
ಬೆಂಗಳೂರು: ಬಿಡದಿ ಟೌನ್ಶಿಪ್ ಮತ್ತು ನೈಸ್ ಯೋಜನೆ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಅವಧಿಯಲ್ಲಿ ಆರಂಭವಾದ ಯೋಜನೆಗಳನ್ನು ಬೇರೆ ಸರ್ಕಾರಗಳು ಪೂರ್ಣಗೊಳಿಸಬಾರದೇ ಎಂದು ಪ್ರಶ್ನಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ.
‘ಯೋಜನೆ ಆರಂಭಿಸಿದ್ದು ನೀವೇ, ಪೂರ್ಣಗೊಳಿಸಿದರೆ ತಪ್ಪೇ?’
ಬಿಡದಿ ಟೌನ್ಶಿಪ್ ಯೋಜನೆಯನ್ನು ಕುಮಾರಸ್ವಾಮಿ ಆರಂಭಿಸಿದ್ದರೆ, ನೈಸ್ ಯೋಜನೆಯ ಪಿತಾಮಹರು ದೇವೇಗೌಡರು ಎಂದು ಕಾಂಗ್ರೆಸ್ ಹೇಳಿದೆ. ನೀವು ಆರಂಭಿಸಿದ ಯೋಜನೆಗಳನ್ನು ಬೇರೆ ಸರ್ಕಾರಗಳು ಪೂರ್ಣಗೊಳಿಸಬಾರದೇ? ಎಂದು ಪ್ರಶ್ನಿಸಿದೆ.

‘ನೀವು ಮಾಡಿದರೆ ಸರಿ, ಬೇರೆಯವರು ಮಾಡಿದರೆ ತಪ್ಪು ಎಂದು ಹೇಳಲು ಹೇಗೆ ಸಾಧ್ಯ?’ ಎಂದು ಜೆಡಿಎಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.
2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಟೌನ್ಶಿಪ್ ಯೋಜನೆಯನ್ನು ಏಕೆ ಕೈಬಿಡಲಿಲ್ಲ? ಅದೇ ಅವಧಿಯಲ್ಲಿ ನೈಸ್ ಪ್ರಕರಣದಲ್ಲಿ ಏಕೆ ಕ್ರಮ ಕೈಗೊಳ್ಳಲಿಲ್ಲ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಅಧಿಕಾರದಲ್ಲಿದ್ದಾಗ ಯಾವುದೇ ಕ್ರಮ ಕೈಗೊಳ್ಳದೆ, ಇದೀಗ ರಾಜಕೀಯ ನೆಲೆ ಉಳಿಸಿಕೊಳ್ಳಲು ಈ ರೀತಿಯ ನಾಟಕವಾಡಿದರೆ ಜನರು ಮರುಳಾಗುತ್ತಾರೆಯೇ? ಎಂದು ಕಾಂಗ್ರೆಸ್ ಟೀಕಿಸಿದೆ
ಬಿಡದಿ ಟೌನ್ ಶಿಪ್ ಹಾಗೂ ನೈಸ್ ಯೋಜನೆ ಬಗ್ಗೆ ಮಾತನಾಡುವ ಮುನ್ನ ಜೆಡಿಎಸ್ ನಾಯಕರು ಈ ಪ್ರಶ್ನೆಗಳಿಗೆ ಉತ್ತರಿಸಲಿ.
ಬಿಡದಿ ಟೌನ್ ಶಿಪ್ ಹುಟ್ಟುಸಿದವರು ಕುಮಾರಸ್ವಾಮಿ
ನೈಸ್ ಯೋಜನೆ ಪಿತಾಮಹರು ದೇವೇಗೌಡರು.
ನೀವು ಆರಂಭಿಸಿದ ಯೋಜನೆಗಳನ್ನು ಬೇರೆ ಸರ್ಕಾರಗಳು ಪೂರ್ತಿ ಮಾಡಬಾರದೇ?
ನೀವು ಮಾಡಿದರೆ ಸರಿ, ಬೇರೆಯವರು ಮಾಡಿದರೆ ತಪ್ಪು ಎಂದು ಹೇಳಲು…
— Karnataka Congress (@INCKarnataka) August 18, 2026
