
ರಾಜತಾಂತ್ರಿಕತೆಗೆ ಅವಕಾಶ: ಇರಾನ್ ಮೇಲಿನ ಯೋಜಿತ ದಾಳಿ ಸ್ಥಗಿತಗೊಳಿಸಿದ ಟ್ರಂಪ್
ವಾಷಿಂಗ್ಟನ್/ಟೆಹ್ರಾನ್: ಟೆಹ್ರಾನ್ ಹಾಗೂ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳ ಮನವಿಯ ಹಿನ್ನೆಲೆಯಲ್ಲಿ ಇರಾನ್ ಮೇಲಿನ ಯೋಜಿತ ಮಿಲಿಟರಿ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಟ್ರೂತ್ ಸೋಷಿಯಲ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ರಾಜತಾಂತ್ರಿಕ ಮಾತುಕತೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಅಮೆರಿಕ ಸೇನೆ ಅಗತ್ಯವಿದ್ದರೆ ಕಾರ್ಯಾಚರಣೆಗೆ ಸಂಪೂರ್ಣ ಸಜ್ಜಾಗಿದ್ದರೂ, ಸಂಭಾವ್ಯ ಒಪ್ಪಂದದ ಹಿನ್ನೆಲೆಯಲ್ಲಿ ದಾಳಿಯನ್ನು ಮುಂದೂಡಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಪ್ರಸ್ತಾವಿತ ಒಪ್ಪಂದದಲ್ಲಿ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವುದು ಹಾಗೂ ಇರಾನ್‌ನ ಪರಮಾಣು ಬೆದರಿಕೆಗೆ ಅಂತ್ಯ ಹಾಡುವ ಕ್ರಮಗಳು ಸೇರಿವೆ ಎಂದು ಅವರು ಹೇಳಿದ್ದಾರೆ. ಇಸ್ರೇಲ್ ಈ ರಾಜತಾಂತ್ರಿಕ ಪ್ರಯತ್ನಕ್ಕೆ ಬೆಂಬಲ ನೀಡಿದೆ ಎಂದು ಟ್ರಂಪ್ ಹೇಳಿಕೊಂಡಿದ್ದರೂ, ಈ ಬಗ್ಗೆ ಇರಾನ್ ಅಥವಾ ಇಸ್ರೇಲ್ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ.ಇದಕ್ಕೂ ಮುನ್ನ ಟ್ರಂಪ್, ಮಾತುಕತೆಗಳು ಫಲ ನೀಡದಿದ್ದರೆ ಅಮೆರಿಕ...









