Saturday, September 19

Author: info@rajasdigital.com

ಸೀತಾ ಅಪಹರಣದಿಂದ ಲಂಕಾ ದಹನದವರೆಗೆ..; ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ರೋಚಕತೆ

ಸೀತಾ ಅಪಹರಣದಿಂದ ಲಂಕಾ ದಹನದವರೆಗೆ..; ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ರೋಚಕತೆ

ಪ್ರಮುಖ ಸುದ್ದಿ, ಸಿನಿಮಾ
ಮುಂಬೈ: ರಾಮಾಯಣದ ಕಥೆಯನ್ನು ಆಧರಿಸಿದ ಮತ್ತೊಂದು ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅಭಿಷೇಕ್ ಸಿಂಗ್ ನಿರ್ದೇಶನದ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಸೆಪ್ಟೆಂಬರ್ 25ರಂದು ಹಿಂದಿ ಹಾಗೂ ಛತ್ತೀಸ್‌ಗಢಿ ಭಾಷೆಗಳಲ್ಲಿ ತೆರೆಗೆ ಬರಲಿದೆ. ಚಿತ್ರತಂಡ ಇತ್ತೀಚೆಗೆ ಟ್ರೇಲರ್ ಬಿಡುಗಡೆ ಮಾಡಿದ್ದು, ಸೀತಾ ಅಪಹರಣದಿಂದ ಲಂಕಾ ದಹನದವರೆಗಿನ ಪ್ರಮುಖ ಘಟನೆಗಳ ಝಲಕ್ ನೀಡಿದೆ. https://youtu.be/lUhw32rt_dE?si=hHZxpcJZ-3py0Wkk ಟ್ರೇಲರ್‌ನಲ್ಲಿ ರಾವಣ ಸೀತೆಯನ್ನು ಅಪಹರಿಸಿ ಲಂಕೆಗೆ ಕರೆದೊಯ್ಯುವ ದೃಶ್ಯ ಪ್ರಮುಖವಾಗಿ ಮೂಡಿಬಂದಿದೆ. ಚಿನ್ನದ ಜಿಂಕೆಯ ಪ್ರಸಂಗದ ಬಳಿಕ ಸೀತೆಯ ಅಪಹರಣವಾಗುತ್ತದೆ. ವಿಷಯ ತಿಳಿದ ರಾಮ, ಸೀತೆಯ ಹುಡುಕಾಟಕ್ಕೆ ಹೊರಡುತ್ತಾರೆ. ಈ ಸಂದರ್ಭದಲ್ಲಿ ಹನುಮಂತ ಸೀತೆಯನ್ನು ಭೇಟಿಯಾಗುವ ದೃಶ್ಯಗಳೂ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿವೆ. ರಾಮಸೇತು ನಿರ್ಮಾಣ, ಹನುಮಂತನ ಲಂಕಾ ದಹನ ಹಾಗೂ ಸಂಜೀವಿನಿ ಪರ್ವತ ತರುವ ಸಾಹಸ ಸೇರಿದಂತೆ ರಾಮಾಯಣದ ಹಲವು ಪ್ರಮುಖ ಪ್ರಸಂಗಗಳನ್ನು ಒಂದೇ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರ ಭ...
SIR ಪರಿಷ್ಕರಣೆಯಲ್ಲಿ ಲೋಪ: ರಾಜ್ಯಾದ್ಯಂತ ಪರಿಶೀಲನೆಗೆ KPCC ಆಗ್ರಹ

SIR ಪರಿಷ್ಕರಣೆಯಲ್ಲಿ ಲೋಪ: ರಾಜ್ಯಾದ್ಯಂತ ಪರಿಶೀಲನೆಗೆ KPCC ಆಗ್ರಹ

ಪ್ರಮುಖ ಸುದ್ದಿ, ರಾಜ್ಯ
ಬೆಂಗಳೂರು: ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಹಲವು ಲೋಪಗಳು ಕಂಡುಬಂದಿವೆ ಎಂದು ಆರೋಪಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC), ಈ ಕುರಿತು ತಕ್ಷಣ ರಾಜ್ಯಾದ್ಯಂತ ಸಮಗ್ರ ಪರಿಶೀಲನೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. KPCC ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಅವರು ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು, ಗಣತಿ ನಮೂನೆಗಳು, ಮತದಾರರ ಮ್ಯಾಪಿಂಗ್ ಹಾಗೂ ಮತದಾರರನ್ನು ‘ಸ್ಥಳಾಂತರಗೊಂಡವರು’ ಅಥವಾ ‘ಮೃತರು’ ಎಂದು ವರ್ಗೀಕರಿಸುವ ಪ್ರಕ್ರಿಯೆ ಕುರಿತು ಹಲವು ಸಮಸ್ಯೆಗಳು ವರದಿಯಾಗುತ್ತಿವೆ ಎಂದು ಗಮನ ಸೆಳೆದಿದ್ದಾರೆ. ಒಂದೇ ಮತಗಟ್ಟೆಯಲ್ಲಿ ಶೇ.62 ಮತದಾರರ ಸ್ಥಿತಿ ಪ್ರಶ್ನೆ ವಿಧಾನಸಭಾ ಕ್ಷೇತ್ರ ಸಂಖ್ಯೆ 153ರ ಭಾಗ ಸಂಖ್ಯೆ 512ರ ಅಂಕಿಅಂಶಗಳನ್ನು ಉದಾಹರಣೆಯಾಗಿ ನೀಡಿರುವ ಅವರು, ಇಲ್ಲಿ ಒಟ್ಟು 1,016 ಮತದಾರರಿದ್ದು, 654 ಗಣತಿ ನಮೂನೆಗಳು ಸ್ವೀಕೃತವಾಗಿವೆ. 339 ಮತದಾರರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು, 19 ಮಂದಿಯನ್ನು ಮೃತರು ಹಾಗೂ 265 ಮಂದಿ...
ಯಶವಂತಪುರ ರೈಲು ನಿಲ್ದಾಣ ₹480 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿ: ಸೋಮಣ್ಣ

ಯಶವಂತಪುರ ರೈಲು ನಿಲ್ದಾಣ ₹480 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿ: ಸೋಮಣ್ಣ

ಪ್ರಮುಖ ಸುದ್ದಿ, ರಾಜ್ಯ
ಬೆಂಗಳೂರು: ಯಶವಂತಪುರ ರೈಲು ನಿಲ್ದಾಣವನ್ನು ಅಂದಾಜು ₹480 ಕೋಟಿ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಸೇವಾ ದಿವಸ’ ಕಾರ್ಯಕ್ರಮದಲ್ಲಿ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ರೈಲ್ವೆ ಸಿಬ್ಬಂದಿಯನ್ನು ಸನ್ಮಾನಿಸಿ ಅವರು ಮಾತನಾಡಿದರು. ರೈಲ್ವೆ ಸೇವೆಯಲ್ಲಿ ಸಮರ್ಪಣೆ ಹಾಗೂ ಬದ್ಧತೆ ಪ್ರದರ್ಶಿಸಿದ ಸಿಬ್ಬಂದಿಯನ್ನು ಸಚಿವರು ಗೌರವಿಸಿದರು. ಬಳಿಕ ಬೆಂಗಳೂರು ಕೇಂದ್ರದ ಸಂಸದ ಪಿ.ಸಿ. ಮೋಹನ್ ಅವರೊಂದಿಗೆ ‘ಆಶೀರ್ವಾದದ ದೀಪ’ ಬೆಳಗಿಸಿದರು. ವಂದೇ ಭಾರತ್ ರೈಲುಗಳ ನಿರ್ವಹಣಾ ಸಿಬ್ಬಂದಿ ಸೇರಿದಂತೆ ಸುಮಾರು 250 ರೈಲ್ವೆ ಸಿಬ್ಬಂದಿ ದೀಪ ಬೆಳಗಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಿ ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಅವರ ರಾಷ್ಟ್ರಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಜನ್ಮದಿನವನ್ನು ‘ಸೇವಾ ದಿವಸ’ವಾಗಿ ಆ...
ಎತ್ತಿನಹೊಳೆ : ನವೆಂಬರ್ ಅಂತ್ಯದೊಳಗೆ ತುಮಕೂರಿಗೆ, ಒಂದೂವರೆ ವರ್ಷದಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಸುವ ಗುರಿ

ಎತ್ತಿನಹೊಳೆ : ನವೆಂಬರ್ ಅಂತ್ಯದೊಳಗೆ ತುಮಕೂರಿಗೆ, ಒಂದೂವರೆ ವರ್ಷದಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಸುವ ಗುರಿ

ಪ್ರಮುಖ ಸುದ್ದಿ, ರಾಜ್ಯ
ಹಾಸನ: ಬಯಲುಸೀಮೆ ಜಿಲ್ಲೆಗಳ ದಶಕಗಳ ಕನಸಾಗಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ನೀರು ಹರಿಸುವ ಗುರಿಯೊಂದಿಗೆ ಜಲಸಂಪನ್ಮೂಲ ಸಚಿವರು ಗುರುವಾರ ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಟ್ಟು 24.01 ಟಿಎಂಸಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ನವೆಂಬರ್ ಅಂತ್ಯದೊಳಗೆ ತುಮಕೂರಿಗೆ ಹಾಗೂ ಮುಂದಿನ ಒಂದೂವರೆ ವರ್ಷದಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ಹರಿಸುವ ಗುರಿಯನ್ನು ಅಧಿಕಾರಿಗಳಿಗೆ ಸಚಿವರು ನೆನಪಿಸಿದರು. ಅರಸೀಕೆರೆ ತಾಲೂಕಿನ ತೊಳಲುತೊರೆ ಪ್ಯಾಕೇಜ್-8ರ ಗುರುತ್ವ ಕಾಲುವೆ ಕಾಮಗಾರಿ ಪರಿಶೀಲಿಸಿದ ಸಚಿವರು, ಮೈನಿಂಗ್ ಮತ್ತು ಲೈನಿಂಗ್ ಕಾಮಗಾರಿಯಲ್ಲಿ ವಿಳಂಬ ಮಾಡುತ್ತಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರದಿಂದ ಅಗತ್ಯ ಆರ್ಥಿಕ ನೆರವು ದೊರೆಯುತ್ತಿರುವ ಹಿನ್ನೆಲೆಯಲ್ಲಿ ಕಾಲಹರಣ ಸಹಿಸುವುದಿಲ್ಲ ಎಂದು ಎಚ್ಚರಿಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಟ್ರಯಲ್ ರನ್‌ಗೆ ಸಿದ್ಧತೆ ಮಾಡುವಂತೆ ಸೂಚಿಸಿದರು. ರಂಗನಾಥ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ...
ಮಿಚಿಗನ್‌ನಲ್ಲಿ ಎಫ್-16 ಯುದ್ಧವಿಮಾನ ಪತನ; ಪೈಲಟ್ ಪಾರು

ಮಿಚಿಗನ್‌ನಲ್ಲಿ ಎಫ್-16 ಯುದ್ಧವಿಮಾನ ಪತನ; ಪೈಲಟ್ ಪಾರು

ಪ್ರಮುಖ ಸುದ್ದಿ, ವಿದೇಶ
ಮಿಚಿಗನ್: ಅಮೆರಿಕದ ಮಿಚಿಗನ್‌ನಲ್ಲಿ ನಿಯಮಿತ ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಟೆಕ್ಸಾಸ್ ಏರ್ ನ್ಯಾಷನಲ್ ಗಾರ್ಡ್‌ನ ಎಫ್-16 ಯುದ್ಧವಿಮಾನ ಗುರುವಾರ ಪತನಗೊಂಡಿದೆ. ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನವೇ ಪೈಲಟ್ ಎಜೆಕ್ಟ್ ಆಗಿ ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಹೊರಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರ್ಯಾಂಡ್ ಟ್ರಾವರ್ಸ್ ಕೌಂಟಿ ಸಮೀಪ ಘಟನೆ ಸಂಭವಿಸಿದ್ದು, ವಿಮಾನ ಪತನಗೊಂಡ ಸ್ಥಳದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದ ಸಂದರ್ಭ ಸ್ಫೋಟದಂತಹ ದೊಡ್ಡ ಶಬ್ದ ಕೇಳಿಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಟೆಕ್ಸಾಸ್‌ನ 149ನೇ ಫೈಟರ್ ವಿಂಗ್‌ಗೆ ಸೇರಿದ ಎಫ್-16 ವಿಮಾನವು ಆಲ್ಪೆನಾ ರಾಷ್ಟ್ರೀಯ ಗಾರ್ಡ್ ನೆಲೆಯಿಂದ ತರಬೇತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ವಿಮಾನ ಪತನಕ್ಕೂ ಮುನ್ನ ಪೈಲಟ್ ಯಶಸ್ವಿಯಾಗಿ ಎಜೆಕ್ಟ್ ಆಗಿದ್ದು, ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.ಡೆಟ್ರಾಯಿಟ್‌ನಿಂದ ಉತ್ತರಕ್ಕೆ ಸುಮಾರು 305 ಕಿ.ಮೀ ದೂರದಲ್ಲಿರುವ ಆಲ್ಪೆನಾ ರಾಷ್ಟ್ರೀಯ ಗಾರ್...
ಸಂದೀಪ್ ಕುಮಾರ್ ಅವರಿಗೆ ಕರ್ನಾಟಕ ಸಂಘ ಕತಾರ್‌ನಿಂದ ಗೌರವಪೂರ್ಣ ಬೀಳ್ಕೊಡುಗೆ

ಸಂದೀಪ್ ಕುಮಾರ್ ಅವರಿಗೆ ಕರ್ನಾಟಕ ಸಂಘ ಕತಾರ್‌ನಿಂದ ಗೌರವಪೂರ್ಣ ಬೀಳ್ಕೊಡುಗೆ

ಪ್ರಮುಖ ಸುದ್ದಿ, ವಿದೇಶ
ದೋಹಾ, ಕತಾರ್: ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರ ಮುಖ್ಯಸ್ಥ (DCM) ಸಂದೀಪ್ ಕುಮಾರ್ ಅವರಿಗೆ ಕರ್ನಾಟಕ ಸಂಘ ಕತಾರ್ (KSQ) ವತಿಯಿಂದ ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು. ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ನೇತೃತ್ವದ ನಿಯೋಗವು ದೋಹಾದ ಭಾರತೀಯ ರಾಯಭಾರ ಕಚೇರಿಗೆ ಭೇಟಿ ನೀಡಿ ಸಂದೀಪ್ ಕುಮಾರ್ ಅವರನ್ನು ಸನ್ಮಾನಿಸಿತು. ನಿಯೋಗದಲ್ಲಿ ಉಪಾಧ್ಯಕ್ಷ ಅನಿಲ್ ಭಾಸಗಿ, ಕಾರ್ಯಕಾರಿ ಸಮಿತಿ ಸದಸ್ಯರು, ಸಲಹಾ ಸಮಿತಿ ಅಧ್ಯಕ್ಷ ಡಾ. ರವಿ ಶೆಟ್ಟಿ, ಸಲಹೆಗಾರ ವೀರೇಶ್ ಮಣ್ಣಂಗಿ ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಮಿತಿಯ ಕರ್ನಾಟಕ ಪ್ರತಿನಿಧಿ ಸಂದೀಪ್ ರೆಡ್ಡಿ ಉಪಸ್ಥಿತರಿದ್ದರು. ಮಾರ್ಗದರ್ಶನಕ್ಕೆ ಕೃತಜ್ಞತೆ ಸಂದೀಪ್ ಕುಮಾರ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಕರ್ನಾಟಕ ಸಂಘಕ್ಕೆ ನೀಡಿದ ಮಾರ್ಗದರ್ಶನ, ಪ್ರೋತ್ಸಾಹ ಹಾಗೂ ಬೆಂಬಲವನ್ನು ನಿಯೋಗ ಸ್ಮರಿಸಿತು. ಸಂಘದ ವಿವಿಧ ಸಮುದಾಯ ಉಪಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಕನ್ನಡಿಗ ಸಮುದಾಯಕ್ಕೆ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಲಾಯಿತು.ಅವರ ಬೆಂಬಲದಿಂದ ಕತಾರ್‌ನಲ್...
ಕೃತಕ ಬುದ್ಧಿಮತ್ತೆ ಸವಾಲುಗಳಿಗೆ ಭಾರತೀಯ ಜ್ಞಾನಪರಂಪರೆಯಲ್ಲಿ ಉತ್ತರ: RSS ಸಹಸರಕಾರ್ಯವಾಹ ಸಿ.ಆರ್.ಮುಕುಂದ

ಕೃತಕ ಬುದ್ಧಿಮತ್ತೆ ಸವಾಲುಗಳಿಗೆ ಭಾರತೀಯ ಜ್ಞಾನಪರಂಪರೆಯಲ್ಲಿ ಉತ್ತರ: RSS ಸಹಸರಕಾರ್ಯವಾಹ ಸಿ.ಆರ್.ಮುಕುಂದ

ಪ್ರಮುಖ ಸುದ್ದಿ, ರಾಜ್ಯ
ಬೆಂಗಳೂರು: ಕೃತಕ ಬುದ್ಧಿಮತ್ತೆಯಿಂದ ಎದುರಾಗುತ್ತಿರುವ ಸವಾಲುಗಳಿಗೆ ಭಾರತೀಯ ಜ್ಞಾನಪರಂಪರೆಯಲ್ಲಿ ಉತ್ತರ ನೀಡುವ ಶಕ್ತಿ ಇದೆ. ಈ ಸವಾಲುಗಳಿಗೆ ಭಾರತೀಯ ಪರಿಹಾರಗಳನ್ನು ಜಗತ್ತಿಗೆ ಅರ್ಥವಾಗುವ ಭಾಷೆಯಲ್ಲಿ ತಲುಪಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ.ಆರ್. ಪ್ರತಿಪಾದಿಸಿದ್ದಾರೆ  ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ‘ಗುರುವಂದನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಶತಮಾನದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಾದರೂ ಗುರುವಿನ ಸ್ಥಾನಮಾನ ಮುಂದುವರಿದಿತ್ತು. ಆದರೆ ಹಣ, ತಂತ್ರಜ್ಞಾನ ಸೇರಿದಂತೆ ಬದಲಾಗುತ್ತಿರುವ ಸಾಮಾಜಿಕ ವಾತಾವರಣದಲ್ಲಿ ಗುರುವಿನ ಸ್ಥಾನ ಹಲವು ಕಾರಣಗಳಿಂದ ಕುಗ್ಗುತ್ತಿದೆ ಎಂದರು.‘ಜ್ಞಾನಪರಂಪರೆಯನ್ನು ವರ್ತಮಾನಕ್ಕೆ ತಲುಪಿಸಬೇಕು’ ಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸಂವಹನದ ಬದಲಾವಣೆಗಳನ್ನು ಗಮನಿಸಬೇಕು. ಅಗಾಧ ಭಾರತೀಯ ಜ್ಞಾನಪರಂಪರೆಯನ್ನು ವರ್ತಮಾನಕ್ಕೆ ಹೇಗೆ ತಲುಪಿಸಬೇಕು ಎಂಬ ಬಗ್ಗೆ ಚಿಂತನೆ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವ...
ಸಿಎಂ ಚಿಕ್ಕಮಗಳೂರು ಭೇಟಿ ಸಂದರ್ಭದಲ್ಲಿ ಸಿ.ಟಿ.ರವಿ ಬಹಿರಂಗ ಪತ್ರ

ಸಿಎಂ ಚಿಕ್ಕಮಗಳೂರು ಭೇಟಿ ಸಂದರ್ಭದಲ್ಲಿ ಸಿ.ಟಿ.ರವಿ ಬಹಿರಂಗ ಪತ್ರ

ಪ್ರಮುಖ ಸುದ್ದಿ, ರಾಜ್ಯ
ಮಲೆನಾಡು ರಸ್ತೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್, ಕಸ್ತೂರಿ ರಂಗನ್ ಕರಡು ಅಧಿಸೂಚನೆ ಮರುಪರಿಶೀಲನೆಗೆ ಸಿ.ಟಿ. ರವಿ ಆಗ್ರಹ.. ಚಿಕ್ಕಮಗಳೂರು: ಸೆ.19ರಂದು ಚಿಕ್ಕಮಗಳೂರು ಜಿಲ್ಲೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಮುಖ್ಯಮಂತ್ರಿಗೆ ಬಹಿರಂಗ ಪತ್ರ ಬರೆದಿದ್ದು, ಜಿಲ್ಲೆಯ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಶಿವಕುಮಾರ್ ಅವರಿಗೆ ಸ್ವಾಗತ ಕೋರಿರುವ ಸಿ.ಟಿ. ರವಿ, ರಸ್ತೆ, ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ಪ್ರದೇಶ, ಕುಡಿಯುವ ನೀರು ಹಾಗೂ ಜಲಜೀವನ್ ಮಿಷನ್ ಕಾಮಗಾರಿಗಳ ಕುರಿತು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮಲೆನಾಡು-ಕರಾವಳಿ ರಸ್ತೆ ಅಭಿವೃದ್ಧಿಗೆ ಪ್ಯಾಕೇಜ್ ತೀರ್ಥಹಳ್ಳಿ-ಬಾಳೆಹೊನ್ನೂರು-ಚಿಕ್ಕಮಗಳೂರು ಮಾರ್ಗ ಸೇರಿದಂತೆ ಮಲೆನಾಡು ಭಾಗದ ರಸ್ತೆಗಳ ದುಸ್ಥಿತಿಯನ್ನು ಮುಖ್ಯಮಂತ್ರಿ ಖುದ್ದಾಗಿ ಪರಿಶೀಲಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ರಸ್ತೆಗಳಲ್ಲಿ ಗುಂಡಿಗಳಿಂದ ಸಂಚಾರಕ್ಕೆ...
ಭಾರತಕ್ಕೆ ಮೋದಿ ಭಗವಂತನ ವರಪ್ರಸಾದವಾಗಿ ಬಂದವರು: ಸಿ.ಟಿ. ರವಿ

ಭಾರತಕ್ಕೆ ಮೋದಿ ಭಗವಂತನ ವರಪ್ರಸಾದವಾಗಿ ಬಂದವರು: ಸಿ.ಟಿ. ರವಿ

ಪ್ರಮುಖ ಸುದ್ದಿ, ರಾಜ್ಯ
ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಭಗವಂತನ ವರಪ್ರಸಾದವಾಗಿ ಬಂದವರು. ಬಡವರ ಕಲ್ಯಾಣ, ದೇಶದ ಗೌರವ ಹಾಗೂ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಗ್ರಾಮಾಂತರ ಮಂಡಲದಿಂದ ಚಿಕ್ಕಗೌಜ ಗ್ರಾಮದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದ ಅವರು, ಮೋದಿ ಅವರು ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ 25 ವರ್ಷಗಳ ಸಾರ್ವಜನಿಕ ಜೀವನ ಪೂರ್ಣಗೊಳಿಸಿದ್ದಾರೆ. ಅಧಿಕಾರವನ್ನು ಅನುಭವಿಸುವ ಬದಲು ತಮ್ಮನ್ನು ‘ಪ್ರಧಾನ ಸೇವಕ’ ಎಂದು ಕರೆದುಕೊಂಡು ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.ಬಡವರ ಕಲ್ಯಾಣಕ್ಕೆ ಯೋಜನೆಗಳು ಜನ್‌ಧನ್ ಖಾತೆಗಳ ಮೂಲಕ ಬಡವರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸಲಾಗಿದೆ. ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದು ವಾರ್ಷಿಕ ₹6 ಸಾವಿರ ನೆರವು ನೀಡಲಾಗುತ್ತಿದೆ ಎಂದು ರವಿ ಹೇಳಿದರು. ಉಜ್ವಲ ಯೋಜನೆಯಡಿ ಬಡ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ, ಗ್ರಾಮೀಣ ಮನೆಗಳಿಗೆ ವಿದ್ಯುತ್ ಸಂಪರ್ಕ ಹಾಗ...
79ನೇ ಕಲ್ಯಾಣ ಕರ್ನಾಟಕ ಉತ್ಸವ: ಸರ್ವಾಂಗೀಣ ಅಭಿವೃದ್ಧಿಯೇ ಸರ್ಕಾರದ ಸಂಕಲ್ಪ.

79ನೇ ಕಲ್ಯಾಣ ಕರ್ನಾಟಕ ಉತ್ಸವ: ಸರ್ವಾಂಗೀಣ ಅಭಿವೃದ್ಧಿಯೇ ಸರ್ಕಾರದ ಸಂಕಲ್ಪ.

ಪ್ರಮುಖ ಸುದ್ದಿ, ರಾಜ್ಯ
ಬಳ್ಳಾರಿ,: ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಸಾಮಾಜಿಕ ನ್ಯಾಯ ಹಾಗೂ ಜನರ ಏಳಿಗೆಯೇ ಸರ್ಕಾರದ ಪ್ರಮುಖ ಸಂಕಲ್ಪವಾಗಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ. ರಘುಮೂರ್ತಿ ಹೇಳಿದರು. ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಆಯೋಜಿಸಿದ್ದ 79ನೇ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹೈದರಾಬಾದ್ ನಿಜಾಮರ ಆಳ್ವಿಕೆಯಿಂದ ಕಲ್ಯಾಣ ಕರ್ನಾಟಕ ವಿಮೋಚನೆಗೊಂಡ ಐತಿಹಾಸಿಕ ದಿನವನ್ನು ಸ್ಮರಿಸಿದ ಅವರು, ಈ ಭಾಗದ ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ-ಬಲಿದಾನ ಮಾಡಿದ ಎಲ್ಲ ಮಹನೀಯರನ್ನು ಗೌರವದಿಂದ ಸ್ಮರಿಸಬೇಕು ಎಂದರು. 371(ಜೆ)ಯಿಂದ ವಿಶೇಷ ಸ್ಥಾನಮಾನ ಸಂವಿಧಾನದ 371(ಜೆ) ತಿದ್ದುಪಡಿಯ ಮೂಲಕ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆತಿದ್ದು, ಇದರಿಂದ ಶಿಕ್ಷಣ, ಉದ್ಯೋಗ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಾತಿ ಹಾಗೂ ಹೆಚ್ಚುವರಿ ಅನುದಾನ ಒದಗಿಸಲು ಸಾಧ್ಯವಾಗಿದೆ ಎಂದು ರಘುಮೂರ್ತಿ ಹೇಳಿದರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೂಲಕ ಈವರೆಗೆ ಸುಮಾರು ₹18 ಸಾ...