Saturday, May 2

ಡಾಲಿ ಧನಂಜಯ್ ದಂಪತಿಗೆ ಗಂಡು ಮಗು; ಮನೆ ತುಂಬ ಸಂತಸ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾಲಿ ಧನಂಜಯ್ (Dolly Dhananjay) ಹಾಗೂ ವೈದ್ಯೆ ಧನ್ಯತಾ (Dhanyata) ದಂಪತಿಗೆ ಮೇ 2ರಂದು ಗಂಡು ಮಗು ಜನಿಸಿದ್ದು, ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ.

2025ರ ಫೆಬ್ರವರಿ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಮದುವೆಯಾದ ಒಂದು ವರ್ಷದ ಸಂಭ್ರಮದ ಬೆನ್ನಲ್ಲೇ ಇದೀಗ ಮಗುವನ್ನು ಸ್ವಾಗತಿಸಿದೆ.

ಗಂಡು ಮಗು ಜನಿಸಿದ ಸಂತಸದ ವಿಚಾರವನ್ನು ಡಾಲಿ ಧನಂಜಯ್ (Dolly Dhananjay) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಪುಟ್ಟ ಕೈಗಳ ಫೋಟೋವನ್ನು ಪೋಸ್ಟ್ ಮಾಡುತ್ತಾ ತಾವು ತಂದೆಯಾದ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ತಿಳಿದ ತಕ್ಷಣ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ದಂಪತಿಗೆ ಶುಭಾಶಯಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.