
ಬೆಂಗಳೂರು: ಸಾರ್ವಜನಿಕರ ನಿದ್ದೆಗೆಡಿಸುತ್ತಿರುವ ಪುಂಡರ ಹಾವಳಿ ನಿಯಂತ್ರಿಸಲು ಬೆಂಗಳೂರು ವೈಟ್ ಫೀಲ್ಡ್ ಉಪವಿಭಾಗದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಗಿಳಿದಿದ್ದಾರೆ. ಶುಕ್ರವಾರ ತಡರಾತ್ರಿಯಿಂದ ಶನಿವಾರ ಬೆಳಗ್ಗಿನವರೆಗೂ ಬೆಂಗಳೂರಿನ ವೈಟ್ ಫೀಲ್ಡ್ ಉಪವಿಭಾಗದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು ರೌಡಿ ಹಿನ್ನೆಲೆಯ 80ಕ್ಕೂ ಹೆಚ್ಚು ಮಂದಿಯನ್ನು ನಿದ್ದೆಯಿಂದ ಎಬ್ಬಿಸಿ ಕೊಟ್ಟ ಎಚ್ಚರಿಕೆ ಭೂಗತ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ.

ವೈಟ್ ಫೀಲ್ಡ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರೀನಾ ಸುವರ್ಣ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಶುಕ್ರವಾರ (17.07.2026) ರಂದು ರಾತ್ರಿ 11-00 ಗಂಟೆಯಿಂದ ಬೆಳಗಿನ ಜಾವ 4-00 ಗಂಟೆಯ ವರೆಗೂ ಪೊಲೀಸ್ ಕಾರ್ಯಾಚರಣೆ ನಡೆದಿದೆ. ವೈಟ್ ಫೀಲ್ಡ್ ಉಪವಿಭಾಗದ ಅಧಿಕಾರಿ ಸಿಬ್ಬಂದಿ ಈ ವಿಶೇಷ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, 80 ರೌಡಿ ಆಸಾಮಿಗಳು, 25 ಜನ ಎಂಒಬಿ ಆಸಾಮಿಗಳು, 29 ಟ್ರಬಲ್ ಮಾಂಗರ್ಸ್ ಗಳ ಅಡ್ಡೆಯನ್ನು ಪತ್ತೆ ಮಾಡಿ ಪರಿಶೀಲನೆ ನಡೆಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಈ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಎಸಿಪಿ ರೀನಾ ಸುವರ್ಣ ತಿಳಿಸಿದ್ದಾರೆ.

ರೌಡಿ ಬೇಟೆಯ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ X ನಲ್ಲಿ ಹಂಚಿಕೊಂಡಿರುವ ಎಸಿಪಿ ರೀನಾ ಸುವರ್ಣ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

On July 17, 2026, between 11:00 PM and 4:00 AM, the officers and staff of the Whitefield subdivision conducted a special Drive. During this drive inspected 80 rowdies, 25 MOB and 29 troublemomgers, and warned them not to involve themselves in any illegal activities. pic.twitter.com/MvZu6IhXXJ
— Reena Suvarna N, ACP Whitefield (@acpwhitefield) July 18, 2026
ಇಡೀ ವೈಟ್ಫೀಲ್ಡ್ ವಿಭಾಗದಲ್ಲಿ ರಾತ್ರಿ ವಿಶೇಷ ತಪಾಸಣಾ ಕಾರ್ಯಾಚರಣೆ:
ರಾಜಧಾನಿಯಲ್ಲಿ ರೌಡಿ ಚಟುವಟಿಕೆಗಳು ಹಾಗೂ ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ವೈಟ್ಫೀಲ್ಡ್, ವರ್ತೂರು, ಮಹದೇವಪುರ, ಕೆ.ಆರ್. ಪುರಂ ಹಾಗೂ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆದಿದೆ.

ಏಕಕಾಲಕ್ಕೆ 150ಕ್ಕೂ ಹೆಚ್ಚು ಹಳೆಯ ಹಾಗೂ ಸಕ್ರಿಯ ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಲಾಗಿದೆ. 28 ಪೊಲೀಸ್ ತಂಡಗಳಲ್ಲಿ 140ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಈ ಸೂಕ್ತ ದಾಖಲೆಗಳಿಲ್ಲದ 13 ವಾಹನಗಳನ್ನು ವಶಪಡಿಸಿಕೊಳ್ಳ ಲಾಗಿದೆ ಎಂದು ಡಿಸಿಪಿ ಸೈದುಲ್ಲಾ ಅಡಾವತ್ ತಿಳಿಸಿದ್ದಾರೆ.
🚨 *Whitefield Division Night Enforcement Drive* 🚨
As part of its continued commitment to public safety and crime prevention, Whitefield Division conducted a special night enforcement drive against active rowdy sheeters from 12:00 AM to 3:00 AM.
👮♂️ 28 police teams, comprising… pic.twitter.com/jwf5xDwywd
— DCP Whitefield Bengaluru (@dcpwhitefield) July 18, 2026

