Sunday, May 3

ಪ್ರಮುಖ ಸುದ್ದಿ

ಅಕ್ಟೋಬರ್​ 3 ರಂದು ಮೈಸೂರು ದಸರಾ ಉದ್ಘಾಟನೆ; ಈಬಾರಿಯೂ ಅಂಬಾರಿ ಹೊರಲಿರುವ ಅಭಿಮನ್ಯು

ಅಕ್ಟೋಬರ್​ 3 ರಂದು ಮೈಸೂರು ದಸರಾ ಉದ್ಘಾಟನೆ; ಈಬಾರಿಯೂ ಅಂಬಾರಿ ಹೊರಲಿರುವ ಅಭಿಮನ್ಯು

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೈವಿಧ್ಯ
ಮೈಸೂರು: ಮೈಸೂರು ದಸರಾ ಮಹೋತ್ಸವ-2024 ಅಕ್ಟೋಬರ್​ 3 ರಂದು ಉದ್ಘಾಟನೆಯಾಗಲಿದೆ. ಅಕ್ಟೋಬರ್ 12 ರಂದು ಜಂಬೂಸವಾರಿ ನಡೆಯಲಿದ್ದು ನಾಡಹಬ್ಬದ ತಯಾರಿಗೆ ಮುನ್ನುಡಿ ಬರೆಯಲಾಗಿದೆ.ದಸರಾ ಜಂಬೂಸವಾರಿಯಲ್ಲಿ 13 ಗಂಡು ಮತ್ತು 05 ಹೆಣ್ಣು ಆನೆಗಳು ಭಾಗಿಯಾಗಲಿದ್ದು, ಗಜಪಡೆಯ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿಯೂ ಅಭಿಮನ್ಯುವೇ ಅಂಬಾರಿ ಹೊರಲಿದ್ದು, ಸೇರಿ 14 ಆನೆಗಳು ಭಾಗಿಯಾಗಲಿವೆ. ಈ ಗಜಪಡೆಗಳು ಎರಡು ಹಂತಗಳಲ್ಲಿ ಸಾಂಸ್ಕೃತಿಕ ನಾಗರಿಗೆ ಆಗಮಿಸಲಿದ್ದು, ಮೊದಲನೇ ತಂಡದಲ್ಲಿ ಅಭಿಮನ್ಯು, ವರಲಕ್ಷ್ಮೀ, ಧನಂಜಯ, ಗೋಪಿ, ಭೀಮ, ಲಕ್ಷ್ಮೀ, ಕಂಜನ್, ರೋಹಿತ್, ಏಕಲವ್ಯ ಬರಲಿವೆ. ಎರಡನೇಯ ತಂಡದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷ್ಮೀ, ಹಿರಣ್ಯ, ಮೀಸಲು, ಹರ್ಷ, ಅಯ್ಯಪ್ಪ, ಪಾರ್ಥಸಾರಥಿ, ಮಾಲದೇವಿ ಆನೆಗಳ ಆಗಮನವಾಗಲಿದೆ. ಆಗಸ್ಟ್ 21ಕ್ಕೆ ಗಜಪಯಣ ನಿಗದಿ ಆಗಿದ್ದು, ದಸರಾ ಮಹೋತ್ಸವದ ಸುಮಾರು 2 ತಿಂಗಳ ಮುಂಚಿತವಾಗಿ ಮೈಸೂರಿಗೆ ಗಜಪಡೆ ಆಗಮಿಸಲಿವೆ....
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ; ನದಿಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆ

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ; ನದಿಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆ

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ರಾಜ್ಯದಲ್ಲಿ ಮುಂಗಾರು ಮಳೆ ಮುಂದುವರೆದಿದ್ದು ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ. ಜಲಾಶಯಗಳೂ ಭರ್ತಿಯಾಗಿದ್ದು ಹೊರ ಹರಿವು ಕೂಡಾ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನದಿಪಾತ್ರದ ಜನರಿಗೆ ಎಚ್ಚರವಹಿಸುವಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸೂಚಿಸಿದೆ.ತುಂಗಭದ್ರಾ ಜಲಾಶಯದ ಒಂದು ಕ್ರೆಸ್ಟ್ ಗೇಟ್ ಹಾನಿಗೊಳಗಾಗಿದ್ದು ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರ ಹರಿ ಬಿಡಲಾಗಿದೆ. ಇದರಿಂದಾಗಿ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.ಇನ್ನೊಂದೆಡೆ, ಕಾವೇರಿ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯತ್ತಿದೆ. ಹಾಗಾಗಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಭಾಗದ ನದಿಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ....
ನೀರಿನಲ್ಲಿ ಮುಳುಗಿದ ಸಿಲಿಕಾನ್ ಸಿಟಿ..! ಇದೇನಾ ಬ್ರ್ಯಾಂಡ್ ಬೆಂಗಳೂರು?

ನೀರಿನಲ್ಲಿ ಮುಳುಗಿದ ಸಿಲಿಕಾನ್ ಸಿಟಿ..! ಇದೇನಾ ಬ್ರ್ಯಾಂಡ್ ಬೆಂಗಳೂರು?

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಭಾರೀ ಮಳೆಯಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಜನರು ಪರದಾಡುವಂತಾಗಿದೆ. ಸೋಮವಾರ ಬೆಳಿಗ್ಗೆ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಬಡಾವಣೆಗಳಲ್ಲಿ ಜನಜೀವನ ಏರುಪೇರಾಯಿತು. ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಇದರಿಂದಾಗಿ ಬೆಳಿಗ್ಗೆ ಕೆಲಸಕ್ಕೆಂದು ತೆರಳಿದ ಮಂದಿ ಸಂಕಷ್ಟ ಅನುಭವಿಸುವಂತಾಯಿತು.ರಾಜಧಾನಿಯಲ್ಲಿ ಸರ್ಕಾರದ ನಿರ್ಲಕ್ಷ್ಯ ಹಾಗೂ ಬಿಬಿಎಂಪಿ ಅಧಿಕಾರಿಗಳ ಅಸಡ್ಡೆಯಿಂದಾಗಿ ಮಳೆ ಸಂದರ್ಭಗಳಲ್ಲಿ ಆಗಾಗ್ಗೆ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಈ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾತ್ಯತೀತ ಜನತಾ ದಳ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಡಿಸಿಎಂ ಇದೇನಾ ಬ್ರ್ಯಾಂಡ್ ಬೆಂಗಳೂರು..? ಎಂದು ಜೆಡಿಎಸ್ ಪ್ರಶ್ನಿಸಿದೆ.ಡಿಸಿಎಂ ಇದೇನಾ ಬ್ರ್ಯಾಂಡ್ ಬೆಂಗಳೂರು..? ನೀರಿನಲ್ಲಿ ಮುಳುಗಿದ ಸಿಲಿಕಾನ್ ಸಿಟಿ..!ಡಿಸಿಎಂ @DKShivakumar ಅವರೇ ಇದೇನಾ ನಿಮ್ಮ ಬ್ರ್ಯಾಂಡ್ ಬೆಂಗಳೂರು..? ಉತ್ತರಿಸಿ ಬೆಂಗಳೂರು ನಗರಾಭಿವೃದ್ಧಿ ಸಚಿವರೇ...ಕೇವಲ 3-4 ಗಂಟೆ ಸುರಿದ ಮಳ...
ತಿರುವಳ್ಳೂರು ಬಳಿ ಭೀಕರ ಅಪಘಾತ; ಐವರು ವಿದ್ಯಾರ್ಥಿಗಳು ದುರ್ಮರಣ

ತಿರುವಳ್ಳೂರು ಬಳಿ ಭೀಕರ ಅಪಘಾತ; ಐವರು ವಿದ್ಯಾರ್ಥಿಗಳು ದುರ್ಮರಣ

ದೇಶ-ವಿದೇಶ, ಪ್ರಮುಖ ಸುದ್ದಿ
ಚೆನ್ನೈ: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ತಿರುತ್ತಣಿ ಬಳಿಯೂ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಗಳಿದ್ದ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಈ ಅಪಘಾತ ಘಟಿಸಿದೆ.ಚೆನ್ನೈನ ಕಾಲೇಜಿನಲ್ಲಿ ಓದುತ್ತಿದ್ದ ಏಳು ಮಂದಿ ವಿದ್ಯಾರ್ಥಿಗಳು ಚೆನ್ನೈ-ತಿರುಪತಿ ಹೆದ್ದಾರಿಯಲ್ಲಿಕಾರಿನಲ್ಲಿ ತೆರಳುತ್ತಿದ್ದಾಗ ಟ್ರಕ್​ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಅಪಘಾತಕ್ಕೆ ಕಾರಣ ಎನ್ನಲಾದ ಟ್ರಕ್ ಚಾಲಕನನ್ನು ಕನಗಮ್ಮಛತ್ರಂ ಪೊಲೀಸರು ಬಂಧಿಸಿದ್ದಾರೆ....
ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿದ ಹಿಂದೂ ಹೋರಾಟಗಾರ್ತಿ; ವೀಡಿಯೋ ವೈರಲ್

ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಿಸಿದ ಹಿಂದೂ ಹೋರಾಟಗಾರ್ತಿ; ವೀಡಿಯೋ ವೈರಲ್

ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ರೀಲ್ಸ್ ಮಾಡೋ ಹೆಣ್ಣುಮಕ್ಕಳ ವಿಡಿಯೋ ಶೇರ್ ಮಾಡೋ ಬದಲು ಇಂತಹ ಹೆಣ್ಣುಮಕ್ಕಳ ವಿಡಿಯೋ ಶೇರ್ ಮಾಡಿ ಅವರಿಗೆ ಪ್ರೋತ್ಸಾಹ ನೀಡಿ 🙏🙏🙏 ನಿಜಕ್ಕೂ ಈ ಹೆಣ್ಣುಮಗಳ ಧೈರ್ಯ ಮೆಚ್ಚಬೇಕು ಕಸಾಯಿಖಾನೆಗೆ ಹೋಗುತಿದ್ದ ಗೋವುಗಳನ್ನು ರಕ್ಷಿಸಿದ ಹಿಂದೂ ಹೋರಾಟಗಾರ್ತಿಗೆ ಸಮಸ್ತ ಹಿಂದೂ ಕಾರ್ಯಕರ್ತರ ಪರವಾಗಿ ಒಂದು ಮೆಚ್ಚುಗೆ ಇರಲಿ 🙏#ಗೋರಕ್ಷಕಿ pic.twitter.com/TR2j8Q0HGM — Puneeth Kerehalli (@Puneeth74353549) August 11, 2024...
ವಿಜಯೇಂದ್ರ ನಾಯಕತ್ವಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಅತೃಪ್ತರ ಕಾರ್ಯತಂತ್ರ; ಮೈಸೂರು ಯಾತ್ರೆಗೆ ಪರ್ಯಾಯವಾಗಿ ಬಳ್ಳಾರಿ ಯಾತ್ರೆಗೆ ತಯಾರಿ

ವಿಜಯೇಂದ್ರ ನಾಯಕತ್ವಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಅತೃಪ್ತರ ಕಾರ್ಯತಂತ್ರ; ಮೈಸೂರು ಯಾತ್ರೆಗೆ ಪರ್ಯಾಯವಾಗಿ ಬಳ್ಳಾರಿ ಯಾತ್ರೆಗೆ ತಯಾರಿ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಳಗಾವಿ: ಮುಡಾ ಹಗರಣದ ವಿರುದ್ಧದ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಬೆನ್ನಲ್ಲೇ ಇದೀಗ ಮತ್ತೊಂದು ಹೋರಾಟಕ್ಕೆ ಬಿಜೆಪಿ ನಾಯಕರು ತಯಾರಿ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವ ಒಪ್ಪದ ನಾಯಕರ ಗುಂಪು ಈ ಹೋರಾಟ ನಡೆಸಲು ಸಿದ್ಧತೆ ನಡೆಸಿರುವ ಬೆಳವಣಿಗೆ ಕಮಲ ಪಾಳಯದಲ್ಲಿ ಕುತೂಹಲ ಕೆರಳಿಸಿದೆ.ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ನೇತೃತ್ವದ ಈ ಗುಂಪು ಬಿಜೆಪಿಯ ಅತೃಪ್ತ ನಾಯಕರನ್ನು ಒಗ್ಗೂಡಿಸಿ ಬಳ್ಳಾರಿ ಯಾತ್ರೆಗೆ ಮುಂದಾಗಿದ್ದಾರೆ. ಸೆಪ್ಟೆಂಬರ್ 17ರಿಂದ ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಬೆಳಗಾವಿಯಲ್ಲಿ ಬಿಜೆಪಿಯ ನಾಯಕರು ಗೌಪ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ.ಬೆಳಗಾವಿಯದ ಖಾಸಗಿ ರೆಸಾರ್ಟ್​ನಲ್ಲಿ ಮಾಜಿ ಸಚಿವ ರಮೇಶ್​ ಜಾರಕಿಹೊಳಿ, ಬಿಜೆಪಿ ಶಾಸಕ ಯತ್ನಾಳ್​ ನೇತೃತ್ವದಲ್ಲಿ ನಡೆದಿರುವ ಈ ಸಭೆಯಲ್ಲಿ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಪ್ರತಾಪ್ ಸಿಂಹ, ಜಿ.ಎಂ.ಸಿದ್ದೇಶ್ವರ್, ಅಣ್ಣಾಸಾಹೇಬ್ ಜೊಲ್ಲೆ, ಬಿ.ಪಿ.ಹರೀಶ್, ಎನ್.ಆರ್.ಸಂತೋಷ್ ಭಾಗಿಯಾಗಿ...
ಬಿಹಾರದ ಜೆಹನಾಬಾದ್ ದೇವಾಸ್ಥಾನದಲ್ಲಿ ಕಾಲ್ತುಳಿತ; ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿಕೆ

ಬಿಹಾರದ ಜೆಹನಾಬಾದ್ ದೇವಾಸ್ಥಾನದಲ್ಲಿ ಕಾಲ್ತುಳಿತ; ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿಕೆ

ದೇಶ-ವಿದೇಶ, ಪ್ರಮುಖ ಸುದ್ದಿ
ಪಾಟ್ನಾ: ಬಿಹಾರದ ಜೆಹನಾಬಾದ್ ಬಳಿ ದೇವಾಸ್ಥಾನದಲ್ಲಿನ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 7ಕ್ಕೆ ಏರಿದೆ. ಜೆಹನಾಬಾದ್ ಬಳಿಯ ಬಾಬಾ ಸಿದ್ಧಾಂತ ದೇವಾಲಯದಲ್ಲಿ ಸಂಭವಿಸಿದ ಈ ಕಾಲ್ತುಳಿತದಲ್ಲಿ ಸುಮಾರು 50 ಮಂದಿ ಗಾಯಗೊಂಡಿದ್ದಾರೆ.ಭಾನುವಾರ ರಾತ್ರಿ ದೇವಾಸ್ಥಾನದಲ್ಲಿ ಕನ್ವಾರಿಯಾಗಳ ನಡುವೆ ಹೊಡೆದಾಟ ನಡೆದಿದ್ದು ಈ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ.VIDEO | Seven dead and 50 feared injured as a stampede occurred at a temple of Bihar's Jehanabad after a fight broke between flower seller and people.(Full video available on PTI Videos - https://t.co/dv5TRARJn4) pic.twitter.com/psJSERP7ra — Press Trust of India (@PTI_News) August 12, 2024...
ಕರ್ನಾಟಕ ವೀರಶೈವ ಮಹಾಸಭೆಯ ನೂತನ ಅಧ್ಯಕ್ಷರಾಗಿ ಶಂಕರ್ ಬಿದರಿ ಆಯ್ಕೆ

ಕರ್ನಾಟಕ ವೀರಶೈವ ಮಹಾಸಭೆಯ ನೂತನ ಅಧ್ಯಕ್ಷರಾಗಿ ಶಂಕರ್ ಬಿದರಿ ಆಯ್ಕೆ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕರ್ನಾಟಕ ವೀರಶೈವ ಮಹಾಸಭೆಯ ನೂತನ ಅಧ್ಯಕ್ಷರಾಗಿ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಾಸಭಾ ಅಧ್ಯಕ್ಷ ಚುನಾವಣೆಗೆ ಸ್ಪರ್ಧೆ ಬಯಸಿ ಶಂಕರ್ ಬಿದರಿ ನಾಮಪತ್ರ ಸಲ್ಲಿಸಿದ್ದರು. ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಚಿವ ಈಶ್ವರ ಖಂಡ್ರೆ, ರಾಷ್ಟ್ರೀಯ ಕಾರ್ಯದರ್ಶ ಎಚ್.ಎಂ.ರೇಣುಕಾ ಪ್ರಸನ್ನ, ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಮಹಾಸಭಾದ ಚುನಾವಣಾ ಸಂಸ್ಥೆಯು 31,000 ಸದಸ್ಯರನ್ನು ಒಳಗೊಂಡಿದ್ದು, ಪ್ರತಿಸ್ಪರ್ಧಿಗಳು ಇಲ್ಲದಿದ್ದರಿಂದ ಶಂಕರ್ ಬಿದರಿಯವರು ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಂಕರ್ ಬಿದರಿಯವರು ಮಾಜಿ ಎಂಎಲ್‌ಸಿ ತಿಪ್ಪಣ್ಣ ಅವರಿಂದ ಅಧಿಕಾರ ಸ್ವೀಕರಿಸಿದ್ದಾರೆ.ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ ಆಯ್ಕೆಯಾದ ದಕ್ಷ ಪೊಲೀಸ್ ಅಧಿಕಾರಿ ಶ್ರೀಯುತ ಶಂಕರ್ ಬಿದರಿ ಅವರಿಗೆ ಅಭಿನಂದನೆಗಳು.ಈ ನಿಮ್ಮ ಅವಧಿಯಲ್ಲಿ ಸಂಘಟನೆಯು ಬಲಿಷ್ಠವಾಗಲಿ.@ShankarMBidari1 pic.twitter.com/ifd9qu...
‘ಯಕ್ಷಗಾನ ಉತ್ಸವ-2024’: ತಾಳಮದ್ದಳೆಯಲ್ಲಿ ಆಂಜನೇಯ ಪಾತ್ರಧಾರಿಯಾಗಿ ಗಮನಸೆಳೆದ IPS ಅಧಿಕಾರಿ ಧರಣೀದೇವಿ

‘ಯಕ್ಷಗಾನ ಉತ್ಸವ-2024’: ತಾಳಮದ್ದಳೆಯಲ್ಲಿ ಆಂಜನೇಯ ಪಾತ್ರಧಾರಿಯಾಗಿ ಗಮನಸೆಳೆದ IPS ಅಧಿಕಾರಿ ಧರಣೀದೇವಿ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೈವಿಧ್ಯ, ಸಿನಿಮಾ
ಬೆಂಗಳೂರು: ಯಕ್ಷಗಾನ ಕೇವಲ ಪುರುಷರಿಗಷ್ಟೇ ಸೀಮಿತವಾಗಿಲ್ಲ. ಈ ರಂಗದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಮಹಿಳೆಯರೂ ಹಂತಹಂತವಾಗಿ ಪಾಲ್ಗೊಂಡು ಪುರುಷರಂತೆಯೇ ಸಾಧನೆ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿರುವ ಹಿರಿಯ ಐಪಿಎಸ್‌ ಅಧಿಕಾರಿ ಡಾ. ಧರಣೀದೇವಿ ಮಾಲಗತ್ತಿ ಅಭಿಪ್ರಾಯಪಟ್ಟಿದ್ದಾರೆ.ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆ ಶನಿವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಯಕ್ಷಗಾನ ಉತ್ಸವ-2024 ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಯಕ್ಷಗಾನದಲ್ಲಿ ಮಹಿಳೆಯರ ಸಹಭಾಗಿತ್ವವನ್ನು ಪ್ರೋತ್ಸಾಹಿಸಬೇಕಿದೆ ಎಂದು ಪ್ರತಿಪಾದಿಸಿದರು.ಸ್ವತಃ "ಶರಸೇತು ಬಂಧ" ಎಂಬ ಮಹಿಳಾ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಆಂಜನೇಯನ ಪಾತ್ರವಹಿಸಿ ಅರ್ಥಗಾರಿಕೆ ಮಾಡಿದ ಧರಣೀದೇವಿ ಅವರು, ಭಾಗವತಿಕೆಯಲ್ಲಿ, ಚೆಂಡೆ ವಾದನದಲ್ಲಿ, ಮುಮ್ಮೇಳ ಕಲಾವಿದರಾಗಿ ಬಹಳ ಹಿಂದಿನಿಂದಲೂ ಮಹಿಳೆಯರು ಅವರದೇ ಛಾಪು ಮೂಡಿಸಿದ್ದಾರೆ. ಬಣ್ಣದ ವೇಷದಲ್ಲೂ ತೊಡಗಿಸಿಕೊಂಡು, ಆಯಾ ಪಾತ್ರಕ್ಕೆ ಅನುಗುಣವಾದ ಧ್ವನಿಯನ್ನೂ ನೀಡಿ ಪಾತ್ರಕ್ಕೆ ನ್ಯಾಯ ಒದಗಿಸಿದ ನಿದರ್...
ತುಂಗಭದ್ರಾ ಜಲಾಶಯ ಅವಘಡ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ, ಸಚಿವ ಡಿಕೆಶಿ ರಾಜೀನಾಮೆ ನೀಡಲಿ; ಕುರುಬೂರು ಆಗ್ರಹ

ತುಂಗಭದ್ರಾ ಜಲಾಶಯ ಅವಘಡ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ, ಸಚಿವ ಡಿಕೆಶಿ ರಾಜೀನಾಮೆ ನೀಡಲಿ; ಕುರುಬೂರು ಆಗ್ರಹ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬಳ್ಳಾರಿ: ತುಂಗಭದ್ರಾ ಗೇಟ್ ಮುರಿದ ಪ್ರಕರಣ ಉನ್ನತ ಮಟ್ಟದ ತನಿಖೆಯಾಗಲಿ. ನೀರಾವರಿ ಸಚಿವ ಡಿ ಕೆ ಶಿವಕುಮಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.‌ತುಂಗಭದ್ರಾ ಜಲಾಶಯ ಗೇಟ್ ಮುರಿದು ನೀರು ಖಾಲಿಯಾಗಿ ರೈತರ ಬದುಕು ಹಾಳಾಗಲು. ಸರ್ಕಾರದ ನಿರ್ಲಕ್ಷತನವೇ ಕಾರಣ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ದೂರಿದ್ದಾರೆ.ಕಳೆದ ಒಂದು ತಿಂಗಳಿಂದ ನಿರಂತರ ಮಳೆ. ಪ್ರವಾಹ ಬರುತ್ತಿದ್ದರೂ ಜಲಾಶಯಗಳ ಸುರಕ್ಷತೆ ಪ್ರವಾಹ ಹಾನಿ ಬಗ್ಗೆ ಗಂಭೀರ ಚಿಂತನೆ ನಡೆಸದೆ ಸರ್ಕಾರ ನಿರ್ಲಕ್ಷ್ಯ ತಾಳಿದೆ. ಇದು ನೀರಾವರಿ ಸಚಿವ ಡಿ ಕೆ ಶಿವಕುಮಾರ್ ಬೇಜವಾಬ್ದಾರಿತನ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಉತ್ತರ ಕರ್ನಾಟಕದ 4-5 ಜಿಲ್ಲೆಗಳ 22 ಲಕ್ಷ ಎಕ್ಟರ್ ನಲ್ಲಿ ಭತ್ತ ಬೆಳೆಯುತ್ತಿದ್ದ ರೈತರ ಬದುಕು ನಾಶವಾಗಲು ಕಾರಣವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ 70 ವರ್ಷಗಳ ಹಳೆಯದಾದ ಗೇಟ್‌ಗಳನ್ನು ಬದಲಾಯಿಸಬೇಕು ಈ ಬಗ್ಗೆ ನಿಗಾ ವಹಿಸುವಂತೆ ಒತ್ತಾಯ ಮಾಡುತ್ತಿದ್ದರೂ ನಿರ್ಲಕ್ಷ್ಯ ಮಾಡಿದ ನೀರಾ...