Thursday, August 6

ಅಹ್ಮದಾಬಾದ್ ಬಳಿ ಭೀಕರ ವಿಮಾನ ಅಪಘಾತ; ಸಂಸದರೂ ಸೇರಿದಂತೆ 240ಕ್ಕೂ ಹೆಚ್ಚು ಪ್ರಯಾಣಿಕರು ಇದ್ದ ಶಂಕೆ

ಅಹಮದಾಬಾದ್: ಗುಜರಾತ್ ರಾಜ್ಯದ ಅಹಮದಾಬಾದ್ ಬಳಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಅಹ್ಮದಾಬಾದ್ ವಿಮಾನ ನಿಲ್ದಾಣದ ಬಳಿಯ ವಿಮಾನ ಪಾತನವಾಗಿದ್ದು, ಬೆಂಕಿ ಹಾಗೂ ದಟ್ಟ ಹೊಗೆ ನೋಡುಗರನ್ನು ಬೆಚ್ಚಿ ಬೀಳಿಸಿದೆ.

ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ವಿಮಾನವೇ ದುರಂತಕ್ಕೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆಗಷ್ಟೇ ಟೇಕ್ ಆಫ್ ಆದ ವಿಮಾನದಲ್ಲಿ ಸಂಸದರು ಸೇರಿದಂತೆ 240ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಅದೇ ವಿಮಾನ ಅಪಘಾತವಾಗಿದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.