Sunday, August 16

ವಿದೇಶ

ಮತಗಳ್ಳತನ ವಿರುದ್ಧ ರಣತಂತ್ರ; ಮಿತ್ರಪಕ್ಷಗಳ ಸಂಸದರಿಗೆ ಖರ್ಗೆ ಭೋಜನ ಕೂಟ

ಮತಗಳ್ಳತನ ವಿರುದ್ಧ ರಣತಂತ್ರ; ಮಿತ್ರಪಕ್ಷಗಳ ಸಂಸದರಿಗೆ ಖರ್ಗೆ ಭೋಜನ ಕೂಟ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ವಿರುದ್ಧ ಒಗ್ಗಟ್ಟಿನ ಸಂಕೇತ ನೀಡಲು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಭಾರತ ಬ್ಲಾಕ್ ಸಂಸದರಿಗೆ ಭೋಜನ ಕೂಟ ಆಯೋಜಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮೂಲಗಳ ಪ್ರಕಾರ, ಈ ಕೂಟ ಚಾಣಕ್ಯಪುರಿಯ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆಯಲಿದ್ದು, ಹಲವಾರು ವಿರೋಧ ಪಕ್ಷಗಳ ಸಂಸದರು ಭಾಗವಹಿಸುವ ನಿರೀಕ್ಷೆಯಿದೆ. ಕೆಲವೇ ದಿನಗಳ ಹಿಂದೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ನಡೆದ ಭೋಜನ ಕೂಟದ ನಂತರ, ವಿರೋಧ ಪಕ್ಷಗಳ ಏಕತೆಯ ಪ್ರದರ್ಶನಕ್ಕೆ ಇದು ಮತ್ತೊಂದು ಹಂತವೆಂದು ವಲಯಗಳು ಹೇಳುತ್ತಿವೆ....
ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ

ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೀಡಿಯೊ
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣದಲ್ಲಿ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದರು.ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಅವರು ನೇರವಾಗಿ ಚಾಲನೆ ನೀಡಿದರೆ, ಅಮೃತಸರ–ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಹಾಗೂ ಅಜ್ನಿ (ನಾಗ್ಪುರ)–ಪುಣೆ ನಡುವೆ ಸಂಚರಿಸಲಿರುವ ಇನ್ನೆರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು. VIDEO | PM Narendra Modi (@narendramodi) flags off Vande Bharat Express train from Bengaluru to Belagavi from KSR Railway Station in Bengaluru.(Source: Third Party) pic.twitter.com/nG7issWdDV— Press Trust of India (@PTI_News) August 10, 2025...
ಚುನಾವಣಾ ಆಯೋಗದ ವಿರುದ್ಧ ಆರೋಪ: ರಾಹುಲ್ ‘ಹಿಟ್ ಅಂಡ್ ರನ್’ ಎಂದ ಪ್ರಲ್ಹಾದ್ ಜೋಶಿ

ಚುನಾವಣಾ ಆಯೋಗದ ವಿರುದ್ಧ ಆರೋಪ: ರಾಹುಲ್ ‘ಹಿಟ್ ಅಂಡ್ ರನ್’ ಎಂದ ಪ್ರಲ್ಹಾದ್ ಜೋಶಿ

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡಿದ ಬಳಿಕ ಆಯೋಗದ ಕಚೇರಿಗೆ ಭೇಟಿ ನೀಡದೆ, ಯಾವುದೇ ದಾಖಲೆಗಳನ್ನು ಸಲ್ಲಿಸದೇ “ಹಿಟ್ ಅಂಡ್ ರನ್” ಪದ್ದತಿ ಪಾಲಿಸಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಟೀಕಿಸಿದ ಅವರು, “ಸಾರ್ವಜನಿಕವಾಗಿ ದೊಡ್ಡ ದೊಡ್ಡ ಸುಳ್ಳು ಹೇಳಿಕೆಗಳನ್ನು ನೀಡುವ ರಾಹುಲ್, ಸಾಕ್ಷಿ ಕೇಳಿದರೆ ಮಾಯವಾಗುತ್ತಾರೆ. ಗುರುವಾರ ಮತಗಳ್ಳತನದ ಆರೋಪ ಮಾಡಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರೂ, ಆಯೋಗದ ಕಚೇರಿಗೆ ತೆರಳಿಲ್ಲ. ಫ್ರೀಡಂ ಪಾರ್ಕ್‌ನಿಂದ ಆಯೋಗದ ಕಚೇರಿಗೆ 5 ನಿಮಿಷ ನಡೆದು ಹೋಗಬಹುದು. ಬದಲಾಗಿ, ಬೇರೆವರನ್ನು ಕಳುಹಿಸಿದ್ದಾರೆ” ಎಂದು ವ್ಯಂಗ್ಯವಾಡಿದರು.“ಆರೋಪ ಮಾಡಿ ಇನ್ನೊಬ್ಬರಿಂದ ಉತ್ತರ ಕೊಡಿಸುವುದು, ಸುಳ್ಳಿಗೆ ಆಧಾರವಿಲ್ಲವೆಂಬುದರ ಪುರಾವೆ. ರಾಜ್ಯ ಚುನಾವಣಾ ಆಯೋಗ ಅಫಿಡವಿಟ್ ಕೇಳಿದೆ, ಇದುವರೆಗೂ ಫೈಲ್ ಮಾಡಿಲ್ಲ” ಎಂದು ಹೇಳಿದರು.ರಾಹುಲ್ ಗಾಂಧಿಯವರ ರಾಜಕೀಯವನ್ನು ಟೀಕಿಸಿದ ಪ್ರಲ್ಹಾದ್ ಜೋಶಿ, “ಸರ್ಕಾರದಲ್ಲಿ ಇದ್ದಾಗ ಲೂಟಿಯ...
ಬೊಮ್ಮಸಂದ್ರ ಬಳಿ 100 ಎಕರೆಯಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ; ಸರ್ಕಾರದ ತಯಾರಿ

ಬೊಮ್ಮಸಂದ್ರ ಬಳಿ 100 ಎಕರೆಯಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ; ಸರ್ಕಾರದ ತಯಾರಿ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ರಾಜಧಾನಿಯಲ್ಲಿ ಮತ್ತೊಂದು ಭವ್ಯ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿದೆ. ಬೊಮ್ಮಸಂದ್ರದ ಸೂರ್ಯನಗರ ಸಮೀಪ 100 ಎಕರೆ ಪ್ರದೇಶದಲ್ಲಿ 80,000 ಆಸನ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸೌಲಭ್ಯಗಳು ಲಭ್ಯವಾಗಲಿವೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಕರ್ನಾಟಕ ವಸತಿ ಮಂಡಳಿಯ (KHB) ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ. ಒಳಾಂಗಣ ಮತ್ತು ಹೊರಾಂಗಣ ತಲಾ ಎಂಟು ಕ್ರೀಡೆಗಳ ಮೈದಾನ, ಅತ್ಯಾಧುನಿಕ ಜಿಮ್‌, ತರಬೇತಿ ಕೇಂದ್ರ, ಈಜುಕೊಳ, ಅತಿಥಿ ಗೃಹ, ಹಾಸ್ಟೆಲ್‌ಗಳು, ತ್ರೀ-ಸ್ಟಾರ್ ಹಾಗೂ ಫೈವ್-ಸ್ಟಾರ್ ಹೋಟೆಲ್‌ಗಳು, ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳಿಗೆ ಸಮಾವೇಶ ಸಭಾಂಗಣ—all in one ಸಂಕೀರ್ಣ ರೂಪ ಪಡೆಯಲಿದೆ.ನಿರ್ಮಾಣಗೊಳ್ಳುವ ಕ್ರಿಕೆಟ್ ಕ್ರೀಡಾಂಗಣ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ನಂತರ ಭಾರತದ ಎರಡನೇ ಅತಿದೊಡ್ಡದಾಗಲಿದೆ. ನರೇಂದ್ರ ಮೋದಿ ಸ್ಟೇಡಿಯಂ 1,32,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ.ಒಟ್ಟು ₹1,650...
ಜನರ ಸಂಕಷ್ಟ ಬಗ್ಗೆ ಮೊದಲು ಗಮನಹರಿಸಿ; ಅಧಿಕಾರಿಗಳಿಗೆ ರಾಮಲಿಂಗ ರೆಡ್ಡಿ ತಾಕೀತು, BTMನಲ್ಲಿ ಅಚ್ಚರಿಯ ವಿದ್ಯಮಾನ

ಜನರ ಸಂಕಷ್ಟ ಬಗ್ಗೆ ಮೊದಲು ಗಮನಹರಿಸಿ; ಅಧಿಕಾರಿಗಳಿಗೆ ರಾಮಲಿಂಗ ರೆಡ್ಡಿ ತಾಕೀತು, BTMನಲ್ಲಿ ಅಚ್ಚರಿಯ ವಿದ್ಯಮಾನ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಬಿಬಿಎಂಪಿ ಕಾಮಗಾರಿ ವಿಳಂಬದಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಅವಾಂತರ ಸೃಷ್ಟಿಯಾಗಿವೆ. ಅದರಲ್ಲೂ ಚರಂಡಿ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸದೆ ಇದ್ದುದರಿಂದಾಗಿ ಉದ್ಯಾನನಗರಿಯ ಹಲವೆಡೆ ಸಾರ್ವಜನಿಕರು ಆತಂಕದಲ್ಲಿ ಸಿಲುಕುವಂತಾಗಿದೆ. ಬೆಂಗಳೂರಿನಾದ್ಯಂತ ಈ ರೀತಿಯ ಸನ್ನಿವೇಶ ಕಂಡುಬರುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈ ಅನನ್ಯ ಸನ್ನಿವೇಶಕ್ಕೆ N.S.Palya ಸಾಕ್ಷಿಯಾಯಿತು.ರಾಜಧಾನಿ ಬೆಂಗಳೂರಿನಲ್ಲಿ ಚರಂಡಿ ದುರಸ್ತಿ ಹಾಗೂ ಪಾದಚಾರಿ ಮಾರ್ಗಗಳ ಕಾಮಗಾರಿ ನಡೆಯುತ್ತಿದೆಯಾದರೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಅನಾಹುತಗಳು ಸಂಭವಿಸುತ್ತಿವೆ. ಈ ರೀತಿಯ ಅವಾಂತರಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಸಿಕ್ಕಿದ್ದೇ ತಡ, ತಮ್ಮ ಆಪ್ತರನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸುತ್ತಿರುವ ಸಚಿವರ ನಡೆ ಗಮನಸೆಳೆದಿದೆ.ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ 181ರ ಎನ್.ಎಸ್.ಪಾಳ್ಯ 7ನೇ ಮುಖ್ಯರಸ್ತೆ ಬಳಿ ಚರಂಡಿ ದು...
ಮೆಟ್ರೋ ಸಂಸ್ಥೆ ಜನರದ್ದು, ಯಾವುದೇ ಪಕ್ಷದ ಸ್ವತ್ತಲ್ಲ: ರಾಮಲಿಂಗಾ ರೆಡ್ಡಿ

ಮೆಟ್ರೋ ಸಂಸ್ಥೆ ಜನರದ್ದು, ಯಾವುದೇ ಪಕ್ಷದ ಸ್ವತ್ತಲ್ಲ: ರಾಮಲಿಂಗಾ ರೆಡ್ಡಿ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: “ಮೆಟ್ರೋ ಯೋಜನೆಯ ಇತಿಹಾಸವೇ ಗೊತ್ತಿಲ್ಲದೆ ಬಿಜೆಪಿ ನಾಯಕರು ಪ್ರಚಾರಕ್ಕಾಗಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಈ ಯೋಜನೆಯಲ್ಲಿ ರಾಜ್ಯ ಸರ್ಕಾರ ಸಣ್ಣ ಪಾಲುದಾರನಲ್ಲ, ದೊಡ್ಡ ಪಾಲುದಾರ,” ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.ಭಾನುವಾರ ನಡೆಯಲಿರುವ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಕುರಿತು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “2006ರಲ್ಲಿ ಧರಂ ಸಿಂಗ್ ಮುಖ್ಯಮಂತ್ರಿ, ಮನಮೋಹನ್ ಸಿಂಗ್ ಪ್ರಧಾನಮಂತ್ರಿ ಆಗಿದ್ದಾಗ ಮೆಟ್ರೋ ಶಂಕುಸ್ಥಾಪನೆ ನಡೆದಿದೆ. ಮೆಟ್ರೋ ಸಂಸ್ಥೆ ಜನರದ್ದು, ಯಾವುದೇ ಪಕ್ಷದ ಸ್ವತ್ತಲ್ಲ. ಆದರೆ ಬಿಜೆಪಿಯವರಿಗೆ ಕೆಲಸಕ್ಕಿಂತ ಪ್ರಚಾರವೇ ಮುಖ್ಯ,” ಎಂದರು.ಯೋಜನೆಯ ವೆಚ್ಚ ಹಂಚಿಕೆ ವಿವರಿಸುತ್ತಾ, ಫೇಸ್ 1ರಲ್ಲಿ ರಾಜ್ಯದ ಪಾಲು 30% (ಜಮೀನು ಸೇರಿ), ಕೇಂದ್ರದ ಪಾಲು 25%, ಉಳಿದದ್ದು ಸಾಲ. ಫೇಸ್ 2ರಲ್ಲಿ ರಾಜ್ಯ 30% ಜೊತೆಗೆ ಮಿತಿಮೀರಿದ ವೆಚ್ಚ ಬಹುತೇಕ ರಾಜ್ಯದಿಂದ; ಕೇಂದ್ರ ಕೇವಲ 20%. ಫೇಸ್ 3ರಲ್ಲಿ ರಾಜ್ಯ 20% ಅನುದಾನ, ಸಂಪೂರ್ಣ ಜಮೀನು ಹಾಗೂ ಪುನರ್ವಸತಿ ವೆಚ್ಚ; ಕೇಂದ್ರ 20%, ಉಳಿ...
ಪ್ರಜಾಪ್ರಭುತ್ವ ಅಲುಗಾಡಿಸುವ ಯತ್ನ: ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಆರೋಪ

ಪ್ರಜಾಪ್ರಭುತ್ವ ಅಲುಗಾಡಿಸುವ ಯತ್ನ: ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಆರೋಪ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: “ಮತಗಳ್ಳತನ ತಡೆಯುವುದು ಕೇವಲ ಚುನಾವಣೆ ಸ್ವಚ್ಛತೆಗೆ ಸಂಬಂಧಿಸಿದ ವಿಷಯವಲ್ಲ, ಪ್ರಜಾಪ್ರಭುತ್ವದ ಅಸ್ತಿತ್ವಕ್ಕೂ ಸಂಬಂಧಿಸಿದೆ. ಬಿಜೆಪಿ ಚುನಾವಣಾ ಆಯೋಗ, ಇಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳ ಮೇಲೆ ದಾಳಿ ನಡೆಸುತ್ತಿದೆ,” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಟೀಕಿಸಿದರು.ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ‘ಕ್ವಿಟ್ ಇಂಡಿಯಾ’ ದಿನಾಚರಣೆಯಲ್ಲಿ ಮಾತನಾಡಿದ ಅವರು, “1942ರ ಚಳುವಳಿಯಂತೆ, ಇಂದಿನ ದಿನಗಳಲ್ಲಿ ಕೇಂದ್ರದ ಜನವಿರೋಧಿ ನೀತಿಯ ವಿರುದ್ಧ ತಾರ್ಕಿಕ ಅಂತ್ಯ ಕಾಣುವ ಹೋರಾಟ ಅಗತ್ಯ. ರಾಹುಲ್ ಗಾಂಧಿ ಅವರ ಮೇಲೆ 51 ಪ್ರಕರಣ ದಾಖಲಿಸಿ, ಮಾತನಾಡುವ ಹಕ್ಕೇ ಕಸಿದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ,” ಎಂದರು.ಮತದಾನದಲ್ಲಿ ಅಕ್ರಮಗಳ ಬಗ್ಗೆ ಅವರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು. “25 ಕ್ಷೇತ್ರಗಳಲ್ಲಿ ಚುನಾವಣೆ ಪಾರದರ್ಶಕವಾಗಿದ್ದರೆ ನರೇಂದ್ರ ಮೋದಿ ಪ್ರಧಾನಿಯಾಗಿರುತ್ತಿರಲಿಲ್ಲ. ಅಕ್ರಮ ತಡೆಯಲು 5 ಸಮಿತಿಗಳನ್ನು ರಚಿಸಿದ್ದೇವೆ. ಯಾರೇ ‘ಮತಗಳ್ಳತನ ದೊಡ್ಡ ಸಮಸ್ಯೆಯಲ್ಲ’ ಎಂದು ಭಾವಿಸಿ...
ಜನೌಷಧಿ ಕೇಂದ್ರ ಮುಚ್ಚುವ ನಿರ್ಧಾರ ಸಮರ್ಥನೆ: ಕೇಂದ್ರಕ್ಕೆ ರಾಜ್ಯದ ಮನವಿ

ಜನೌಷಧಿ ಕೇಂದ್ರ ಮುಚ್ಚುವ ನಿರ್ಧಾರ ಸಮರ್ಥನೆ: ಕೇಂದ್ರಕ್ಕೆ ರಾಜ್ಯದ ಮನವಿ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರವನ್ನು ಸರ್ಕಾರ ಸಮರ್ಥಿಸಿಕೊಂಡಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ."ಜನೌಷಧಿ ಕೇಂದ್ರಗಳಿಗೆ ಸರಬರಾಜು ಆಗುವ ದರದಲ್ಲಿಯೇ ಔಷಧಿಗಳನ್ನು ರಾಜ್ಯ ಆರೋಗ್ಯ ಇಲಾಖೆಗೆ ಪೂರೈಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಇದು ಉಚಿತ ಔಷಧ ವಿತರಣೆಗೆ ನೆರವಾಗುತ್ತದೆ" ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.ಜನೌಷಧಿ ಯೋಜನೆಯಡಿ ಕಡಿಮೆ ದರದ ಔಷಧಿ ಲಭ್ಯವಿದೆ ಎಂಬುದನ್ನು ಅಂಗೀಕರಿಸಿರುವ ಸರ್ಕಾರ, ಸಾರ್ವಜನಿಕರಿಗೆ ಗುಣಮಟ್ಟದ ಔಷಧಿಗಳನ್ನು ಉಚಿತವಾಗಿ ನೀಡಲು ಬದ್ಧವಿದೆ ಎಂದು ವಿವರಿಸಿದೆ.ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 1,417 ಜನೌಷಧಿ ಕೇಂದ್ರಗಳಲ್ಲಿ ಕೇವಲ 184 ಮಾತ್ರ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಇದ್ದು, ಉಳಿದವು ಹೊರಗಿರುವುದಾಗಿ ಸಚಿವರು ಹೇಳಿದ್ದಾರೆ.“ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳನ್ನು ನಿಯಮಿತವಾಗಿ ಪೂರೈಸಲಾಗುತ್ತಿದೆ. ತುರ್ತು ಅವಶ್ಯಕತೆಗಳಿಗೆ ಸ್ಥಳೀಯ ಖರೀ...
ಮೆಟ್ರೋ ಬಗ್ಗೆ ‘ಅರ್ಧ ಸತ್ಯ’ ಹರಡುವುದನ್ನು ನಿಲ್ಲಿಸಿ; BJP ನಾಯಕರಿಗೆ ರಾಮಲಿಂಗಾ ‌ರೆಡ್ಡಿ ತರಾಟೆ

ಮೆಟ್ರೋ ಬಗ್ಗೆ ‘ಅರ್ಧ ಸತ್ಯ’ ಹರಡುವುದನ್ನು ನಿಲ್ಲಿಸಿ; BJP ನಾಯಕರಿಗೆ ರಾಮಲಿಂಗಾ ‌ರೆಡ್ಡಿ ತರಾಟೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: BJPಯ ವಿಧಾನಸಭಾ ಮತ್ತು ಲೋಕಸಭಾ ಸದಸ್ಯರುಗಳಿಗೆ ,ಪ್ರಮುಖ‌ ಮುಖಂಡರುಗಳಿಗೆ ಎಲ್ಲಾ ಸತ್ಯಗಳು ತಿಳಿದಿದ್ದರೂ ಸಹ ಅದನ್ನು ಲೆಕ್ಕಿಸದೇ, ಸ್ವಲ್ಪವೂ ನಾಚಿಕೆಯಿಲ್ಲದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಮ್ಮಮೆಟ್ರೋ ಶ್ರೇಯಸ್ಸು ಕೊಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ‌ರೆಡ್ಡಿ ಟೀಕಿಸಿದ್ದಾರೆ.2006 ರಲ್ಲಿ ಶ್ರೀ ಮನಮೋಹನ್ ಸಿಂಗ್ ರವರು ಮಾನ್ಯ ಪ್ರಧಾನ ಮಂತ್ರಿಗಳಾಗಿದ್ದಾಗ, ರಾಜ್ಯದಲ್ಲಿ ಶ್ರೀ ಧರ್ಮಸಿಂಗ್ ಮಾನ್ಯ ಮುಖ್ಯಮಂತ್ರಿಗಳಾಗಿದ್ದಾಗ , ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದಾಗ ಎಂ.ಜಿ‌‌ ರಸ್ತೆಯಲ್ಲಿ ನಮ್ಮ ಮೆಟ್ರೋಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು ಎಂದು ಗಮನಸೆಳೆದಿರುವ ರಾಮಲಿಂಗಾ ‌ರೆಡ್ಡಿ, 'ನಮ್ಮ ಮೆಟ್ರೋ' ಜನರದ್ದು – ಯಾವ ಪಕ್ಷದ ಸ್ವತ್ತು ಅಲ್ಲ! ಎಂಬುದು ನಮ್ಮ ಭಾವನೆಯಾಗಿತ್ತು. ಆದರೆ ಬಿ.ಜೆ.ಪಿ‌ ಅವರಿಗೆ ಜನಾಸಕ್ತಿಗಿಂತ, ಪ್ರಚಾರಸಕ್ತಿ ಹೆಚ್ಚು ಎಂಬುದು ಗೊತ್ತಾಗುತ್ತಿದೆ ಎಂದು ವ್ಯಾಖ್ಯಾನಿಸಿದ್ದಾರೆ.ಕರ್ನಾಟಕ ಸರ್ಕಾರ ಸರಳ ಪಾಲುದಾರ ಅಲ್ಲ — ಅನೇಕ ಸಂದರ್ಭಗಳಲ್ಲಿ ಅದು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತದೆ, ವಿಶೇಷವಾಗಿ...
ಮದ್ಯ ಚಟ ತ್ಯಜಿಸಲು ನಾಟಿ ಔಷಧ ಸೇವನೆ: ಮೂವರು ದುರ್ಮರಣ

ಮದ್ಯ ಚಟ ತ್ಯಜಿಸಲು ನಾಟಿ ಔಷಧ ಸೇವನೆ: ಮೂವರು ದುರ್ಮರಣ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಕಲಬುರಗಿ: ಮದ್ಯ ಸೇವನೆಯ ಚಟ ತೊರೆಯಲು ನಾಟಿ ಔಷಧ ಸೇವಿಸಿದ ಮೂವರು ಮೃತಪಟ್ಟ ಘಟನೆ ಸೇಡಂ ತಾಲೂಕಿನ ಇಮಡಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.ಸೇಡಂ ಸಮೀಪದ ಬುರಗಪಲ್ಲಿ ಗ್ರಾಮದ ಲಕ್ಷ್ಮಿ ನರಸಿಂಹಲು ಬಟಗೇರಾ (55), ಮದಕಲ್ ಗ್ರಾಮದ ನಾಗೇಶ (32) ಹಾಗೂ ಗಣೇಶ ರಾಠೋಡ್ (30) ಎಂಬವರು ನಾಟಿ ಔಷಧ ಸೇವಿಸಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಔಷಧ ಸೇವಿಸಿದ್ದ ಲಿಂಗಪ್ಪ ಎಂಬವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಇಮಡಾಪುರದ ಫಕೀರಪ್ಪ ಸಾಯಪ್ಪ ಎಂಬವರು ಕುಡಿತದ ಚಟ ಬಿಡಿಸಲು ನಾಟಿ ಔಷಧ ನೀಡುತ್ತಿದ್ದವರು ಎನ್ನಲಾಗಿದ್ದು, ಈ ಔಷಧವನ್ನೇ ಈ ವ್ಯಕ್ತಿಗಳು ಸೇವಿಸಿದ್ದರೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ....