Sunday, May 3

ಪ್ರಮುಖ ಸುದ್ದಿ

ಬರಿಗಾಲಲ್ಲಿ ‘ಮೈಸೂರ್ ಚಲೋ’; BJP-JDS ಪಾದಯಾತ್ರೆಯಲ್ಲಿ ಗಮನಸೆಳೆದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ

ಬರಿಗಾಲಲ್ಲಿ ‘ಮೈಸೂರ್ ಚಲೋ’; BJP-JDS ಪಾದಯಾತ್ರೆಯಲ್ಲಿ ಗಮನಸೆಳೆದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ

ಪ್ರಮುಖ ಸುದ್ದಿ, ರಾಜ್ಯ
ಮೈಸೂರು: ಸದಾ ಒಂದಿಲ್ಲೊಂದು ನಡೆಯಿಂದ ಸಾರ್ವಜನಿಕರ ಗಮನಕೇಂದ್ರೀಕರಿಸುತ್ತಿರುವ ಬೈಂದೂರು ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ ಈ ಬಾರಿಯ ಮೈಸೂರು ಚಲೋ ಪಾದಯಾತ್ರೆಯಲ್ಲಿ ಕೂಡಾ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.ಸರಳತೆಗೆ ಹೆಸರಾಗಿರುವ ಉಡುಪಿ ಜಿಲ್ಲೆಯ ಈ ಶಾಸಕ ಪಕ್ಷದ ನಾಯಕರು-ಸೇನಾನಿಗಳ ಜೊತೆ ಶಾಸಕ ಗುರುರಾಜ್ ಗಂಟಿಹೊಳೆ ಮೈಸೂರು ಚಲೋ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಪಾದಯಾತ್ರೆಯುದ್ದಕ್ಕೂ ಬರಿಗಾಲಲ್ಲೇ ತೆರಳಿದ್ದು ವಿಶೇಷ.ಮೂಡ ಹಗರಣ ಮತ್ತು ವಾಲ್ಮೀಕಿ ಹಗರಣ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಮೈಸೂರ್ ಚಲೋ ಪಾದಯಾತ್ರೆ ನಡೆಯಿತು. ರಾಜ್ಯ ಬಿಜೆಪಿ ನಾಯಕರೆಲ್ಲರೂ ಭಾಗಿಯಾಗಿ ಪಾದಯಾತ್ರೆ ಯಶಸ್ವಿಗೊಳಿಸಿದರು.8 ದಿನಗಳ ಪಾದಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆಗೆ ಇಡೀ ರಾಜ್ಯದ ಗಮನ ಸೆಳೆದಿದ್ದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ.ಭ್ರಷ್ಟಾಚಾರ ನಡೆಸುವುದನ್ನೇ ಆಡಳಿತ ಎಂದುಕೊಂಡಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಾರ್ಯಕರ್ತರ ಒಗ್ಗಟ್ಟು ಮತ್ತಷ್ಟು ಬಲಗೊಳ್ಳುತ್ತಿದೆ.#MysuruChalo #BJPJDSPadayatre #ScamSarkara #ಪಾದಯಾತ...
ಕನ್ನಡಿಗರ ಮೀಸಲಾತಿ ವಿರುದ್ದದ PIL; ಗರ್ಭಿಣಿ ಬಗ್ಗೆ ಮಾನವೀಯತೆ ತೋರಿದ ಹೈಕೋರ್ಟ್ ಜಡ್ಜ್

ಕನ್ನಡಿಗರ ಮೀಸಲಾತಿ ವಿರುದ್ದದ PIL; ಗರ್ಭಿಣಿ ಬಗ್ಗೆ ಮಾನವೀಯತೆ ತೋರಿದ ಹೈಕೋರ್ಟ್ ಜಡ್ಜ್

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಧೇಯಕದ ವಿರುದ್ಧದ ಧಾವೆ ವಿಚಾರದಲ್ಲಿ ಕರ್ನಾಟಕ ಹೈ ಕೋರ್ಟ್ ಪೀಠದ ಆದೇಶ ಇಡೀ ದೇಶದ ಗಮನಸೆಳೆದಿದೆ.ಈ ವಿಧೇಯಕ ಬಂದ್ರೆ ಆಕೆಗೆ ಕೆಲ್ಸ ಹೋಗುತ್ತೆ ಅಂತ PIL ಹಾಕಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್, ಇದು PIL ಅಲ್ಲ ಪರ್ಸನಲ್ ಅಜೆಂಡ ಇಟ್ಟು ಹಾಕಿರೋ ಪಿಟಿಷನ್ ಎಂದಿತು. ಕೋರ್ಟ್ ಸಮಯ ಹಾಳು ಮಾಡಿದ್ದಕ್ಕೇ 5000 ದಂಡ ಹಾಕಲು ನ್ಯಾಯಮೂರ್ತಿಗಳು ಮುಂದಾದರು.ಈ ಸಂದರ್ಭದಲ್ಲಿ ಗಲಿಬಿಲಿಗೊಂಡ ಮಹಿಳೆಯ ಪರ ವಕೀಲರು 'ಅರ್ಜಿದಾರರು ಪ್ರೆಗ್ನೆಂಟ್ ಲೇಡಿ ಆಕೆ ಬಳಿ ಹಣ ಇಲ್ಲ' ಎಂದು ವಾದಿಸಿದರು. ಈ ವೇಳೆ ಕೋರ್ಟ್ 'ಇಲ್ಲಿ ಎಮೋಷನ್ಸ್ ವರ್ಕ್ ಆಗೋಲ್ಲ, ಎಂದು ಹೇಳಿದೆಯಾದರೂ, ಕೊನೆಗೆ ಫೈನ್ ಬೇಡ ಅಂತ ಹೇಳಿ ಎಚ್ಚರಿಕೆ ನೀಡಿತು.ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಧೇಯಕದ ವಿರುದ್ಧ ಹೈ ಕೋರ್ಟ್ ಮೆಟ್ಟಿಲು ಏರಿದ್ದ ಮಹಿಳೆ. ಈ ವಿಧೇಯಕ ಬಂದ್ರೆ ಆಕೆಗೆ ಕೆಲ್ಸ ಹೋಗುತ್ತೆ ಅಂತ PIL ಹಾಕಿದ್ದರು.ಅದನ್ನ ಅರಿತ ಜಡ್ಜ್ ಇದು PIL ಅಲ್ಲ ಪರ್ಸನಲ್ ಅಜೆಂಡ ಇಟ್ಟು ಹಾಕಿರೋ ಪಿಟಿಷನ್ ಅಂತ ಕೋರ್ಟ್ ಸಮಯ ಹಾಳು ಮಾಡಿದ್ದಕ್ಕೇ 5000 ದ...
ಭಾರೀ ಮಳೆ, ಭೂಕುಸಿತ: ಹಿಮಾಚಲದಲ್ಲಿ 120 ರಸ್ತೆಗಳು ಬಂದ್

ಭಾರೀ ಮಳೆ, ಭೂಕುಸಿತ: ಹಿಮಾಚಲದಲ್ಲಿ 120 ರಸ್ತೆಗಳು ಬಂದ್

ದೇಶ-ವಿದೇಶ, ಪ್ರಮುಖ ಸುದ್ದಿ
ಶಿಮ್ಲಾ: ಉತ್ತರ ಹಾಗೂ ಈಶಾನ್ಯ ರಾಜ್ಯಗಳಲ್ಲೂ ಮುಂಗಾರು ಮಳೆ ಅವಾಂತರಗಳನ್ನು ಸೃಷ್ಟಿಸಿದೆ.ಭಾರೀ ಮಳೆಗೆ ತತ್ತರಿಸಿರುವ ಹಿಮಾಚಲ ಪ್ರದೇಶದಲ್ಲಿ ಸರಣಿ ಭೂಕುಸಿತದ ಘಟನೆಗಳು ಸಂಭವಿಸಿವೆ.ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಭೂಕುಸಿತದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಸುಮಾರು 120 ರಸ್ತೆಗಳು ಬಂದ್ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿಯಲ್ಲಿ ಕ್ರಾಂತಿಗೆ ಮೋದಿ ಮುನ್ನುಡಿ; ಬರೋಬ್ಬರಿ 109 ತಳಿಗಳ ಬಿಡುಗಡೆ

ಕೃಷಿಯಲ್ಲಿ ಕ್ರಾಂತಿಗೆ ಮೋದಿ ಮುನ್ನುಡಿ; ಬರೋಬ್ಬರಿ 109 ತಳಿಗಳ ಬಿಡುಗಡೆ

ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಮೂರನೇ ಬಾರಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ, ಕೃಷಿ ಕ್ಷೇತ್ರದಲ್ಲಿ ಹೊಸ ಮನ್ವಂತಕ್ಕೆ ಮುನ್ನುಡಿ ಬರೆದಿದ್ದಾರೆ. ಮುಂಗಾರು ಆರಂಭದಲ್ಲಿ ಅವರು, ರೈತರಿಗೆ ಅಧಿಕ ಆದಾಯ ತರಬಲ್ಲ ಹೊಸ ತಳಿಗಳನ್ನು ಬಿಡುಗಡೆ ಮಾಡಲಿದ್ದಾರೆ.27 ತೋಟಗಾರಿಕಾ ಬೆಳೆಗಳು, 34 ಕ್ಷೇತ್ರ ಬೆಳೆಗಳು ಮತ್ತು 61 ಬೆಳೆಗಳು ಸೇರಿ ಒಟ್ಟು 109 ತಳಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೃಷಿ ಸಚಿವಾಲಯದ ಮೂಲಗಳು ತಿಳಿಸಿವೆ.ಅಧಿಕ ಇಳುವರಿ, ಹವಾಮಾನಕ್ಕೆ ಹೊಂದಿಕೊಳ್ಳುವ ಮತ್ತು ಜೈವಿಕ ಬಲವರ್ಧಿತ ಬೆಳೆಗಳ 109 ತಳಿಗಳನ್ನು ಪ್ರಧಾನಿ ಭಾನುವಾರ ದೆಹಲಿಯಲ್ಲಿರುವ ಭಾರತೀಯ ಕೃಷಿ ಸಂಶೋಧನ ಸಂಸ್ಥೆಯಲ್ಲಿ ಭಾನುವಾರ ಬೆಳೆಗಳ ತಳಿಗಳನ್ನು ಬಿಡುಗಡೆ ಮಾಡಲಿದ್ದಾರೆ.ಪ್ರಮುಖ ಕ್ಷೇತ್ರ ಬೆಳೆಗಳು (ಸಿರಿಧಾನ್ಯ ಹಾಗೂ ವಿವಿಧ ಧಾನ್ಯಗಳು):ಎಣ್ಣೆ ಬೀಜಗಳು, ದ್ವಿದಳ ಧಾನ್ಯ, ಗೋಧಿ, ಭತ್ತ, ಕಬ್ಬು, ಹತ್ತಿ, ಮೇವು ಬೆಳೆ, ಹಾಗೂ ಇತರ ಬೆಳೆಗಳುಪ್ರಮುಖ ತೋಟಗಾರಿಕಾ ಬೆಳೆಗಳು: ವಿವಿಧ ಹಣ್ಣುಗಳು, ತರಕಾರಿ, ಗೆಡ್ಡೆ, ಮಸಾಲೆ ಬೆಳೆಗಳು, ಹೂವುಗಳು, ಗಿಡಮೂಲಿಕೆಗಳು...
ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ’: ಕೈ ನಾಯಕರ ವಿರುದ್ದ ತೊಡೆ ತಟ್ಟಿದ ಬಿಎಸ್‌ವೈ

ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ’: ಕೈ ನಾಯಕರ ವಿರುದ್ದ ತೊಡೆ ತಟ್ಟಿದ ಬಿಎಸ್‌ವೈ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಮೈಸೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ವಿರಮಿಸಲ್ಲ ಎಂದಿರುವ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ, ತಾಕತ್ತಿದ್ದರೇ ವಿಧಾನಸಭೆ ವಿಸರ್ಜಿಸಿ, ಚುನಾವಣೆಗೆ ಹೋಗೋಣ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.ಮೈಸೂರು ಚಲೋ ಪಾದಯಾತ್ರೆ ಯ ಸಮಾರೋಪ ಸಂದರ್ಭದಲ್ಲಿ ಮಾತನಾಡಿರುವ ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯನವರೇ, ನನ್ನ ಬದುಕಿನ ಕೊನೆಯುಸಿರು ಇರುವವರೆಗೆ ರಾಜಕೀಯದಲ್ಲಿದ್ದು, ನಿಮ್ಮನ್ನು ಮನೆಗೆ ಕಳುಹಿಸವರೆಗೂ ಹೋರಾಟ ಮಾಡುತ್ತೇನೆ ಎಂದರು.ಸಿಎಂ ಸಿದ್ದರಾಮಯ್ಯನವರೇ, ನನ್ನ ಬದುಕಿನ ಕೊನೆಯುಸಿರು ಇರುವವರೆಗೆ ರಾಜಕೀಯದಲ್ಲಿದ್ದು, ನಿಮ್ಮನ್ನು ಮನೆಗೆ ಕಳುಹಿಸವರೆಗೂ ಹೋರಾಟ ಮಾಡುತ್ತೇನೆ. ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರಕ್ಕೆ ರಾಜ್ಯದ ಜನರು ಬೇಸತ್ತಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರೇ ನಿಮ್ಮ ಪಾಪದ ಕೊಡ ತುಂಬಿದೆ. ಇನ್ನೊಬ್ಬರ ಕುರಿತು ಹಗುರವಾಗಿ ಮಾತನಾಡುವುದು ಬಿಟ್ಟು,… pic.twitter.com/NMsTzVodLX — BJP Karnataka (@BJP4Karnataka) August 10, 2024   ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರಕ್ಕೆ ರಾಜ್ಯದ ಜನರು ಬೇಸತ್ತಿದ್ದಾ...
ಸಾಯಿ ವೆಂಕಟೇಶ್ವರ ಕಂಪೆನಿಗೆ ಗಣಿ ಗುತ್ತಿಗೆ ಆರೋಪ; ಹೆಚ್ಡಿಕೆ ರಾಜೀನಾಮೆ ಯಾವಾಗ ಎಂದು ಕಾಂಗ್ರೆಸ್ ಪ್ರಶ್ನೆ

ಸಾಯಿ ವೆಂಕಟೇಶ್ವರ ಕಂಪೆನಿಗೆ ಗಣಿ ಗುತ್ತಿಗೆ ಆರೋಪ; ಹೆಚ್ಡಿಕೆ ರಾಜೀನಾಮೆ ಯಾವಾಗ ಎಂದು ಕಾಂಗ್ರೆಸ್ ಪ್ರಶ್ನೆ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಸಾಯಿ ವೆಂಕಟೇಶ್ವರ ಕಂಪೆನಿಗೆ ಕಾನೂನುಬಾಹಿರವಾಗಿ ತಾವು ಗಣಿ ಗುತ್ತಿಗೆ ನೀಡಿದ ಆರೋಪದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ರಾಜೀನಾಮೆ ಯಾವಾಗ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.ಲೋಕಾಯುಕ್ತ ಅಧಿಕಾರಿಗಳು ಮಾಜಿ ಸಿಎಂ ವಿರುದ್ದ ರಾಜ್ಯಪಾಲರಿಂದ ಪ್ರಾಸಿಕ್ಯೂಶನ್ ಅನುಮತಿಗಾಗಿ ಕಾಯುತ್ತಿದ್ದಾರೆ ಎಂಬ ಸಂಗತಿ ಬಯಲಿಗೆ ಬರುತ್ತಿದ್ದಂತೆಯೇ ತಮ್ಮಿಂದ ಯಾವುದೇ ಅಕ್ರಮ ನಡೆದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡದ್ದಾರೆ. ತಾವು ಶಿಫಾರಸು ಮಾಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿರುವುದು ಎಂದು ಸ್ಪಷ್ಟನೆ ನೀಡಿದ್ದರು. ಈ ಸ್ಪಷ್ಟನೆಯನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷವು ಹೆಚ್ಡಿಕೆ ಅವರನ್ನು ತರಾಟೆಗೆ ತೆಗೆದುಕೊಂಡಿದೆ.“ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ ಬಂದು ಎದೆ ಮೇಲೆ ಒದ್ದನಂತೆ“ ಎನ್ನುವ ಆಡು ಮಾತಿನಂತೆ 420ಕುಮಾರ ಅವರು ತಮ್ಮ ಹುಳುಕು ಹೊರಬಿದ್ದಾಗ ಎಗರಿ ಬೀಳುತ್ತಿದ್ದಾರೆ!@hd_kumaraswamy ಅವರೇ, ಸಾಯಿ ವೆಂಕಟೇಶ್ವರ ಕಂಪೆನಿಗೆ ಕಾನೂನುಬಾಹಿರವಾಗಿ ತಾವು ಗಣಿ ಗುತ್ತಿಗೆ ನೀಡಿದ್ದು ಏಕೆ? ನಿಮ್ಮ ಈ ಹಗರಣದ ಬಗ್ಗೆ ನಿಮ್ಮ ದೋಸ್ತಿ ನಾಯಕರಾದ… pic.twitter.com/RtNk7lk...
KSRTCಗೆ ಟಿವಿ-9 ನೆಟ್ವರ್ಕ್‌‌ನ ‘ದೇಶದ ಲೀಡರ್ಸ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಪ್ರಶಸ್ತಿ’

KSRTCಗೆ ಟಿವಿ-9 ನೆಟ್ವರ್ಕ್‌‌ನ ‘ದೇಶದ ಲೀಡರ್ಸ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಪ್ರಶಸ್ತಿ’

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಪಾಲಿಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದೆ. ಕೆಎಸ್ಸಾರ್ಟಿಸಿಗೆ ಟಿವಿ-9 ನೆಟ್ವರ್ಕ್‌ ನ 'ದೇಶದ ಲೀಡರ್ಸ್ ಆಫ್ ರೋಡ್ ಟ್ರಾನ್ಸಪೋರ್ಟ್ ಪ್ರಶಸ್ತಿ-2024' ಲಭಿಸಿದೆ.ನಿಗಮವು ಕೈಗೊಂಡಿರುವ ಬ್ರ್ಯಾಂಡಿಂಗ್ ಹಾಗೂ ಮಾನವ ಸಂಪನ್ಮೂಲ ಉಪಕ್ರಮಗಳಿಗಾಗಿ “ಟಿವಿ-9 ನೆಟ್ವರ್ಕ ಲೀಡರ್ಸ್ ಆಫ್ ರೋಡ್ ಟ್ರಾನ್ಸಪೋರ್ಟ್ 2024ರ ಪ್ರಶಸ್ತಿಯು 'ವರ್ಷದ ದೇಶದ ಅತ್ಯುತ್ತಮ ಸಂಸ್ಥೆ' ವರ್ಗದಲ್ಲಿ ಲಭಿಸಿದೆ.ನವದೆಹಲಿಯ 'ದ ಇಂಪೀರಿಯಲ್ ಜನಪತ್ ಲೇನ್, ಜನಪತ್'ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ರಾಜ್ಯ ಸಚಿವರಾದ ಹರ್ಷ್ ಮಲೋತ್ರ ಅವರು, KSRTC ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿ, ಅಧಿಕಾರಿಗಳನ್ನು ಅಭಿನಂದಿಸಿದರು. ಕೆಎಸ್ಸಾರ್ಟಿಸಿ ನಿರ್ದೇಶಕರಾದ (ಸಿಬ್ಬಂದಿ ಮತ್ತು ಜಾಗೃತ) ಡಾ. ಕೆ.ನಂದಿನಿದೇವಿ ಅವರು ಪ್ರಶಸ್ತಿ ಸ್ವೀಕರಿಸಿದರು....
ಮುಂದುವರಿದ ಭೂಕುಸಿತ; ಮಂಗಳೂರು-ಬೆಂಗಳೂರು ರೈಲು ಸಂಚಾರ ಮತ್ತೆ ಸ್ಥಗಿತ

ಮುಂದುವರಿದ ಭೂಕುಸಿತ; ಮಂಗಳೂರು-ಬೆಂಗಳೂರು ರೈಲು ಸಂಚಾರ ಮತ್ತೆ ಸ್ಥಗಿತ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಮಂಗಳೂರು: ಕರಾವಳಿ ಮಲೆನಾಡಿನಲ್ಲಿ ಮುಂಗಾರು ಮಳೆ ಅವಾಂತರ ಸೃಷ್ಟಿಸಿದ್ದು ಭೂಕುಸಿತದ ಘಟನೆಗಳು ಮರುಕಳಿಸುತ್ತಲೇ ಇವೆ. ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಮತ್ತೆ ಭೂಕುಸಿತವಾಗಿದ್ದು ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದೆ.ಬಾಳ್ಳುಪೇಟೆ ಹಾಗೂ ಸಕಲೇಶಪುರ ಮಧ್ಯೆ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಶುಕ್ರವಾರ ಬೆಂಗಳೂರಿನಿಂದ ಹೊರಟಿದ್ದ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲು ಮತ್ತು ಬೆಂಗಳೂರು-ಮರ್ಡೇಶ್ವರ ಎಕ್ಸ್‌ಪ್ರೆಸ್ ರೈಲು ಆಲೂರು ಹಾಗೂ ಹಾಸನದಲ್ಲಿ ಸ್ಥಗಿತಗೊಂಡಿದೆ. ಭೂಕುಸಿತದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ....
ಬ್ರೆಜಿಲ್ ವಿಮಾನ ದುರಂತ; 62 ಮಂದಿ ಸಾವು; ವಿಮಾನ ಪತನದ ವೀಡಿಯೋ ವೈರಲ್

ಬ್ರೆಜಿಲ್ ವಿಮಾನ ದುರಂತ; 62 ಮಂದಿ ಸಾವು; ವಿಮಾನ ಪತನದ ವೀಡಿಯೋ ವೈರಲ್

ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಸಾವೊ ಪೌಲೋ: ಬ್ರೆಜಿಲ್‌ನ ಸಾವೊ ಪಾಲೊ ಬಳಿ ಟರ್ಬೊಪ್ರೊಪ್ ವಿಮಾನ ಪತನಗೊಂಡಿದ್ದು ಅದರಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿ 62 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಈ ದುರಂತ ಸಂಭವಿಸಿದೆ.The crash occurred in the Capela neighborhood in Vinhedo (San Paulo). According to the Sao Paulo Fire Department, seven teams are on site. Initial information is that it was a twin-engine passenger plane, model ATR-72, that left Cascavel bound for Guarulhos. According to the… pic.twitter.com/B1mlKXTwEG— Sputnik (@SputnikInt) August 9, 2024 ಕ್ಯಾಸ್ಕಾವೆಲ್‌ನಿಂದ ಸಾವೊ ಪೌಲೋನತ್ತ ಈ ವಿಮಾನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಸಾವೊ ಪಾಲೊದಿಂದ ಸುಮಾರು 50 ಮೈಲು ದೂರದಲ್ಲಿರುವ ವಿನ್ಹೆಡೊ ಪಟ್ಟಣದಲ್ಲಿ ಪತನಗೊಂಡಿದೆ. ಬಾನೆತ್ತರದಲ್ಲಿ ವಿಮಾನ ಪತನಗೊಂಡ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.The crash occurred in the Capela neighbo...
ಕೇಂದ್ರದ ಅನುದಾನಕ್ಕಾಗಿ BJP-JDS ಪಾದಯಾತ್ರೆ ನಡೆಸಿದ್ದರೆ ರಾಜ್ಯಕ್ಕೆ ಒಳಿತಾಗುತ್ತಿತ್ತು..!

ಕೇಂದ್ರದ ಅನುದಾನಕ್ಕಾಗಿ BJP-JDS ಪಾದಯಾತ್ರೆ ನಡೆಸಿದ್ದರೆ ರಾಜ್ಯಕ್ಕೆ ಒಳಿತಾಗುತ್ತಿತ್ತು..!

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಹಿಂದೆ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದ ಬಿಜೆಪಿ-ಜೆಡಿಎಸ್ ನಾಯಕರು ಇದೀಗ ಪಾದಯಾತ್ರೆ ರಾಜಕಾರಣ ಮಾಡುತ್ತಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಇವರ ಜಂಟಿ ಹೋರಾಟ ಕೇಂದ್ರದಿಂದ ಅನುದಾನ ತರುವ ವಿಚಾರಕ್ಕೆ ನಡೆದಿದ್ದರೆ ರಾಜ್ಯಕ್ಕೆ ಒಳಿತಾಗುತ್ತಿತ್ತು ಎಂದು ಪ್ರತಿಪಾದಿಸಿದ್ದಾರೆ.‌ಬಿಜೆಪಿ-ಜೆಡಿಎಸ್ ಈ ಹಿಂದೆ ಹಾವು ಮುಂಗುಸಿಯ ಹಾಗೆ ಕಿತ್ತಾಡುತ್ತಿದ್ದರು, ಈಗ ಅಧಿಕಾರಕ್ಕಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿರುವ ಅವರು ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಸಂಸತ್ತಿನಲ್ಲೂ ಮಾತನಾಡುವುದಿಲ್ಲ, ಹೊರಗಡೆಯೂ ಮಾತನಾಡುವುದಿಲ್ಲ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಬಿಜೆಪಿ-ಜೆಡಿಎಸ್ ಈ ಹಿಂದೆ ಹಾವು ಮುಂಗುಸಿಯ ಹಾಗೆ ಕಿತ್ತಾಡುತ್ತಿದ್ದರು, ಈಗ ಅಧಿಕಾರಕ್ಕಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ.ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಸಂಸತ್ತಿನಲ್ಲೂ ಮಾತನಾಡುವುದಿಲ್ಲ, ಹೊರಗಡೆಯೂ ಮಾತನಾಡುವುದಿಲ್ಲ.ಈ...