ಬೆಂಗಳೂರು: ಜಕ್ಕೂರು ಸರ್ಕಾರಿ ಫ್ಲೈಯಿಂಗ್ ಟ್ರೈನಿಂಗ್ ಸ್ಕೂಲ್ (GFTS)ಗೆ ಡಿಜಿಸಿಎ (DGCA) 2026ರಿಂದ 2031ರವರೆಗೆ ಐದು ವರ್ಷಗಳ ಪರವಾನಗಿಯನ್ನು ನವೀಕರಿಸಿರುವುದನ್ನು ಸ್ವಾಗತಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಇದನ್ನು “ಸತ್ಯದ ಗೆಲುವು” ಎಂದು ಬಣ್ಣಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಜಕ್ಕೂರು ಫ್ಲೈಯಿಂಗ್ ಸ್ಕೂಲ್ ಅನ್ನು ಸ್ಥಳಾಂತರಿಸುವ ಮೂಲಕ ಅಮೂಲ್ಯ ಸಾರ್ವಜನಿಕ ಭೂಮಿಯನ್ನು ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಗೆ ಒಪ್ಪಿಸುವ ಪ್ರಯತ್ನ ನಡೆದಿತ್ತು ಎಂದು ಆರೋಪಿಸಿದರು. ಈ ವಿಚಾರವನ್ನು ಬಿಜೆಪಿ ಮೊದಲಿನಿಂದಲೇ ವಿಧಾನಸಭೆಯಲ್ಲಿ ದಾಖಲೆಗಳೊಂದಿಗೆ ಪ್ರಸ್ತಾಪಿಸಿತ್ತು ಎಂದು ಹೇಳಿದ್ದಾರೆ.
ನಮ್ಮ ಎಚ್ಚರ…. ನಮ್ಮ ಹೋರಾಟ, ನಮ್ಮ ಧ್ವನಿ…. ಇಂದು ಸತ್ಯ ಗೆದ್ದಿದೆ! ಜಕ್ಕೂರು ಫ್ಲೈಯಿಂಗ್ ಸ್ಕೂಲ್ ಮತ್ತೆ ಹಾರಲಿದೆ! ✈️
ಮೈಸೂರು ರಾಜಮನೆತನ ನಾಡಿಗೆ ದಾನವಾಗಿ ನೀಡಿದ ಅಮೂಲ್ಯ ಭೂಮಿಯಲ್ಲಿ ನಿರ್ಮಾಣಗೊಂಡಿರುವ ದೇಶದ ಅತ್ಯಂತ ಹಳೆಯ ಹಾರಾಟ ತರಬೇತಿ ಸಂಸ್ಥೆಗಳಲ್ಲಿ ಒಂದಾದ ಜಕ್ಕೂರು ಸರ್ಕಾರಿ ಫ್ಲೈಯಿಂಗ್ ಟ್ರೈನಿಂಗ್ ಸ್ಕೂಲ್ (GFTS) ಅನ್ನು… https://t.co/god09WKM9v pic.twitter.com/ZuXHB604kZ
— R. Ashoka (@RAshokaBJP) July 21, 2026
ಡಿಜಿಸಿಎ ಪರವಾನಗಿ ನವೀಕರಣದಿಂದ ಸುಮಾರು ಮೂರು ವರ್ಷಗಳ ಬಳಿಕ ಮತ್ತೆ ಹಾರಾಟ ತರಬೇತಿ ಆರಂಭವಾಗಲಿದ್ದು, ಇದು ಸಾರ್ವಜನಿಕ ಹಿತಾಸಕ್ತಿಯ ಗೆಲುವು ಎಂದು ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕ ಆಸ್ತಿಯನ್ನು ಖಾಸಗಿ ಹಿತಾಸಕ್ತಿಗಳಿಗೆ ಬಳಸಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಹೇಳಿದ ಅವರು, ಜಕ್ಕೂರು ಫ್ಲೈಯಿಂಗ್ ಸ್ಕೂಲ್ ಉಳಿದಿರುವುದು ಜನಶಕ್ತಿಯ, ಸಾರ್ವಜನಿಕ ಆಸ್ತಿಯ ಹಾಗೂ ಬೆಂಗಳೂರಿನ ಗೆಲುವಾಗಿದೆ ಎಂದು ತಿಳಿಸಿದ್ದಾರೆ.