Sunday, August 16

ವಿದೇಶ

ಕುಡ್ಲದ ‘ಪಾತಕ ಲೋಕ’ ಮಟ್ಟಹಾಕಿದ್ದ ಪೋಲೀಸ್ ಕಥೆ ಅಂದು.. ಆ ಪಾತಕ ಜಗತ್ತಿನ ಜೊತೆ ಇದೀಗ ಹೊಸತೊಂದು ಸಿನಿ ಕಥೆಯ ಝಲಕ್

ಕುಡ್ಲದ ‘ಪಾತಕ ಲೋಕ’ ಮಟ್ಟಹಾಕಿದ್ದ ಪೋಲೀಸ್ ಕಥೆ ಅಂದು.. ಆ ಪಾತಕ ಜಗತ್ತಿನ ಜೊತೆ ಇದೀಗ ಹೊಸತೊಂದು ಸಿನಿ ಕಥೆಯ ಝಲಕ್

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ಸಿನಿಮಾ
ತುಳುನಾಡಿನ ಭೂಗತ ಇತಿಹಾಸ ಕರಾವಳಿಗಷ್ಟೇ ಸೀಮಿತವಲ್ಲ. ಮುಂಬೈ ಸಹಿತ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚಾಚಿಕೊಂಡದ್ದು ಕರಾಳ ಸತ್ಯ. ಅದರಲ್ಲೂ ಮಂಗಳೂರು ಸುತ್ತಮುತ್ತಲ ಪಾತಕ ಸಾಮ್ರಾಜ್ಯದ ಘಟನಾವಳಿಗಳು ರೋಮಾಂಚನ. ಪ್ರತಿಯೊಂದು ಕೃತ್ಯವೂ ಕರಾಳತೆಯ ಸನ್ನಿವೇಶವನ್ನು ಹುಟ್ಟುಹಾಕಿತ್ತು. ಆದರೆ ಖಡಕ್ ಪೋಲೀಸ್ ಅಧಿಕಾರಿಗಳ ಖದರ್ ಕುಡ್ಲದ ಕೆಲವು ಪುಂಡರ ಗ್ಯಾಂಗನ್ನು ಮಟ್ಟ ಹಾಕಿತ್ತು. ಇದೀಗ ಆ ಭೂಗತ ಜಗತ್ತು ಮತ್ತು ಖಾಕಿ ಖಾದರ್ ಸನ್ನಿವೇಶಗಳನ್ನು ನೆನಪಿಸುವ ಕಥೆಯು ಬೆಳ್ಳಿತೆರೆಯಲ್ಲಿ ಪ್ರತಿಧ್ವನಿಸಲಿದೆ. ಏನಿದು ಕಥಾಹಂದರ? ಕುಡ್ಲದ ಪಾತಕ ಲೋಕವನ್ನು ಸಿಡಿಗುಂಡಿನ ಚಂಡಮದ್ದಳೆ ಎಂಬುದಾಗಿ ಹೆಸರಾಂತ ಪತ್ರಕರ್ತ ರವಿಬೆಳಗೆರೆ ಬಣ್ಣಿಸಿದ್ದರು. ಕುಡ್ಲ ಅಂದರೆ ತುಳುನಾಡಿನ ರಾಜಧಾನಿ. ಈ ತುಳುನಾಡು ಒಂದು ಕಾಲದಲ್ಲಿ ಪಾತಕ ಲೋಕದ ಹೆಡ್ ಕ್ವಾಟ್ರಾಸ್! ಏಳು ಕಡಲಾಚೆ ಕುಳಿತು ಭೂಗತ ಜಗತ್ತನ್ನು ಆಳಿದವರೆಲ್ಲ ಇಲ್ಲಿಂದಲೇ ಫೀಲ್ಡ್ ಗೆ ಎಂಟ್ರಿ ಕೊಟ್ಟವರು. ಎಕ್ಕೂರು, ಎಮ್ಮೆಕೆರೆ, ಬೋಳಾರ, ಮಠದ ಕಣಿ, ಬಳ್ಳಾಲ್ ಬಾಗ್, ಬರ್ಕೆ, ವಾಮಂಜೂರು, ಹೀಗೆ ಗಲ್ಲಿಗೊಂದರಂತೆ ಕುಡ್ಲದ ಪಾತಕ ಲೋಕ ಗರಿ ಬಿಚ್ಚಿತ್ತು. ಜಯಂತ್ ...
ಕೇಂದ್ರದಿಂದ ರಾಜ್ಯಕ್ಕೆ ಎಲೆಕ್ಟ್ರಿಕ್ ಬಸ್ ಗಿಫ್ಟ್ ಎಂದ ಬಿಜೆಪಿಗೆ ಟಾಂಗ್.. ಬಸ್ ಕೊಡುಗೆಯ ಇತಿಹಾಸ ತೆರೆದಿಟ್ಟ ಕಾಂಗ್ರೆಸ್

ಕೇಂದ್ರದಿಂದ ರಾಜ್ಯಕ್ಕೆ ಎಲೆಕ್ಟ್ರಿಕ್ ಬಸ್ ಗಿಫ್ಟ್ ಎಂದ ಬಿಜೆಪಿಗೆ ಟಾಂಗ್.. ಬಸ್ ಕೊಡುಗೆಯ ಇತಿಹಾಸ ತೆರೆದಿಟ್ಟ ಕಾಂಗ್ರೆಸ್

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಎಲೆಕ್ಟ್ರಿಕ್ ಬಸ್ಸುಗಳನ್ನು ಖಾಸಗಿಯವರಿಂದ ಬಾಡಿಗೆಗೆ ಪಡೆದು ಸಾರಿಗೆ ಸಂಸ್ಥೆಗಳಿಗೆ ನೀಡಿರುವುದನ್ನು ಕೇಂದ್ರ ಸರ್ಕಾರ ಬಸ್ ಖರೀದಿ ಮಾಡಿ ಸಾರಿಗೆ ಸಂಸ್ಥೆಗಳಿಗೆ ನೀಡಿದೆ ಎಂದು ತಪ್ಪಾಗಿ ಅರ್ಥೈಸಿ ಬೊಬ್ಬೆ ಹೊಡೆಯುವುದನ್ನು ಬಿಟ್ಟು ಬಾಡಿಗೆ/ಲೀಸ್ ಮತ್ತು ಖರೀದಿಯ ವ್ಯತ್ಯಾಸವನ್ನಾದರೂ ತಿಳಿಯಬೇಡವೇ? ಒಂದಷ್ಟಾದರೂ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಿ, ನಿಮ್ಮ ಮಾಹಿತಿಗಾಗಿ ಓದಿಕೊಳ್ಳಿ ಎಂದು ಕಾಂಗ್ರೆಸ್ ಪಕ್ಷ ಟಾಂಗ್ ಕೊಟ್ಟಿದೆ.PM e-Drive / PM e-Seva ಯೋಜನೆಗಳಡಿಯಲ್ಲಿ ಸಾರಿಗೆ ಸಂಸ್ಥೆಗಳಿಗೆ 5250 ಎಲೆಕ್ಟ್ರಿಕ್ ಬಸ್ಸುಗಳನ್ನು‌ ಕೇಂದ್ರ ಸರ್ಕಾರ ಖರೀದಿಸಿ ನೀಡಿದೆ ಎಂಬ ಭ್ರಮೆಯಲ್ಲಿ‌ ತಪ್ಪು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ ವಾಸ್ತವ ಸತ್ಯ ಏನೆಂದರೆ, ವಿನಿಮ್ಮ ಕೇಂದ್ರ‌ ಸರ್ಕಾರ ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಲು ಖಾಸಗಿ ಕಂಪನಿಗಳಿಗೆ ಅಂದರೆ ಒಲೆಕ್ಟ್ರಾ, ಜೆ.ಬಿ.ಎಂ, ಟಾಟಾ, ಸ್ವಿಪ್ಟ್ ಮೊಬಿಲಿಟಿ ಅವರಿಗೆ ಅನುದಾನ ನೀಡಿ, ಖಾಸಗಿಯವರು ಸಾರಿಗೆ ಸಂಸ್ಥೆಗಳಿಗೆ ಆ ಬಸ್ಸುಗಳನ್ನು ಬಾಡಿಗೆಗೆ/ಲೀಸ್ ಆಧಾರದಲ್ಲಿ ಇಂತಿಷ್ಟು ವರ್ಷಗಳಿಗೆ...
EDಯಿಂದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಬಂಧನ

EDಯಿಂದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಬಂಧನ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅಕ್ರಮ ಕಬ್ಬಿಣದ ಅದಿರು ರಫ್ತು ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಬಂಧಿಸಿದೆ.ಈ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೈಲ್ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಸಾವಿರಾರು ಟನ್ ಕಬ್ಬಿಣದ ಅದಿರನ್ನು ಬಂದರಿನಿಂದ ಕಳವು ಮಾಡಿ ಅಕ್ರಮವಾಗಿ ಸಾಗಿಸಲಾಗಿತ್ತು ಎಂಬುದು ಆರೋಪ ಬಗ್ಗೆ ಇಡಿ ಕೂಡಾ ಇಸಿಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿತ್ತು. ವಿಚಾರಣೆಗೆ ಹಾಜರಾಗುವಂತೆ ಸೈಲ್ ಅವರಿಗೆ ಸಮನ್ಸ್‌ ಜಾರಿ ಮಾಡಿತ್ತು. ಮಂಗಳವಾರ ಶಾಂತಿನಗರ ಕಚೇರಿಗೆ ಹಾಜರಾದ ಸೈಲ್ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ ಎನ್ನಲಾಗಿದೆ....
‘ಮುಡಾ’ ವಿಷಯದಲ್ಲಿ, ಸಿದ್ದರಾಮಯ್ಯ ತಪ್ಪಿತಸ್ಥರು, ಪ್ರಮುಖ ವಿಷಯಗಳನ್ನು ಮುಚ್ಚಿತ್ತು ಕ್ಲೀನ್ ಚಿಟ್ ನೀಡಲಾಗಿದೆ: ಬಿಜೆಪಿ ಆರೋಪ

‘ಮುಡಾ’ ವಿಷಯದಲ್ಲಿ, ಸಿದ್ದರಾಮಯ್ಯ ತಪ್ಪಿತಸ್ಥರು, ಪ್ರಮುಖ ವಿಷಯಗಳನ್ನು ಮುಚ್ಚಿತ್ತು ಕ್ಲೀನ್ ಚಿಟ್ ನೀಡಲಾಗಿದೆ: ಬಿಜೆಪಿ ಆರೋಪ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಏಕಸದಸ್ಯ ಆಯೋಗವು ಕ್ಲೀನ್ ಚಿಟ್ ನೀಡಿದ ಬೆಳವಣಿಗೆಯನ್ನು ಬಿಜೆಪಿ ಆಕ್ಷೇಪಿಸಿದೆ. ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಹೊರಹಾಕಿದೆ.ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಕ್ಷಣೆ ಒದಗಿಸಲು ಆಯೋಗದ ವರದಿಯನ್ನು ತಿರುಚಲಾಗಿದೆ. ವಾಸ್ತವದಲ್ಲಿ ಅವರು ಶೇ. 100ರಷ್ಟು ತಪ್ಪಿತಸ್ಥರು” ಎಂದು ಆರೋಪಿಸಿದರು.“60 ಕೋಟಿ ರೂ. ಪಾವತಿಸಿದರೆ ನಿವೇಶನಗಳನ್ನು ಹಿಂತಿರುಗಿಸಲಾಗುತ್ತದೆ ಎಂದು ಸಿಎಂ ಸ್ವತಃ ಹೇಳಿದ್ದರು. ನಂತರ ಅವರು ಮಾತು ತಪ್ಪಿದರು. ಕ್ಲೀನ್ ಚಿಟ್‌ನಲ್ಲಿ ಹಲವು ಅಂಶಗಳನ್ನು ಮುಚ್ಚಿಡಲಾಗಿದೆ. ಇದು ಭ್ರಷ್ಟಾಚಾರದ ಉದಾಹರಣೆ” ಎಂದರು.ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆಯ ನಿರ್ಧಾರವನ್ನು ಟೀಕಿಸಿದ ಅವರು, “ಇವಿಎಂ ಬಿಟ್ಟು ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸುವುದು ರಾಜ್ಯವನ್ನು ಹಿಂದ...
ಸ್ಥಳೀಯ ಚುನಾವಣೆ: ಮತಪತ್ರ ಬಳಕೆಯ ನಿರ್ಧಾರಕ್ಕೆ ಬಿಜೆಪಿಯ ವಿರೋಧ ಏಕೆ? ಡಿಕೆಶಿ ಪ್ರಶ್ನೆ

ಸ್ಥಳೀಯ ಚುನಾವಣೆ: ಮತಪತ್ರ ಬಳಕೆಯ ನಿರ್ಧಾರಕ್ಕೆ ಬಿಜೆಪಿಯ ವಿರೋಧ ಏಕೆ? ಡಿಕೆಶಿ ಪ್ರಶ್ನೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಇವಿಎಂ ಬದಲಿಗೆ ಮತಪತ್ರಗಳ ಮೂಲಕ ನಡೆಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿ ನಿಲುವನ್ನು ಪ್ರಶ್ನಿಸಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸರ್ಕಾರದ ನಿರ್ಧಾರ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಕಾನೂನಿನಲ್ಲಿ ಸ್ಪಷ್ಟವಾಗಿಯೇ — ಇವಿಎಂ ಅಥವಾ ಮತಪತ್ರ ಬಳಸಬಹುದು ಎಂದು ಹೇಳಿದೆ. ಆ ಕಾನೂನು ತಂದದ್ದು ಬಿಜೆಪಿ ಸರ್ಕಾರವೇ. ಹೀಗಿರುವಾಗ ಏಕೆ ಅಸಮಾಧಾನ? ಎಂದು ಪ್ರಶ್ನಿಸಿದರು.ರೈತ ಭೂಸ್ವಾಧೀನ ಪ್ರತಿಭಟನೆ, ತಮ್ಮ ವಿರುದ್ಧ ಹಾಗೂ ಸಹೋದ್ಯೋಗಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಹಿಂಪಡೆಯುವ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, “ಅನೇಕ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ. ರಾಜಕೀಯ ಒತ್ತಡದಿಂದ ಬಿಜೆಪಿ ಸರ್ಕಾರವೇ ಹಲವಾರು ಪ್ರಕರಣಗಳನ್ನು ದಾಖಲಿಸಿತ್ತು. ಭಾಷೆ, ನೀರಿನ ಹಕ್ಕು, ರೈತರ ಹೋರಾಟವನ್ನು ನ...
ಸಿದ್ದು ಸರ್ಕಾರದಲ್ಲಿ ಕಮೀಷನ್ ತಲ್ಲಣ; ಭೋವಿ ನಿಗಮ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ರಾಜೀನಾಮೆ

ಸಿದ್ದು ಸರ್ಕಾರದಲ್ಲಿ ಕಮೀಷನ್ ತಲ್ಲಣ; ಭೋವಿ ನಿಗಮ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ರಾಜೀನಾಮೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಆರೋಪದ ನಡುವೆಯೇ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದರೆಂಬ ಸುದ್ದಿ ಕುತೂಹಲ ಕೆರಳಿಸಿದೆ.ಕಮಿಷನ್ ವಸೂಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರಿಂದ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.ಸುಮಾರು ₹15 ಕೋಟಿ ವೆಚ್ಚದಲ್ಲಿ ಜಾರಿಗೊಂಡ ಭೂಒಡೆತನ ಯೋಜನೆಯಡಿ 60 ಎಕರೆ ಭೂಮಿ ಖರೀದಿ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿ, ಶೇಕಡ 60ರಷ್ಟು ಕಮಿಷನ್ ವಸೂಲಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಹೊರಬಿದ್ದಿತ್ತು. ಈ ಸಂಬಂಧಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಈ ವಿಷಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದರೆ, ರವಿಕುಮಾರ್ ಅವರು ಆರೋಪಗಳನ್ನು ತಳ್ಳಿಹಾಕಿದ್ದರು. ಆದಾಗ್ಯೂ ಪಕ್ಷಕ್ಕೆ ಮುಜುಗರ ಉಂಟಾಗದಂತೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳ...
ಮೆಟ್ರೋ ಪ್ರಯಾಣ ದುಬಾರಿ: ತೇಜಸ್ವಿ ಸೂರ್ಯ ಆಕ್ಷೇಪ

ಮೆಟ್ರೋ ಪ್ರಯಾಣ ದುಬಾರಿ: ತೇಜಸ್ವಿ ಸೂರ್ಯ ಆಕ್ಷೇಪ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
<p data-start="203" data-end="309">ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಪ್ರಯಾಣ ದರ ಏರಿಕೆಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತೀವ್ರವಾಗಿ ಆಕ್ಷೇಪಿಸಿದ್ದಾರೆ.</p> <p data-start="311" data-end="552">ನಗರದ ಮೆಟ್ರೋದಲ್ಲಿ ದಿನವೂ ಸರಾಸರಿ 10 ಲಕ್ಷ ಜನರು – ವಿದ್ಯಾರ್ಥಿಗಳು, ಸಾಮಾನ್ಯ ಉದ್ಯೋಗಿಗಳು, ಐಟಿ-ಬಿಟಿ ವಲಯದವರು – ಪ್ರಯಾಣಿಸುತ್ತಾರೆ. ಆದರೆ ಇತ್ತೀಚಿನ ದರ ಏರಿಕೆಯಿಂದ ಸಾಮಾನ್ಯ ಬಳಕೆದಾರರಿಗೆ ಮೆಟ್ರೋ ದುಬಾರಿಯಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p> <p data-start="554" data-end="748">“ದರ ಏರಿಕೆಯಿಂದ ಬೆಂಗಳೂರು ಮೆಟ್ರೋ ದೇಶದಲ್ಲೇ ಅತಿ ದುಬಾರಿ ಮೆಟ್ರೋ ಆಗಿದೆ. ಡೆಲ್ಲಿ ಮೆಟ್ರೋ ದರ ಏರಿಕೆ ಗರಿಷ್ಠ ₹4ಕ್ಕೆ ಮಿತವಾಗಿದ್ದರೆ, ಬೆಂಗಳೂರಿನಲ್ಲಿ ಪ್ರತಿ ಪ್ರಯಾಣಕ್ಕೂ ಅತಿಯಾದ ಭಾರವಾಗಿದೆ” ಎಂದು ಅವರು ಹೋಲಿಕೆ ಮಾಡಿದ್ದಾರೆ.</p> <p data-start="750" data-end="980">25 ಕಿ.ಮೀ. ಗಿಂತ ಹೆಚ್ಚು ದೂರ ಕೆಲಸಕ್ಕೆ ಪ್ರಯಾಣಿಸುವವರು ಪ್ರತಿ ಸಾರಿ ₹90 ಪ...
ಸೆಪ್ಟೆಂಬರ್ 28ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 12’; ಕಿಚ್ಚನ ಗರಡಿ ಸೇರುವ ಸ್ಪರ್ಧಿಗಳ ಬಗ್ಗೆ ಕುತೂಹಲ

ಸೆಪ್ಟೆಂಬರ್ 28ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 12’; ಕಿಚ್ಚನ ಗರಡಿ ಸೇರುವ ಸ್ಪರ್ಧಿಗಳ ಬಗ್ಗೆ ಕುತೂಹಲ

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೀಡಿಯೊ, ಸಿನಿಮಾ
ಬೆಂಗಳೂರು: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಅಭಿಮಾನಿಗಳಿಗೆ ಖುಷಿಯ ಸುದ್ದಿ. ಈಗಾಗಲೇ 11 ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿರುವ ಈ ಶೋ, ಶೀಘ್ರದಲ್ಲೇ 12ನೇ ಸೀಸನ್ ಪ್ರೇಕ್ಷಕರ ಮುಂದೆ ಬರಲಿದೆ. ಸೆಪ್ಟೆಂಬರ್ 28, ಭಾನುವಾರದಂದು ಗ್ರ್ಯಾಂಡ್ ಓಪನಿಂಗ್ ನಡೆಯಲಿದ್ದು, ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸುವ ಸ್ಪರ್ಧಿಗಳು ಯಾರು ಎಂಬ ಕುತೂಹಲ ಉಂಟಾಗಿದೆ. View this post on Instagram A post shared by Colors Kannada Official (@colorskannadaofficial)ಕಿಚ್ಚ ಸುದೀಪ್ ಅವರು ನಿರೂಪಣೆಗೆ ಸಜ್ಜಾಗಿದ್ದು, ಶೋವನ್ನು ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಪ್ರೋಮೋ ಬಿಡುಗಡೆ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.ಪ್ರೋಮೋದಲ್ಲಿ – “ರಿಯಾಲಿಟಿ ಶೋಗಳ ಬಾಸ್, ರಿಯಲ್ ಎಂಟರ್‌ಟೈನ್‌ಮೆಂಟ್‌ಗೆ ಒಂದೇ ಅಡ್ರೆಸ್. ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 28ಕ್ಕೆ” ಎಂದು ಘೋಷಿಸಲಾಗಿದೆ.ಅದರಲ್ಲೇ ಸುದೀಪ್ ಅವರು “ನನ್ನ...
ಗ್ರೇಟರ್ ಬೆಂಗಳೂರು ಅಥಾರಿಟಿ; ಐದು ಪಾಲಿಕೆಗಳ ವ್ಯಾಪ್ತಿಗಳಿಗೆ ವಿಧಾನಸಭಾ ಕ್ಷೇತ್ರಗಳ ಹಂಚಿಕೆ

ಗ್ರೇಟರ್ ಬೆಂಗಳೂರು ಅಥಾರಿಟಿ; ಐದು ಪಾಲಿಕೆಗಳ ವ್ಯಾಪ್ತಿಗಳಿಗೆ ವಿಧಾನಸಭಾ ಕ್ಷೇತ್ರಗಳ ಹಂಚಿಕೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ರಾಜಧಾನಿ ಬೆಂಗಳೂರಿನ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಜಾರಿಯಾಗಿದೆ. ರಾಜ್ಯ ಸರ್ಕಾರ ಬುಧವಾರದಿಂದಲೇ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಜಾರಿಗೆ ಬರುವಂತೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ, ಇನ್ನು ಮುಂದೆ ಬಿಬಿಎಂಪಿ ಬದಲು ಜಿಬಿಎ ನಗರದ ಆಡಳಿತವನ್ನು ನೋಡಿಕೊಳ್ಳಲಿದೆ.ಜಿಬಿಎ ಅಡಿಯಲ್ಲಿ . ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ಹೆಸರುಗಳಲ್ಲಿ ಐದು ಹೊಸ ನಗರ ಪಾಲಿಕೆಗಳು ಕಾರ್ಯನಿರ್ವಹಿಸಲಿವೆ. ಪ್ರಸ್ತುತ ಬಿಬಿಎಂಪಿಯ 198 ವಾರ್ಡ್‌ಗಳನ್ನು ಈ ಐದು ಪಾಲಿಕೆಗಳ ನಡುವೆ ಹಂಚಿಕೆ ಮಾಡಲಾಗಿದೆ. ಪ್ರತಿಯೊಂದು ಪಾಲಿಕೆಗೆ ಎರಡು ವಲಯಗಳಂತೆ ಒಟ್ಟು 10 ವಲಯಗಳನ್ನು ರಚಿಸಲಾಗಿದೆ.'ಜಿಬಿಎ'ಗೆ ಸಿಎಂ ಸಿದ್ದರಾಮಯ್ಯ ಜಿಬಿಎ ಅಧ್ಯಕ್ಷರಾಗಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಉಪಾಧ್ಯಕ್ಷರಾಗಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬೆಂಗಳೂರಿನ ಮೂವರು ಸಂಸದರು, ಹಾಗೂ ನಗರದ ಶಾಸಕರನ್ನು ಒಳಗೊಂಡಂತೆ 73 ಪದನಿಮಿತ್ತ ಸದಸ್ಯರನ್ನು ನೇಮಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು: ಬೆಂಗಳೂರು ಕೇಂದ್ರ ನಗರ ಪಾಲಿಕೆ: ಸಿವಿರಾಮನ್‌ನಗರ...
ವಿಷ್ಣುವರ್ಧನ್‌ಗೆ ‘ಕರ್ನಾಟಕ ರತ್ನ’ ನೀಡಬೇಕು: ಚಿತ್ರರಂಗದ ಮನವಿ

ವಿಷ್ಣುವರ್ಧನ್‌ಗೆ ‘ಕರ್ನಾಟಕ ರತ್ನ’ ನೀಡಬೇಕು: ಚಿತ್ರರಂಗದ ಮನವಿ

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ಸಿನಿಮಾ
ಬೆಂಗಳೂರು: ದಿವಂಗತ ನಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ರಾಜ್ಯದ ಉನ್ನತ ಗೌರವ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಚಿತ್ರೋದ್ಯಮದ ಗಣ್ಯರು ಒತ್ತಾಯಿಸಿದ್ದಾರೆ. ಮಂಗಳವಾರ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಮತ್ತು ಮಾಳವಿಕ ಅವಿನಾಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಅಲ್ಲದೇ ಇತ್ತೀಚೆಗೆ ನಿಧನರಾದ ಪಂಚಭಾಷಾ ನಟಿ ಬಿ.ಸರೋಜಾದೇವಿ ಅವರ ಹೆಸರನ್ನು, ಅವರು ವಾಸಿಸುತ್ತಿದ್ದ ಮಲ್ಲೇಶ್ವರಂನ ರಸ್ತೆಗೆ ನಾಮಕರಣ ಮಾಡುವಂತೆ ಕೂಡ ಮನವಿ ಮಾಡಲಾಯಿತು. ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಮತ್ತು ಮಾಳವಿಕ ಅವಿನಾಶ್ ಅವರು ಇಂದು ನನ್ನನ್ನು ಭೇಟಿಯಾಗಿ ದಿವಂಗತ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಿದರು. ಇದೇ ವೇಳೆ ಇತ್ತೀಚೆಗೆ ನಿಧನರಾದ ಪಂಚಭಾಷಾ ನಟಿ ಬಿ. ಸರೋಜಾದೇವಿ ಅವರ ಹೆಸರನ್ನು ಅವರು ವಾಸವಿದ್ದ ಮಲ್ಲೇಶ್ವರಂನ… pic.twitter.com/n6sLjmSm0Z— Siddaramaiah (@siddaramaiah) September 2, 2025...