Category: Update Videos

  • ಪ್ರಧಾನಿ ನಿವಾಸಕ್ಕೆ ಹೊಸ ಅತಿಥಿ.. ‘ದೀಪಜ್ಯೋತಿ’ಯನ್ನು ಮುದ್ದಾಡಿದ ಮೋದಿ ಮೋಡಿಗೆ ನೆಟ್ಟಿಗರ ಸಕತ್ ಲೈಕ್ಸ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಈ ಒಂದು ಮುದ್ದಾದ ಅತಿಥಿ ಜೊತೆಗಿನ ವಿಡಿಯೋವನ್ನು ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.


    ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ಪುಟ್ಟ ಕರು ಆಗಮಿಸಿದೆ. ಆ ಮುಗ್ದ ಕರುವನ್ನು ಪ್ರಧಾನಿ ಮೋದಿ ಮುದ್ದಾಡಿದ್ದಾರೆ. ಈ ಬಗ್ಗೆ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣ ‘Xನಲ್ಲಿ ಮೋದಿಯವರು ಹಂಚಿಕೊಂಡಿದ್ದು, ಕರುವಿನ ಜೊತೆ ಆಟವಾಡುವ ಸನ್ನಿವೇಶ ಅದಾಗಿದೆ. ಮೋದಿ ಹೋದಲ್ಲೆಲ್ಲ ಅವರ ಜೊತೆಯಲ್ಲೇ ಕರು ಹೋಗುತ್ತದೆ. ಮೋದಿ ದೇವರ ಕೋಣೆಯಲ್ಲಿ ಪೂಜೆಯಲ್ಲಿದ್ದಾಗಲೂ ಅಲ್ಲಿಗೂ ಕಾರು ಬಂದಿದೆ. ಮೋದಿ ಜೊತೆ ಈ ಕರು ಆಪ್ತತೆಯಿಂದ ಬೆರೆಯುತ್ತದೆ.

    ಮೋದಿಯವರ ನಿವಾಸದಲ್ಲೇ ಜನಿಸಿರುವ ಕರು ಇದಾಗಿದ್ದು ಇದಕ್ಕೆ ‘ದೀಪಜ್ಯೋತಿ’ ಎಂದು ನಾಮಕರಣ ಮಾಡಲಾಗಿದೆ. ಈ ನಡುವೆ ಮೋದಿ ಅವರು ದೇವರ ಮುಂದೆ ಈ ಕರುವಿಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿಡಾ ಸನ್ನಿವೇಶ ಗಮನಸೆಳೆದಿದೆ. ಪ್ರಧಾನಿ ಮೋದಿ ಅವರು ಕರುವನ್ನು ಎತ್ತಿ ಮುದ್ದಾಡುವ ದೃಶ್ಯ ಅಭಿಮಾನಿಗಳ ಕುತೂಹಲದ ಕೇಂದ್ರಬಿಂದುವಾಗಿದೆ. ನೆಟ್ಟಿಗರಿಂದ ಸಕತ್ ಲೈಕ್ಸ್ ಗಿಟ್ಟಿಸಿಕೊಂಡಿದೆ.

  • ಹಿಂದೂ ದೇವರಿಗೆ ಅಪಮಾನ; ಮಂಗಳೂರಿನ ಪೊಲೀಸರಿಂದ ಎಫ್​ಐಆರ್

    ಹಿಂದೂ ದೇವರಿಗೆ ಅಪಮಾನ; ಮಂಗಳೂರಿನ ಪೊಲೀಸರಿಂದ ಎಫ್​ಐಆರ್

    ಮಂಗಳೂರು: ಹಿಂದೂ ದೇವರ ಚಿತ್ರಗಳನ್ನು ಅಶ್ಲೀಲವಾಗಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಅಪಮಾನಿಸಿರುವ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಎಐ ಆಧಾರಿತ ಹಿಂದೂ ದೇವರ ಚಿತ್ರಗಳನ್ನು ಅಶ್ಲೀಲವಾಗಿ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

    ಹಿಂದೂ ದೇವರನ್ನು ಸ್ತ್ರೀಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವಂತೆ ರಚಿಸಿ ಅವುಗಳನ್ನು “Fact Vid” ಎಂಬ ಹೆಸರಿನ ಫೇಸ್‌ಬುಕ್​ ಪೇಜ್​ನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

  • ಬಿಗ್ ಬಾಸ್ ಸ್ಟಾರ್ ತನಿಷಾ ನಿರ್ಮಾಣದ ‘ಕೋಣ’

    ಬಿಗ್ ಬಾಸ್ ಸ್ಟಾರ್ ತನಿಷಾ ಇದೀಗ ‘ಕೋಣ’ ಸುತ್ತ ಬ್ಯುಸಿಯಾಗಿದ್ದಾರೆ. ಅವರ ನಿರ್ಮಾಣದ ‘ಕೋಣ’ ಸಿನಿಮಾ ತೀವ್ರ ಕುತೂಹಲ ಕೆರಳಿಸಿದೆ.
    ನಟ ಕೋಮಲ್ ಕುಮಾರ್ ನಟಿಸಿರುವ ‘ಕೋಣ’ ಚಿತ್ರ ಇದೀಗ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಎಸ್.ಹರಿಕೃಷ್ಣ ನಿರ್ದೇಶನದ ‘ಕೋಣ’ ದ್ದು, ಅದರ ಟೀಸರ್ ಬಿಡುಗಡೆಯಾಗಿದೆ.

  • ಇಸ್ರೇಲ್ ಮೇಲೆ ಹಿಜಬುಲ್ ಉಗ್ರರ ದಾಳಿ; ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನ

    ಇಸ್ರೇಲ್ ಮೇಲೆ ಹಿಜಬುಲ್ ಉಗ್ರರ ದಾಳಿ; ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನ

    ಜೆರುಸಲೇಂ: ಮದ್ಯಪ್ರಾಚ್ಯಾದಲ್ಲಿ ಮತ್ತೆ ಸಂಘರ್ಷ ಭು್ಲಗಿದ್ದಿದೆ. ಲೆಬನಾನ್‌ನ ಉಗ್ರಗಾಮಿ ಸಂಘಟನೆ ಹಿಜ್‌ಬುಲ್ಲಾ ಮತ್ತು ಇಸ್ರೇಲ್ ಸೇನೆಯ ನಡುವೆ ಭಾನುವಾರ ಬೆಳಿಗ್ಗೆಯಿಂದ ಬಾರೀ ಸಂಘರ್ಷ ನಡೆದಿದೆ. ದಾಳಿ ಪ್ರತಿದಾಳಿಯಲ್ಲಿ ಭಾರೀ ಹಾನಿಯಾಗಿದ್ದು ಹಲವರು ಗಾಯಗೊಂಡಿದ್ದಾರೆ.

    ಭಾನುವಾರ ಉಭಯ ಗಂಪುಗಳ ನಡುವೆ ಮಿಲಿಟರಿ ಸಂಘರ್ಷ ನಡೆದಿದೆ.‌ ಇಸ್ರೇಲ್‌ನ ಉತ್ತರ ಭಾಗದ 11 ಇಸ್ರೇಲಿ ಮಿಲಿಟರಿ ನೆಲೆಗಳನ್ನು ಗುರಿಯಾಗಿರಿಸಿಕೊಂಡು, ಹೆಜ್ಬುಲ್ಲಾ ಪಡೆಯು ಸ್ಫೋಟಕ ತುಂಬಿದ ಸುಮಾರು 320 ರಾಕೆಟ್‌ಗಳು ಮತ್ತು ಬಹು ಡ್ರೋನ್‌ ಗಳನ್ನು ಉಡಾವಣೆಮಾಡಿದೆ ಎನ್ನಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

    ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಇಸ್ರೇಲ್‌ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ದೇಶದಾದ್ಯಂತ 48 ಗಂಟೆಗಳ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಮಿಲಿಟರಿ ಪಡೆಯನ್ನು ಸನ್ನದ್ದಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

  • ವಾರಣಾಸಿ; ಕಾಶಿಗೆ ಇನ್ನು ಕನ್ನಡಿಗರ ಯಾತ್ರೆ ಮತ್ತಷ್ಟು ಸುಗಮ; ಕರ್ನಾಟಕ ಭವನ ಛತ್ರ 5 ಕೋ.ರೂ.ವೆಚ್ಚದಲ್ಲಿ ನವೀಕರಣ; ವ್ಯವಸ್ಥೆ ಪರಿಶೀಲಿಸಿದ ಸಚಿವ ರಾಮಲಿಂಗ ರೆಡ್ಡಿ

    ವಾರಣಾಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ
    ಉತ್ತರ ಪ್ರದೇಶ ರಾಜ್ಯದ
    ವಾರಣಾಸಿಯ ಹನುಮಾನ್ ಘಾಟ್‌ನಲ್ಲಿ ಕರ್ನಾಟಕದ ಆಸ್ತಿಕರಿಗೆ ಸಕಲ ಸೌಲಭ್ಯ ಕಲ್ಪಿಸುವತ್ತ ರಾಜ್ಯದ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಕ್ರಮ ಕೈಗೊಂಡಿದ್ದಾರೆ. ಇಂದು ಅವರು ವಾರಣಾಸಿಗೆ ನೀಡದ ಭೇಟಿ ಗಮನಸೆಳೆಯಿತು.

    ವಾರಣಾಸಿಯ ಹನುಮಾನ್ ಘಾಟ್‌ನಲ್ಲಿ ಕರ್ನಾಟಕ ಭವನ ಛತ್ರಕ್ಕೆ ಇಂದು ಸಾರಿಗೆ ಮತ್ತು ಮಂಜುರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು,

    ಕರ್ನಾಟಕ ಭವನ ಛತ್ರ 1927 ನಿರ್ಮಿಸಿದ್ದು,
    ಇದೇ ವೇಳೆ ಕರ್ನಾಟಕ ಭವನದ ಛತ್ರ, ಕೊಠಡಿಗಳನ್ನು ಅಭಿವೃದ್ಧಿ ಪಡಿಸಲು ನಿಶ್ಚಯಿಸಿದ್ದು, ಕೆಲವೇ ದಿನಗಳಲ್ಲಿ ಕೆಲಸ ಪ್ರಾರಂಭವಾಗಿ ಎಲ್ಲ ಸುಸಜ್ಜಿತವಾಗಿ ಅಭಿವೃದ್ಧಿಯಾಗಲಿದೆ, ಎಂದು ಸಚಿವರು ಮಾಹಿತಿ ನೀಡಿದರು.

    ಕಾಶಿಯ ಕರ್ನಾಟಕ ಭವನ ಛತ್ರ:

    • ಕಾಶಿಯಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಕರ್ನಾಟಕ ಭವನ‌ ನವೀಕರಣ ಕಾರ್ಯ-

    • ಸಾರಿಗೆ-ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ತ್ವರಿತ ಕ್ರಮ,

    • ವಾರಣಾಸಿಯ ಹನುಮಾನ್ ಘಾಟ್ ನಲ್ಲಿರುವ ಕರ್ನಾಟಕ ಭವನ ಛತ್ರ,

    • ಕರ್ನಾಟಕ ಛತ್ರವು 1927 ರಲ್ಲಿ ಮೈಸೂರು ಮಹಾರಾಜರು ನಿರ್ಮಿಸಿದ್ದ ಕಟ್ಟಡ,

    • ನಂತರ ಇದರ ಹಿಂಭಾಗದಲ್ಲಿ 2004ರಲ್ಲಿ ಕರ್ನಾಟಕ ಸರ್ಕಾರದಿಂದ ಒಂದು ಕಟ್ಟಡ ನಿರ್ಮಿಸಲಾಗಿತ್ತು.

    • 1927ರ ಛತ್ರವು ಪುನರ್ ನವೀಕರಣವಿಲ್ಲದೆ ಶಿಥಿಲಾವಸ್ಥೆಗೆ ತಲುಪಿದೆ.

    • ಮತ್ತೊಂದು‌ ಕಟ್ಟಡದಲ್ಲೂ ಮೂಲಭೂತ ಸೌಲಭ್ಯಗಳ ಕೊರತೆ ಇದೆ.

    • ಪರಿಸ್ಥಿತಿ ಅರಿತ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಸುಧಾರಣಾ ಕ್ರಮ

    • 5 ಕೋಟಿ ವೆಚ್ಚದಲ್ಲಿ ನವೀಕರಣ ಕಾರ್ಯಕ್ಕೆ ಮುನ್ನುಡಿ,

    • ನವೀಕರಣ ಪ್ರಕ್ರಿಯೆಗೆ ಇದೀಗ ಅಂತಿಮ ಸ್ಪರ್ಶ

    • ರಾಜ್ಯದಿಂದ ತೆರಳುವ ಭಕ್ತರಿಗೆ ಸಮರ್ಪಕ ಸೌಲಭ್ಯ ಒದಗಿಸಬೇಕಿದೆ ಹಾಗಾಗಿ ಈ ಕ್ರಮ ಎನ್ನುತ್ತಿರುವ ಸಚಿವ ರಾಮಲಿಂಗಾರೆಡ್ಡಿ.

    ಇದೇ ವೇಳೆ, ಕಾಶಿಯ ಜಂಗಮವಾಡಿ ಮಠಕ್ಕೆ ಭೇಟಿ ನೀಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಜಗದ್ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

  • ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ’: ಕೈ ನಾಯಕರ ವಿರುದ್ದ ತೊಡೆ ತಟ್ಟಿದ ಬಿಎಸ್‌ವೈ

    ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ’: ಕೈ ನಾಯಕರ ವಿರುದ್ದ ತೊಡೆ ತಟ್ಟಿದ ಬಿಎಸ್‌ವೈ

    ಮೈಸೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ವಿರಮಿಸಲ್ಲ ಎಂದಿರುವ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ, ತಾಕತ್ತಿದ್ದರೇ ವಿಧಾನಸಭೆ ವಿಸರ್ಜಿಸಿ, ಚುನಾವಣೆಗೆ ಹೋಗೋಣ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.

    ಮೈಸೂರು ಚಲೋ ಪಾದಯಾತ್ರೆ ಯ ಸಮಾರೋಪ ಸಂದರ್ಭದಲ್ಲಿ ಮಾತನಾಡಿರುವ ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯನವರೇ, ನನ್ನ ಬದುಕಿನ ಕೊನೆಯುಸಿರು ಇರುವವರೆಗೆ ರಾಜಕೀಯದಲ್ಲಿದ್ದು, ನಿಮ್ಮನ್ನು ಮನೆಗೆ ಕಳುಹಿಸವರೆಗೂ ಹೋರಾಟ ಮಾಡುತ್ತೇನೆ ಎಂದರು.

      ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರಕ್ಕೆ ರಾಜ್ಯದ ಜನರು ಬೇಸತ್ತಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರೇ ನಿಮ್ಮ ಪಾಪದ ಕೊಡ ತುಂಬಿದೆ. ಇನ್ನೊಬ್ಬರ ಕುರಿತು ಹಗುರವಾಗಿ ಮಾತನಾಡುವುದು ಬಿಟ್ಟು, ಭವಿಷ್ಯದ ಬಗ್ಗೆ ಯೋಚನೆ ಮಾಡಿ ಎಂದು ಬಿಎಸ್‌ವೈ ಕುಟುಕಿದ್ದಾರೆ.

    ಭ್ರಷ್ಟ ಸಿಎಂ, ಡಿಸಿಎಂ ಇರುವವರೆಗೂ ನಾಡಿನ ಅಭಿವೃದ್ಧಿ ಸಾಧ್ಯವಿಲ್ಲ. ಕನ್ನಡಿಗರು ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸಲು ಸಿದ್ದರಾಗಿದ್ದಾರೆ ಎಂದ ಯಡಿಯೂರಪ್ಪ, ನಿಮಗೆ ತಾಕತ್ತಿದ್ದರೇ ವಿಧಾನಸಭೆ ವಿಸರ್ಜಿಸಿ, ಚುನಾವಣೆಗೆ ಹೋಗೋಣ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.

  • ಬ್ರೆಜಿಲ್ ವಿಮಾನ ದುರಂತ; 62 ಮಂದಿ ಸಾವು; ವಿಮಾನ ಪತನದ ವೀಡಿಯೋ ವೈರಲ್

    ಬ್ರೆಜಿಲ್ ವಿಮಾನ ದುರಂತ; 62 ಮಂದಿ ಸಾವು; ವಿಮಾನ ಪತನದ ವೀಡಿಯೋ ವೈರಲ್

    ಸಾವೊ ಪೌಲೋ: ಬ್ರೆಜಿಲ್‌ನ ಸಾವೊ ಪಾಲೊ ಬಳಿ ಟರ್ಬೊಪ್ರೊಪ್ ವಿಮಾನ ಪತನಗೊಂಡಿದ್ದು ಅದರಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿ 62 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಈ ದುರಂತ ಸಂಭವಿಸಿದೆ.

    ಕ್ಯಾಸ್ಕಾವೆಲ್‌ನಿಂದ ಸಾವೊ ಪೌಲೋನತ್ತ ಈ ವಿಮಾನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಸಾವೊ ಪಾಲೊದಿಂದ ಸುಮಾರು 50 ಮೈಲು ದೂರದಲ್ಲಿರುವ ವಿನ್ಹೆಡೊ ಪಟ್ಟಣದಲ್ಲಿ ಪತನಗೊಂಡಿದೆ. ಬಾನೆತ್ತರದಲ್ಲಿ ವಿಮಾನ ಪತನಗೊಂಡ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

  • ಇಂದಿನಿಂದ ‘ಹರ್‌ ಘರ್‌ ತಿರಂಗಾ’ ಅಭಿಯಾನ; ಎಲ್ಲೆಲ್ಲೂ ತ್ರಿವರ್ಣ ಧ್ವಜದ ಕಲರವ

    ಇಂದಿನಿಂದ ‘ಹರ್‌ ಘರ್‌ ತಿರಂಗಾ’ ಅಭಿಯಾನ; ಎಲ್ಲೆಲ್ಲೂ ತ್ರಿವರ್ಣ ಧ್ವಜದ ಕಲರವ

    ನವದೆಹಲಿ: ಸ್ವಾತಂತ್ರ್ಯ ದಿನದ ಅಂಗವಾಗಿ ಈ ಬಾರಿಯೂ ‘ಹರ್‌ ಘರ್‌ ತಿರಂಗಾ’ ಅಭಿಯಾನ ನಡೆಯಲಿದೆ. ಇಂದಿನಿಂದ ಆಗಸ್ಟ್ 15ರ ವರೆಗೆ ದೇಶಾದ್ಯಂತ ‘ಹರ್‌ ಘರ್‌ ತಿರಂಗಾ’ ಅಭಿಯಾನ ನಡೆಯಲಿದೆ.

    ಹರ್‌ ಘರ್‌ ತಿರಂಗಾ’ ಅಭಿಯಾನದ 3ನೇ ಆವೃತ್ತಿ ಇದಾಗಿದ್ದು ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ‘ಹರ್‌ ಘರ್‌ ತಿರಂಗಾ’ ಅಭಿಯಾನದ ಭಾಗವಾಗಿ ಈ ತಿಂಗಳ 13ರಂದು ದಿಲ್ಲಿಯಲ್ಲಿ ಬೈಕ್‌ ರ್‍ಯಾಲಿ ನಡೆಯಲಿದ್ದು ಎಲ್ಲ ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದ್ದಾರೆ.