪ್ರಕರಣ ಸತ್ಯಕ್ಕೆ ದೂರವಾದದ್ದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. KSRTC ನೌಕರರ ಪರವಾಗಿ ನಿಂತಿರುವ ಸಚಿವರು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಬೆಳಗಾವಿಯಲ್ಲಿ KSRTC ಸಿಬ್ಬಂದಿ ಮೇಲಿನ ದಾಳಿ ಹಾಗೂ ನಿರ್ವಾಹಕರ ವಿರುದ್ಧ ದಾಖಲಾಗಿರುವ ಪ್ರಕರಣ ಬಗ್ಗೆ ಕಳವಳ ವ್ಯಕತಪಡಿಸಿರುವ ಸಚಿವ ರಾಮಲಿಂಗ ರೆಡ್ಡಿ. ಕಂಡಕ್ಟರ್ ವಿರುದ್ಧದ ಪೋಕ್ಸೊ ಆರೋಪಗಳು ಸುಳ್ಳು ಎಂದು ಹೇಳಿದರು.ಈ ಸುದ್ದಿಯನ್ನು 'UDAYA NEWS -ಇಂಗ್ಲೀಷ್' ಆವೃತ್ತಿಯಲ್ಲೂ ಓದಿ.. Case against RTC conductor is bogus: K’taka Transport Ministerಪ್ರಯಾಣಿಕರ ಗುಂಪೊಂದು ಕನ್ನಡದಲ್ಲಿ ಮಾತನಾಡಲು ಕೇಳಿದ್ದಕ್ಕಾಗಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿತ್ತು. ಘಟನೆಗೆ ಸಂಬಂಧಿಸಿದಂತೆ ಕಂಡಕ್ಟರ್ ಪೊಲೀಸ್ ದೂರು ದಾಖಲಿಸಿದ್ದರೆ, ಅಪ್ರಾಪ್ತ ಬಾಲಕಿ ಕಂಡಕ್ಟರ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದರು. ಘಟನೆಯ ನಂತರ, ಅವರು...
ಮೂಡಾ ಹಗರಣದಲ್ಲಿ ಸಿದ್ದರಾಮಯ್ಯ ಜೈಲು ಸೇರೋದು ಖಚಿತ: ಛಲವಾದಿ

ಮೂಡಾ ಹಗರಣದಲ್ಲಿ ಸಿದ್ದರಾಮಯ್ಯ ಜೈಲು ಸೇರೋದು ಖಚಿತ: ಛಲವಾದಿ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ನಿವೇಶನ ಹಂಚಿಕೆ ಅಕ್ರಮ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲಿಗೆ ಹೋಗುವುದು ಖಚಿತ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.ಬಿಜೆಪಿ ರಾಜ್ಯ ಕಚೇರಿ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, “ಸಿಎಂ ಅವರ ಮನಸ್ಥಿತಿ ಇನ್ನೂ ಬದಲಾಗಿಲ್ಲ, ಮತ್ತು MUDA ಸಮಸ್ಯೆ ಅವರನ್ನು ಕಾಡುತ್ತಲೇ ಇದೆ. ಈ ವಿಷಯ ಇಲ್ಲಿಗೆ ಮುಗಿಯುವುದಿಲ್ಲ. ನೀವು ಯಾರಿಂದ ಬೇಕಾದರೂ ಪ್ರಮಾಣಪತ್ರ ಪಡೆಯಬಹುದು, ಆದರೆ ಈ ದೇಶದ ಕಾನೂನು ಇನ್ನೂ ಜೀವಂತವಾಗಿದೆ. ನ್ಯಾಯಾಲಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ನ್ಯಾಯವನ್ನು ಖಚಿತಪಡಿಸುತ್ತವೆ. ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ - MUDA ಪ್ರಕರಣದಲ್ಲಿ ನೀವು ಖಂಡಿತವಾಗಿಯೂ ಜೈಲಿಗೆ ಹೋಗುತ್ತೀರಿ” ಎಂದು ಹೇಳಿದರು....
ಫೆಬ್ರವರಿ 23 ರಿಂದ 25: ಪ್ರಧಾನಿ ಮೋದಿಯಿಂದ ಮೂರು ರಾಜ್ಯ ಪರ್ಯಟನೆ

ಫೆಬ್ರವರಿ 23 ರಿಂದ 25: ಪ್ರಧಾನಿ ಮೋದಿಯಿಂದ ಮೂರು ರಾಜ್ಯ ಪರ್ಯಟನೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 23 ರಿಂದ 25 ರವರೆಗೆ ಮೂರು ದಿನಗಳ ಕಾಲ ಮಧ್ಯಪ್ರದೇಶ, ಬಿಹಾರ ಮತ್ತು ಅಸ್ಸಾಂ - ಮೂರು ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 23 ಮತ್ತು 24 ರಂದು ರಾಜಧಾನಿ ಭೋಪಾಲ್ ಮೋದಿ ಅವರನ್ನು ಆತಿಥ್ಯ ವಹಿಸಲಿದೆ.ತಮ್ಮ ಪ್ರವಾಸದ ಸಮಯದಲ್ಲಿ ಅವರು ಹೂಡಿಕೆದಾರರು, ಬಡವರು ಮತ್ತು ರೈತರನ್ನು ಒಳಗೊಂಡ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿಯವರು ಫೆಬ್ರವರಿ 23 ರಂದು ಮಧ್ಯಪ್ರದೇಶದ ಛತ್ತರ್ಪುರ್ ಜಿಲ್ಲೆಯ ಗರ್ಹಾ ಎಂಬ ವಿಲಕ್ಷಣ ಗ್ರಾಮಕ್ಕೆ ಮೊದಲು ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ಅದೇ ದಿನ ಮಧ್ಯಾಹ್ನ 2 ಗಂಟೆಗೆ ಬಾಗೇಶ್ವರ ಧಾಮ್ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಗೆ ಅಡಿಪಾಯ ಹಾಕಲಿದ್ದಾರೆ.ಅತ್ಯಾಧುನಿಕ ತಂತ್ರಜ್ಞಾನ ಮತ್ತು ತಜ್ಞ ವೈದ್ಯರನ್ನು ಹೊಂದಿರುವ ಈ ಕ್ಯಾನ್ಸರ್ ಆಸ್ಪತ್ರೆಯು 200 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಇದು ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತದೆ.ಫೆಬ್ರವರಿ 24 ರ ಬೆಳಿಗ್ಗೆ 10 ಗಂಟೆ ಸುಮಾರಿಗೆ, ಪ್ರಧಾನ ಮಂತ್ರಿ ಭೋಪಾಲ್‌ನಲ್ಲಿ ಜಾಗತಿಕ ಹೂ...
ಮತ್ತೆ ಮೂರು ಮಸೂದೆಗಳು ವಾಪಸ್: ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆ

ಮತ್ತೆ ಮೂರು ಮಸೂದೆಗಳು ವಾಪಸ್: ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮತ್ತಷ್ಟು ಮಸೂದೆಗಳನ್ನು ರಾಜ್ಯಪಾಲ ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್​ ಅವರು ಅಂಕಿತ ಹಾಕದೆ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.ಬೆಳಗಾವಿಯಲ್ಲಿ ನಡೆದಿದ್ದ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರಿಸಲಾಗಿದ್ದ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ-2024 ಸೇರಿದಂತೆ ಮೂರು ಮಸೂದೆಗಳನ್ನು ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮೈಸೂರು ಪ್ರಾಧಿಕಾರ ಅಭಿವೃದ್ಧಿ ಮಸೂದೆ- 2024 ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ರಕ್ಷಣೆ (ತಿದ್ದುಪಡಿ) ಮಸೂದೆ-2024 ಮಸೂದೆಗಳನ್ನು ರಾಜ್ಯಪಾಲರು ವಾಪಸ್​ ಕಳುಹಿಸಿದ್ದಾರೆ ಎನ್ನಲಾಗಿದೆ. ತಿದ್ದುಪಡಿ ಉದ್ದೇಶದಿಂದ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ....