Sunday, September 20

ಡಬ್ಲ್ಯುಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ’ಗೆ ಸಿಎಂ ಅಭಿನಂದನೆ

ಬೆಂಗಳೂರು : ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ 2026ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಕೊನೆಯ ಓವರ್‌ನಲ್ಲಿ ರೋಚಕ ಜಯ ಸಾಧಿಸುವ ಮೂಲಕ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಮತ್ತೊಮ್ಮೆ ಡಬ್ಲ್ಯೂ.ಪಿ.ಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡ RCB ವನಿತೆಯರನ್ನು ಸಿಎಂ ಸಿದ್ದರಾಮಯ್ಯ ಅಭಿನಂಧಿಸಿದ್ದಾರೆ. ಇಡೀ ಪಂದ್ಯಾಕೂಟದುದ್ದಕ್ಕೂ ಉತ್ಕೃಷ್ಟ ಪ್ರದರ್ಶನ ನೀಡುತ್ತಾ ಬಂದ ನಮ್ಮ RCB ತಂಡ, ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ನೋಡಿ ಖುಷಿಯಾಯಿತು ಎಂದು ಸಿಎಂ ಹೇಳಿದ್ದಾರೆ. .

ಸಂಘಟಿತ ಹೋರಾಟದ ಮೂಲಕ ಟ್ರೋಫಿ ಗೆದ್ದ ನಮ್ಮ ಆರ್.ಸಿ.ಬಿ ಯ ಹೆಣ್ಣುಮಕ್ಕಳಿಗೆ ಅಭಿನಂದನೆಗಳು. ಪಂದ್ಯದ ಕೊನೆಯವರೆಗೂ ಗೆಲುವಿಗಾಗಿ ಸಾಕಷ್ಟು ಸೆಣೆಸಿದ ಡೆಲ್ಲಿ ತಂಡದ ಆಟ ಕೂಡ ಶ್ಲಾಘನೀಯ ಎಂದವರು ಬಣ್ಣಿಸಿದ್ದಾರೆ.