Wednesday, June 25

2019ರ ರಾಜ್ಯ ಸಿನಿಮಾ ಪ್ರಶಸ್ತಿ ಪ್ರಕಟ: ಸುದೀಪ್ ಅತ್ಯುತ್ತಮ ನಟ

ಬೆಂಗಳೂರು: 2019ರ ರಾಜ್ಯ ಸಿನಿಮಾ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ ಸುದೀಪ್​ಗೆ ಅತ್ಯುತ್ತಮ ನಟ ಪ್ರಶಸ್ತಿ ಘೋಷಿಸಲಾಗಿದೆ.

ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕಾರ ಪಟ್ಟಿ ಇಲ್ಲಿದೆ.

  • ಅತ್ಯುತ್ತಮ ನಟ: ಸುದೀಪ್ (ಪೈಲ್ವಾನ್ ಚಿತ್ರ)

  • ಅತ್ಯುತ್ತಮ ನಟಿ: ಅನುಪಮಾ ಗೌಡ (ತ್ರಯಂಬಕಂ ಚಿತ್ರ)

  • ಅತ್ಯುತ್ತಮ ಸಿನಿಮಾ: ಮೋಹನದಾಸ (ನಿರ್ದೇಶನ ಪಿ ಶೇಷಾದ್ರಿ), ಲವ್ ಮಾಕ್ಟೆಲ್ (ನಿರ್ದೇಶನ ಡಾರ್ಲಿಂಗ್ ಕೃಷ್ಣ), ಅರ್ಘ್ಯಂ (ನಿರ್ದೇಶನ ವೈ ಶ್ರೀನಿವಾಸ್)

  • ಸಾಮಾಜಿಕ ಕಳಕಳಿ ಚಿತ್ರ: ಕನ್ನೇರಿ (ನಿರ್ದೇಶನ ಮಂಜುನಾಥ ಎಸ್)

  • ಮನರಂಜನಾ ಸಿನಿಮಾ: ಇಂಡಿಯಾ vs ಇಂಗ್ಲೆಂಡ್ (ನಿರ್ದೇಶನ ನಾಗತಿಹಳ್ಳಿ ಚಂದ್ರಶೇಖರ್)

  • ಮಕ್ಕಳ ಸಿನಿಮಾ: ಎಲ್ಲಿ ಆಡೋದು ನಾವು ಎಲ್ಲಿ ಆಡೋದು (ನಿರ್ದೇಶನ ಅರುಣ್ ಕುಮಾರ್)

  • ಪ್ರಾದೇಶಿಕ ಸಿನಿಮಾ: ಟ್ರಿಬಲ್ ತಲಾಖ್ (ಬ್ಯಾರಿ ಭಾಷೆ)

  • ಅತ್ಯುತ್ತಮ ಪೋಷಕ ನಟಿ: ಅನೂಷಾ ಕೃಷ್ಣ (ಬ್ರಾಹ್ಮಿ ಚಿತ್ರ)

  • ಅತ್ಯುತ್ತಮ ಪೋಷಕ ನಟ: ತಬಲಾ ನಾಣಿ (ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ)

  • ಅತ್ಯುತ್ತಮ ಕತೆ: ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ (ಸಾಹಿತಿ: ಜಯಂತ್ ಕಾಯ್ಕಿಣಿ)

  • ಅತ್ಯುತ್ತಮ ಚಿತ್ರಕತೆ: ಲವ್ ಮಾಕ್ಟೆಲ್ (ನಿರ್ದೇಶನ ಡಾರ್ಲಿಂಗ್ ಕೃಷ್ಣ)

  • ಅತ್ಯುತ್ತಮ ಸಂಭಾಷಣೆ ಅಮೃತಮತಿ ಚಿತ್ರ (ಸಾಹಿತಿ: ಬರಗೂರು ರಾಮಚಂದ್ರಪ್ಪ)

  • ಅತ್ಯುತ್ತಮ ಛಾಯಾಗ್ರಹಣ: ಮೋಹನದಾಸ (ಜಿಎಸ್ ಭಾಸ್ಕರ್)

  • ಅತ್ಯುತ್ತಮ ಸಂಕಲನ: ಝಾನ್ಸಿ ಐಪಿಎಸ್ (ಬಸವರಾಜ್ ಅರಸ್)

  • ಅತ್ಯುತ್ತಮ ಬಾಲನಟ: ಪ್ರೀತಂ (ಮಿಂಚು ಹುಳ ಚಿತ್ರ)

  • ಅತ್ಯುತ್ತಮ ಬಾಲನಟಿ: ಸುಗಂಧಿ (ಬೇಬಿ ವೈಷ್ಣವಿ ಅಡಿಗ)

  • ಅತ್ಯುತ್ತಮ ಕಲಾ ನಿರ್ದೇಶನ ಮೋಹನದಾಸ (ಹೊಸ್ಮನೆ ಮೂರ್ತಿ)

  • ಅತ್ಯುತ್ತಮ ಗಾಯಕ: ರಘು ದೀಕ್ಷಿತ್ (ಲವ್ ಮಾಕ್ಟೆಲ್ ಚಿತ್ರ)

  • ಅತ್ಯುತ್ತಮ ಗಾಯಕಿ: ಜಯದೇವಿ ಶೆಟ್ಟಿ (ರಾಗ ಭೈರವಿ)

  • ತೀರ್ಪುಗಾರರ ಪ್ರಶಸ್ತಿ: ಅಮೃತಮತಿ, ತಮಟೆ ನರಸಿಂಹಯ್ಯ, ಮಕ್ಕಡ್ ಮನಸು