Friday, May 1

Others

ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂ.ಗೌರವಧನ, ಪೋರ್ಟಲ್ ಸುಧಾರಣೆ, ಆಶಾ ಕಾರ್ಯವನ್ನು ಅಭಿನಂದಿಸಿದ ಸಿಎಂ

ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂ.ಗೌರವಧನ, ಪೋರ್ಟಲ್ ಸುಧಾರಣೆ, ಆಶಾ ಕಾರ್ಯವನ್ನು ಅಭಿನಂದಿಸಿದ ಸಿಎಂ

Others
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶಾ ಕಾರ್ಯಕರ್ತೆಯರ ಸೇವೆಯನ್ನು ಪ್ರಶಂಸಿಸಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಮಾಹೆಯಾನ 10 ಸಾವಿರ ರೂ.ಗಳ ಗೌರವಧನವನ್ನು ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ನೀಡಲು ಸರ್ಕಾರ ಒಪ್ಪಿದೆ ಎಂದವರು ತಿಳಿಸಿದ್ದಾರೆ.ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು 5000 ರೂ ಹಾಗೂ ಕೇಂದ್ರ ಸರ್ಕಾರದ 34 ಸೇವೆಗಳಿಗೆ ನೀಡುವ ಗೌರವಧನ ಸೇರಿ ಒಟ್ಟು 10 ಸಾವಿರ ರೂ.ಗಳನ್ನು ತಿಂಗಳಿಗೆ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ. ಪೋರ್ಟಲ್ ಸುಧಾರಣೆಗೆ ಸೂಚನೆ: ಮಾಹಿತಿಯನ್ನು ಪೋರ್ಟಲ್ ನಲ್ಲಿ ನಮೂದು ಮಾಡುವುದು ಕಷ್ಟ ಸಾಧ್ಯವಾಗಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಾಗ ಪೋರ್ಟಲ್ ಸುಧಾರಣೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಗೌರವಧನ ನಿಲ್ಲಿಸದೆ ರಜೆ: ಆಶಾ ಕಾರ್ಯಕರ್ತೆಯರ ಆರೋಗ್ಯ ಕೆಟ್ಟರೆ ಪ್ರತಿ ತಿಂಗಳು ಸಿಗುವ ರಜೆ ಕ್ರೋಡೀಕರಿಸಿ, ಗರಿಷ್ಠ ಮೂರು ತಿಂಗಳವರೆಗೆ ಗೌರವ ಧನ ನಿಲ್ಲಿಸದೆ ರಜೆ ಮಂಜೂರು ಮಾಡಲು ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.ಆಯವ್ಯಯ ಪೂರ್ವಭಾವಿ ಸಭೆ ನಡೆಸುವಾಗ ಆಶಾ ಕಾರ್ಯಕರ್ತೆಯರೊಂದಿಗೂ ಸಭೆ...
ಕೋವಿಡ್‌ ಹಗರಣ: ಬಿಎಸ್‌ವೈ, ಶ್ರೀರಾಮುಲು ಬಗ್ಗೆ ತನಿಖೆಗೆ ಆಯೋಗ ಶಿಫಾರಸು; ಹೆಣ ಇಟ್ಟು ಹಣ ಮಾಡಿದ ಬಿಜೆಪಿ ನಾಯಕರು ಎಂದ ರಮೇಶ್ ಬಾಬು

ಕೋವಿಡ್‌ ಹಗರಣ: ಬಿಎಸ್‌ವೈ, ಶ್ರೀರಾಮುಲು ಬಗ್ಗೆ ತನಿಖೆಗೆ ಆಯೋಗ ಶಿಫಾರಸು; ಹೆಣ ಇಟ್ಟು ಹಣ ಮಾಡಿದ ಬಿಜೆಪಿ ನಾಯಕರು ಎಂದ ರಮೇಶ್ ಬಾಬು

Others
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭ ಕೋವಿಡ್‌ 19 ಚಿಕಿತ್ಸೆ ಹಾಗೂ ನಿರ್ವಹಣೆ ಹೆಸರಿನಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿ ಕುನ್ಹಾ ಅವರ ನೇತೃತ್ವದಲ್ಲಿ ರಚಿಸಿದ್ದ ಆಯೋಗವು ಹಿಂದಿನ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಆಗಿನ ಆರೋಗ್ಯ ಸಚಿವರನ್ನು ತನಿಖೆ ನಡೆಸಲು ಶಿಫಾರಸ್ಸು ಮಾಡಿದೆ. ಏಪ್ರಿಲ್‌ 2020ರಲ್ಲಿ ಚೀನಾದ ಎರಡು ಕಂಪನಿಗಳಿಂದ 3 ಲಕ್ಷ ಪಿಪಿಇ ಕಿಟ್‌ಗಳನ್ನು ಅತ್ಯಂತ ದುಬಾರಿ ದರಗಳಲ್ಲಿ ಖರೀದಿಸಿದ್ದಕ್ಕೆ ಯಾವುದೇ ನಿಖರವಾದ ಕಾರಣವಿಲ್ಲಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.ಪಿಪಿಇ ಕಿಟ್‌ ಖರೀದಿ ಪ್ರಕ್ರಿಯೆ ಸಂದರ್ಭ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು ಮತ್ತು ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದರು. 1988ರ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ವಿಶ್ವಾಸಾರ್ಹತೆ ಉಲ್ಲಂಘನೆ ಅಪರಾಧದ ಅನ್ವಯ ಸೆಕ್ಷನ್‌ 7 ಮತ್ತು 11ರ ಅಡಿ ತನಿಖೆ ನಡೆಸುವಂತೆ ಆಯೋಗವು ಶಿಫಾರಸು ಮಾಡಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದೆ ಎಂದು ಮೂಲಗಳು ತಿಳಿಸಿವೆ.ಆಗ...
‘ನಿಮ್ಮ ಸರ್ಕಾರದ ಅವಧಿಯಲ್ಲಿ ನೋಟೀಸ್ ಕೊಟ್ಟಾಗ ಇವರೆಲ್ಲಾ ಬೆಟ್ಟು ಚೀಪುತ್ತಿದ್ದರಾ?’; ಬಿಜೆಪಿ ನಾಯಕರ ‘ಲ್ಯಾಂಡ್ ಜಿಹಾದ್’ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಎದಿರೇಟು

‘ನಿಮ್ಮ ಸರ್ಕಾರದ ಅವಧಿಯಲ್ಲಿ ನೋಟೀಸ್ ಕೊಟ್ಟಾಗ ಇವರೆಲ್ಲಾ ಬೆಟ್ಟು ಚೀಪುತ್ತಿದ್ದರಾ?’; ಬಿಜೆಪಿ ನಾಯಕರ ‘ಲ್ಯಾಂಡ್ ಜಿಹಾದ್’ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಎದಿರೇಟು

Others
ಬೆಂಗಳೂರು: ಹಾವೇರಿ ರೈತನ ಹೆಸರಲ್ಲೂ ಬಿಜೆಪಿಯವರು ಈಗ ರಾಜಕೀಯ ಮಾಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ವಕ್ಫ್ ವಿವಾದ ಕುರಿತಂತೆ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳ ಬಗ್ಗೆ ಬೆಂಗಳೂರಿನಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಿಯಾಂಕ್ ಖರ್ಗೆ, ಲ್ಯಾಂಡ್ ಜಿಹಾದ್ ಎಂದು ಹೇಳುತ್ತಿದ್ದಾರಲ್ಲ. ಅವರು ಈಗಲೇ ಯಾಕೆ ಮಾತನಾಡುತ್ತಿದ್ದಾರೆ? ನಿಮ್ಮ ಸರ್ಕಾರದ ಅವಧಿಯಲ್ಲಿ ನೋಟೀಸ್ ಕೊಟ್ಟಾಗ ಇವರೆಲ್ಲಾ ಬೆಟ್ಟು ಚೀಪುತ್ತಿದ್ದರಾ? ಶಶಿಕಲಾ ಜೊಲ್ಲೆ ಅವರ 2021ರಲ್ಲಿ ನೀಡಿರುವ ಹೇಳಿಕೆಯಲ್ಲಿ, 'ಅನ್ವರ್ ಮಾನ್ಪಡಿ ವರದಿ ನೀಡಿದ್ದು, ವರದಿ ನೀಡಿ 9 ವರ್ಷವಾಗಿದ್ದರೂ ಯಾವುದೇ ಕ್ರಮವಾಗಿಲ್ಲ. ಅದಕ್ಕೆ ಅಂದಿನ ಸಿಎಂ ಯಡಿಯೂರಪ್ಪ ಅವರು ಹಾಗೂ ಅವರ ಕುಟುಂಬದವರು ಕಾಂಗ್ರೆಸ್ ನಾಯಕರೊಂದಿಗೆ ಶಾಮೀಲಾಗಿರುವುದೇ ಕಾರಣ ಎಂದು ಅನ್ವರ್ ಮಾನ್ಪಡೆ ಅವರು ಆರೋಪ ಮಾಡಿದ್ದಾರೆ' ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರ ಕುಟುಂಬ ಎಂದರೆ ಯಾರು, ಬಿಜ...
ಅಬಕಾರಿ ಲಂಚಾವತಾರ; ಸಚಿವ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಆಗ್ರಹ

ಅಬಕಾರಿ ಲಂಚಾವತಾರ; ಸಚಿವ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಆಗ್ರಹ

Others
ಬೆಂಗಳೂರು; ಅಬಕಾರಿ ಇಲಾಖೆಯಲ್ಲಿ 900 ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದು, ಇದನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ಸಚಿವ ಆರ್‌.ಬಿ.ತಿಮ್ಮಾಪುರ ರಾಜೀನಾಮೆ ನೀಡಬೇಕು. ಇದು ಹಣದ ಅವ್ಯವಹಾರವಾಗಿರುವುದರಿಂದ ಜಾರಿ ನಿರ್ದೇಶನಾಲಯ ಕೂಡ ಕ್ರಮ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಬೆಂಗಳೂರಿನಲ್ಲಿ ರೌಡಿಗಳು ಹಫ್ತಾ ವಸೂಲಿ ಮಾಡುತ್ತಿದ್ದರು. ಈಗ ರೌಡಿಗಳೇ ನಾಚುವಂತೆ ಅಬಕಾರಿ ಸಚಿವ ತಿಮ್ಮಾಪುರ ಅವರು ವಾರಕ್ಕೆ 18 ಕೋಟಿ ರೂ. ವಸೂಲಿ ಮಾಡುತ್ತಿದ್ದಾರೆ. ಅಂದರೆ ವರ್ಷಕ್ಕೆ ಸುಮಾರು 900 ಕೋಟಿ ರೂ. ಲಂಚ ಪಡೆಯಲಾಗುತ್ತಿದೆ. ಪ್ರತಿ ಹುದ್ದೆಯ ಅಧಿಕಾರಿಗಳಿಗೆ ಎಷ್ಟು ಲಂಚ ನೀಡಲಾಗುತ್ತಿದೆ ಎಂದು ಮದ್ಯ ಮಾರಾಟಗಾರರ ಸಂಘ ಪತ್ರದಲ್ಲಿ ವಿವರಿಸಿದೆ. ಮುಖ್ಯಮಂತ್ರಿ ಕಚೇರಿಯ ಅಧಿಕಾರಿ, ಪಿಎ, ಪಿಎಸ್‌ ಪಡೆಯುತ್ತಿರುವ ಲಂಚದ ಬಗ್ಗೆಯೂ ವಿವರವಿದೆ. ಸಮಬಾಳು ಸಮಪಾಲು ಎಂಬಂತೆ ಸಚಿವ ತಿಮ್ಮಾಪುರ ಎಲ್ಲರಿಗೂ ಲಂಚ ಹಂಚಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ 40 ಪರ್ಸೆಂಟ್‌ ಎಂದು ಆರೋಪ ಮಾಡಿದ್ದರೂ ಅದಕ್ಕೆ ಸೂಕ್ತ ದಾಖಲೆ ನೀಡಿಲ್ಲ. ...
‘KSRTCಯನ್ನು ಬಲಗೊಳಿಸಿದ ಸ್ತ್ರೀ ‘ಶಕ್ತಿ’ ನಿಲ್ಲಲ್ಲ.. ಸರ್ಕಾರದ ‘ಗ್ಯಾರೆಂಟಿ’ ಅಬಾಧಿತ

‘KSRTCಯನ್ನು ಬಲಗೊಳಿಸಿದ ಸ್ತ್ರೀ ‘ಶಕ್ತಿ’ ನಿಲ್ಲಲ್ಲ.. ಸರ್ಕಾರದ ‘ಗ್ಯಾರೆಂಟಿ’ ಅಬಾಧಿತ

Others
ಬೆಂಗಳೂರು: 'KSRTCಯನ್ನು ಬಲಗೊಳಿಸಿರುವ, ಸ್ತ್ರೀಯರ ಪಾಲಿಗೆ ಆಶಾಕಿರಣವಾಗಿರುವ 'ಶಕ್ತಿ' ಗ್ಯಾರೆಂಟಿ ನಿಲ್ಲಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತಂತೆ ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ.ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ 'ಶಕ್ತಿ' ಯೋಜನೆ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದಿರುವ ಡಿಕೆಶಿ, 'ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ತಿರುಚಲಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.ಐದು ಗ್ಯಾರಂಟಿ ಯೋಜನೆಗಳ ಪೈಕಿ ಯಾವುದೇ ಯೋಜನೆಯನ್ನೂ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರುತಮ್ಮ ಹೇಳಿಕೆ ಬಗ್ಗೆ ವ್ಯಾಪಕ ಚರ್ಚೆ, ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುದ್ದಿಗಾರಿಗೆ ಸ್ಪಷ್ಟನೆ ನೀಡಿದ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದರು.ಆರ್ಥಿಕವಾಗಿ ಸದೃಢವಾಗಿರುವವರನ್ನು ಉಲ್ಲೇಖಿಸಿದ್ದೆ. ಐಟಿಬಿಟಿ ಸಂಸ್ಥೆಯವರು, ಎಂಎನ್...
‘ಸಮೃದ್ಧ ಬೈಂದೂರು’: ಶಾಸಕ ಗುರುರಾಜ್ ಗಂಟಿಹೊಳೆ ಪರಿಕಲ್ಪನೆ.. ಹಳ್ಳಿ-ಹಳ್ಳಿಗಳಲ್ಲಿ ವೈದ್ಯಕೀಯ ಶಿಬಿರ

‘ಸಮೃದ್ಧ ಬೈಂದೂರು’: ಶಾಸಕ ಗುರುರಾಜ್ ಗಂಟಿಹೊಳೆ ಪರಿಕಲ್ಪನೆ.. ಹಳ್ಳಿ-ಹಳ್ಳಿಗಳಲ್ಲಿ ವೈದ್ಯಕೀಯ ಶಿಬಿರ

Others
ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರದ ಹಳ್ಳಿ ಪ್ರದೇಶವಾದ ಗಂಗಾನಾಡು, ಕ್ಯಾರ್ತುರು ಭಾಗದಲ್ಲಿ ವೈದ್ಯಕೀಯ ಶಿಬಿರ ನೆಡೆಸಿ ಫಲಾನುಭವಿಗಳಿಗೆ ಉಚಿತ ತಪಾಸಣೆ, ಚಿಕಿತ್ಸೆಯ ಜತೆಗೆ ಔಷಧ ವಿತರಿಸಲಾಯಿತು.ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು. ಜತೆಗೆ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ಇಂತಹ ಶಿಬಿರಗಳ ಪೂರ್ಣ ಉಪಯೋಗ ಪಡೆಯಬೇಕು. ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ ಹಲವು ಕಾಯಕ್ರಮ ನಡೆಸುತ್ತಿದ್ದೇವೆ ಎಂದರು.ಮುಂದೆಯೂ ಸತತವಾಗಿ ಪ್ರತೀ ತಿಂಗಳು ಸಮೃದ್ಧ ಬೈಂದೂರು ಹಳ್ಳಿ ಪ್ರದೇಶಗಳಲ್ಲಿ ಉಚಿತ ವೈದ್ಯಕೀಯ ಶಿಭಿರ ನೆಡೆಸಾಲಿದೆ ಹಳ್ಳಿಪ್ರದೇಶದ ಪ್ರತೀ ಗ್ರಾಮಸ್ಥರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ವೈದ್ಯಧಿಕಾರಿಗಳು ಮತ್ತು ಶಾಸಕರು ಸಾರ್ವಜನಿಕರೆ ಕರೆ ನೀಡಿದರು.ಸಮೃದ್ಧ ಬೈಂದೂರು ಟ್ರಸ್ಟ್‌ ಅಧ್ಯಕ್ಷರಾದ ಎಸ್.ಸುರೇಶ್ ಶೆಟ್ಟಿ, ಗಂಗನಾಡು ಶಾಲಾ ಮುಖ್ಯಶಿಕ್ಷಕರಾದ ಪ್ರಭಾಕರ್ ಬಿಲ್ಲವ, SDMC ಅಧ್ಯಕ್ಷರಾದ ರಾಜು ಮರಾಠಿ ಹಾಗೂ ತಾಲೂಕಿನ ಹಲವು ವೈದ್ಯರ ತಂಡ ಶಿಬಿರದಲ್ಲಿ...
ಲಂಡನ್‌ನ ಲ್ಯಾಂಬೆತ್ ಬಸವೇಶ್ವರ ಪ್ರತಿಮೆಗೆ ನಟಿ ಪೂಜಾಗಾಂಧಿ ದಂಪತಿ ಗೌರವ; ಮುಂಗಾರು ಮಳೆ ಬೆಡಗಿಗೆ ಸಾಗರೋತ್ತರ ಕನ್ನಡಿಗರ ಸನ್ಮಾನ

ಲಂಡನ್‌ನ ಲ್ಯಾಂಬೆತ್ ಬಸವೇಶ್ವರ ಪ್ರತಿಮೆಗೆ ನಟಿ ಪೂಜಾಗಾಂಧಿ ದಂಪತಿ ಗೌರವ; ಮುಂಗಾರು ಮಳೆ ಬೆಡಗಿಗೆ ಸಾಗರೋತ್ತರ ಕನ್ನಡಿಗರ ಸನ್ಮಾನ

Others
ಲಂಡನ್: ಸ್ಯಾಂಡಲ್‌ವುಡ್ ನಟಿ ಪೂಜಾ ಗಾಂಧಿ ಮತ್ತು ವಿಜಯ ಘೋರ್ಪಡೆ ದಂಪತಿ ಲಂಡನ್‌ನಲ್ಲಿ ಶ್ರೀ ಬಸವೇಶ್ವರ ವಿಗ್ರಹ ಸ್ಥಳಕ್ಕೆ ಭೇಟಿ ಕನ್ನಡಿಗರ ಜೊತೆ ಸಮಾಲೋಚನೆ ನಡೆಸಿ ಗಮನಸೆಳೆದರು. ಬ್ರಿಟಿಷ್ ಇಂಡಿಯನ್ ಮತ್ತು ಕನ್ನಡ ಸಮುದಾಯದ ಸದಸ್ಯರು ಕೂಡ ಈ ಸಂದರ್ಭದಲ್ಲಿ ಭಾಗವಹಿಸಿದ್ದರು.ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಮತ್ತು ಯುಕೆ ಮೂಲದ ಬಸವ ಸಮಿತಿ ಸಂಯುಕ್ತವಾಗಿ ಆಯೋಜಿಸಿ ಕಾರ್ಯಕ್ರಮದಲ್ಲಿ ನಟಿ ಪೂಜಾ ಗಾಂಧಿ ದಂಪತಿ ಭಾಗವಹಿಸಿದರು. UK ಕನ್ನಡ ಬಳಗ ಮತ್ತು ಕನ್ನಡಿಗರು UK ಸಂಸ್ಥೆಗಳೂ ಈ ಕಾರ್ಯಕ್ರಮದಲ್ಲಿ ಮಹತ್ವದ ಸಹಭಾಗಿಗಳಾಗಿದ್ದವು.ಲ್ಯಾಂಬೆತ್‌ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರು ಪೂಜಾ ಗಾಂಧಿ ದಂಪತಿಯನ್ನು ಅಭಿನಂದಿಸಿದರು. 'ಕನ್ನಡಿಗರು UK' ಅಧ್ಯಕ್ಷ ಗಣಪತಿ ಭಟ್, ಯುಕೆ ಮೂಲದ ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿಜಿತ್ ಸಲೀಮತ್, ಮಿರ್ಗಿ ರಂಗನಾಥ್ ಮತ್ತು ಶರಣ್ ಭೇಮಳ್ಳಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಸಾಮಾಜಿಕ ಹರಿಕಾರ ಜಗಜ್ಯೋತಿ ಬಸವೇಶ್ವರರಿಗೆ ಗೌರವ ಸಮರ್ಪಿಸಿದ ನಟಿ ಪೂಜಾ ಗಾಂಧಿ, 12ನೇ ಶತಮಾನದಲ್ಲಿ ಬಸವಣ್ಣನವರು ಮಾನವ ಹಕ್ಕುಗಳು, ಲಿಂಗ ಸಮಾನತ...
ಆಸ್ಮಾಕಂ ಸಂಸ್ಕೃತಂ; ಹನೂರಿನಲ್ಲಿ ಹೀಗೊಂದು ವಿಶೇಷ ಕಾರ್ಯಕ್ರಮ

ಆಸ್ಮಾಕಂ ಸಂಸ್ಕೃತಂ; ಹನೂರಿನಲ್ಲಿ ಹೀಗೊಂದು ವಿಶೇಷ ಕಾರ್ಯಕ್ರಮ

Others
ಚಾಮರಾಜನಗರ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಶ್ರೀ ಮಹದೇಶ್ವರ ಸಂಸ್ಕೃತ ಪಾಠಶಾಲೆ ಹೊಸಪಾಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಆಸ್ಮಕಂ ಸಂಸ್ಕೃತಂ ಕಾರ್ಯಕ್ರಮವನ್ನು ಬೈಲೂರಿನ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.ಬೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮಹದೇವಸ್ವಾಮಿ ಮಾತನಾಡಿ ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡುವುದರಿಂದ ಜ್ಞಾನ ಶಕ್ತಿ ಹೆಚ್ಚಿಸುತ್ತದೆ ಕಲಿಕೆಯ ದೃಷ್ಠಿಯಿಂದ ಅನುಕೂಲವಾಗುವುದು , ಸಂಸ್ಕಾರ ಸಂಸ್ಕೃತಿಗಳ ಬಗ್ಗೆ ಹೆಚ್ಚು ಅರಿವು ಮೂಡುತ್ತದೆ ಎಂದರು.ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕರಾದ ರವಿಕುಮಾರ್ ಮಾತನಾಡಿ ಯಾವುದೇ ಭಾಷೆಯಾದರೂ ಸಂವಹನದ ಮೂಲಕ ಬಳಕೆ ಮಾಡಿದಾಗ ಮಾತ್ರ ಆ ಭಾಷೆ ಬೆಳೆಯುತ್ತದೆ , ಸುಮಾರು 3000 ವರ್ಷಗಳ ಇತಿಹಾಸ ವನ್ನು ಸಂಸ್ಕೃತ ಭಾಷೆ ಹೊಂದಿದೆ ಸಂಸ್ಕೃತ ಭಾಷೆಯಲ್ಲಿ ವೇದ ಉಪನಿಷತ್ತುಗಳು, ಇತಿಹಾಸ ಪುರಾಣಗಳು ,ಅನೇಕ ಶಾಸ್ತ್ರಗಳು ರಚನೆಯಾಗಿದೆ. ಇಂದಿನ ವಿದ್ಯಾರ್ಥಿಗಳು ಸಂಸ್ಕೃತವನ್ನು ವೈಜ್ಞಾನಿಕ ದೃಷ್ಟಿಕೋನವಿಟ್ಟು ಅಧ್ಯಯನ ಮಾಡಿದರೆ ಆಧುನಿಕ ಭಾಷೆಯೊಂದಿಗೆ ಸಂವಹನ ಮೂಲಕ ಅಧ್ಯಯನಗ...
ಮಂಗಳೂರು: ದ್ವೀಪವನ್ನೇ ನುಂಗುತ್ತಿರುವ ಮರಳು ಮಾಫಿಯಾ! ಅಕ್ರಮ ದಂಧೆ ಬಗ್ಗೆ ಅಧಿಕಾರಿಗಳ ಮೌನವೇಕೆ? CSಗೆ ಪರಿಸರ ಹೋರಾಟಗಾರ ಆಲ್ವಿನ್ ದೂರು

ಮಂಗಳೂರು: ದ್ವೀಪವನ್ನೇ ನುಂಗುತ್ತಿರುವ ಮರಳು ಮಾಫಿಯಾ! ಅಕ್ರಮ ದಂಧೆ ಬಗ್ಗೆ ಅಧಿಕಾರಿಗಳ ಮೌನವೇಕೆ? CSಗೆ ಪರಿಸರ ಹೋರಾಟಗಾರ ಆಲ್ವಿನ್ ದೂರು

Others
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ತಾಂಡವವಾಡುತ್ತಿರುವ ಮರಳು ಮಾಫಿಯಾ ವಿರುದ್ಧ ರಣಕಹಳೆ ಮೊಳಗಿದೆ. ಮಂಗಳೂರು ಹೊರವಲಯದ 'ಉಳಿಯ' ದ್ವೀಪದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಸ್ಥಳೀಯರು ನಡೆಸುತ್ತಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡುತ್ತಿರುವಂತೆಯೇ, ಮರಳು ಮಾಫಿಯಾ ಜೊತೆ ಜಿಲ್ಲೆಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿದೆ. ಹಿರಿಯ ಪತ್ರಕರ್ತರೂ ಆದ ಪರಿಸರ ಹೋರಾಟಗಾರ ಆಲ್ವಿನ್ ಮೆಂಡೋನ್ಸಾ ಅವರು ಈ ದೂರನ್ನು ಸಲ್ಲಿಸಿದ್ದು, ಅಧಿಕಾರಿಗಳ ವಿರುದ್ಧವೇ ಆದ್ಯ ಕ್ರಮವಾಗಬೇಕಿದೆ ಎಂದು ಗಮನಸೆಳೆದಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯು ನದಿಯನ್ನು ಆವರಿಸಿಕೊಂಡಿರುವ ಪ್ರದೇಶವಾಗಿದೆ. ಕುಮಾರಧಾರ, ನೇತ್ರಾವತಿ, ಫಲ್ಗುಣಿ, ನಂದಿನಿ ಸಹಿತ ಹಲವಾರು ನದಿಗಳು ಕರಾವಳಿ ಜನರ ಜೀವನಾಡಿಯಾಗಿದ್ದು, ಇದೀಗ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಲಮೂಲಕ್ಕೆ ಸಂಚಕಾರ ಎದುರಾಗಿದೆ. ಕರ್ನಾಟಕ ಕರಾವಳಿಯ ದೊಡ್ಡ ನದಿಗಳಲ್ಲಿ ಒಂದಾಗಿರುವ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ವ್ಯಾಪಕ ಚರ್ಚೆಗಳು ನ...
ಸಿಎಂ ಸಹಿ ಫೋರ್ಜರಿ ಮಾಡಿರೋದು ಈ ಅಧಿಕಾರಿ? ರಾಜ್ಯಪಾಲರಿಗೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ದೂರು

ಸಿಎಂ ಸಹಿ ಫೋರ್ಜರಿ ಮಾಡಿರೋದು ಈ ಅಧಿಕಾರಿ? ರಾಜ್ಯಪಾಲರಿಗೆ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ದೂರು

Others
ಬೆಂಗಳೂರು: ಸಾವಿರಾರು ಕೋಟಿ ರೂ ಮೌಲ್ಯದ ಜಮೀನನ್ನು ಅಧಿಕಾರಿಗಳು ಮುಖ್ಯಮಂತ್ರಿ ಸಹಿ ಫೋರ್ಜರಿ ಮೂಲಕ ಡಿನೋಟಿಫೈ ಮಾಡಿದ್ದಾರೆ ಎಂಬ ಆರೋಪ ಬಗ್ಗೆ ಹೈಕೋರ್ಟ್ ಪರಿವೀಕ್ಷಣೆಯಲ್ಲಿ ಸಿಬಿಐ ತನಿಖೆಗೆ ನಿರ್ದೇಶನ ನೀಡಬೇಕೆಂದು ಕೋರಿ ಸಿಟಿಜನ್ ರೈಟ್ಸ್ ಫೌಂಡೇಶನ್ ರಾಜ್ಯಪಾಲರಿಗೆ ದೂರು ನೀಡಿದೆ.ಸಾರ್ವಜನಿರ ಸಮಸ್ಯೆಗಳಿಗೆ ಸ್ಪಂಧಿಸುತ್ತಾ, ಜನರ ಹಿತಾಸಕ್ತಿ ಸಂಬಂಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಕಾನೂನು ಹೋರಾಟ ನಡೆಸುತ್ತಾ ಸಾಮಾಜಿಕ ಹಿತಾಸಕ್ತಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ 'ಸಿಟಿಜನ್ ರೈಟ್ಸ್ ಫೌಂಡೇಷನ್', ಇದೀಗ ರಾಜ್ಯ ಸರ್ಕಾರದ ಅಧಿಕಾರಿಗಳು ಮುಖ್ಯಮಂತ್ರಿಯ ಸಹಿಯನ್ನು ಫೋರ್ಜರಿ ಮಾಡಿದ್ದಾರೆ ಎಂಬ ಆರೋಪ ಕುರಿತಂತೆ ತಮ್ಮ ಗಮನಸೆಳೆಯಲು ಬಯಸಿದ್ದು, ಈ ಬಗ್ಗೆ ಉನ್ನತಮಟ್ಟದ ತನಿಖೆಗೆ ನಿರ್ದೇಶಿಸಲು ಕೋರಿ ಮನವಿ ಸಲ್ಲಿಸಿದೆ.ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಯಿ ವೆಂಕಟೇಶ್ವರ ಮಿನರಲ್ಸ್'ಗೆ ಅಕ್ರಮವಾಗಿ ಗಣಿ ಗುತ್ತಿಗೆ ನೀಡಿರುವ ಆರೋಪಗಳು ಕೇಳಿಬಂದಿದ್ದು, ಈ ಪ್ರಕರಣದಲ್ಲಿ ತಮ್ಮ ತಪ್ಪಿಲ್ಲ ಎಂದು ...