
‘ಹಸು ಕಳ್ಳ ಸಾಗಾಟ ಮಾಡುವ ಕುಖ್ಯಾತರಿಗೆ ಜಾಮೀನು ನೀಡುವುದು ಸರಿಯಲ್ಲ’ ಎಂದ ಸುಪ್ರೀಂ ಕೋರ್ಟ್
ನವದೆಹಲಿ: ಹಸು ಕಳ್ಳಸಾಗಾಟ ಮಾಡುವ ಕುಖ್ಯಾತರಿಗೆ (habitual cow smuggler) ಜಾಮೀನು ಮಂಜೂರು ಮಾಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ. ಈ ಅಭಿಪ್ರಾಯ ಆಧರಿಸಿ ಸುಪ್ರೀಂ ಕೋರ್ಟ್ ಗೋ ಕಳ್ಳಸಾಗಣೆ ಆರೋಪಿ ನಜೀಮ್ ಖಾನ್ ಎಂಬಾತನ ಜಾಮೀನು ಆದೇಶವನ್ನು ಸೋಮವಾರ ರದ್ದುಗೊಳಿಸಿದೆ.ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು ರಾಜಸ್ಥಾನ ಸರ್ಕಾರ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಅಂಗೀಕರಿಸಿ, ಖಾನ್ ಪರವಾಗಿ ಈ ಹಿಂದೆ ನೀಡಲಾಗಿದ್ದ ಜಾಮೀನು ಆದೇಶವನ್ನು ರದ್ದುಗೊಳಿಸಿತು.ಈ ಸುದ್ದಿಯನ್ನು ಇಂಗ್ಲಿಷ್'ನಲ್ಲಿ ಓದಿ..
Supreme Court cancels bail of habitual cow smuggler accusedಸುಮಾರು ಆರು ತಿಂಗಳ ಹಿಂದೆ, ಸುಪ್ರೀಂ ಕೋರ್ಟ್ ಖಾನ್‌ಗೆ ಜಾಮೀನು ನೀಡಿತ್ತು. ಆದಾಗ್ಯೂ, ರಾಜಸ್ಥಾನ ಸರ್ಕಾರವು ನಂತರ ಆರೋಪಿಯು ನಿಯಮಿತ ಅಪರಾಧಿ ಎಂದು ಉಲ್ಲೇಖಿಸಿ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ. ಅಧಿಕೃತ ದಾಖಲೆಗಳ ಪ್ರಕಾರ, ಉತ್ತರ ಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕನಿಷ್ಠ ಎಂಟು ಪ್ರಕರಣಗಳು - ಗೋಹತ್ಯೆ ...









