
‘ಟಾಕ್ಸಿಕ್’ ಟೀಸರ್ ವಿವಾದ: ಮಹಿಳಾ ಆಯೋಗ ಮತ್ತು ಸೆನ್ಸಾರ್ ಮಂಡಳಿಗೆ ದೂರು
ಬೆಂಗಳೂರು: ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆಯಾದ ಬಳಿಕ ಮಹಿಳಾ ಆಯೋಗ ಮತ್ತು ಸೆನ್ಸಾರ್ ಮಂಡಳಿಗೆ ದೂರುಗಳು ಸಲ್ಲಿಕೆಯಾಗಿರುವ ನಡುವೆಯೇ, ರಾಷ್ಟ್ರೀಯ ಕ್ರೈಸ್ತರ ಒಕ್ಕೂಟವೂ ಚಿತ್ರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ. ಟೀಸರ್‌ನಲ್ಲಿ ದೇವದೂತ ಸಂತ ಮಿಕಯೇಲ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಒಕ್ಕೂಟ ಆರೋಪಿಸಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕರ್ನಾಟಕ ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲಾ, ಟೀಸರ್ ಆಧರಿಸಿ ಸಂಪೂರ್ಣ ಸಿನಿಮಾವನ್ನು ನಿರ್ಧರಿಸುವುದು ಸರಿಯಲ್ಲ ಎಂದು ಹೇಳಿದರು.“ಒಂದು ಟೀಸರ್ ನೋಡಿ ಇಡೀ ಸಿನಿಮಾ ಹೀಗೆಯೇ ಇರಲಿದೆ ಎಂದು ಮುಂಚಿತವಾಗಿ ತೀರ್ಮಾನಿಸುವುದು ತಪ್ಪು. ಪ್ರತಿಭಟನೆ ಮಾಡುವ ಮನಸ್ಸಿದ್ದರೆ ಮೊದಲು ಸಿನಿಮಾ ನೋಡಿ ನಂತರ ಅಭಿಪ್ರಾಯ ವ್ಯಕ್ತಪಡಿಸಲಿ. ಕನ್ನಡ ಚಿತ್ರರಂಗಕ್ಕೆ 93 ವರ್ಷಗಳ ಇತಿಹಾಸವಿದೆ. ಈ ಅವಧಿಯಲ್ಲಿ ಯಾವುದೇ ಧರ್ಮವನ್ನು ಅವಹೇಳನ ಮಾಡುವ ರೀತಿಯಲ್ಲಿ ಚಿತ್ರರಂಗ ನಡೆದುಕೊಂಡಿಲ್ಲ. ಸರ್ವಧರ್ಮ ಸಹಿಷ್ಣುತೆಯನ್ನೇ ಪಾಲಿಸಿಕೊಂಡು ಬಂದಿದೆ” ಎಂದು ಅವರು ಹೇಳಿದರು.ಚಿತ್ರ ಇನ್ನೂ ಸೆನ್ಸಾರ್ ಆಗಿಲ್ಲ. ಸೆನ್ಸಾರ್ ಮಂಡಳಿ ಸ...









