Wednesday, April 29

ಇರಾನ್‌ನ ಅತಿದೊಡ್ಡ ವಾಣಿಜ್ಯ ಬಂದರಿನಲ್ಲಿ ಭಾರಿ ಸ್ಫೋಟ: ಮೃತರ ಸಂಖ್ಯೆ 14ಕ್ಕೆ ಏರಿಕೆ

ಟೆಹ್ರಾನ್: ಹಾರ್ಮೋಜ್ಗನ್‌ನಲ್ಲಿರುವ ಇರಾನ್‌ನ ಅತಿದೊಡ್ಡ ವಾಣಿಜ್ಯ ಬಂದರಿನಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ. 750 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ಬಂದರ್ ಅಬ್ಬಾಸ್‌ನಲ್ಲಿರುವ ಚೀನಾದ ಕಾನ್ಸುಲೇಟ್ ಜನರಲ್ ಪ್ರಕಾರ, ಸ್ಫೋಟದಲ್ಲಿ ಮೂವರು ಚೀನೀ ನಾಗರಿಕರು ಸಣ್ಣಪುಟ್ಟ ಗಾಯಗಳನ್ನು ಹೊಂದಿದ್ದಾರೆ. ವೈದ್ಯಕೀಯ ಚಿಕಿತ್ಸೆ ಪಡೆದ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ರಕ್ಷಣಾ ಪ್ರಯತ್ನಗಳು ಮುಂದುವರಿಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಟೆಹ್ರಾನ್‌ನಿಂದ ಸುಮಾರು 1,000 ಕಿಲೋಮೀಟರ್ (620 ಮೈಲುಗಳು) ದೂರದಲ್ಲಿರುವ ಶಾಹಿದ್ ರಾಜೈ ಬಂದರಿನಲ್ಲಿ ಆರಂಭಿಕ ಸ್ಫೋಟ ಸಂಭವಿಸಿದೆ. ಈ ಸ್ಫೋಟ ಮತ್ತು ಅದರ ಪರಿಣಾಮವಾಗಿ ಉಂಟಾದ ವಾಯು ಮಾಲಿನ್ಯದಿಂದಾಗಿ ನಗರದಾದ್ಯಂತದ ಎಲ್ಲಾ ಶಿಕ್ಷಣ ಸಂಸ್ಥೆಗಳು ಭಾನುವಾರ ಮುಚ್ಚಲ್ಪಡುತ್ತವೆ ಎಂದು ಅಬ್ಬಾಸ್‌ನ ಗವರ್ನರ್ ಅಹ್ಮದ್ ಪೌಯಾಫರ್ ಘೋಷಿಸಿದ್ದಾರೆ.