
ನವದೆಹಲಿ: National Testing Agency (NTA) NEET (UG) 2026 ಮರು ಪರೀಕ್ಷೆಯನ್ನು ಜೂನ್ 21, 2026ರಂದು ನಡೆಸಲಾಗುವುದು ಎಂದು ಘೋಷಿಸಿದೆ. ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಮೇ 3, 2026ರಂದು ನಡೆದಿದ್ದ NEET-UG ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಈ ವರ್ಷ ಸುಮಾರು 22.79 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು.
ಇದೀಗ ಸಾಮಾಜಿಕ ಮಾಧ್ಯಮ X ನಲ್ಲಿ ಮಾಹಿತಿ ಹಂಚಿಕೊಂಡಿರುವ National Testing Agency, “ಭಾರತ ಸರ್ಕಾರದ ಅನುಮೋದನೆಯೊಂದಿಗೆ, 21 ಜೂನ್ 2026 ರ ಭಾನುವಾರದಂದು NEET (UG) 2026 ರ ಮರು-ಪರೀಕ್ಷೆಯನ್ನು ನಿಗದಿಪಡಿಸಿದೆ. ಅಭ್ಯರ್ಥಿಗಳು ಮತ್ತು ಪೋಷಕರು NTA ಯ ಅಧಿಕೃತ ಚಾನೆಲ್‌ಗಳನ್ನು ಮಾತ್ರ ಅವಲಂಬಿಸುವಂತೆ ವಿನಂತಿಸಲಾಗಿದೆ’ ಎಂದು ತಿಳಿಸಿದೆ.
📢 NEET (UG) 2026 — Examination Date Announced
The National Testing Agency, with the approval of the Government of India, has scheduled the re-examination of NEET (UG) 2026 on Sunday, 21 June 2026.
Candidates and parents are requested to rely only on the official channels of NTA.…— National Testing Agency (@NTA_Exams) May 15, 2026
“NTA ಯ ಅಧಿಕೃತ ಮಾಹಿತಿಯನ್ನೇ ಅಭ್ಯರ್ಥಿಗಳು ಹಾಗೂ ಪೋಷಕರು ನಂಬಬೇಕು” ಎಂದು ಸಂಸ್ಥೆ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ neet-ug@nta.ac.in ಹಾಗೂ 011-40759000 / 011-69227700 ಸಂಪರ್ಕಿಸಲು ಸೂಚಿಸಲಾಗಿದೆ.
