
ಮಾತೃಭಾಷಾ ಶಿಕ್ಷಣಕ್ಕೆ ಕೇಂದ್ರದ ಒತ್ತು: ಬಹುಭಾಷಾ ಕಲಿಕಾ ಸಂಪನ್ಮೂಲಗಳನ್ನು ವಿಸ್ತರಿಸಿದ NCERT
ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ (NEP)–2020ರ ಅನುಸಾರ ಮಾತೃಭಾಷೆ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣಕ್ಕೆ ಕೇಂದ್ರ ಸರ್ಕಾರ ಮತ್ತೊಮ್ಮೆ ಒತ್ತು ನೀಡಿದ್ದು, ಈ ನಿಟ್ಟಿನಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಬಹುಭಾಷಾ ಕಲಿಕಾ ಸಂಪನ್ಮೂಲಗಳನ್ನು ವಿಸ್ತರಿಸಿದೆ.
ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ, ಐದನೇ ತರಗತಿಯವರೆಗೆ ಹಾಗೂ ಸಾಧ್ಯವಾದಲ್ಲಿ ಎಂಟನೇ ತರಗತಿ ಮತ್ತು ಅದಕ್ಕೂ ಮೇಲಿನ ತರಗತಿಗಳಲ್ಲೂ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಬಳಸುವಂತೆ ಎನ್‌ಇಪಿ 2020 ಶಿಫಾರಸು ಮಾಡಿದೆ ಎಂದು ತಿಳಿಸಿದರು. ಈ ಕ್ರಮಕ್ಕೆ ಸಂವಿಧಾನದ 350ಎ ವಿಧಿ ಹಾಗೂ ಶಿಕ್ಷಣ ಹಕ್ಕು ಕಾಯ್ದೆ-2009 ಬೆಂಬಲ ನೀಡುತ್ತವೆ ಎಂದರು.
ಎನ್‌ಸಿಇಆರ್‌ಟಿ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು–2023 (NCF-SE) ಅನ್ವಯ 1ರಿಂದ 9ನೇ ತರಗತಿವರೆಗೆ ಹೊಸ ಪಠ್ಯಪುಸ್ತಕಗಳನ್ನು ಪರಿಚಯಿಸಿದೆ. 1, 2, 3 ಮತ್ತು 6ನೇ ತರಗತಿಯ ಪುಸ್ತಕಗಳನ್ನು 22 ಪರಿಶಿಷ್ಟ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದ್ದು, 4, 5, 7 ಮತ್ತು...









