
ಲಕ್ನೋ ವಿರುದ್ಧವೂ ಸೋಲು: ಆದರೂ ಪಟ್ಟಿಯಲ್ಲಿ 3 ನೇ ಸ್ಥಾನ ಉಳಿಸಿಕೊಂಡ RCB
ಲಕ್ನೋ: ಐಪಿಎಲ್ 2026ರ 50ನೇ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 9 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಎಕಾನಾ ಕ್ರೀಡಾಂಗಣದಲ್ಲಿ ಮಳೆ ವ್ಯತ್ಯಯದ ಕಾರಣ ಪಂದ್ಯವನ್ನು ತಲಾ 19 ಓವರ್‌ಗಳಿಗೆ ನಿಗದಿಪಡಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಲಕ್ನೋ ಮೊದಲು ಬ್ಯಾಟಿಂಗ್ ಮಾಡಿ 3 ವಿಕೆಟ್ ನಷ್ಟಕ್ಕೆ 209 ರನ್ ಬೃಹತ್ ಮೊತ್ತ ಕಟ್ಟಿತು. ಇದಕ್ಕೆ ಪ್ರತಿಕ್ರಿಯಿಸಿದ ಆರ್‌ಸಿಬಿ 203 ರನ್‌ಗಳಷ್ಟೇ ಸಾದ್ಯಮಾಡಿ ಸೋಲು ಕಂಡಿತು.ಲಕ್ನೋ ಪರ ಮಿಚೆಲ್ ಮಾರ್ಶ್ ಅಬ್ಬರದ ಶತಕ ಬಾರಿಸಿದರು. ಕೇವಲ 56 ಎಸೆತಗಳಲ್ಲಿ 9 ಬೌಂಡರಿ ಹಾಗೂ 9 ಸಿಕ್ಸ್‌ಗಳ ನೆರವಿನಿಂದ 111 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ನಿಕೋಲಸ್ ಪೂರನ್ 38 ರನ್ ಬೆಂಬಲ ನೀಡಿದರು. ಕೊನೆಯ ಓವರಿಗಿಂತಲೂ ಮುಂದೆ ಒತ್ತಡವನ್ನು ಹೆಚ್ಚಿಸಿದ ಲಕ್ನೋ ಬ್ಯಾಟ್ಸ್‌ಮನ್‌ಗಳ ಪರಿಣಾಮವಾಗಿ ಎಲ್ಎಸ್ಜಿಯ ಮೊತ್ತ 200ರ ಗಡಿ ದಾಟಿತು.ಮೊತ್ತ ಬೆನ್ನಟ್ಟಿದ ಆರ್‌ಸಿಬಿ ಉತ್ತಮ ಆರಂಭ ಪಡೆದರೂ ಮಧ್ಯ ಓವರ್‌ಗಳಲ್ಲಿ ರನ್‌ರೇಟ್ ಕಟ್ಟಿಹಾಕಿದ ಲಕ್ನೋ ಬೌಲರ್‌ಗಳು ಪಂದ್ಯವನ್ನು ತಮ್ಮದಾಗಿಸಿಕೊಂಡರು. ಕೊನ...









