
ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಅವರು ತಮ್ಮ ಕುಟುಂಬದೊಂದಿಗೆ ಸಮಂತಾ ಅವರನ್ನು ಮನೆಗೆ ಆಹ್ವಾನಿಸಿ ಆತ್ಮೀಯವಾಗಿ ಸತ್ಕರಿಸಿದ್ದಾರೆ. ತಾಯಿ ಆಗಲಿರುವ ಸಮಂತಾ ಅವರಿಗೆ ವಿಶೇಷ ಉಡುಗೊರೆಗಳೊಂದಿಗೆ ಆಶೀರ್ವಾದವೂ ನೀಡಿದ್ದಾರೆ.
ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ, ಸಮಂತಾ ಅವರಿಗೆ ಸೀರೆ, ಪವಿತ್ರ ವಸ್ತುಗಳು ಹಾಗೂ ಶಂಖವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಸಂದರ್ಭದ ಚಿತ್ರಗಳನ್ನು ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಮಂತಾಗೆ ಅಭಿನಂದನೆ ಸಲ್ಲಿಸಿದ್ದಾರೆ.

ತಮ್ಮ ಪೋಸ್ಟ್ನಲ್ಲಿ ಚಿರಂಜೀವಿ, “‘ಮಾ ಇಂಟಿ ಬಂಗಾರಂ’ ಚಿತ್ರ ಅತ್ಯಂತ ಆಸಕ್ತಿದಾಯಕವಾಗಿದೆ. ಅವಿಭಕ್ತ ಕುಟುಂಬದ ಹಿನ್ನೆಲೆಯಲ್ಲಿನ ಆಕ್ಷನ್ ಮತ್ತು ಭಾವನೆಗಳನ್ನು ನಿರ್ದೇಶಕಿ ನಂದಿನಿ ರೆಡ್ಡಿ ತಮ್ಮ ವಿಶಿಷ್ಟ ಶೈಲಿಯಲ್ಲಿ ಸುಂದರವಾಗಿ ಬೆರೆಸಿದ್ದಾರೆ” ಎಂದು ಪ್ರಶಂಸಿಸಿದ್ದಾರೆ. ಸಮಂತಾ ಅವರ ನಟನೆ, ವಿಶೇಷವಾಗಿ ಸೀರೆಯಲ್ಲಿನ ಆಕ್ಷನ್ ದೃಶ್ಯಗಳು ಗಮನ ಸೆಳೆಯುತ್ತವೆ ಎಂದೂ ಹೇಳಿದ್ದಾರೆ.
ಮಹಿಳಾ ಪ್ರಧಾನ ಮತ್ತು ವೈವಿಧ್ಯಮಯ ಕಥಾವಸ್ತುಗಳಿರುವ ಚಿತ್ರಗಳು ತೆಲುಗು ಚಿತ್ರೋದ್ಯಮಕ್ಕೆ ಅಗತ್ಯವೆಂದು ಉಲ್ಲೇಖಿಸಿದ ಅವರು, ಈ ಯಶಸ್ಸಿಗೆ ಸಮಂತಾ, ನಂದಿನಿ ರೆಡ್ಡಿ, ರಾಜ್ ಹಾಗೂ ಇಡೀ ಚಿತ್ರತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ. ಜೊತೆಗೆ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ದಂಪತಿ ಸಮಂತಾ ಮತ್ತು ರಾಜ್ಗೆ ವಿಶೇಷ ಶುಭಾಶಯಗಳನ್ನು ಕೋರಿದ್ದಾರೆ.
Thank you, Megastar @KChiruTweets Garu ❤️
Your appreciation for #MaaIntiBangaaram means the world to me and my team. It still feels surreal to receive such kind words from you.
So happy that you loved the film ✨ https://t.co/5c58VufEos
— Samantha (@Samanthaprabhu2) June 23, 2026
