ವಯನಾಡು ಸಂತ್ರಸ್ತರಿಗಾಗಿ ಮಿಡಿದ ಕರುನಾಡು ಹೃದಯಗಳು.. BTM, ಜಯನಗರ ಕ್ಷೇತ್ರಗಳಿಂದ 9 ಟ್ರಕ್‌ಗಳಲ್ಲಿ ಅಹಾರ, ಅಗತ್ಯವಸ್ತು ರವಾನೆ..
ಬೆಂಗಳೂರು: ಕೇರಳದ ವಯನಾಡಿನಲ್ಲಿ, ಹಾಗೂ ಕರಾವಳಿಯ ಶಿರೂರಿನಲ್ಲಿ ಭೂಕುಸಿತದಿಂದ ಸಂತ್ರಸ್ತರಾದ ಬಡಪಾಯಿಗಳ ಬಗ್ಗೆ ಬೆಂಗಳೂರಿನ ಬಿಟಿಎಂ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳ ಜನರು ಅನುಕಂಪ ತೋರಿದ್ದಾರೆ. ಬಿಟಿಎಂ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಯನಾಡು ಮತ್ತು ಶಿರೂರು ಸಂಭವಿಸಿದ ಭೂಕುಸಿತದ ದುರಂತಕ್ಕೆ ಸ್ಪಂದಿಸಲು ಪರಿಹಾರ ಸಾಮಾಗ್ರಿಗಳನ್ನು ರವಾನಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು (ಮಂಗಳವಾರ) ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉಪಸ್ಥಿತಿಯಲ್ಲಿ, ಆಹಾರ, ಸಾಮಾಗ್ರಿಗಳನ್ನು ಹೊತ್ತ ಸುವಾರು 9 ಟ್ರಕ್ ಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಸದರಿ ಟ್ರಕ್ ಗಳೊಂದಿಗೆ ಜಯನಗರದ ಮಾಜಿಬಶಾಸಕಿ ಸೌಮ್ಯ ರೆಡ್ಡಿ, ಬಿಬಿಎಂಪಿ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಮಾಜಿ ಕಾರ್ಪೊರೇಟರ್ ನಾಗರಾಜು, ಮಂಜುನಾಥ್ ಅವರನ್ನೊಳಗೊಂಡ ನಾಯಕರ ತಂಡ ಈ ಸಾಮಾಗ್ರಿಗಳ ಜೊತೆ ತೆರಳಿದೆ.
ಕರ್ನಾಟಕದ ಶಿರೂರು ಮತ್ತು ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಪ್ರವಾಹದ ದುರಂತಕ್ಕೆ ನೂರಾರು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದು, ಅಪಾರ ಆಸ್ತಿಪಾಸ್ತ...





