Thursday, August 13

ವಿದೇಶ

‘ನಿಮ್ಮನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದು ನಾನೇ. ನೀವು ಯಾವ ವಿದ್ವಾಂಸರು’?: ಸಿದ್ದು ಬಗ್ಗೆ ದೇವೇಗೌಡ ಗರಂ

‘ನಿಮ್ಮನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದು ನಾನೇ. ನೀವು ಯಾವ ವಿದ್ವಾಂಸರು’?: ಸಿದ್ದು ಬಗ್ಗೆ ದೇವೇಗೌಡ ಗರಂ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: “ರಾಷ್ಟ್ರೀಯ ಜನತಾ ದಳ (ಎಸ್) ಪಕ್ಷ ಹಾಗೂ ಎನ್‌ಡಿಎ ಮೈತ್ರಿ ಅಟಲ್‌! ಯಾವುದೇ ಸಂದರ್ಭದಲ್ಲೂ ಮೈತ್ರಿಯನ್ನು ಮುರಿಯುವ ಪ್ರಶ್ನೆ ಬರುವುದಿಲ್ಲ” ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಘೋಷಿಸಿದ್ದಾರೆ.ಜೆಡಿಎಸ್ ರಜತ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ನಾಯಕತ್ವದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ನಮ್ಮ ಕಾರ್ಯಕರ್ತರು ಇದನ್ನು ಎಂದಿಗೂ ಮರೆಯಬಾರದು' ಎಂದರು.'ಉತ್ತರದಲ್ಲಿ ಜೆಡಿ(ಯು), ದಕ್ಷಿಣದಲ್ಲಿ ಜೆಡಿ(ಎಸ್)' ಎಂದು ಘೋಷಿಸಿದ ದೇವೇಗೌಡ, 'ಅಲ್ಲಿ ನಿತೀಶ್‌ ಕುಮಾರ್ ಇದ್ದಾರೆ, ಇಲ್ಲಿ ಕುಮಾರಸ್ವಾಮಿ ಇದ್ದಾರೆ' ಎಂದು ಪಕ್ಷದ ಬಲವನ್ನು ಹಿರಿಮೆಗೇರಿಸಿದರು.ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿಸಿದ್ದರಾಮಯ್ಯ ಅವರು “ಜೆಡಿಎಸ್‌ನಲ್ಲಿ ಇದ್ದಿದ್ದರೆ ನಾನು ಮುಖ್ಯಮಂತ್ರಿಯಾಗಲಿಲ್ಲ” ಎಂಬ ಹೇಳಿಕೆಯನ್ನು ಕಟುವಾಗಿ ತಳ್ಳಿ ಹಾಕಿದ ಗೌಡರು, “ನಾನು ಸ್ವತಃ ಅವರನ್ನು ಮುಖ್ಯಮಂತ್ರಿ ಮಾಡಲು ಸಿದ್ಧನಾಗಿದ್ದೆ. ಸೋನಿಯಾ ಗಾಂಧಿಯ ...
ಡಿಕೆಶಿ ಸಿಎಂ, ವಿಜಯೇಂದ್ರ ಡಿಸಿಎಂ? ಈ ಬಗ್ಗೆ ಜೋಶಿ ಹೇಳಿಕೆ ಹೀಗಿದೆ

ಡಿಕೆಶಿ ಸಿಎಂ, ವಿಜಯೇಂದ್ರ ಡಿಸಿಎಂ? ಈ ಬಗ್ಗೆ ಜೋಶಿ ಹೇಳಿಕೆ ಹೀಗಿದೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆ ನಡೆದಿರುವಾಗಲೇ, ರಾಜ್ಯ ರಾಜಕಾರಣದಲ್ಲಿ ಬಗೆ ಬಗೆಯ ಸುದ್ದಿಗಳೂ ಹರಿದಾಡುತ್ತಿವೆ. ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಬೇಸರಗೊಂಡು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಸೇರುವ ಸಾಧ್ಯತೆಗಳಿವೆ ಎಂದೂ, ಡಿಕೆಶಿ ಸಿಎಂ ಆಗಿ, ವಿಜಯೇಂದ್ರ ಡಿಸಿಎಂ ಆಗುವ ಸಾಧ್ಯತೆಗಳಿವೆ ಎಂಬ ಮಾತುಗಳೂ ಹರಿದಾಡುತ್ತಿವೆ.ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಬ್ಬಳ್ಳಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಯಾವುದೇ ಉದ್ದೇಶ ಬಿಜೆಪಿಗೆ ಇಲ್ಲ ಎಂದಿದ್ದಾರೆ.ಈ ಸರ್ಕಾರ 5 ವರ್ಷ ಅವಧಿಯನ್ನು ಪೂರ್ಣಗೊಳಿಸಬೇಕು ಎಂಬುದು ನಮ್ಮ ಆಶಯ. ಹಾಗಿರುವಾಗ ಯಾವುದೇ ಕಾರಣಕ್ಕೂ ಈ ಸರ್ಕಾರದ ಅಸ್ಥಿರತೆಯನ್ನು ನಾವು ಬಯಸುವುದಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.ಡಿಕೆಶಿ ಗುಂಪಿನ ಜೊತೆ ಸೇರಿಕೊಳ್ಳುವ ವಿಚಾರವಾಗಲೀ, ಡಿಕೆಶಿಯನ್ನು ಸಿಎಂ ಮಾಡಿ ಬಿವೈ ವಿಜಯೇಂದ್ರರನ್ನು ಉಪಮುಖ್ಯಮಂತ್ರಿ ಮಾಡುವ ಪ್ರಯತ್ನವಾಗಲೀ ನಡೆದಿಲ್ಲ. ಅಂತಹ ಯಾವುದೇ ಯೋಚನೆ ನಮ್ಮ ಪಕ್ಷದ್ದಲ್ಲ ಎಂದು ಪ್ರಲ...
ಅಪರಾಧ ಚಟುವಟಿಕೆ ಹೆಚ್ಚಿದೆ, ದುಷ್ಕರ್ಮಿಗಳಿಗೆ ಪೊಲೀಸರ ಭಯ ಇಲ್ಲವಾಗಿದೆ; ಪ್ರತಿಪಕ್ಷ ಟಾಂಗ್ 

ಅಪರಾಧ ಚಟುವಟಿಕೆ ಹೆಚ್ಚಿದೆ, ದುಷ್ಕರ್ಮಿಗಳಿಗೆ ಪೊಲೀಸರ ಭಯ ಇಲ್ಲವಾಗಿದೆ; ಪ್ರತಿಪಕ್ಷ ಟಾಂಗ್ 

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಕಚ್ಚಾಟದಿಂದಾಗಿ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.ಶಾಸಕರ ಕಚೇರಿ ಮುಂಭಾಗ ಆಯೋಜಿಸಿದ್ದ " ವಂದೇ ಮಾತರಂ ಸಂಭ್ರಮಾಚರಣೆ" ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡಲೇ ಕಾಂಗ್ರೆಸ್‌ ಹೈಕಮಾಂಡ್‌ ಯಾರು ಮುಖ್ಯಮಂತ್ರಿ ಎಂದು ಸ್ಪಷ್ಟವಾಗಿ ತಿಳಿಸಲಿ ಎಂದು ಆಗ್ರಹಿಸಿದರು.ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಕಾದಾಟ ನಡೆಯುತ್ತಿರುವುದರಿಂದ ಸರ್ಕಾರ ಸತ್ತುಹೋಗಿದೆ. ಡಿ.ಕೆ.ಶಿವಕುಮಾರ್‌ ಅವರನ್ನು ಸಿಎಂ ಪದವಿಯಲ್ಲಿ ಕೂರಿಸಬೇಕು ಎಂದು ಅವರ ಪರ ಶಾಸಕರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ನೀಡಿಲ್ಲವೆಂದರೆ ಸರ್ಕಾರ ನಡೆಯುವುದಿಲ್ಲ. ಅಧಿಕಾರಿಗಳು ಕೆಲಸ ಮಾಡುವುದಿಲ್ಲ. ಆಡಳಿತಯಂತ್ರ ಕೋಮಾದಲ್ಲಿದೆ ಎಂದರು.ಸಾರ್ವಜನಿಕರು, ರೈತ ಸಮುದಾಯ, ವಿದ್ಯಾರ್ಥಿಗಳು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಕಾಳಜಿ ಕಾಂಗ್ರೆಸ್‌ ಹೈಕಮಾಂ...
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ದೇವೇಗೌಡ, ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಮುಂದುವರಿಕೆ

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ದೇವೇಗೌಡ, ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಮುಂದುವರಿಕೆ

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಜನತಾ ದಳ (ಎಸ್) ಪಕ್ಷದ ರಾಷ್ಟ್ರೀಯ ನೇತೃತ್ವದಲ್ಲಿ ಬದಲಾವಣೆ ಇಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾಗಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಘಟಕದ ಅಧ್ಯಕ್ಷರಾಗಿ ಒಮ್ಮತದಿಂದ ಮರು ಆಯ್ಕೆಗೊಂಡಿದ್ದಾರೆ.ಜೆಪಿ ಭವನದಲ್ಲಿ ಶುಕ್ರವಾರ ನಡೆದ ಜೆಡಿಎಸ್ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಕರ್ನಾಟಕದಲ್ಲೂ ಸಂಘಟನೆ ವಿಸ್ತರಣೆ ಅಗತ್ಯವಾಗಿರುವ ಈ ಸಂದರ್ಭದಲ್ಲಿ, ದೇವೇಗೌಡ–ಕುಮಾರಸ್ವಾಮಿ ನೇತೃತ್ವ ಮುಂದುವರಿಯಬೇಕೆಂಬ ಅಭಿಪ್ರಾಯ ಪ್ರತಿನಿಧಿಗಳ ನಡುವೆ ನಿರ್ಮಾಣವಾಯಿತು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.ಸಭೆಯಲ್ಲಿ ವಿವಿಧ ರಾಜ್ಯಗಳ ಜೆಡಿಎಸ್ ಪ್ರತಿನಿಧಿಗಳು, ರಾಜ್ಯದ ಶಾಸಕರು, ಎಂಎಲ್ಸಿಗಳು, ಜಿಲ್ಲಾಧ್ಯಕ್ಷರು ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು....
‘ಕಾಂಗ್ರೆಸ್‌ನಲ್ಲಿ ನಾಯಕತ್ವ ಗೊಂದಲ ಇಲ್ಲ’; ಗೃಹ ಸಚಿವ ಪರಮೇಶ್ವರ ಸ್ಪಷ್ಟನೆ

‘ಕಾಂಗ್ರೆಸ್‌ನಲ್ಲಿ ನಾಯಕತ್ವ ಗೊಂದಲ ಇಲ್ಲ’; ಗೃಹ ಸಚಿವ ಪರಮೇಶ್ವರ ಸ್ಪಷ್ಟನೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು ಕುರಿತಾಗಿ ಕೇಳಿಬರುತ್ತಿರುವ ಊಹಾಪೋಹಗಳಿಗೆ ಗೃಹ ಸಚಿವ ಜಿ. ಪರಮೇಶ್ವರ್ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. 'ಕರ್ನಾಟಕ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವೇ ಇಲ್ಲ. ಎಲ್ಲವೂ ಸುಗಮವಾಗಿದೆ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಪಕ್ಷದೊಳಗೆ ಗೊಂದಲ ಇದ್ದಿದ್ದರೆ ಹೈಕಮಾಂಡ್ ಸೂಕ್ತ ಸಮಯದಲ್ಲಿ ಮಧ್ಯಪ್ರವೇಶಿಸುವುದು. ಅಗತ್ಯವಿಲ್ಲದ ಕಾರಣ ಇದುವರೆಗೆ ಹೈಕಮಾಂಡ್ ಮಧ್ಯಪ್ರವೇಶಿಸಿಲ್ಲ” ಎಂದರು.ಹಲವಾರು ಸಚಿವರು ಮತ್ತು ಶಾಸಕರು ದೆಹಲಿಗೆ ಭೇಟಿ ನೀಡಿ ನಡೆಸಿದ “ಭೋಜನ ಸಭೆ” ರಾಜಕೀಯ ಚರ್ಚೆಗೆ ಕಾರಣವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಯಾರೇ ದೆಹಲಿಗೆ ಹೋದರೂ ತಮ್ಮ ವೈಯಕ್ತಿಕ ಅಥವಾ ಆಡಳಿತಾತ್ಮಕ ಕೆಲಸಗಳಿಗಾಗಿ ಹೋಗಿದ್ದಾರೆ. ರಾಜಕೀಯ ಕಾರಣವೇನೂ ಇಲ್ಲ ಎಂಬುದನ್ನು ಅವರು ಈಗಾಗಲೇ ವಿವರಿಸಿದ್ದಾರೆ” ಎಂದರು.ದೆಹಲಿಯಲ್ಲಿ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿರುವ ವರದಿಗಳಿಗೆ ಸ್ಪಷ್ಟನೆ ನೀಡಿದ ಪರಮೇಶ್ವರ್, “ದೆಹಲಿಗೆ ಹೋದಾಗ ಪಕ್ಷದ ನಾಯಕರು, ಕ...
ನಾಯಕತ್ವ ಬಿಕ್ಕಟ್ಟು: ಹೈಕಮಾಂಡ್ ಮಧ್ಯಪ್ರವೇಶಿಸಿ, ಸಿಎಲ್‌ಪಿ ಸಭೆ ಕರೆಯಲು ಕಾಂಗ್ರೆಸ್ ಶಾಸಕರ ಒತ್ತಾಯ

ನಾಯಕತ್ವ ಬಿಕ್ಕಟ್ಟು: ಹೈಕಮಾಂಡ್ ಮಧ್ಯಪ್ರವೇಶಿಸಿ, ಸಿಎಲ್‌ಪಿ ಸಭೆ ಕರೆಯಲು ಕಾಂಗ್ರೆಸ್ ಶಾಸಕರ ಒತ್ತಾಯ

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ ಇದೀಗ ಹೈವೋಲ್ಟೇಜ್ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಒಂದೆಡೆ ಸಿಎಂ ಸಿದ್ದರಾಮಯ್ಯ ಆಪ್ತ ಶಾಸಕರು ಸಚಿವರು ಕಸರತ್ತಿನಲ್ಲಿ ತೊಡಗಿದರೆ, ಇನ್ನೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಿಗರು ರಹಸ್ಯ ಸಭೆ ನಡೆಸಿ ಆಯಕತ್ವ ಬದಲಾವಣೆಗೆ ರಂಗ ಸಜ್ಜುಗೊಳಿಸುತ್ತಿದ್ದಾರೆ. ಸರ್ಕಾರ ರಚನೆಯಾದ ಆರಂಭದಲ್ಲಿ ಚರ್ಚೆಗೆ ಬಂದಂತೆಯೇ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಬೆಂಬಲಿಗ ಶಾಸಕರು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ.ಬೆಂಗಳೂರಿನಲ್ಲಿ ಡಿಕೆಶಿ ಬೆಂಬಲಿಗರು ರಹಸ್ಯ ಸಭೆ ನಡೆಸಿದ ಸಂದರ್ಭದಲ್ಲಿ, ಇನ್ನೊಂದೆಡೆ ಕುತೂಹಲಕಾರಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಟ್ಟಾ ಬೆಂಬಲಿಗ ಶಾಸಕ ಎಚ್.ಸಿ. ಬಾಲಕೃಷ್ಣ, ಹೈಕಮಾಂಡ್‌ಗೆ ತಕ್ಷಣ ಮಧ್ಯಪ್ರವೇಶಿಸಿ ನಾಯಕತ್ವ ಬದಲಾವಣೆಯ ಒಟ್ಟಾರೆ ಬೆಳವಣಿಗೆ ಬಗ್ಗೆ ಶಾಸಕರಿಗೆ ಸ್ಪಷ್ಟನೆ ನೀಡಬೇಕೆಂದು ಮನವಿ ಮಾಡಿದ್ದಾರೆ.ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕೃಷ್ಣ, ಕಾಂಗ್ರೆಸ್ ಹೈಕಮಾಂಡ್ ಮಧ್ಯ...
ಬೆಂಗಳೂರು ದರೋಡೆ; ಪೊಲೀಸ್’ಗೂ ಕೃತ್ಯಕ್ಕೂ ನಂಟು? ಇಬ್ಬರ ಸೆರೆ

ಬೆಂಗಳೂರು ದರೋಡೆ; ಪೊಲೀಸ್’ಗೂ ಕೃತ್ಯಕ್ಕೂ ನಂಟು? ಇಬ್ಬರ ಸೆರೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಜಧಾನಿಯಲ್ಲಿ ನಡೆದ 7.11 ಕೋಟಿ ರೂಪಾಯಿ ಹಗಲು ದರೋಡೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ತನಿಖೆಗೆ ರಚಿಸಲಾದ ವಿಶೇಷ ತಂಡಗಳು ದರೋಡೆ ಕೃತ್ಯಕ್ಕೆ ಸಂಬಂಧಿಸಿದ ಸುಳಿವುಗಳನ್ನು ಪತ್ತೆಹಚ್ಚಿ ಶಂಕಿತರನ್ನು ವಶಕ್ಕೆ ಪಡೆದಿವೆ. ನವೆಂಬರ್‌ 20ರ ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಕಾನ್‌ಸ್ಟೆಬಲ್‌ನ್ನು ಬೆಳ್ಳಂಬೆಳಗ್ಗೆ ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿಯು ಕೇರಳ ಮೂಲದವನು ಎನ್ನಲಾಗಿದೆ. ಆತ ಇತ್ತೀಚೆಗೆ CMS ಇನ್‌ಫೋ ಸಿಸ್ಟಮ್ಸ್ ಲಿಮಿಟೆಡ್‌ ಸಂಸ್ಥೆಗೆ ರಾಜೀನಾಮೆ ನೀಡಿರುವ ಮಾಜಿ ಉದ್ಯೋಗಿ ಎಂಬುದು ತಿಳಿದು ಬಂದಿದೆ. ದರೋಡೆಗೆ ಗುರಿಯಾದ ವಾಹನ ಇದೇ ಕಂಪನಿಗೆ ಸೇರಿದ್ದೇ ಎಂಬ ಬಗ್ಗೆ ತನಿಖೆ ಬಿರುಸುಗೊಂಡಿದೆ.ಮೂಲಗಳ ಪ್ರಕಾರ, ಬಂಧಿತ ಇಬ್ಬರೂ ಕಳೆದ ಆರು ತಿಂಗಳುಗಳಿಂದ ಪರಸ್ಪರ ಸಂಪರ್ಕದಲ್ಲಿದ್ದು, ದರೋಡೆ ಯೋಜನೆಯನ್ನು ಸೂಕ್ಷ್ಮವಾಗಿ ರೂಪಿಸಿದ್ದರು. ಘಟನೆಯ ಸುಮಾರು 45 ನಿಮಿಷಗಳ ನಂತರ ಮಾತ್ರ ನಿಯಂತ್ರಣ ಕೊಠಡಿಗೆ ದರೋಡೆ ...
KSRTCಗೆ ಎರಡು ರಾಷ್ಟ್ರೀಯ ಅಪೆಕ್ಸ್ ಇಂಡಿಯಾ ಪ್ರಶಸ್ತಿಗಳು

KSRTCಗೆ ಎರಡು ರಾಷ್ಟ್ರೀಯ ಅಪೆಕ್ಸ್ ಇಂಡಿಯಾ ಪ್ರಶಸ್ತಿಗಳು

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮತ್ತಷ್ಟು ಪ್ರಶಸ್ತಿ ಬಂದಿವೆ. ಎರಡು ರಾಷ್ಟ್ರೀಯ ಅಪೆಕ್ಸ್ ಇಂಡಿಯಾ ಪ್ರಶಸ್ತಿಗಳು ಸಿಕ್ಕಿದ್ದು, ಸಾರಿಗೆ ವಲಯಕ್ಕೆ ಕರ್ನಾಟಕದ ಸಾರಿಗೆ ಸಂಸ್ಥೆ ಮಾದರಿಯಾಗಿದೆ.ರಾಜಸ್ಥಾನದ ಉದಯಪುರದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ KSRTCಗೆ10ನೇ ಅಫೆಕ್ಸ್ ಇಂಡಿಯಾ Safety, Quality, HR & Business Excellence ಪ್ರಶಸ್ತಿ ಗಳನ್ನು ಪ್ರದಾನ ಮಾಡಲಾಯಿತು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಕೈಗೊಂಡಿರುವ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ ಗಳಿಗಾಗಿ ಚಿನ್ನದ ವರ್ಗದಲ್ಲಿ ಅಪೆಕ್ಸ್ ಇಂಡಿಯಾ ಮಾನವ ಸಂಪನ್ಮೂಲ ಶ್ರೇಷ್ಠತೆ ಪ್ರಶಸ್ತಿ ಮತ್ತು 2600 ವಿವಿಧ ಹುದ್ದೆಗಳ ನೇಮಕಾತಿ‌ ಪ್ರಕ್ರಿಯೆಯಲ್ಲಿನ‌ ಪಾರದರ್ಶಕತೆ, ತ್ವರಿತ, ತಂತ್ರಜ್ಞಾನ ಅವಲಂಬಿತ ಪ್ರಕ್ರಿಯೆಗೆ ಅಪೆಕ್ಸ್ ಇಂಡಿಯಾ ಮಾನವ ಸಂಪನ್ಮೂಲ ಧಾರಣಾ ಶ್ರೇಷ್ಠತೆ ಪ್ರಶಸ್ತಿ ಲಭಿಸಿದೆ.ಈ ಪ್ರಶಸ್ತಿಗಳನ್ನು ಉದಯಪುರ (ರಾಜಸ್ಥಾನ) ದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಎಸ್ ಸಿ ಬಾಸಿನ್, ಮಾಜಿ ಪ್ರಧಾನ ವ್ಯವಸ್ಥಾಪಕರು SAIL ಮತ್ತು ರಾಯಲ್...
ಹಗಲು ದರೋಡೆ ಪ್ರಕರಣ ಬೇಧಿಸಲು ಪ್ರಯತ್ನ; ಹೆಜ್ಜೆಗುರುತು ಬೆನ್ನತ್ತಿದ ಬೆಂಗಳೂರು ಪೊಲೀಸ್

ಹಗಲು ದರೋಡೆ ಪ್ರಕರಣ ಬೇಧಿಸಲು ಪ್ರಯತ್ನ; ಹೆಜ್ಜೆಗುರುತು ಬೆನ್ನತ್ತಿದ ಬೆಂಗಳೂರು ಪೊಲೀಸ್

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ಮಧ್ಯಾಹ್ನ ನಡೆದ ಅತಿ ದೊಡ್ಡ ದರೋಡೆ ರಾಜ್ಯ ಪೊಲೀಸ್ ವ್ಯವಸ್ಥೆಗೆ ಸವಾಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸಿದ ದುಷ್ಕರ್ಮಿಗಳ ಗುಂಪೊಂದು ಜಯನಗರದಲ್ಲಿ 7 ಕೋಟಿ ರೂಪಾಯಿ ದೋಚಿ ಪರಾರಿಯಾದ ಘಟನೆ ಬುಧವಾರ ನಡೆದಿದೆ.ಜೆ.ಪಿ.ನಗರದ ಬ್ಯಾಂಕ್‌ ಶಾಖೆಯಿಂದ ಎಟಿಎಂಗಳಿಗೆ ನಗದು ಸಾಗಿಸುತ್ತಿದ್ದ ವ್ಯಾನನ್ನು ಜಯನಗರ ಅಶೋಕ ಪಿಲ್ಲರ್ ಬಳಿ ತಡೆದು ದಾಖಲೆ ಪರಿಶೀಲನೆ ನೆಪದಲ್ಲಿ ಜಾಲಾಡಿದ್ದಾರೆ ಎನ್ನಲಾಗಿದೆ. ಭಾರತ ಸರ್ಕಾರದ ಸ್ಟಿಕ್ಕರ್ ಅಂಟಿಸಿದ್ದ ಕಾರಿನಲ್ಲಿ ಬಂದಿದ್ದ ಆರೋಪಿಗಳು ಸಿಬ್ಬಂದಿಯನ್ನು ಬೆದರಿಸಿ, ನಗದು ತುಂಬಿದ ಚೀಲಗಳೊಂದಿಗೆ ತಮ್ಮ ವಾಹನದಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ನಂತರ ಡೈರಿ ಸರ್ಕಲ್ ಬಳಿ ಸಿಬ್ಬಂದಿಯನ್ನು ಇಳಿಸಿ, ಸುಮಾರು 7 ಕೋಟಿ ರೂ.ಗಳಷ್ಟು ಹಣದೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಕ್ಷಣ ಕ್ರಮ ಕೈಗೊಳ್ಳುವಂತೆ ಡಿಜಿ-ಐಜಿಪಿ ಸಲೀಂ ಅವರಿಗೆ ಸೂಚಿಸಿದ್ದಾರೆ.ಘಟನೆಯ ನಂತರಸರಣಿ ಸಭೆಗಳನ್ನು ನಡೆಸಿ, ಪತ್ತೆ ಕಾರ್ಯಾಚರಣೆಗೆ ವೇಗ ನೀಡಿದ ಬೆಂಗಳೂರು ...
ಬೆದರಿಕೆ ಬ್ಲ್ಯಾಕ್‌ಮೇಲ್ ಆರೋಪ: ಐವರ ವಿರುದ್ಧ ಯಶ್‌ ಅವರ ತಾಯಿ ದೂರು

ಬೆದರಿಕೆ ಬ್ಲ್ಯಾಕ್‌ಮೇಲ್ ಆರೋಪ: ಐವರ ವಿರುದ್ಧ ಯಶ್‌ ಅವರ ತಾಯಿ ದೂರು

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ನಟ ಯಶ್ ಅವರ ತಾಯಿ ಮತ್ತು ಚಲನಚಿತ್ರ ನಿರ್ಮಾಪಕಿ ಪುಷ್ಪಾ ನೀಡಿದ ದೂರಿನ ಆಧಾರದ ಮೇಲೆ, ಮಹಿಳೆ ಸೇರಿ ಐವರು ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಪಿಆರ್‌ಒ ಹರೀಶ್ ಅರಸ್, ಮನು, ನಿತಿನ್, ಮಹೇಶ್ ಗುರು ಮತ್ತು ಸ್ವರ್ಣಲತಾ ವಿರುದ್ಧ ಪ್ರಕರಣ ದಾಖಲಾಗಿದೆ.ಪೊಲೀಸ್ ಮೂಲಗಳ ಪ್ರಕಾರ, ಪುಷ್ಪಾ ನಿರ್ಮಿಸಿರುವ ‘ಕೊತ್ತಲವಾಡಿ’ ಚಿತ್ರದ ಪ್ರಚಾರಕ್ಕಾಗಿ ಆರೋಪಿಗಳು ಒಟ್ಟು 64 ಲಕ್ಷ ರೂ. ಪಡೆದಿದ್ದರೂ, ನಿರೀಕ್ಷಿತ ರೀತಿಯಲ್ಲಿ ಕೆಲಸ ಮಾಡದೆ, ಬದಲಿಗೆ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್‌ಗೆ ಮುಂದಾಗಿದ್ದಾರೆ ಎನ್ನಲಾಗಿದೆ.ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪುಷ್ಪಾ, “ಚಿತ್ರದ ಪ್ರಚಾರಕ್ಕಾಗಿ ಆರಂಭದಲ್ಲಿ 23 ಲಕ್ಷ ರೂ.ಗೆ ಒಪ್ಪಿಕೊಂಡಿದ್ದ ಹರೀಶ್ ಅರಸ್, ನಂತರ ಚಿತ್ರ ಚಿತ್ರೀಕರಣದ ಸಂದರ್ಭದಲ್ಲಿ ಹಲವು ಹಂತಗಳಲ್ಲಿ ಹಣ ಪಡೆದಿದ್ದರು. ಚಿತ್ರ ಬಿಡುಗಡೆ ಹಂತಕ್ಕೆ ಬಂದಾಗ, ಲೆಕ್ಕಪತ್ರಗಳನ್ನು ಕೇಳಿದ ನಿರ್ದೇಶಕರಿಗೆ ‘ಪ್ರಚಾರ ನಿಲ್ಲಿಸುತ್ತೇವೆ’ ಎಂದು ಬೆದರಿಕೆ ಹಾಕಿದ್ದರು” ಎಂದು ಆರೋಪಿಸಿದ್ದಾರೆ.“ಚಿತ್ರದ ಕೆಲಸ ಪೂರ್ಣವಾದ ನಂತರ ಲೆಕ್ಕಪತ್ರ...