Friday, May 1

Others

ಪರಪ್ಪನ ಅಗ್ರಹಾರದಲ್ಲಿ ಶಾಸಕ ಮುನಿರತ್ನ; ಜಾಮೀನು ನಿರೀಕ್ಷೆಯಲ್ಲಿ ಬಿಜೆಪಿ ಶಾಸಕ

ಪರಪ್ಪನ ಅಗ್ರಹಾರದಲ್ಲಿ ಶಾಸಕ ಮುನಿರತ್ನ; ಜಾಮೀನು ನಿರೀಕ್ಷೆಯಲ್ಲಿ ಬಿಜೆಪಿ ಶಾಸಕ

Others
ಬೆಂಗಳೂರು: ಗುತ್ತಿಗೆದಾರನಿಗೆ ಜೀವ ಬೆದರಿಕೆ ಒಡ್ಡಿರುವ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮುನಿರತ್ನ ಅವರನ್ನು ಪೊಲೀಸರು ಮಂಗಳವಾರ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.ಈ ನಡುವೆ, ಮುನಿರತ್ನ ಅವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಬುಧವಾರ ವಿಚಾರಣೆಗೆ ಬರಲಿದೆ....
KKRTC ಗುಂಪು ವಿಮೆ; ಮೃತ ನೌಕರರ ನಾಮನಿರ್ದೇಶಿತರಿಗೆ 1.4 ಕೋ.ರೂ ಪರಿಹಾರ ವಿತರಣೆ

KKRTC ಗುಂಪು ವಿಮೆ; ಮೃತ ನೌಕರರ ನಾಮನಿರ್ದೇಶಿತರಿಗೆ 1.4 ಕೋ.ರೂ ಪರಿಹಾರ ವಿತರಣೆ

Others
ಬೆಂಗಳೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿಯಲ್ಲಿ ಆಂತರಿಕ ಗುಂಪು ವಿಮಾ ಯೋಜನೆ ಅಡಿ ಸದಸ್ಯರಾಗಿ ನಿಧನರಾಗಿರುವ ನೌಕರರ ನಾಮನಿರ್ದೇಶಿತರಿಗೆ ರೂ.1.40 ಕೋಟಿಗಳ ಪರಿಹಾರ ಮೊತ್ತ ವಿತರಣೆ ಮಾಡಲಾಯಿತು.ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿ, ಕಲಬುರಗಿಯಲ್ಲಿ ಕರ್ನಾಟಕ ಸರ್ಕಾರದ ಸಾರಿಗೆ ಹಾಗೂ ಮುಜರಾಯಿ ಸಚಿವರು ಹಾಗೂ ಕ.ಕ.ರಾ.ಸಾ.ನಿಗಮದ ಅಧ್ಯಕ್ಷ ರಾಮಲಿಂಗರೆಡ್ಡಿ ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರವರಾದ ಎಂ.ರಾಚಪ್ಪರವರು ನಿಗಮದ ಆಂತರಿಕ ಗುಂಪು ವಿಮಾ ಯೋಜನೆ ಅಡಿ ಸದಸ್ಯರಾಗಿ ಸೇವಾ ಅವಧಿಯಲ್ಲಿ ನಿಧನಗೊಂಡಿರುವ ಬೀದರ ವಿಭಾಗ-05, ವಿಜಯಪೂರ ವಿಭಾಗ-04, ಕಲಬುರಗಿ ವಿಭಾಗ-02 ಹಾಗೂ ರಾಯಚೂರು ವಿಭಾಗ-03, ಒಟ್ಟು 14 ಮೃತ ನೌಕರರ ನಾಮನಿರ್ದೇಶಿತರಿಗೆ ತಲಾ ರೂ.10.00ಲಕ್ಷಗಳಂತೆ ಒಟ್ಟು 14 ಜನರಿಗೆ ರೂ.1.40 ಕೋಟಿಗಳ ಪರಿಹಾರ ಮೊತ್ತದ ಧನಾದೇಶಗಳನ್ನು ವಿತರಿಸಿದರು.ಧನಾದೇಶಗಳನ್ನು ವಿತರಿಸಿ ಮಾತಾನಾಡಿದ ಸಾರಿಗೆ  ಸಚಿವ ರಾಮಲಿಂಗ ರೆಡ್ಡಿ, ಕ.ಕ.ರ.ಸಾ.ನಿಗಮವು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆಂತರಿಕ ಗುಂಪು ವಿಮ ಯೋಜನೆ ಅಡಿ ಸದಸ್ಯರಾಗಿ ಸೇವಾ ...
ನಾಗಮಂಗಲ ಕೋಮುಗಲಭೆ ವೇಳೆ ಪಾಕ್ ಪರ ಘೋಷಣೆ?

ನಾಗಮಂಗಲ ಕೋಮುಗಲಭೆ ವೇಳೆ ಪಾಕ್ ಪರ ಘೋಷಣೆ?

Others
ಬೆಂಗಳೂರು: ಮಂಡ್ಯ ಜಿಲ್ಲೆ ನಾಗಮಂಗಲ ಕೋಮುಗಲಭೆ ವೇಳೆ ಪಾಕ್ ಪರ ಘೋಷಣೆ ಮೊಳಗಿರುವ ಬಗ್ಗೆ ಬಿಜೆಪಿ ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ.ನಾಗಮಂಗಲ ಕೋಮುಗಲಭೆ ವೇಳೆ ಪಾಕ್ ಪರ ಘೋಷಣೆ?ನಾಗಮಂಗಲದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಮೂವರು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳು ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳುತ್ತಿದ್ದು, ಈ ಕೋಮುದಳ್ಳುರಿಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡವಿರುವ ಅನುಮಾನ ಮತ್ತಷ್ಟು ಗಟ್ಟಿಯಾಗಿತ್ತಿದೆ.… pic.twitter.com/GmyxMyiZIZ — R. Ashoka (@RAshokaBJP) September 16, 2024ನಾಗಮಂಗಲದಲ್ಲಿ ಬುಧವಾರ ರಾತ್ರಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಮೂವರು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳು ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳ ಹೇಳುತ್ತಿದ್ದು, ಈ ಕೋಮುದಳ್ಳುರಿಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡವಿರುವ ಅನುಮಾನ ಮತ್ತಷ್ಟು ಗಟ್ಟಿಯಾಗಿತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಾಮಾಜಿಕ ಜಾಲತಾಣ'X'ನಲ್ಲಿ ಪೋಸ್ಟ್ ಹಾಕಿದ್ದಾರೆ.ಚಿಕ್ಕಮಗಳೂರಲ್ಲಿ ಬೈಕ್ ನಲ...
“ಮತ್ತೊಂದು ಗೌರವ ಡಾಕ್ಟರೇಟ್ ಪದವಿಗಾಗಿ ಸಿಎಂ ವಿರುದ್ದ ಟೀಕೆ?” ಸಾಹಿತಿ ಬೈರಪ್ಪ ಬಗ್ಗೆ ರಮೇಶ್ ಬಾಬು ಟೀಕೆ

“ಮತ್ತೊಂದು ಗೌರವ ಡಾಕ್ಟರೇಟ್ ಪದವಿಗಾಗಿ ಸಿಎಂ ವಿರುದ್ದ ಟೀಕೆ?” ಸಾಹಿತಿ ಬೈರಪ್ಪ ಬಗ್ಗೆ ರಮೇಶ್ ಬಾಬು ಟೀಕೆ

Others
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರವನ್ನು ಬೆಂಬಲಿಸಿರುವ ಸಾಹಿತಿ ವಿರುದ್ದ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಕೇಂದ್ರ ಸರ್ಕಾರದಿಂದ ಪಡೆದಿರುವ 6 ಪ್ರಶಸ್ತಿಗಳಲ್ಲಿ 5 ಪ್ರಶಸ್ತಿಗಳು ಬಿಜೆಪಿ ಕಾರಣದಿಂದಲೇ ದೊರಕಿದ್ದು, ಅದರ ಋಣ ಸಂದಾಯದ ಕಾರಣಕ್ಕಾಗಿ ಸಾಹಿತಿ ಎಸ್. ಎಲ್. ಬೈರಪ್ಪನವರು ರಾಜ್ಯ ಸರ್ಕಾರವನ್ನು ಟೀಕಿಸಿ ರಾಜ್ಯಪಾಲರನ್ನು ಸಮರ್ಥಿಸಿ ಅರೆ ಸಂವಿಧಾನ ತಜ್ಞರಾಗಲು ಹೊರಟಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.ಕರ್ನಾಟಕದ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಪ್ರಕರಣ ನ್ಯಾಯಾಂಗದ ಅಂಗಳದಲ್ಲಿ ಇರುತ್ತದೆ. ಸಾಹಿತಿ ಎಸ್. ಎಲ್. ಬೈರಪ್ಪನವರು ತಮ್ಮ ಎಂದಿನಂತೆ ರಾಜ್ಯಪಾಲರ ಕ್ರಮವನ್ನು ಸಮರ್ಥಿಸಲು ಹೊರಟಿರುವುದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿಯಂತಿದೆ ಎಂದು ರಮೇಶ್ ಬಾಬು ವೇಳೆ ವಿಶ್ಲೇಷಿಸಿದ್ದಾರೆ.ಸರ್ವೋಚ್ಚ ನ್ಯಾಯಾಲಯ ರಿಟ್ ಪಿಟಿಷನ್ ನಂ. 1224/2023 ಪ್ರಕರಣದಲ್ಲಿ ಇತ್ತೀಚಿಗೆ ಆದೇಶವನ್...
ಪಡುಬಿದ್ರಿ-ಕಾರ್ಕಳ ಟೋಲ್ ವಿರುದ್ಧ ಪ್ರತಿಭಟನೆಗೆ ಬಸ್ ಮಾಲಕರ ಸಂಘ ಬೆಂಬಲ: ಸುದೇಶ್ ಮರೋಳಿ

ಪಡುಬಿದ್ರಿ-ಕಾರ್ಕಳ ಟೋಲ್ ವಿರುದ್ಧ ಪ್ರತಿಭಟನೆಗೆ ಬಸ್ ಮಾಲಕರ ಸಂಘ ಬೆಂಬಲ: ಸುದೇಶ್ ಮರೋಳಿ

Others
ಮಂಗಳೂರು: ”ಪಡುಬಿದ್ರೆ-ಕಾರ್ಕಳ ಹೆದ್ದಾರಿಯಲ್ಲಿ ಕಂಚಿನಡ್ಕ ಬಳಿ ಟೋಲ್ ನಿರ್ಮಾಣ ಮಾಡಲು ಮುಂದಾಗಿರುವ ಕ್ರಮವನ್ನು ಕೆನರಾ ಬಸ್ ಮಾಲಕರ ಅಸೋಸಿಯೇಷನ್ ಖಂಡಿಸುತ್ತಿದ್ದು ಇದರ ವಿರುದ್ಧ ಯಾವುದೇ ರೀತಿಯ ಪ್ರತಿಭಟನೆಗೆ ಸಂಘಟನೆ ಸಿದ್ಧವಾಗಿದೆ“ ಎಂದು ಸಂಘಟನೆಯ ಕಾರ್ಯದರ್ಶಿ ಸುದೇಶ್ ಮರೋಳಿ ಹೇಳಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ”ಕೇಂದ್ರ ಸರಕಾರದ ನಿಯಮಗಳ ಅನ್ವಯ ಹೆದ್ದಾರಿಯಲ್ಲಿ 60 ಕಿಮೀ ಅಂತರದಲ್ಲಿ ಟೋಲ್ ಗೇಟ್ ನಿರ್ಮಾಣ ಮಾಡಲು ಅವಕಾಶವಿಲ್ಲ. ಆದರೆ ಹೆಜಮಾಡಿ ಟೋಲ್ ಗೇಟ್ ಇಲ್ಲಿಂದ 6 ಕಿಮೀ ದೂರದಲ್ಲಿದ್ದು ಇದರಿಂದ ಸಾರ್ವಜನಿಕರಿಗೆ ಭಾರೀ ಹೊರೆ ಬೀಳಲಿದೆ. 2018ರಲ್ಲಿ ಬೆಳ್ಮಣ್ ಬಳಿ ಇದೇ ರೀತಿ ಟೋಲ್ ನಿರ್ಮಾಣಕ್ಕೆ ಮುಂದಾದಾಗ ನಾವು ಉಗ್ರ ಪ್ರತಿಭಟನೆ ನಡೆಸಿದ್ದೆವು. ಆಗ ಇಲ್ಲಿಂದ ಹೋಗಿದ್ದ ಟೋಲ್ ಮತ್ತೆ ಕಂಚಿನಡ್ಕ ಬಳಿ ತೆರೆಯಲು ಮುಂದಾಗಿದೆ. ಇದು ರಾಜ್ಯ ಹೆದ್ದಾರಿ ಆಗಿರುವ ಕಾರಣ ಜನರನ್ನು ಯಾಮಾರಿಸಲು ಸರಕಾರ ಮುಂದಾಗಿದೆ” ಎಂದು ಆರೋಪಿಸಿದರು.“ಮುಂದೆ ಬರಲಿರುವ ಟೋಲ್ ನಲ್ಲಿ ದ್ವಿಚಕ್ರ ವಾಹನಗಳಿಗೆ 30 ರೂ. ಮತ್ತು ಕಾರ್ ಗಳಿಗೆ 50 ರೂ., ಬಸ್ ಗಳಿಗೆ 100 ರೂ. ಸುಂಕ ವ...
KSLU: ಕರ್ನಾಟಕ ರಾಜ್ಯ ಕಾನೂನು ವಿವಿ ಪರೀಕ್ಷೆ ಮುದೂಡಿಕೆ; ಆ.27ರ ಪರೀಕ್ಷೆ ಸೆ.18ಕ್ಕೆ ನಿಗದಿ

KSLU: ಕರ್ನಾಟಕ ರಾಜ್ಯ ಕಾನೂನು ವಿವಿ ಪರೀಕ್ಷೆ ಮುದೂಡಿಕೆ; ಆ.27ರ ಪರೀಕ್ಷೆ ಸೆ.18ಕ್ಕೆ ನಿಗದಿ

Others
ಹುಬ್ಬಳ್ಳಿ: ಕೆಪಿಎಸ್‌ಸಿ ಪರೀಕ್ಷೆಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. 27-08-2024ರಂದು ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು 18-09-2024ರಂದು ನಡೆಸಲಾಗುವುದು ಎಂದು ಕಾನೂನು ವಿವಿ ಪ್ರಕಟಣೆ ತಿಳಿಸಿದೆ.ಗೆಜೆಟೆಡ್ ಪ್ರೊಬೇಸನರ್ಸ್ ಗ್ರೂಪ್ ಎ ಮತ್ತು ಬಿ ವೃಂದದ ಪರೀಕ್ಷೆಯ ದಿನದಂದು ರಾಜ್ಯದಲ್ಲಿ ವಿಶೇಷ/ಸಾರ್ವತ್ರಿಕ ರಜೆಯನ್ನು ಘೋಸಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕಾನೂನು ವಿವಿ ಪರೀಕ್ಷಾ ವೇಳಾಪಟ್ಟಿಯಲ್ಲಿ 27.08.2024ರಂದು ನಿಗದಿ ಪಡಿಸಿದ ಎಲ್ಲ ಪರೀಕ್ಷೆಗಳನ್ನು 18.09.2024ರಂದು ನಡೆಸಲು ತಿರ್ಮಾನಿಸಲಾಗಿದೆ. ಪರೀಕ್ಷೆಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವದಿಲ್ಲ, ಎಂಬ ಮಾಹಿತಿಯನ್ನು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಮತ್ತು ಸಂಬಂಧಪಟ್ಟ ಸಿಬ್ಬಂದಿ ಗಮನಕ್ಕೆ ತರಲು ಸೂಚಿಸಲಾಗಿದೆ ಎಂದು KSLU ತಿಳಿಸಿದೆ....
ಭೀಮವಾದ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಯ್ಕೆ

ಭೀಮವಾದ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಯ್ಕೆ

Others
ಬಳ್ಳಾರಿ: ಭೀಮವಾದ ದಲಿತ ಸಂಘರ್ಷ ಸಮಿತಿ ಬಳ್ಳಾರಿ ಜಿಲ್ಲಾ ಸಮಿತಿ ರಚನೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಗುರುವಾರ ಬೆಳಗ್ಗೆ 11ರಂದು ನಗರದ ಅಂಬೇಡ್ಕರ್ ಭವನದಲ್ಲಿ (ಮೊದಲನೇ ಗೇಟ್) ಹೊಸಪೇಟೆ ರಸ್ತೆಯಲ್ಲಿ ನಡೆಯಿತು.ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕರಾದ ಸಂಜೀವ್ ಕಂಬಳೆ, ಯಮುನಪ್ಪ ಗುಣದಾಳರವರು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲೂಕಿನ, ಗ್ರಾಮಗಳಲ್ಲಿರುವ ದಲಿತ, ಹಿಂದುಳಿದ ಅಲ್ಪಸಂಖ್ಯಾತರು ಸಂವಿಧಾನಾತ್ಮಕವಾದ ಹಕ್ಕುಗಳನ್ನು ಪಡೆಯಲು ನಿರಂತರ ಹೋರಾಟ ನಡೆಸಬೇಕು, ಯುವಕರನ್ನು ಸಂಘಟಿಸುವ ಉದ್ದೇಶದಿಂದ ಇಂದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದರು. ಆಯ್ಕೆಯಾದ ಪದಾಧಿಕಾರಿಗಳು: ಜಿಲ್ಲಾ ಸಂಚಾಲಕರಾಗಿ ಗಾದಿಲಿಂಗ ಬಿ. ಗೋನಾಳ್, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಪ್ರಸಾದ್, ಗಿರೀಶ್, ರಾಜ್ ಹಾಗೂ ಜಿಲ್ಲಾ ಖಜಾಂಚಿಯಾಗಿ ಜಯರಾಮ ಇವರುಗಳನ್ನು ರಾಜ್ಯ ಸಂಚಾಲಕ ಬಿ.ಎನ್.ವೆಂಕಟೇಶ್ ರವರ ಆದೇಶ ಮೇರೆಗೆ ನೇಮಕ ಮಾಡಲಾಯಿತು ಎಂದು ರಾಜ್ಯ ಸಂಘಟನಾ ಸಂಚಾಲಕ ಶ್ರೀನಿವಾಸಲು ಜೆ.ಎಸ್. ಮಾಧ್ಯಮಗಳಿಗೆ ಮ...
ಬೆಂಗಳೂರು ಮಹಾನಗರದಲ್ಲಿ ಸರಕು ಸಾಗಣೆ ವಾಹನಗಳ ನಿರ್ಬಂಧ; ವಾಹನ ಪ್ರವೇಶಕ್ಕೆ ಸೀಮಿತ ಅವಧಿ ಗೊತ್ತುಪಡಿಸಿದ ಪೊಲೀಸ್

ಬೆಂಗಳೂರು ಮಹಾನಗರದಲ್ಲಿ ಸರಕು ಸಾಗಣೆ ವಾಹನಗಳ ನಿರ್ಬಂಧ; ವಾಹನ ಪ್ರವೇಶಕ್ಕೆ ಸೀಮಿತ ಅವಧಿ ಗೊತ್ತುಪಡಿಸಿದ ಪೊಲೀಸ್

Others
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸರಕು ಸಾಗಣೆಯ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ನಗರದಲ್ಲಿ ಇಂತಹ ವಾಹನಗಳ ಸಂಚಾರಕ್ಕೆ ಸೀಮಿತ ಅವಧಿಯನ್ನು ಪೊಲೀಸರು ಗೊತ್ತುಮಾಡಿದ್ದಾರೆ.“ಸಂಚಾರ ಸಲಹೆ “/"Traffic advisory " pic.twitter.com/baYsCbHmxO — ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) August 2, 2024 ವಾರದ ಎಲ್ಲ ದಿನಗಳಲ್ಲಿ ಬೆಳಗ್ಗೆ 7 ರಿಂದ 11 ಮತ್ತು ಸಂಜೆ 4 ರಿಂದ 10ರವರೆಗೆ ಭಾರಿ ಸರಕು ವಾಹನಗಳು ಬೆಂಗಳೂರು ನಗರದ ರಸ್ತೆಗಳಲ್ಲಿ ಸಂಚರಿಸುವಂತಿಲ್ಲ. ಎಲ್ಲಾ ಶನಿವಾರ ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:30ರವರೆಗೆ ಹಾಗೂ ಸಂಜೆ 4:30 ರಿಂದ ರಾತ್ರಿ 9ಗಂಟೆಯವರೆಗೆ ನಿಷೇಧಿಸಿ ಮಾರ್ಪಾಡು ಮಾಡಲಾಗಿದೆ.ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಒದಗಿಸಿದ್ದಾರೆ....
ವಯನಾಡ್ ಸಂತ್ರಸ್ತರಿಗೆ ಬಿಬಿಎಂಪಿ ಪರಿವಾರ ನೆರವಿನ ಹಸ್ತ; ದಿನಸಿ, ಅಗತ್ಯ ವಸ್ತು ರವಾನೆ

ವಯನಾಡ್ ಸಂತ್ರಸ್ತರಿಗೆ ಬಿಬಿಎಂಪಿ ಪರಿವಾರ ನೆರವಿನ ಹಸ್ತ; ದಿನಸಿ, ಅಗತ್ಯ ವಸ್ತು ರವಾನೆ

Others
ವಯನಾಡ್ ಸಂತ್ರಸ್ತರಿಗೆ ಬಿಬಿಎಂಪಿ ಪರಿವಾರ ನೆರವಿನ ಹಸ್ತ.. ಅಧಿಕಾರಿ-ನೌಕರರ ಕ್ಷೇಮಾಭಿವೃದ್ದಿ ಸಂಘ, ನೌಕರರ ಸಹಕಾರ ಸಂಘದಿಂದ ದಿನಸಿ, ಅಗತ್ಯ ವಸ್ತು ರವಾನೆ.. ಹತ್ತು ಟನ್ ಆಹಾರ ಪದಾರ್ಥಗಳು ಮತ್ತು ದಿನ ನಿತ್ಯ ಬಳಕೆಯ ವಸ್ತು ರವಾನೆ.. ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ ಕೇರಳದ ವಯನಾಡ್‌ ನಲ್ಲಿ ಮಳೆ ಪ್ರವಾಹ, ಭೂಕುಸಿತದಿಂದ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ನೆರವು ಮತ್ತು ದಿನಸಿ ಸಾಮಾಗ್ರಿಗಳನ್ನು ತಲುಪಿಸುವ ವಾಹನಕ್ಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಮತ್ತು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಮತ್ತು ಸಹಕಾರ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ಚಾಲನೆ ನೀಡಿದರು.ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಮಾತನಾಡಿ ಜನರಿಗೆ ಸಮಸ್ಯೆ ಮತ್ತು ಸಂಕಷ್ಟಗಳು ಬಂದಾಗ ಬಿಬಿಎಂಪಿ ನೌಕರರ ಸಂಘವು ಸಹಾಯ, ಸಹಕಾರ ನೀಡುತ್ತಾ ಬಂದಿದೆ. ವಯನಾಡ್ ದುರಂತದಲ್ಲಿ ನಮ್ಮ ಬಿಬಿಎಂಪಿ ಸಂಘವು ಅಂದಾಜು 25ಲಕ್ಷ...
ವಯನಾಡ್ ಭೂಕುಸಿತ ಪ್ರದೇಶದಲ್ಲಿ 31 ತಾಸುಗಳಲ್ಲಿ ಬೈಲಿ ಬ್ರಿಡ್ಜ್ ನಿರ್ಮಿಸಿದ ಕರ್ನಾಟಕದ ಯೋಧರಿಗೆ ಇಡೀ ದೇಶವೇ ಸೆಲ್ಯೂಟ್..!

ವಯನಾಡ್ ಭೂಕುಸಿತ ಪ್ರದೇಶದಲ್ಲಿ 31 ತಾಸುಗಳಲ್ಲಿ ಬೈಲಿ ಬ್ರಿಡ್ಜ್ ನಿರ್ಮಿಸಿದ ಕರ್ನಾಟಕದ ಯೋಧರಿಗೆ ಇಡೀ ದೇಶವೇ ಸೆಲ್ಯೂಟ್..!

Others
ವಯನಾಡ್‌: ಮುಂಗಾರು ಮಳೆ ಆರ್ಭಟದ ನಡುವೆ, ಭೀಕರ ಭೂಕುಸಿತಕ್ಕೆ ನಲುಗಿರುವ ಕೇರಳದ ವಯನಾಡಿನಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ಸಮರ ಸಜ್ಜಿನಂತೆ ಸಾಗಿದೆ. ಈ ಕಾರ್ಯಾಚರಣೆಯ ನಡುವೆ ಬೆಂಗಳೂರಿನ ಎಂಇಜಿ ಗ್ರೂಪ್‌ನ ಯೋಧರು ಈ ಸಾಧನೆ ಇಡೀ ದೇಶದ ಗಮನಸೆಳೆದಿದೆ.Indian army engineers in action fabricating the Bailey Bridge at Wayanad. Constructed in record time pic.twitter.com/9POfAvrdAF — Maj Gen Harsha Kakar (@kakar_harsha) August 2, 2024 ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತ ದುರ್ಘಟನೆಗಳಲ್ಲಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದು ಅನೇಕರು ಜೀವಂತ ಸಮಾಧಿಯಾಗಿರುವ ಆತಂಕವಿದೆ. ಅವರಿಗಾಗಿ ಸೇನೆ ಹಾಗೂ ಎನ್‌ಡಿ‌ಆರ್‌ಎಫ್ ತಂಡಗಳು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿವೆ. ಇದೇ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆಗಾಗಿ ದುರ್ಗಮ ಸ್ಥಳದಲ್ಲಿ ಬೆಂಗಳೂರಿನ ಎಂಇಜಿ ಗ್ರೂಪ್‌ನ ಯೋಧರು ನಿರ್ಮಿಸಿರುವ ತಾತ್ಕಾಲಿಕ ಸೇತುವೆ ಜನರ ರಕ್ಷಣೆಗೆ ನೆರವಾಗಿದೆ.#IndianArmy completes bridge in record time Cl...