Monday, May 11

ಐಪಿಎಲ್ 2026: ಅಗ್ರ ಸ್ಥಾನಕ್ಕೇರಿದ RCB; ಮುಂಬೈ ನಿರ್ಗಮನ

ಐಪಿಎಲ್ 2026ರ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾದವು. ಬೆಂಗಳೂರು ತನ್ನ ಎರಡನೇ ತವರು ಮೈದಾನವಾದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯವನ್ನು ಆತಿಥ್ಯ ವಹಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಸೇರಿಸಿತು. ತಂಡದ ಪರ ತಿಲಕ್ ವರ್ಮಾ 57 ರನ್, ಹಾಗೂ ನಮನ ಧೀರ್ 47 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು.

ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ಕೃನಾಲ್ ಪಾಂಡ್ಯ 73 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಪಂದ್ಯ ಅಂತಿಮ ಎಸೆತದವರೆಗೆ ರೋಚಕತೆಯಿಂದ ಸಾಗಿದ್ದು, ರಸಿಕ್ ಸಲಾಂ ಕೊನೆಯ ಚೆಂಡಿನಲ್ಲಿ 2 ರನ್‌ಗಳನ್ನು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.