
ಮಂಗಳೂರು: ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಸೇವೆಗಾಗಿ ಸಂಭಾಷಣೆ ಎಂಬ ಕಲ್ಪನೆಯ ಮೂಲಕ ಆರಂಭಗೊಂಡ ವೀರಕೇಸರಿ ಬೆಳ್ತಂಗಡಿ ಸಂಘಟನೆ ಕಳೆದ 10 ವರ್ಷ 2 ತಿಂಗಳುಗಳಲ್ಲಿ 210 ಸೇವಾಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ.
ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಯಶಸ್ವಿ 10 ನೇ ವರ್ಷದ ಪಯಣದಲ್ಲಿ 6 ಕುಟುಂಬಗಳಿಗೆ ನೆರವಾಗುವ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ.
ಉತ್ಸಾಹವಿದ್ದರೆ, ಏನನ್ನಾದರೂ ಸಮಾಜಕ್ಕೆ ಮಾಡಬೇಕು ಎಂಬುವ ಹಂಬಲವಿದ್ದರೆ ಒಂದು ವೇದಿಕೆ ಬೇಕು ಹಾಗೆ ಅದು ಹಲವಾರು ತರುಣರ ಮನಸೆಳೆಯಬೇಕು ವೇದಿಕೆ ಬಳಿಸೇರಿದ ತರುಣರ ಹೃದಯ ಪರಿಪೂರ್ಣವಾಗಿರಬೇಕು ಆಗಮಾತ್ರ ಗೊಂದಲ, ಅಡೆತಡೆಗಳಿಲ್ಲದೆ ಅದರ ಯಶಸ್ಸು ಸಾದ್ಯ ಎಂಬುದಕ್ಕೆ ‘ವೀರಕೇಸರಿ ಬೆಳ್ತಂಗಡಿ’ ಸಂಘಟನೆ ಸಾಕ್ಷಿಯಾಗಿದೆ.

‘ಕಟ್ಟುವೆವು ನಾವು ಹೊಸದು ನಾಡೊಂದನ್ನ ರಸದ ಬೀಡೊಂದನ್ನ ಬಿಸಿ ನೆತ್ತರು ಉಕ್ಕುಕ್ಕಿ ಹರಿಯುವ ಮುನ್ನ ಕಟ್ಟುವೆವು ನಾವು ಹೊಸದು ನಾಡೊಂದನ್ನು ರಸದ ಬೀಡೊಂದನ್ನು’ ಎಂಬ ಅಡಿಗರ ಕವಿತೆಯಂತೆ ನವ ಸಮಾಜ ನಿರ್ಮಾಣ ಕಾರ್ಯದಲ್ಲಿ ವೀರಕೇಸರಿ ಬೆಳ್ತಂಗಡಿ ಸಂಘಟನೆ ತೊಡಗಿದೆ.
ಕಾರ್ಯಕ್ರಮ 28.07.2026 ರಂದ್ದು ಸ್ವಾಮಿ ಕೊರಗಜ್ಜ ಸನ್ನಿಧಿ ಕಂಬಳ ಪದವು ಮಂಗಳೂರಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಲಾಯಿತು.
- 205ನೇ ಸೇವಾಯೋಜನೆಯಾಗಿ ಬಂಟ್ವಾಳ ತಾಲೂಕಿನ ಕುಂದಡ್ಕ ಶೆಡ್ಡುಮನೆ ನಿವಾಸಿ ಬಾಬು ಬಂಗೇರ ಇವರ ಪುತ್ರ ಜೀವನ್ ಕೆ.ಎಸ್ ಇವರು ದ್ವಿತೀಯ ಪಿಯುಸಿ ಮುಗಿಸಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ 10,000 ರೂಗಳನ್ನು ಇತ್ತೀಚಿಗೆ ಹಸ್ತಾಂತರಿಸಲಾಯಿತು.
- 206ನೇ ಸೇವಾಯೋಜನೆಯಾಗಿ ಉಳ್ಳಾಲ ತಾಲೂಕಿನ ಕೈರಂಗಳ ಗ್ರಾಮದ ಪುಣ್ಯಕೋಟಿ ನಗರ ನಿವಾಸಿ ಪಲ್ಲವಿ ಪ್ರಥಮ ವರ್ಷದ ಸ್ನಾತಕೋತ್ತರ ಪದವಿಯನ್ನು ಮಾಡುತಿದ್ದು ಇವರ ಮುಂದಿನ ವಿದ್ಯಾಭ್ಯಾಸಕ್ಕಾಗಿ 10,000 ರೂಗಳನ್ನು ಹಸ್ತಾಂತರಿಸಲಾಯಿತು.
- 207ನೇ ಸೇವಾಯೋಜನೆಯಾಗಿ ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಕೊಡಲೂರು ನಿವಾಸಿ ಅನಿತಾ ಇವರ ಪತಿ ಗಣೇಶ್ ಇವರು ಹೃದಯ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗಾಗಿ 10,000 ರೂಗಳನ್ನು ಸಮರ್ಪಿಸಲಾಯಿತು.

- 208ನೇ ಸೇವಾಯೋಜನೆಯಾಗಿ ಪಾವೂರು ಇನೋಳಿ ಮಾವೂರ್ ನಿವಾಸಿ ಪ್ರತೀಕ್ಷಾ ನಿವಾಸಿ ಪ್ರಥಮ ವರ್ಷದ ಇಂಜಿನಿಯರಿಂಗ್ ಪದವಿಯನ್ನು ಮಾಡುತಿದ್ದು ಇವರ ವಿದ್ಯಾಭ್ಯಾಸದ ಶುಲ್ಕಕ್ಕಾಗಿ 10,000 ರೂಗಳನ್ನು ನೀಡಲಾಯಿತು.
- 209ನೇ ಸೇವಾಯೋಜನೆಯಾಗಿ ಮಂಗಳೂರು ತಾಲೂಕಿನ ಕುಂಪಲ ಸುರಕ್ಷಾನಗರ ನಿವಾಸಿ ಪ್ರಥ್ವಿಶ್ ಇವರು ದ್ವೀತಿಯ ಪಿಯುಸಿಯನ್ನು ಮುಗಿಸಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ 10,000 ರೂಗಳನ್ನು ಹಸ್ತಾಂತರಿಸಲಾಯಿತು.
- 210ನೇ ಸೇವಾಯೋಜನೆಯಾಗಿ ತಾಲೂಕಿನ ಮೇಲಂತಬೆಟ್ಟು, ಮುಂಡೂರು ನಿವಾಸಿ ಪ್ರಣಮ್ ಇವರು ದ್ವಿತೀಯ ಪಿಯುಸಿಯನ್ನು ಪೂರ್ಣಗೊಳಿಸಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ 10,000 ರೂಗಳ ನೆರವು ನೀಡಲಾಯಿತು.
ಈ ಸೇವಾಯೋಜನೆಯೊಂದಿಗೆ ನಮ್ಮ ತಂಡವು ಯಶಸ್ವಿ 206ಸೇವಾಯೋಜನೆಗಳನ್ನು ಪೂರೈಸಿದ್ದು ಈ ತಿಂಗಳ ಮಾಸಿಕ ಸೇವಾಯೋಜನೆಗಳಿಗೆ 60,000 ರೂಪಾಯಿಗಳನ್ನು ವಿನಿಯೋಗಿಸಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿಉದ್ಯಮಿ ಹಾಗೂ ಧಾರ್ಮಿಕ ಮುಂಖಡ ಶ್ರೀಧರ್ ಶೆಟ್ಟಿ ಕಂಬಳ ಪದವು, ಲಯನ್ಸ್ ಕಬ್ಲ್ ಮಾಜಿ ಅಧ್ಯಕ್ಷ ರಾಕೇಶ್ ಶೆಟ್ಟಿ, ವಿರಕೇಸರಿ ಬೆಳ್ತಂಗಡಿ ಸಂಚಾಲಕ ಸತೀಶ್ ಶೆಟ್ಟಿ, ವೀರಕೇಸರಿ ಬಳಗದ ಪ್ರಮುಖರಾದ ಪದ್ಮನಾಭ ಪೂಜಾರಿ, ಪ್ರಜ್ವಲ್ ಕುಮಾರ್, ಪ್ರವೀಣ್ ಇನೋಳಿ, ಯಶಸ್ವಿನಿ ಇಂಡಲ್ ಶೀಟ್ ಕಂಬಳ ಪದವು ಇದರ ಮಾಲಿಕ ಗಣೇಶ್, ಭುವಿ ಹೊಟೇಲ್ ಮಾಲಿಕ ಪ್ರಸಾದ್ ಭಂಗ,ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
