Sunday, July 26

ಪಾರ್ವತಿ ನಟನೆಯ ‘ಪ್ರಧಮ ದೃಷ್ಟಿಯ ಕುಟ್ಟಕ್ಕರ್’ ಫಸ್ಟ್ ಲುಕ್ ಹೀಗಿದೆ.

ಚೆನ್ನೈ: ನಿರ್ದೇಶಕ ಶಹದ್ ಅವರ ಬಹುನಿರೀಕ್ಷಿತ ಮಲಯಾಳಂ ತನಿಖಾ ಥ್ರಿಲ್ಲರ್ ‘ಪ್ರಧಮ ದೃಷ್ಟಿಯ ಕುಟ್ಟಕ್ಕರ್’ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.

11 ಐಕಾನ್ಸ್ ಫಿಲ್ಮ್ ಪ್ರೊಡಕ್ಷನ್ಸ್ ಸಂಸ್ಥೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟರ್ ಹಂಚಿಕೊಂಡಿದ್ದು, “ಎಫ್‌ಐಆರ್ ದಾಖಲಾಗಿದೆ, ಶೀಘ್ರದಲ್ಲೇ ಚಾರ್ಜ್‌ಶೀಟ್ ಬರಲಿದೆ” ಎಂಬ ಟ್ಯಾಗ್‌ಲೈನ್ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಮೋಷನ್ ಪೋಸ್ಟರ್‌ನಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಗಂಭೀರ ಭಾವದಲ್ಲಿ ಕಾಣಿಸಿಕೊಂಡಿದ್ದು, ನಟಿ ಪಾರ್ವತಿ ತಿರುವೋತ್ತು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮೂಲಗಳ ಪ್ರಕಾರ, ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟ ಪೊಲೀಸ್ ಅಧಿಕಾರಿಯ ಪತ್ನಿಯಾಗಿ ಬಳಿಕ ಪೊಲೀಸ್ ಇಲಾಖೆಗೆ ಸೇರುವ ಮಹಿಳೆಯ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಮ್ಯಾಥ್ಯೂ ಥಾಮಸ್, ಉನ್ನಿಮಯ ಪ್ರಸಾದ್, ವಿಜಯ ರಾಘವನ್, ಸಿದ್ಧಾರ್ಥ್ ಭರತನ್ ಮತ್ತು ಅಜೀಸ್ ನೆಡುಮಂಗಡ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

‘ಪ್ರಕಾಶನ್ ಪರಕ್ಕಟ್ಟೆ’ ಖ್ಯಾತಿಯ ಶಹದ್ ನಿರ್ದೇಶಿಸಿರುವ ಈ ಚಿತ್ರದ ಕಥೆಯನ್ನು ಪಿ.ಎಸ್. ಸುಬ್ರಮಣಿಯನ್ ಮತ್ತು ವಿಜೇಶ್ ತೊಟ್ಟಿಂಗಲ್ ಬರೆದಿದ್ದಾರೆ. ಕೊಟ್ಟಾಯಂ, ಚಂಗನಾಶೇರಿ ಹಾಗೂ ಕುಟ್ಟನಾಡ್ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದ್ದು, ಅರ್ಜುನ್ ಸೆಲ್ವ ನಿರ್ಮಾಣ ಮಾಡಿದ್ದಾರೆ. ಮುಜೀಬ್ ಮಜೀದ್ ಸಂಗೀತ, ರೂಬಿ ವರ್ಗೀಸ್ ರಾಜ್ ಛಾಯಾಗ್ರಹಣ ನೀಡಿರುವ ಈ ಚಿತ್ರವು ಸೆಪ್ಟೆಂಬರ್ 11ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

#PradhamaDrishtyaKuttakkar First Look 💥

Starring : Parvathy, Mathew Thomas, Sidharth Bharathan & Unnimaya Prasad.

In Cinemas September 11 pic.twitter.com/loQrLaalTP

— KUDALINGAM MUTHU (@KUDALINGAM49671) July 26, 2026