Saturday, September 19

ಹಸ್ತ ಕಾರ್ಯಾಚರಣೆಗೆ ಸೆಡ್ಡು ಹೊಡೆದ ಜೆಡಿಎಸ್; ರಿವರ್ಸ್ ಆಪರೇಷನ್ ಮೂಲಕ ಮಂಡ್ಯ ನಗರಸಭೆಯಲ್ಲಿ ಹೆಚ್ಡಿಕೆ ಆಪ್ತನಿಗೆ ಜಯ

ಮಂಡ್ಯ: ಮಂಡ್ಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ನಾಗೇಶ್ ಅವರು ಆಯ್ಕೆಯಾಗಿದ್ದಾರೆ. ಸಚಿವ ಚಲುವರಾಯ ಸ್ವಾಮಿ ಹಾಗೂ ಕೇಂದ್ರ ಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಉ ಅಖಾಡವಾಗಿದ್ದ ಮಂಡ್ಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ನಾಗೇಶ್ ಆಯ್ಕೆಯಾಗಿದ್ದಾರೆ.

ಆಪರೇಷನ್ ಹಸ್ತ ಮೂಲಕ ಜೆಡಿಎಸ್‌ನ ಇಬ್ಬರನ್ನು ಕಾಂಗ್ರೆಸ್ ಪಕ್ಷ ಗೆಲುವಿನ ನಿರೀಕ್ಷೆಯಲ್ಲಿತ್ತು. ಇದಕ್ಕೆ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದ ಜೆಡಿಎಸ್ ನಾಯಕ ಕುಮಾರಸ್ವಾಮಿ, ರಿವರ್ಸ್ ಆಪರೇಷನ್ ಮಾಡಿ, ಮಂಡ್ಯ ನಗರಸಭಾ ಚುನಾವಣೆಯಲ್ಲಿ ಫಲಿತಾಂಶವನ್ನು ತಮ್ಮದಾಗೊಸಿಕೊಂಡಿದ್ದಾರೆ.