
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಶ್ಯಾಮ್ ಜಾಜು ಮತ್ತು ಅನುಪಮ್ ತ್ರಿವೇದಿ ರಚಿಸಿರುವ ‘RSS @100: A Century of Service, Unity & Sacrifice’ ಪುಸ್ತಕವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಶುಕ್ರವಾರ ನವದೆಹಲಿಯ ಉಪರಾಷ್ಟ್ರಪತಿ ಭವನದಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 100 ವರ್ಷಗಳಲ್ಲಿ ಆರ್‌ಎಸ್‌ಎಸ್ ಸೇವೆ, ಏಕತೆ ಮತ್ತು ರಾಷ್ಟ್ರೀಯ ಪ್ರಜ್ಞೆಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು. ಸಂಘವು ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಮೂಲಕ ಸಮಾಜದ ಕಲ್ಯಾಣಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್ ಅನ್ನು ಪವಿತ್ರ ಗಂಗಾ ನದಿಗೆ ಹೋಲಿಸಿದ ಉಪರಾಷ್ಟ್ರಪತಿ, ಅದು ಸಮಾಜದ ಹಿತಕ್ಕಾಗಿ ನಿರಂತರವಾಗಿ ಹರಿಯುವ ಶಕ್ತಿಯಾಗಿದೆ ಎಂದು ಹೇಳಿದರು. ವ್ಯಕ್ತಿತ್ವ ನಿರ್ಮಾಣ, ನಾಯಕತ್ವ ಅಭಿವೃದ್ಧಿ ಹಾಗೂ ರಾಷ್ಟ್ರೀಯ ಏಕೀಕರಣಕ್ಕೆ ಸಂಘ ನೀಡಿರುವ ಕೊಡುಗೆ ಗಮನಾರ್ಹ ಎಂದರು.
ಪುಸ್ತಕದಲ್ಲಿನ ಪ್ರಧಾನಿ ನರೇಂದ್ರ ಮೋದಿ ಕುರಿತ ಅಧ್ಯಾಯವನ್ನು ಉಲ್ಲೇಖಿಸಿದ ಅವರು, ಸ್ವಯಂಸೇವಕರಿಂದ ಪ್ರಧಾನ ಸೇವಕರವರೆಗೆ ಅವರ ಪಯಣವು ‘ಸೇವೆ’ ಮತ್ತು ‘ರಾಷ್ಟ್ರ ಮೊದಲು’ ಎಂಬ ತತ್ವಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದೆಹಲಿ ವಿಧಾನಸಭೆ ಸ್ಪೀಕರ್ ವಿಜೇಂದರ್ ಗುಪ್ತಾ, ಆರ್‌ಎಸ್‌ಎಸ್ ಪದಾಧಿಕಾರಿಗಳು, ಪುಸ್ತಕದ ಲೇಖಕರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
Vice President Shri C. P. Radhakrishnan today released the book ‘RSS @ 100: A Century of Service, Unity & Sacrifice’, authored by Shri Shyam Jaju and Shri Anupam Trivedi, at Uprashtrapati Bhavan.
The event was attended by Union Raksha Mantri Shri Rajnath Singh, Delhi Assembly… pic.twitter.com/XRLf640z7f
— Vice-President of India (@VPIndia) July 17, 2026
