
ಹೊರಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್: ಸರ್ಕಾರದಿಂದ ನಗದು ರಹಿತ ಚಿಕಿತ್ಸೆ ಯೋಜನೆ
ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ಗೌರವಧನದ ಆಧಾರದ ಮೇಲೆ ಸೇವೆ ನೀಡುತ್ತಿರುವ ಸುಮಾರು 3 ಲಕ್ಷಕ್ಕೂ ಅಧಿಕ ನೌಕರರು ಹಾಗೂ ಅವರ ಅವಲಂಬಿತರಿಗೆ ನಗದು ರಹಿತ ಆರೋಗ್ಯ ಸೇವೆ ಒದಗಿಸಲು ರಾಜ್ಯ ಸರ್ಕಾರ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ – ಖಾಯಂ ಅಲ್ಲದ ಸಿಬ್ಬಂದಿಗೆ (KASS–NPE)’ಯನ್ನು ಅನುಮೋದಿಸಿದೆ.2025–26ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಗೊಂಡಿದ್ದ ಈ ಯೋಜನೆಗೆ ಸಂಬಂಧಪಟ್ಟಂತೆ ಸರಕಾರವು ಈಚೆಗೆ ಆದೇಶ ಹೊರಡಿಸಿದ್ದು, ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ (AB-ArK) ಯೋಜನೆಯ ಸ್ವರೂಪದಲ್ಲಿಯೇ ಹೊಸ ಯೋಜನೆ ಜಾರಿಗೆ ಬರುತ್ತದೆ.
ಯೋಜನೆಯ ಅಂಶಗಳು ಹೀಗಿವೆ:ಮಾಸಿಕ ಆದಾಯ ₹21,000ರೊಳಗಿನ ನೌಕರರು ತಿಂಗಳಿಗೆ ₹100 ವಂತಿಕೆ ಪಾವತಿಸಿದರೆ, ಸರ್ಕಾರವೂ ₹100 ಸೇರಿಸಿ ವಾರ್ಷಿಕ ವೆಚ್ಚದ ಅರ್ಧವನ್ನು ಭರಿಸುತ್ತದೆ.
₹21,000ಕ್ಕಿಂತ ಹೆಚ್ಚು ಆದಾಯವಿರುವ ಸಿಬ್ಬಂದಿಗೆ ಸರ್ಕಾರ ₹60 ಕೊಡುಗೆ ನೀಡುತ್ತಿದ್ದು, ಸಿಬ್ಬಂದಿ ₹140 ಪಾವತಿಸಬೇಕಾಗುತ್ತದೆ. ಇದು ವಾರ್ಷಿಕ ವೆಚ್ಚದ 30% ಪಾಲಾಗುತ್ತದೆ.
ಯೋಜನೆಯಡಿ ವಾರ್ಡ್ ಶ್ರೇಣಿಯ ಚಿಕಿತ್ಸೆಗ...








