Tuesday, August 11

‘ಅಯೋಗ್ಯ 2’ ಯಶೋಗಾಥೆಗೆ ‘ಮುದ್ದು ಮುದ್ದು ಪುಟ್ಟಲಕ್ಷ್ಮಿ’ ಮುನ್ನುಡಿ!

‘ಅಯೋಗ್ಯ 2’ ಆಗಸ್ಟ್ 7ರಂದು ತೆರೆಗೆ ಬರಲು ಸಜ್ಜಾಗಿದೆ. ಭಾರೀ ನಿರೀಕ್ಷೆಹುಟ್ಟಿಸಿರುವ ಈ ಚಿತ್ರದ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಕತ್ ಲೈಕ್ಸ್ ಗಿಟ್ಟಿಸಿಕೊಂಡಿದೆ. ಈ ಚಿತ್ರದಲ್ಲಿ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟಿಸಿದ್ದಾರೆ.

‘ಅಯೋಗ್ಯ’ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ‘ಅಯೋಗ್ಯ 2’ ಕೂಡಾ ಯಶೋಗಾಥೆ ಬರೆಯಲಿದೆ ಎಂದು ಚಿತ್ರ ವಿಸ್ವಾಸದಲ್ಲಿದೆ.

ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ‘ಮುದ್ದು ಮುದ್ದು ಪುಟ್ಟಲಕ್ಷ್ಮಿ’ ವಿಡಿಯೋ ಸಾಂಗ್ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಸಿನಿಮಾವನ್ನು ಮಹೇಶ್ ಅವರು ನಿರ್ದೇಶಿಸಿದ್ದಾರೆ