Thursday, August 13

ವಿದೇಶ

ಡಿಸೆಂಬರ್ 10ರಂದು ‘ಬೃಹತ್ ಬೆಳಗಾವಿ ಚಲೋ’; ಆಶಾ ಕಾರ್ಯಕರ್ತೆಯರಿಗೆ ಹೀಗೊಂದು ಕರೆ

ಡಿಸೆಂಬರ್ 10ರಂದು ‘ಬೃಹತ್ ಬೆಳಗಾವಿ ಚಲೋ’; ಆಶಾ ಕಾರ್ಯಕರ್ತೆಯರಿಗೆ ಹೀಗೊಂದು ಕರೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಕೊಟ್ಟ ಭರವಸೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಡಿಸೆಂಬರ್ ೧೦ರಂದು "ಬೃಹತ್ ಬೆಳಗಾವಿ ಚಲೋ" ಹೋರಾಟ ಹಮ್ಮಿಕೊಂಡಿದೆ. ಅಂದು ಬೆಳಗಾವಿ ಸುವರ್ಣ ಸೌಧ ಬಳಿ ರಾಜ್ಯದ ವಿವಿಧೆಡೆಯ ಆಶಾ ಕಾರ್ಯಕರ್ತೆಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಹಾಗೂ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ತಿಳಿಸಿದ್ದಾರೆ.ಆಶಾ ಕಾರ್ಯಕರ್ತೆಯರು 2008-9ನೇ ಸಾಲಿನಿಂದ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿಗೆ ಕೆಲವೇ ಸಾವಿರ ಸಂಖ್ಯೆಯಲ್ಲಿ ಇದ್ದ ಈ ಕಾರ್ಯಕರ್ತೆಯರ ಸಂಖ್ಯೆ ಕೆಲವೇ ವರ್ಷಗಳಲ್ಲಿ, 42000ಕ್ಕೂ ಹೆಚ್ಚಿನ ಸಂಖ್ಯೆಗೆ ಏರಿತು. ಅಲ್ಲಿಂದ ಇಲ್ಲಿಯವರೆಗೂ ಕಳೆದ 18 ವರ್ಷಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಕುಟುಂಬಗಳ ತಾಯಿ-ಮಗು ಹಾಗೂ ಜನ ಸಾಮಾನ್ಯರಿಗೆ ಸರ್ಕಾರದ ಎಲ್ಲಾ ಆರೋಗ್ಯ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಮಾರಣಾಂತಿಕ ಸಾಂಕ್ರಾಮಿಕ ಕೊರೋನಾ ಹರಡಿದ ಸಂದರ್ಭದಲ್ಲಿ ಅ...
‘ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೋಗಿ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ’; ಸಿದ್ದರಾಮಯ್ಯ

‘ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೋಗಿ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ’; ಸಿದ್ದರಾಮಯ್ಯ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಜ್ಯದಲ್ಲಿ 63% ಭ್ರಷ್ಟಾಚಾರ ಇದೆ ಇದೆ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಮಾಡಿರುವ ಆರೋಪ ಬಿಜೆಪಿ ಸರ್ಕಾರದ ಅವಧಿಯದ್ದು ಎಂದು ಸಿಎಂ ಸಿದ್ದರಾಮಯ್ಯ ಬೊಟ್ಟು ಮಾಡಿದ್ದಾರೆ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಉಪಲೋಕಾಯುಕ್ತರ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬಿಜೆಪಿಯ ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೋಗಿ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.ಬಿಜೆಪಿ ನಾಯಕರ ಹೇಳಿಕೆಗಳಿಗೆ ಎದಿರೇಟು ನೀಡಿರುವ ಸಿದ್ದರಾಮಯ್ಯ, ಉಪಲೋಕಾಯುಕ್ತ ಬಿ.ವೀರಪ್ಪ ಅವರು 2019ರ ನವೆಂಬರ್‌ನಲ್ಲಿ ಕೊಟ್ಟ ವರದಿಯಲ್ಲಿ ರಾಜ್ಯದಲ್ಲಿ 63% ಭ್ರಷ್ಟಾಚಾರ ಇದೆ ಎಂಬುದಾಗಿತ್ತು. ಅದೇ ವರದಿಯನ್ನು ಆಧರಿಸಿ ಬಿ.ವೀರಪ್ಪನವರು ಈಗ ಮಾತನಾಡಿದ್ದಾರೆ. ಅವರು ವರದಿ ನೀಡುವ ವೇಳೆಯಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇತ್ತು ಎಂದು ಸ್ಪಷ್ಟಪಡಿಸಿದ್ದಾರೆ.ಬಿಜೆಪಿ ಸರ್ಕಾರವಿದ್ದ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಭ್ರಷ್ಟಾಚಾರ ಹಗರಣಗಳು ಒಂದೇ, ಎರಡೇ. ಕೊರೊನಾ ಕಾಲದಲ್ಲಿ ಜನ ಹಾದಿಬೀದಿಯಲ್ಲಿ ಸಾಯುವಾಗ...
ರಾಜ್ಯ ಸರ್ಕಾರದ ಶೇ.63 ರಷ್ಟು ಭ್ರಷ್ಟಾಚಾರ: ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ

ರಾಜ್ಯ ಸರ್ಕಾರದ ಶೇ.63 ರಷ್ಟು ಭ್ರಷ್ಟಾಚಾರ: ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ಶೇ.63ರಷ್ಟಿದೆ ಎಂಬ ಉಪಲೋಕಾಯುಕ್ತ ಬಿ. ವೀರಪ್ಪ ಅವರ ಹೇಳಿಕೆ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ವಿರುದ್ಧ ಬಿಜೆಪಿ ಟೀಕಾಸ್ತ್ರ ಪ್ರಯೋಗಿಸಿದೆ.ರಾಜ್ಯ ಬಿಜೆಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, “ಇದು ಆಡಳಿತಕ್ಕೆ ಅವಮಾನ. ಸರ್ಕಾರಕ್ಕೆ ಸ್ವಾಭಿಮಾನ ಇದ್ದರೆ ವಿಸರ್ಜಿಸಲಿ. ಸಿಬಿಐ ತನಿಖೆಗೆ ಒಪ್ಪಿಗೆ ನೀಡಲಿ” ಎಂದು ಹೇಳಿದರು."ಕಮಿಷನ್‌ಗಳಲ್ಲಿ ಕರ್ನಾಟಕ ಎಟಿಎಂ" ಎಂದು ಅಶೋಕ ಆರೋಪಿಸಿದರು. ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಹಣ ದುರುಪಯೋಗ, ಭೋವಿ ನಿಗಮದಲ್ಲಿ ಏಕರೆಗೆ ₹25 ಲಕ್ಷ ಕಮಿಷನ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಿವೇಶನ ಹಂಚಿಕೆ, ಬಾರ್ ಲೈಸೆನ್ಸ್‌ಗೆ ₹20 ಲಕ್ಷ ಬೇಡಿಕೆ, ಟ್ರಾನ್ಸ್‌ಫಾರ್ಮರ್‌ಗಳಲ್ಲಿ ₹90 ಕೋಟಿ ಹಗರಣ ನಡೆದಿದೆ ಎಂದು ಅಶೋಕ್ ಗಮನಸೆಳೆದರು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು....
KIALನಲ್ಲಿ ಕಸ್ಟಮ್ಸ್ ದಾಳಿ; ಭಾರಿ ಮೌಲ್ಯದ ವಸ್ತು, ಅಪರೂಪದ ಪ್ರಾಣಿಗಳು ವಶ

KIALನಲ್ಲಿ ಕಸ್ಟಮ್ಸ್ ದಾಳಿ; ಭಾರಿ ಮೌಲ್ಯದ ವಸ್ತು, ಅಪರೂಪದ ಪ್ರಾಣಿಗಳು ವಶ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ವಿದೇಶಗಳಿಂದ ಬೆಂಗಳೂರಿಗೆ ಅಕ್ರಮವಾಗಿ ವಸ್ತುಗಳು ಮತ್ತು ಪ್ರಾಣಿಗಳನ್ನು ತರಲಾಗುತ್ತಿದ್ದ ವಿಚಾರ ಮತ್ತೊಮ್ಮೆ ಬೆಳಕಿಗೆ ಬಂದಿದೆ. ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ವೇಳೆ ಈ ಅಕ್ರಮ ಪತ್ತೆಯಾಗಿದೆ.ಖಚಿತ ಮಾಹಿತಿ ಮೇರೆಗೆ ವಿಶೇಷ ತಂಡ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಾಗಣೆಗೆ ಯತ್ನಿಸುತ್ತಿದ್ದ ಸಿಗರೇಟ್, ಇ-ಸಿಗರೇಟ್ ಸೇರಿದಂತೆ ಮೌಲ್ಯವಂತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ವಿದೇಶೀ ಪ್ರಾಣಿಗಳನ್ನು ಕೂಡ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಅಧಿಕಾರಿಗಳು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ವಿಮಾನ ನಿಲ್ದಾಣದ ಮೂಲಕ ನಡೆಯುತ್ತಿರುವ ಅಕ್ರಮ ಸಾಗಾಣಿಕೆಗೆ ಈ ದಾಳಿ ಪರಿಣಾಮಕಾರಿಯಾಗಿ ಬ್ರೇಕ್ ಹಾಕಿದೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ....
ನ್ಯಾಯಾಲಯಗಲ್ಲಿನ ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಪ್ರಿಯಾಂಕ್ ಮನವಿ; CSಗೆ ಪತ್ರ

ನ್ಯಾಯಾಲಯಗಲ್ಲಿನ ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಪ್ರಿಯಾಂಕ್ ಮನವಿ; CSಗೆ ಪತ್ರ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಇಲಾಖೆಗಳಲ್ಲಿ ನಿಗದಿತ ಕಾಲಮಿತಿಯೊಳಗೆ ನೇಮಕಾತಿ ಮತ್ತು ಮುಂಬಡ್ತಿಗಳನ್ನು ಹೊಂದದೇ ಅಭ್ಯರ್ಥಿಗಳು ಅವಕಾಶ ವಂಚಿತರಾಗಿ ಅನ್ಯಾಯಕೊಳ್ಳಗಾಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಲ್ಯಾಣ ಕರ್ನಾಟಕದ ಸಮಗ್ರ ಏಳಿಗೆಗೆ “ಆರ್ಟಿಕಲ್ 371ಜೆ“ ವರದಾನವಾಗಿದ್ದರೂ, ಸಮರ್ಪಕ ಅನುಷ್ಠಾನದಲ್ಲಿ ನಿಷ್ಠೆ ಇದ್ದರೆ ಮಾತ್ರ ವಿಶೇಷ ಸ್ಥಾನಮಾನದ ಆಶಯಗಳು ಈಡೇರಲಿದೆ ಎಂದು ಅವರು ಹೇಳಿದ್ದಾರೆ.ನ್ಯಾಯಾಲಯದ ಮುಂದೆ ಹಲವು ವರ್ಷಗಳಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 47 ಪ್ರಕರಣಗಳು ಬಾಕಿ ಇರುವುದರಿಂದ ಆರ್ಟಿಕಲ್ 371ಜೆ ಅಡಿಯಲ್ಲಿನ ನೇಮಕಾತಿ, ಮುಂಬಡ್ತಿ ವಿಷಯಗಳಲ್ಲಿ ಹಿನ್ನೆಡೆ ಉಂಟಾಗಿದೆ. ಇಲಾಖೆಗಳಲ್ಲಿ ನಿಗದಿತ ಕಾಲಮಿತಿಯೊಳಗೆ ನೇಮಕಾತಿ ಮತ್ತು ಮುಂಬಡ್ತಿಗಳನ್ನು ಹೊಂದದೇ ಅಭ್ಯರ್ಥಿಗಳು ಅವಕಾಶ ವಂಚಿತರಾಗಿ ಅನ್ಯಾಯಕೊಳ್ಳಗಾಗಿರುತ್ತಾರೆ ಎಂದಿದ್ದಾರೆ.ಕರ್ನಾಟಕ ಉಚ್ಛ ನ್ಯಾಯಾಲಯದ ಬೆಂಗಳೂರು, ಕಲಬುರಗಿ ಹಾಗೂ ಧಾರವಾಡ ವಿಭಾಗೀಯ ಪೀಠಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ, ಮುಂಬಡ್ತಿ ಹಾಗೂ ವಿವಿಧ ಸೇವಾ ವಿಷಯಗಳಿಗೆ ಸಂ...
ಸಮಂತಾ ಜೊತೆ ಕೆಲಸ ಮಾಡುವ ಕಾಂತಾರ ನಟನ ಕನಸು ನನಸು!

ಸಮಂತಾ ಜೊತೆ ಕೆಲಸ ಮಾಡುವ ಕಾಂತಾರ ನಟನ ಕನಸು ನನಸು!

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೀಡಿಯೊ, ಸಿನಿಮಾ
ಮುಂಬೈ: ಕನ್ನಡದ ಕಾಂತಾರ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿ, ಬಳಿಕ ಆರ್.ಮಾಧವನ್ ಜೊತೆ ತಮಿಳು ವೆಬ್‌ಸೀರಿಸ್ ಲೆಗಸಿಗೆ ಸಜ್ಜಾಗಿರುವ ನಟ ಗುಲ್ಶನ್ ದೇವಯ್ಯ ಈಗ ತೆಲುಗು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ಸಮಂತಾ ರುತ್‌ ಪ್ರಭು ಅಭಿನಯದ ಮಾ ಇಂತಿ ಬಂಗಾರಂ ಅವರ ಮೊದಲ ತೆಲುಗು ಚಿತ್ರ.ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಪಾತ್ರವಹಿಸಿರುವುದಕ್ಕೆ ದೇವಯ್ಯ ಆನಂದ ವ್ಯಕ್ತಪಡಿಸಿದ್ದಾರೆ. “ಸಮಂತಾ ಜೊತೆ ಕೆಲಸ ಮಾಡುವ ಆಸೆ ನನಗಿನ್ನೂ ಹಲವು ವರ್ಷಗಳಿಂದಿತ್ತು. ಇದರೀಗ ಸರಿಯಾದ ಸಮಯದಲ್ಲಿ ನನಗೆ ಒದಗಿದೆ,” ಎಂದು ಅವರು ಮಾಧ್ಯಮ ಸಂದರ್ಶನದಲ್ಲಿ ಹೇಳಿದರು.ಚಿತ್ರದ ಮುಹೂರ್ತ ವಿಧಿ ಇತ್ತೀಚೆಗೆ ನೆರವೇರಿತು. ಗುಲ್ಶನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಮುಹೂರ್ತ ಹಾಗೂ ಘೋಷಣೆ ವಿಡಿಯೊ ಹಂಚಿಕೊಂಡಿದ್ದು, ತೆಲುಗು ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. “MIBಯಲ್ಲಿನ ನನ್ನ ಪಾತ್ರಕ್ಕಾಗಿ ತೀವ್ರವಾಗಿ ತಯಾರಿ ನಡೆಸುತ್ತಿದ್ದೇನೆ. ಈಗಲೇ ಹೆಚ್ಚಿನ ವಿವರ ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ ಪಾತ್ರವು ಸವಾಲಿನದು. ಅದನ್ನು ಸಮರ...
“ಏಳು ವರ್ಷಗಳ ಹಿಂದೆ ಖರೀದಿಸಿದ ನನ್ನ ಸ್ವಂತ ವಾಚ್”; ದುಬಾರಿ ಕೈಗಡಿಯಾರ ಬಗ್ಗೆ ಡಿಕೆಶಿ ಸ್ಪಷ್ಟನೆ

“ಏಳು ವರ್ಷಗಳ ಹಿಂದೆ ಖರೀದಿಸಿದ ನನ್ನ ಸ್ವಂತ ವಾಚ್”; ದುಬಾರಿ ಕೈಗಡಿಯಾರ ಬಗ್ಗೆ ಡಿಕೆಶಿ ಸ್ಪಷ್ಟನೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರಿಸಿರುವ ದುಬಾರಿ ಗಡಿಯಾರಗಳ ಕುರಿತು ಉಂಟಾಗಿರುವ ವಿವಾದಕ್ಕೆ ಡಿಕೇಶಿ ಮಂಗಳೂರಿನಲ್ಲಿ ಬುಧವಾರ ಸ್ಪಷ್ಟನೆ ನೀಡಿದರು.“ಇದು ನನ್ನ ಸ್ವಂತ ಕೈಗಡಿಯಾರ. ನಾನು ಅದನ್ನು ಏಳು ವರ್ಷಗಳ ಹಿಂದೆ ನನ್ನ ಕ್ರೆಡಿಟ್ ಕಾರ್ಡ್ ಮೂಲಕ 24 ಲಕ್ಷ ರೂ. ನೀಡಿ ಖರೀದಿಸಿದ್ದೇನೆ. ಬೇಕಿದ್ದರೆ ನೀವು ನನ್ನ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನೇ ಪರಿಶೀಲಿಸಬಹುದು. ನನ್ನ ಚುನಾವಣಾ ಪ್ರಮಾಣ ಪತ್ರದಲ್ಲೂ ಈ ವಿವರವನ್ನು ತಿಳಿಸಿದ್ದೇನೆ” ಎಂದು ಉಪಮುಖ್ಯಮಂತ್ರಿ ಹೇಳಿದರು.ಸಮಾಜವಾದಿ ಮುಖ್ಯಮಂತ್ರಿಯೇ ದುಬಾರಿ ಗಡಿಯಾರ ಧರಿಸಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಮುಖ್ಯಮಂತ್ರಿಗಳಿಗೆ ತಮ್ಮ ಇಷ್ಟದ ಗಡಿಯಾರ ಧರಿಸುವ ಹಕ್ಕಿದೆ. ಅದನ್ನು ಖರೀದಿಸುವ ಸಾಮರ್ಥ್ಯವೂ ಅವರಿಗೆ ಇದೆ. ಜನರು ಗಡಿಯಾರಗಳ ಬಗ್ಗೆ ಅನವಶ್ಯಕ ಕುತೂಹಲ ತೋರಿಸುತ್ತಿದ್ದಾರೆ. ನನ್ನ ತಂದೆಗೆ ಏಳು ಗಡಿಯಾರಗಳಿದ್ದವು. ಅವರು ನಿಧನರಾದ ನಂತರ ಅವನ್ನು ಯಾರು ಧರಿಸಬೇಕು? ನಾನು ಅಥವಾ ನನ್ನ ಸಹೋದರ” ಎಂದು ಪ್ರತಿಕ್ರಿಯಿಸಿದರು....
ರಾಜಭವನಕ್ಕೆ ಮರುನಾಮಕರಣ; ಇನ್ನು ಮುಂದೆ ‘ಲೋಕಭವನ ಕರ್ನಾಟಕ’

ರಾಜಭವನಕ್ಕೆ ಮರುನಾಮಕರಣ; ಇನ್ನು ಮುಂದೆ ‘ಲೋಕಭವನ ಕರ್ನಾಟಕ’

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಜ್ಯಪಾಲರ ಅಧಿಕೃತ ನಿವಾಸವಾಗಿರುವ ಬೆಂಗಳೂರು ರಾಜಭವನಕ್ಕೆ ಹೊಸ ಹೆಸರು ಸಿಕ್ಕಿದೆ. ಇನ್ನುಮುಂದೆ ಅದನ್ನು ‘ಲೋಕ ಭವನ, ಕರ್ನಾಟಕ’ ಎಂದು ಕರೆಯಲಾಗುವುದು ಎಂದು ರಾಜಭವನ ಮೂಲಗಳು ತಿಳಿಸಿವೆ.ಕೇಂದ್ರ ಗೃಹ ಸಚಿವಾಲಯ ನವೆಂಬರ್ 25, 2025ರಂದು ಎಲ್ಲಾ ರಾಜ್ಯಗಳ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳಿಗೆ ಪತ್ರ ಬರೆದು, ದೇಶದ ಎಲ್ಲಾ ರಾಜಭವನಗಳನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡಲು ಶಿಫಾರಸು ಮಾಡಿತ್ತು. ಅದರಂತೆ ಕರ್ನಾಟಕವು ಕೂಡಾ ಹೊಸ ಹೆಸರನ್ನು ಜಾರಿಗೆ ತಂದಿದೆ.ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ಬುಧವಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕಳುಹಿಸಿದ ಪತ್ರದಲ್ಲಿ, ಸರ್ಕಾರದ ಎಲ್ಲ ಇಲಾಖೆಗಳಲ್ಲಿ, ಸರ್ಕಾರಿ ಆದೇಶಗಳಲ್ಲಿ, ಅಧಿಕೃತ ವ್ಯವಹಾರಗಳಲ್ಲಿ, ವೆಬ್‌ಸೈಟ್‌ಗಳಲ್ಲಿ ಹಾಗೂ ಫಲಕಗಳಲ್ಲಿ ‘ರಾಜಭವನ’ ಎಂಬುದಕ್ಕೆ ಬದಲಾಗಿ ‘ಲೋಕ ಭವನ, ಕರ್ನಾಟಕ’ ಎನ್ನುವ ಹೆಸರನ್ನೇ ಬಳಸಬೇಕು ಎಂದು ಸೂಚಿಸಲಾಗಿದೆ.ಇಲ್ಲಿಯವರೆಗೂ ಬ್ರಿಟಿಷ್ ಪರಂಪರೆಯಂತೆ ರಾಜಭವನಗಳು ರಾಜ್ಯಪಾಲರ ಆಡಳಿತ ಕೇಂದ್ರಗಳಾಗಿದ್ದವು....
‘ದಿ ಡೆವಿಲ್’ ಡಿಸೆಂಬರ್ 11ರಂದು ಬಿಡುಗಡೆ

‘ದಿ ಡೆವಿಲ್’ ಡಿಸೆಂಬರ್ 11ರಂದು ಬಿಡುಗಡೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ಸಿನಿಮಾ
ಬೆಂಗಳೂರು: ಕನ್ನಡ ಚಿತ್ರದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ದಿ ಡೆವಿಲ್’ ಚಿತ್ರವು ಡಿಸೆಂಬರ್ 11ರಂದು ಬಿಡುಗಡೆಯಾಗಲಿದೆ. ಸಂವೇದನಾಶೀಲ ಅಭಿಮಾನಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಹಾಗೂ ಅವರ ಸಂಗಾತಿ ಪವಿತ್ರಾ ಗೌಡ ಪ್ರಸ್ತುತ ಬೆಂಗಳೂರು ಕೇಂದ್ರ ಕಾರಾಗೃಹದಲ್ಲೇ ಬಂಧನದಲ್ಲಿದ್ದಾರೆ.ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲು, ನಿರ್ದೇಶಕ ಪ್ರಕಾಶ್ ವೀರ್ ಹಾಗೂ ಚಿತ್ರದ ತಂಡ ಮಂಗಳವಾರ ನಗರದೊಳಗೆ ಪತ್ರಿಕಾಗೋಷ್ಠಿ ನಡೆಸಿತು. ದರ್ಶನ್ ಜಾಮೀನಿನ ಮೇಲೆ ಹೊರಬಂದಿದ್ದ ಅವಧಿಯಲ್ಲಿ ಚಿತ್ರೀಕರಣ ಹಾಗೂ ಡಬ್ಬಿಂಗ್ ಕಾರ್ಯಗಳನ್ನು ಪೂರ್ಣಗೊಳಿಸಿದ್ದರು ಎಂದು ನಿರ್ದೇಶಕ ತಿಳಿಸಿದ್ದಾರೆ.ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್ ವೀರ್, “ಚಿತ್ರದ ಶೀರ್ಷಿಕೆಗೆ ಕಥೆಯೇ ಆಧಾರ. ದರ್ಶನ್ ಶೇ.100 ವೃತ್ತಿಪರರು. ಜೈಲಿನಿಂದ ಹೊರಬಂದು ಚಿತ್ರೀಕರಣಕ್ಕೆ ಬಂದಾಗಲೂ ಅವರ ಅಭಿನಯದಲ್ಲಿ ಯಾವುದೇ ಅಸಮಾನ್ಯತೆ ಕಾಣಿಸಲಿಲ್ಲ” ಎಂದರು.'ದರ್ಶನ್ ಬಿಡುಗಡೆಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾವು ಹಲವು ಬಾರಿ ಕಾರ್ಯಕ್ರಮವನ್ನು ಮುಂದೂಡಿದ್ದೇವೆ. ಆದರೆ, ದುರದೃಷ್ಟವಶಾತ್ ಅವರು ಇಂದು ...
ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ಹೃದಯಾಘಾತದಿಂದ ವಿಧಿವಶ

ಚಿಕ್ಕಪೇಟೆಯ ಮಾಜಿ ಶಾಸಕ ಆರ್‌.ವಿ. ದೇವರಾಜ್ ಹೃದಯಾಘಾತದಿಂದ ವಿಧಿವಶ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರದ ಮಾಜಿ ಶಾಸಕ ಆರ್‌.ವಿ. ದೇವರಾಜ್ (67) ಅವರು ವಿಧಿವಶರಾಗಿದ್ದಾರೆ.ಡಿಸೆಂಬರ್ 3ರಂದು ತಮ್ಮ ಜನ್ಮದಿನದ ಪ್ರಯುಕ್ತ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿದ್ದ ವೇಳೆ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ದೇವರಾಜ್ ಅವರು ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.ಆರ್‌.ವಿ. ದೇವರಾಜ್ ಅವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಹಿರಿಯ ನಾಯಕರು ಮಾಜಿ ಶಾಸಕ ಶ್ರೀ ಆರ್. ವಿ. ದೇವರಾಜ್ ನಿಧಾನ ಬಗ್ಗೆ ಕಾಂಗ್ರೆಸ್ ನಾಯಕ ಹೆಚ್.ಎಂ.ರೇವಣ್ಣ ದುಃಖ ವ್ಯಕ್ತಪಡಿಸಿದ್ದಾರೆ. ಪಕ್ಷದ ತತ್ವಗಳಿಗೆ ಅಚಲ ಬದ್ಧತೆ, ಜನಪರ ನಿಲುವು ಮತ್ತು ನೆಲಬದ್ಧ ರಾಜಕೀಯವೇ ಅವರ ಬದುಕಿನ ಗುರುತು ಎಂದು ಸಾಮಾಜಿಕ ಮಾಧ್ಯಮ 'X'ನಲ್ಲಿ ಬರೆದುಕೊಂಡಿರುವ ರೇವಣ್ಣ, ಈ ದುಃಖದ ಕ್ಷಣದಲ್ಲಿ ಅವರ ಕುಟುಂಬದವರಿಗೆ, ಹಾಗೂ ಅಭಿಮಾನ...