Tuesday, May 12

ಇರಾನ್ ಪರಮಾಣು ಪ್ರಸ್ತಾವನೆಯನ್ನು ‘ಕಸ’ಕ್ಕೆ ಹೋಲಿಸಿದ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ನೀಡಿರುವ ಇತ್ತೀಚಿನ ಪರಮಾಣು ಪ್ರಸ್ತಾವನೆಯನ್ನು “ಕಸದ ತುಂಡು” ಎಂದು ತೀವ್ರವಾಗಿ ತಿರಸ್ಕರಿಸಿದ್ದಾರೆ. ಶ್ವೇತಭವನದಲ್ಲಿ ನಡೆದ ತಾಯಂದಿರ ಆರೋಗ್ಯ, ಫಲವತ್ತತೆ ಮತ್ತು ಮಕ್ಕಳ ಆರೈಕೆ ಸಂಬಂಧಿತ ಕಾರ್ಯಕ್ರಮದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.

ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್‌ನ ಪ್ರತಿಕ್ರಿಯೆ “ಸ್ವೀಕಾರಾರ್ಹವಲ್ಲ” ಹಾಗೂ “ಮೂರ್ಖತನದ ಪ್ರಸ್ತಾಪ” ಎಂದು ಕಿಡಿಕಾರಿದರು.

ಇತ್ತೀಚಿನ ಅಮೆರಿಕದ ಸೈನಿಕ ದಾಳಿಗಳ ಬಳಿಕ ಹಾನಿಗೊಳಗಾದ ಯುರೇನಿಯಂ ಶುದ್ಧೀಕರಣ ಘಟಕಗಳಿಂದ “ಪರಮಾಣು ಧೂಳು” ತೆರವು ಮಾಡುವ ವಿಷಯದಲ್ಲಿ ಇರಾನ್ ಮೊದಲಿಗೆ ಒಪ್ಪಿಕೊಂಡಿದ್ದರೂ ನಂತರ ತನ್ನ ನಿಲುವು ಬದಲಾಯಿಸಿದೆ ಎಂದು ಟ್ರಂಪ್ ಆರೋಪಿಸಿದರು.

“ನಾವು ಜಗತ್ತಿಗೆ ಸೇವೆ ಮಾಡುತ್ತಿದ್ದೇವೆ, ಇರಾನ್‌ಗೆ ಪರಮಾಣು ಶಸ್ತ್ರಾಸ್ತ್ರ ಇರಲು ಸಾಧ್ಯವಿಲ್ಲ” ಎಂದು ಅವರು ಪುನರುಚ್ಚರಿಸಿದರು.