
ಹೈಕೋರ್ಟ್ ಮಹತ್ವದ ತೀರ್ಪು; KIADB ಭೂಸ್ವಾಧೀನ ರದ್ದು, ದಯಾನಂದ್ ಪೈಗೆ ಭಾರೀ ದಂಡ, ಸಿಬಿಐ ತನಿಖೆಗೆ ನಿರ್ದೇಶನ
ಬೆಂಗಳೂರು: ಕೈಗಾರಿಕೆ ಹೆಸರಲ್ಲಿ ಭೂಸವಾಧೀನ ಮಾಡಿಸಿ ವೈಯಕ್ತಿಕ ಬ್ಯುಸಿನೆಸ್ ನಡೆಸುವ ರಿಯಲ್ ಎಸ್ಟೇಟ್ ಉದ್ಯಮಿ ದಯಾನಂದ್ ಪೈ ಪ್ರಯತ್ನಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಮಹತ್ವದ ಆದೇಶವೊಂದರಲ್ಲಿ ಬೆಂಗಳೂರಿನ ಹೆಬ್ಬಾಳ ಬಳಿ ಲೇಕ್ ವ್ಯೂ ಪ್ರವಾಸೋದ್ಯಮ ನಿಗಮಕ್ಕೆ ನೂರಾರು ಕೋಟಿ ಬೆಲೆಬಾಳುವ ಜಾಮೀನು ಸ್ವಾಧೀನ ಅಧಿಸೂಚನೆಯನ್ನೇ ಹೈಕೋರ್ಟ್ ರದ್ದುಪಡಿಸಿದೆ. ಅಷ್ಟೇ ಅಲ್ಲ ಉದ್ಯಮಿ ದಯಾನಂದ್ ಪೈ ಅವರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ದಂಡ ವಿಧಿಸಿದ್ದಲ್ಲದೆ, ಸಿಬಿಐ ತನಿಖೆಗೂ ಆದೇಶಿಸಿ ಶುಕ್ರವಾರ ತೀರ್ಪು ಪ್ರಕಟಿಸಿದೆ.ಹೆಬ್ಬಾಳದಲ್ಲಿ ಸ್ಥಳೀಯರ ಆಕ್ಷೇಪದ ನಡುವೆಯೂ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ 63.33 ಎಕರೆ ಭೂಮಿಯನ್ನು ಸ್ವಾಧೀನ ಕುರಿತು KIADBಯು 2002ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಅದೇ ಜಮೀನನ್ನು ಬಿಡಿಡಿಎಯು 2004ರಲ್ಲಿ ಅರ್ಕಾವತಿ ಲೇಔಟ್ ನಿರ್ಮಾಣಕ್ಕೂ ಅಧಿಸೂಚನೆ ಹೊರಡಿಸಿದೆ. ಅದಾಗಿಯೂ KIADBಯು ಕಾಯ್ದೆಯ ಸೆಕ್ಷನ್ 28 (ಎ) ರ ಅಡಿಯಲ್ಲಿ 63.33 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಈ ಪೈಕಿ ಹೆಬ್ಬಾಳದ ಅಮಾನಿಖಾನೆ ಬಿಟೆಲಿ ಬಳಿಯ...









